Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 18:14 - ಕನ್ನಡ ಸಮಕಾಲಿಕ ಅನುವಾದ

14 ಇತ್ರೋವನು ಮೋಶೆಯು ಜನರಿಗಾಗಿ ಮಾಡುವುದನ್ನೆಲ್ಲಾ ನೋಡಿದಾಗ, ಅವನು ಮೋಶೆಗೆ, “ಇದೇನು ಜನರಿಗೆ ನೀನು ಮಾಡುವುದು? ಏಕೆ ನೀನೊಬ್ಬನೇ ನ್ಯಾಯಾಧೀಶನಾಗಿ ಕೂತಿರಲಾಗಿ, ಜನರು ಬೆಳಗಿನಿಂದ ಸಂಜೆಯವರೆಗೆ ನಿನ್ನ ಬಳಿಯಲ್ಲಿ ನಿಂತಿರಬೇಕು?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಮೋಶೆಯು ಜನರಿಗಾಗಿ ಮಾಡುತ್ತಿರುವುದೆಲ್ಲವನ್ನು ಮಾವನು ನೋಡಿ ಅವನಿಗೆ, “ನೀನು ಯಾತಕ್ಕೆ ಜನರಿಗಾಗಿ ಇಷ್ಟು ಪ್ರಯಾಸ ಪಡುತ್ತಿರುವೆ? ನೀನು ಒಬ್ಬನೇ ನ್ಯಾಯತೀರಿಸುವುದಕ್ಕೆ ಕುಳಿತಿರುವುದೇಕೆ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಮೋಶೆ ಜನರಿಗಾಗಿ ಮಾಡುತ್ತಿದ್ದುದ್ದೆಲ್ಲವನ್ನು ಅವನ ಮಾವ ನೋಡಿ, “ಜನರಿಗೋಸ್ಕರ ಇಷ್ಟು ಪ್ರಯಾಸಪಡುತ್ತಿರುವೆ ಏಕೆ? ಬೆಳಿಗ್ಗೆಯಿಂದ ಸಂಜೆಯವರೆಗೂ ಜನರು ನಿನ್ನ ಸುತ್ತಲೂ ನಿಂತುಕೊಂಡಿದ್ದಾರೆ; ನೀನೊಬ್ಬನೇ ನ್ಯಾಯ ತೀರಿಸಲು ಕುಳಿತುಕೊಳ್ಳಬೇಕೆ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಮೋಶೆಯು ಜನರಿಗೋಸ್ಕರ ಮಾಡಿದ್ದೆಲ್ಲವನ್ನೂ ಅವನ ಮಾವನು ನೋಡಿ ಅವನಿಗೆ - ನೀನು ಯಾತಕ್ಕೆ ಜನರಿಗೊಸ್ಕರ ಇಷ್ಟು ಪ್ರಯಾಸಪಡುತ್ತಿ? ಪ್ರಾತಃಕಾಲ ಮೊದಲುಗೊಂಡು ಸಾಯಂಕಾಲದವರೆಗೂ ಜನರು ನಿನ್ನ ಹತ್ತಿರ ನಿಲ್ಲುತ್ತಾರಲ್ಲಾ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಮೋಶೆಯು ಜನರ ನ್ಯಾಯತೀರಿಸುವುದನ್ನು ಇತ್ರೋನನು ನೋಡಿ, “ನೀನು ಯಾಕೆ ಹೀಗೆ ಮಾಡುತ್ತಿರುವೆ? ನೀನೊಬ್ಬನೇ ಯಾಕೆ ನ್ಯಾಯತೀರಿಸಬೇಕು? ಜನರು ದಿನವೆಲ್ಲಾ ನಿನ್ನ ಬಳಿಗೆ ಯಾಕೆ ಬರಬೇಕು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 18:14
6 ತಿಳಿವುಗಳ ಹೋಲಿಕೆ  

ಮರುದಿನ ಮೋಶೆಯು ಜನರಿಗೆ ನ್ಯಾಯತೀರಿಸುವುದಕ್ಕೆ ಕೂತುಕೊಂಡಾಗ, ಜನರು ಬೆಳಗಿನಿಂದ ಸಂಜೆಯವರೆಗೆ ಮೋಶೆಯ ಬಳಿಯಲ್ಲಿ ನಿಂತಿದ್ದರು.


ಅದಕ್ಕೆ ಮೋಶೆಯು ತನ್ನ ಮಾವನಿಗೆ, “ದೇವರ ವಿಷಯವಾಗಿ ಕೇಳುವುದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಾರೆ.


ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ, ಕಠಿಣ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಿದ್ದರು. ಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಿದರು.


ಅವನಿಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಯದ ಕಾರಣ, ಅವನನ್ನು ಕಾವಲಲ್ಲಿ ಇಟ್ಟರು.


ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು, ಯೆಹೂದ ಗೋತ್ರದವರ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೆಹೂದದ ಗೋತ್ರದವರ ಮರುಭೂಮಿಗೆ ಬಂದು, ಅಲ್ಲಿನ ಜನರ ಸಂಗಡ ವಾಸವಾಗಿದ್ದರು.


ಇದಲ್ಲದೆ ಅಬ್ಷಾಲೋಮನು ಬೆಳಿಗ್ಗೆ ಎದ್ದು ಬಾಗಿಲ ಬಳಿಯಲ್ಲಿ ನಿಂತುಕೊಂಡು, ವ್ಯಾಜ್ಯ ಉಂಟಾದವನು ಯಾವನಾದರೂ ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವವನಾಗಿದ್ದರೆ ಅವನನ್ನು ಕರೆದು, “ನೀನು ಯಾವ ಪಟ್ಟಣದವನು?” ಎಂದು ಕೇಳಿದನು. ಅದಕ್ಕವನು, “ನಿನ್ನ ಸೇವಕರಾದ ನಾವು ಇಸ್ರಾಯೇಲರ ಇಂಥ ಕುಲಕ್ಕೆ ಸೇರಿದವರು,” ಎಂದು ಉತ್ತರ ಕೊಡುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು