Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 12:41 - ಕನ್ನಡ ಸಮಕಾಲಿಕ ಅನುವಾದ

41 ನಾನೂರ ಮೂವತ್ತು ವರ್ಷಗಳು ತೀರಿದ ತರುವಾಯ, ಅದೇ ದಿನದಲ್ಲಿ ಯೆಹೋವ ದೇವರ ಸೈನ್ಯಗಳೆಲ್ಲಾ ಈಜಿಪ್ಟ್ ದೇಶವನ್ನು ಬಿಟ್ಟು ಹೊರಗೆ ಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

41 ನಾನೂರಮೂವತ್ತು ವರ್ಷಗಳು ಕಳೆದನಂತರ ಅದೇ ದಿನದಲ್ಲಿಯೇ ಯೆಹೋವನ ಸೈನ್ಯಗಳೆಲ್ಲಾ ಐಗುಪ್ತ ದೇಶವನ್ನು ಬಿಟ್ಟು ಹೊರಟುಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

41 ಈ ನಾನೂರ ಮೂವತ್ತು ವರ್ಷಗಳು ಕಳೆದ ನಂತರ ಅದೇ ದಿವಸದಲ್ಲಿ ಸರ್ವೇಶ್ವರನ ಪಡೆಗಳೆಲ್ಲವೂ ಈಜಿಪ್ಟ್ ದೇಶವನ್ನು ಬಿಟ್ಟು ಹೊರಟುಬಂದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

41 ನಾನೂರಮೂವತ್ತು ವರುಷಗಳು ಕಳೆದನಂತರ ಅದೇ ದಿವಸದಲ್ಲಿ ಯೆಹೋವನ ಸೈನ್ಯಗಳೆಲ್ಲಾ ಐಗುಪ್ತದೇಶವನ್ನು ಬಿಟ್ಟು ಹೊರಟುಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

41 ನಾನೂರಮೂವತ್ತು ವರ್ಷಗಳಾದ ನಂತರ, ಅದೇ ದಿನದಂದು ಯೆಹೋವನ ಸೈನ್ಯಗಳೆಲ್ಲಾ ಈಜಿಪ್ಟನ್ನು ಬಿಟ್ಟು ಹೊರಟವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 12:41
29 ತಿಳಿವುಗಳ ಹೋಲಿಕೆ  

ಅದಕ್ಕೆ ಯೇಸು: “ತಂದೆ ತಮ್ಮ ಸ್ವಂತ ಅಧಿಕಾರದಿಂದ ನೇಮಿಸಿದ ಸಮಯವನ್ನಾಗಲಿ, ಕಾಲವನ್ನಾಗಲಿ, ತಿಳಿಯುವುದು ನಿಮ್ಮ ಕೆಲಸವಲ್ಲ.


ನೀವು ಈ ಹಬ್ಬಕ್ಕೆ ಹೋಗಿರಿ. ನಾನು ಈ ಹಬ್ಬಕ್ಕೆ ಹೋಗುವುದಿಲ್ಲ. ಏಕೆಂದರೆ ನನ್ನ ಸಮಯವು ಇನ್ನೂ ಪೂರ್ಣವಾಗಿ ಬರಲಿಲ್ಲ,” ಎಂದರು.


ಏಕೆಂದರೆ ಪ್ರಕಟನೆಯು ಇನ್ನೂ ನೇಮಕವಾದ ಕಾಲಕ್ಕಾಗಿ ಎದುರು ನೋಡುವುದು. ಅದು ಅಂತ್ಯದ ಬಗ್ಗೆ ಮಾತಾಡುವುದು. ಅದು ಸುಳ್ಳಾಗದು. ಅದು ತಡವಾದರೂ, ಅದಕ್ಕೆ ಕಾದುಕೊಂಡಿರು. ಏಕೆಂದರೆ ಅದು ತಡಮಾಡದೆ ನಿಶ್ಚಯವಾಗಿ ಬರುವುದು.


“ಅಕ್ರಮಗಳನ್ನು ಮುಗಿಸುವುದಕ್ಕೂ, ಪಾಪಗಳನ್ನು ಮುಚ್ಚುವುದಕ್ಕೂ, ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕೂ, ನಿತ್ಯವಾದ ನೀತಿಯನ್ನು ಬರಮಾಡುವುದಕ್ಕೂ, ಆ ದರ್ಶನಕ್ಕೂ, ಪ್ರವಾದಿಯ ನುಡಿಗೆ ಮುದ್ರೆಹಾಕುವುದಕ್ಕೂ, ಮಹಾಪರಿಶುದ್ಧ ಸ್ಥಳವನ್ನು ಅಭಿಷೇಕ ಮಾಡುವುದಕ್ಕೂ ನಿನ್ನ ಜನರ ಮೇಲೆಯೂ, ನಿನ್ನ ಪರಿಶುದ್ಧ ಪಟ್ಟಣದ ಮೇಲೆಯೂ ಎಪ್ಪತ್ತು ವಾರಗಳು ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ.


ನೀವು ಎದ್ದು ಚೀಯೋನನ್ನು ಕನಿಕರಿಸುವಿರಿ; ಅದನ್ನು ಕರುಣಿಸುವ ಕಾಲ ಇದೇ; ಹೌದು, ನೀವು ನಿರ್ಣಯಿಸಿದ ಸಮಯವು ಬಂದಿದೆ.


ಅದಕ್ಕೆ ಆತನು, “ನಾನು ಅಂಥವನಲ್ಲ, ಯೆಹೋವ ದೇವರ ಸೈನ್ಯದ ಅಧಿಪತಿಯಾಗಿ ಈಗ ನಾನು ಬಂದಿದ್ದೇನೆ,” ಎಂದನು. ಆಗ ಯೆಹೋಶುವನು ಬೋರಲು ಬಿದ್ದು ಆತನನ್ನು ಆರಾಧಿಸಿ, ಆತನಿಗೆ, “ನನ್ನ ಒಡೆಯಾ, ತಮ್ಮ ಸೇವಕನಿಗೆ ಹೇಳಬೇಕಾಗಿರುವ ಸಂದೇಶವೇನು?” ಎಂದನು.


ಅದೇ ದಿನದಲ್ಲಿ ಯೆಹೋವ ದೇವರು ಇಸ್ರಾಯೇಲರನ್ನು ಅವರ ಸೈನ್ಯಗಳ ಪ್ರಕಾರ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದರು.


“ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಬೇಕು. ಏಕೆಂದರೆ ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ್ದೇನೆ. ಆದಕಾರಣ ನಿಮ್ಮ ಸಂತತಿಗಳಲ್ಲಿ ಅದನ್ನು ಶಾಶ್ವತ ನಿಯಮವೆಂದು ಎಂದೆಂದಿಗೂ ಆಚರಿಸಬೇಕು.


ಆದರೆ ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ. ಆದರೆ ನನ್ನ ಕೈಯನ್ನು ಈಜಿಪ್ಟಿನ ಮೇಲೆ ಇಟ್ಟು, ದೊಡ್ಡ ನ್ಯಾಯ ತೀರ್ಪುಗಳಿಂದ ನನ್ನ ಜನರಾದ ಇಸ್ರಾಯೇಲರನ್ನೂ, ಅವರ ಸೈನ್ಯಗಳನ್ನೂ ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡುವೆನು.


ಆದ್ದರಿಂದ ಈಗ ಬಾ, ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ. ಇಸ್ರಾಯೇಲರಾದ ನನ್ನ ಜನರನ್ನು ನೀನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಬೇಕು,” ಎಂದರು.


ಈ ಮೋಶೆಯೇ ಇಸ್ರಾಯೇಲರನ್ನು ಈಜಿಪ್ಟಿನಿಂದ ಹೊರಗೆ ನಡೆಸಿಕೊಂಡು ಬಂದನು. ಈಜಿಪ್ಟಿನಲ್ಲಿ, ಕೆಂಪುಸಮುದ್ರದ ಬಳಿಯಲ್ಲಿ, ಅರಣ್ಯದಲ್ಲಿ ಅದ್ಭುತಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ನಲವತ್ತು ವರ್ಷಗಳ ಕಾಲ ನಡೆಸಿದನು.


ಆದಕಾರಣ ಅವರನ್ನು ಈಜಿಪ್ಟನವರ ಕೈಯೊಳಗಿಂದ ಬಿಡುಗಡೆ ಮಾಡುವುದಕ್ಕೆ ಬಂದಿದ್ದೇನೆ. ನಾನು ಅವರನ್ನು ಆ ದೇಶದಿಂದ ಬಿಡಿಸಿ, ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೆಯ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡೆಸಿಕೊಂಡು ಹೋಗುವುದಕ್ಕೂ ಇಳಿದು ಬಂದಿದ್ದೇನೆ.


“ಆದ್ದರಿಂದ ಇಸ್ರಾಯೇಲರಿಗೆ, ‘ನಾನೇ ಯೆಹೋವ ದೇವರು. ನಾನು ನಿಮ್ಮನ್ನು ಈಜಿಪ್ಟಿನ ಬಿಟ್ಟಿಕೆಲಸದಿಂದ ಅವರಿಗೆ ದಾಸತ್ವದಲ್ಲಿರುವುದರಿಂದ, ನಾನು ಚಾಚಿದ ಬಾಹುವಿನಿಂದಲೂ ಬಲವಾದ ನ್ಯಾಯತೀರ್ಪುಗಳಿಂದಲೂ ನಿಮ್ಮನ್ನು ಬಿಡಿಸುವೆನು.


ಇದಲ್ಲದೆ ಯೋಸೇಫನು ತನ್ನ ಸಹೋದರರಿಗೆ, “ನಾನು ಸತ್ತಮೇಲೆ ದೇವರು ನಿಶ್ಚಯವಾಗಿ ನಿಮ್ಮನ್ನು ಕಾಪಾಡಿ, ಈ ದೇಶದೊಳಗಿಂದ ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಮಾಡಿದ ದೇಶಕ್ಕೆ ಸೇರುವಂತೆ ಮಾಡುವರು,” ಎಂದನು.


ಆರೋನ್, ಮೋಶೆ ಇವರಿಗೆ, “ಇಸ್ರಾಯೇಲರನ್ನು ಅವರವರ ಗೋತ್ರಗಳಿಗನುಸಾರವಾಗಿ ಈಜಿಪ್ಟಿನ ಒಳಗಿಂದ ಹೊರಗೆ ಬರಮಾಡಬೇಕು,” ಎಂದು ಯೆಹೋವ ದೇವರು ಹೇಳಿದ್ದರು.


ಆಗ ಮೋಶೆಯು ಜನರಿಗೆ, “ನೀವು ಈಜಿಪ್ಟಿನ ದಾಸತ್ವದಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಅಲ್ಲಿಂದ ಹೊರಗೆ ಬರಮಾಡಿದ್ದಾರೆ. ಹೀಗಿರುವುದರಿಂದ ಈ ದಿನ ನೀವು ಹುಳಿರೊಟ್ಟಿಯನ್ನು ತಿನ್ನಬಾರದು.


ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಈಜಿಪ್ಟಿನಿಂದ ಹೊರಗೆ ಬರಮಾಡಿದ್ದಾರೆ. ಆದ್ದರಿಂದ ದೇವರ ನಿಯಮವು ನಿಮ್ಮ ಬಾಯಲ್ಲಿ ಇರುವಂತೆ, ಈ ಆಚರಣೆಯು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯಲ್ಲಿ ಜ್ಞಾಪಕಾರ್ಥವಾಗಿಯೂ ಇರಬೇಕು.


“ಮುಂದೆ ಬರುವ ಕಾಲದಲ್ಲಿ ನಿಮ್ಮ ಪುತ್ರರು ನಿಮಗೆ, ‘ಇದರ ಅರ್ಥವೇನು?’ ಎಂದು ಕೇಳುವಾಗ, ನೀವು ಅವರಿಗೆ, ‘ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನ ದಾಸತ್ವದೊಳಗಿಂದ ಹೊರಗೆ ಬರಮಾಡಿದ್ದಾರೆ.


ಇದು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯ ಮೇಲೆ ಸಂಕೇತವಾಗಿಯೂ ಇರಲಿ. ಏಕೆಂದರೆ ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ ಎಂದು ಹೇಳಬೇಕು,” ಎಂದರು.


ಏಕೆಂದರೆ ನಾನು ಇಸ್ರಾಯೇಲರನ್ನು ಈಜಿಪ್ಟ್ ದೇಶದೊಳಗಿನಿಂದ ಹೊರಗೆ ಬರಮಾಡಿದಾಗ, ಅವರು ಗುಡಾರಗಳಲ್ಲಿ ವಾಸಿಸುವಂತೆ ಮಾಡಿದೆನೆಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”


ದೇವರು ಅವರನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ. ಅವರಿಗೆ ಕಾಡುಕೋಣದಂಥ ಬಲವುಂಟು.


ಮೋಶೆ ಆರೋನರ ನಾಯಕತ್ವದಲ್ಲಿ ಈಜಿಪ್ಟ್ ದೇಶದೊಳಗಿಂದ ತಮ್ಮ ಸೈನ್ಯಗಳ ಪ್ರಕಾರ ಹೊರಟ ಇಸ್ರಾಯೇಲರ ಪ್ರಯಾಣದ ಹಂತಗಳ ವಿವರ ಇಲ್ಲಿವೆ.


ದೇವರು ನಿಮ್ಮ ಪಿತೃಗಳನ್ನು ಪ್ರೀತಿಮಾಡಿದ್ದರಿಂದ, ಅವರ ತರುವಾಯ ಅವರ ಸಂತತಿಯನ್ನು ಆಯ್ದುಕೊಂಡು, ನಿಮ್ಮನ್ನು ತಮ್ಮ ದೃಷ್ಟಿಯಲ್ಲಿ ತಮ್ಮ ದೊಡ್ಡ ಬಲದಿಂದ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.


ನೀವು ಅಬೀಬ ತಿಂಗಳಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಬೇಕು. ಏಕೆಂದರೆ ಅಬೀಬ ತಿಂಗಳಿನಲ್ಲಿ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ರಾತ್ರಿಯಲ್ಲಿ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.


“ ‘ನಾನು ಮೋಶೆಯನ್ನೂ ಆರೋನನನ್ನೂ ಕಳುಹಿಸಿ, ಅವರ ಮಧ್ಯದಲ್ಲಿ ನಾನು ಮಾಡಿದವುಗಳ ಪ್ರಕಾರ ಈಜಿಪ್ಟನ್ನು ಬಾಧಿಸಿದೆನು. ತರುವಾಯ ನಿಮ್ಮನ್ನು ಹೊರಗೆ ತಂದೆನು.


ಇಸ್ರಾಯೇಲರು ಈಜಿಪ್ಟ್ ದೇಶದಿಂದ ಬಂದ ನಾನೂರ ಎಂಬತ್ತನೆಯ ವರುಷದಲ್ಲಿ ಇಸ್ರಾಯೇಲಿನ ಮೇಲೆ ಸೊಲೊಮೋನನ ಆಳಿಕೆಯ ನಾಲ್ಕನೆಯ ವರ್ಷದ, ಎರಡನೆಯ ತಿಂಗಳಾದ ಜಿವ್ ತಿಂಗಳಲ್ಲಿ ಅವನು ಯೆಹೋವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿದನು.


ಆಗ ಯೆಹೋವ ದೇವರು ಕೂಷ್ಯರನ್ನು ಆಸನ ಮುಂದೆಯೂ, ಯೆಹೂದದವರ ಮುಂದೆಯೂ ಸೋಲುವಂತೆ ಮಾಡಿದರು. ಆದ್ದರಿಂದ ಕೂಷ್ಯರು ಓಡಿಹೋದರು.


ಇಸ್ರಾಯೇಲರು ಈಜಿಪ್ಟಿನೊಳಗಿಂದಲೂ, ಯಾಕೋಬನ ಮನೆತನವು ಅನ್ಯಭಾಷೆಯುಳ್ಳ ಜನರೊಳಗಿಂದಲೂ ಹೊರಟುಬಂದಾಗ,


ಇಸ್ರಾಯೇಲರನ್ನು ಈಜಪ್ಟಿನಿಂದ ಹೊರಗೆ ಬರಮಾಡಿದವರನ್ನು ಕೊಂಡಾಡಿರಿ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು