Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 16:20 - ಕನ್ನಡ ಸಮಕಾಲಿಕ ಅನುವಾದ

20 ಆದರೂ ಅವರು ಮೋಶೆಯ ಮಾತನ್ನು ಕೇಳಲಿಲ್ಲ. ಕೆಲವರು ಅದನ್ನು ಬೆಳಗಿನವರೆಗೆ ಇಟ್ಟುಕೊಂಡಾಗ, ಅದು ಹುಳ ಬಿದ್ದು ಹೊಲಸುವಾಸನೆ ಹುಟ್ಟಿತು. ಆಗ ಮೋಶೆಯು ಅವರ ಮೇಲೆ ಕೋಪಿಸಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆದಾಗ್ಯೂ ಅವರು ಮೋಶೆಯ ಮಾತನ್ನು ಕೇಳದೆ, ಅದರಲ್ಲಿ ಸ್ವಲ್ಪವನ್ನು ಮರು ದಿನದವರೆಗೆ ಇಟ್ಟುಕೊಂಡಾಗ ಅದು ಹುಳ ಬಿದ್ದು ಹೊಲಸುವಾಸನೆ ಹಿಡಿದು ಕೆಟ್ಟುಹೋಯಿತು. ಅದಕ್ಕೆ ಮೋಶೆ ಅವರ ಮೇಲೆ ಕೋಪಗೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಆದಾಗ್ಯೂ ಅವರಲ್ಲಿ ಕೆಲವರು ಮೋಶೆಯ ಮಾತನ್ನು ಕೇಳದೆ ಅದರಲ್ಲಿ ಸ್ವಲ್ಪವನ್ನು ಮರುದಿವಸದ ತನಕ ಇಟ್ಟುಕೊಂಡರು. ಆಗ ಅದು ಹುಳು ಬಿದ್ದು, ನಾತಹಿಡಿದು, ಕೆಟ್ಟುಹೋಯಿತು. ಅದಕ್ಕೆ ಮೋಶೆ ಅವರ ಮೇಲೆ ಸಿಟ್ಟುಗೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆದಾಗ್ಯೂ ಅವರಲ್ಲಿ ಕೆಲವರು ಮೋಶೆಯ ಮಾತನ್ನು ಕೇಳದೆ ಅದರಲ್ಲಿ ಸ್ವಲ್ಪವನ್ನು ಮರುದಿವಸದ ತನಕ ಇಟ್ಟುಕೊಂಡಾಗ ಅದು ಹುಳಬಿದ್ದು ನಾತಹಿಡಿದು ಕೆಟ್ಟುಹೋಯಿತು. ಅದಕ್ಕೆ ಮೋಶೆ ಅವರ ಮೇಲೆ ಸಿಟ್ಟುಗೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆದರೆ ಅವರು ಮೋಶೆಯ ಮಾತಿಗೆ ವಿಧೇಯರಾಗಲಿಲ್ಲ. ಕೆಲವು ಜನರು ಮರುದಿನ ತಿನ್ನುವುದಕ್ಕಾಗಿ ಆಹಾರವನ್ನು ಉಳಿಸಿಕೊಂಡರು; ಹೀಗೆ ಉಳಿಸಿಟ್ಟ ಆಹಾರವು ಹುಳಗಳಿಂದ ತುಂಬಿ ಕೊಳೆಯತೊಡಗಿತು. ಮೋಶೆಯು ಹೀಗೆ ಮಾಡಿದ ಜನರ ಮೇಲೆ ಕೋಪಗೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 16:20
13 ತಿಳಿವುಗಳ ಹೋಲಿಕೆ  

ಹಣದಾಶೆಯಿಂದ ನಿಮ್ಮ ಜೀವನ ದೂರವಾಗಿರಲಿ, ನಿಮಗಿರುವವುಗಳಲ್ಲಿ ತೃಪ್ತರಾಗಿರಿ. ಏಕೆಂದರೆ ದೇವರು ಹೀಗೆ ಹೇಳಿದ್ದಾರೆ, “ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ!”


“ಕೋಪ ಮಾಡಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಕೋಪವು ಇಳಿಯಲಿ.


ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ ಬಡವರಿಗೆ ಕೊಡಿರಿ. ನಿಮಗೋಸ್ಕರ ನಾಶವಾಗದ ಹಣದ ಚೀಲಗಳನ್ನೂ, ಕ್ಷಯವಾಗದ ಸಂಪತ್ತನ್ನೂ ಪರಲೋಕದಲ್ಲಿ ಮಾಡಿಕೊಳ್ಳಿರಿ, ಅಲ್ಲಿ ಕಳ್ಳನು ಸಮೀಪಕ್ಕೆ ಬರುವುದಿಲ್ಲ. ನುಸಿಹಿಡಿದು ಕೆಟ್ಟುಹೋಗುವುದಿಲ್ಲ.


ಅನಂತರ ಯೇಸು ಜನರಿಗೆ, “ಎಚ್ಚರಿಕೆ! ನೀವು ಎಲ್ಲಾ ಲೋಭದಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ; ಏಕೆಂದರೆ ಜೀವನವು ಸಮೃದ್ಧಿಯಾದ ಆಸ್ತಿಗೆ ಆಧಾರವಾದದ್ದಲ್ಲ,” ಎಂದರು.


ಯೇಸು ಅದನ್ನು ಕಂಡಾಗ ಕೋಪಗೊಂಡು ಅವರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ.


ಆಗ ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ಹೃದಯಕಾಠಿಣ್ಯಕ್ಕಾಗಿ ದುಃಖಪಟ್ಟು, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದು ಹೇಳಿದರು. ಅವನು ಕೈಚಾಚಿದಾಗ, ಅವನ ಕೈ ಸಂಪೂರ್ಣವಾಗಿ ಗುಣವಾಯಿತು.


“ಭೂಲೋಕದಲ್ಲಿ ನಿಮಗೋಸ್ಕರ ಆಸ್ತಿಪಾಸ್ತಿಯನ್ನು ಕೂಡಿಸಿಡಬೇಡಿರಿ, ಇಲ್ಲಿ ಅದಕ್ಕೆ ನುಸಿ ಮತ್ತು ಕಿಲುಬು ಹಿಡಿದು ಹಾಳಾಗುವುದು ಇಲ್ಲವೆ ಕಳ್ಳರು ಕನ್ನಾಕೊರೆದು ಕದಿಯುವರು.


ಆಗ ಮೋಶೆಯು ಬಹಳವಾಗಿ ಕೋಪಿಸಿಕೊಂಡು ಯೆಹೋವ ದೇವರಿಗೆ, “ಅವರ ಬಲಿಯನ್ನು ನೀವು ಗೌರವಿಸಬೇಡಿ, ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಳ್ಳಲಿಲ್ಲ. ಅವರಲ್ಲಿ ಒಬ್ಬನಿಗಾದರೂ ಕೇಡು ಮಾಡಲಿಲ್ಲ,” ಎಂದು ಹೇಳಿದನು.


ಆದರೆ ಮೋಶೆ ಎಂಬವನು ಭೂಲೋಕದಲ್ಲಿರುವ ಸಕಲ ಮನುಷ್ಯರೆಲ್ಲರಿಗಿಂತ ಬಹು ದೀನನಾಗಿದ್ದನು.


ಮೋಶೆ ಅವರಿಗೆ, “ಇದನ್ನು ಯಾರೂ ಮರುದಿನದವರೆಗೆ ಇಟ್ಟುಕೊಳ್ಳಬಾರದು,” ಎಂದು ಹೇಳಿದನು.


ಹೀಗೆ ಅವರಲ್ಲಿ ಪ್ರತಿಯೊಬ್ಬನು ತಿನ್ನುವಷ್ಟು ಪ್ರತಿದಿನದ ಬೆಳಿಗ್ಗೆ ಅದನ್ನು ಕೂಡಿಸುತ್ತಿದ್ದರು. ಬಿಸಿಲು ಬಹಳವಾದಾಗ ಅದು ಕರಗಿ ಹೋಗುತ್ತಿತ್ತು.


ಮೋಶೆಯು ಆಜ್ಞಾಪಿಸಿದ ಪ್ರಕಾರ ಅದನ್ನು ಮರುದಿನದವರೆಗೆ ಇಟ್ಟುಕೊಂಡಾಗ, ಅದು ಹೊಲಸುವಾಸನೆ ಹೊಂದಲಿಲ್ಲ. ಅದರಲ್ಲಿ ಹುಳಗಳೂ ಇರಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು