Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 12:12 - ಕನ್ನಡ ಸಮಕಾಲಿಕ ಅನುವಾದ

12 “ಏಕೆಂದರೆ ನಾನು ಈ ರಾತ್ರಿ ಈಜಿಪ್ಟ್ ದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ, ಪಶುಗಳಲ್ಲಿಯೂ ಇರುವ ಚೊಚ್ಚಲಾದವುಗಳನ್ನು ಸಂಹರಿಸುವೆನು. ಈಜಿಪ್ಟಿನ ದೇವರುಗಳಿಗೆಲ್ಲಾ ನಾನು ನ್ಯಾಯತೀರಿಸುವೆನು. ನಾನೇ ಯೆಹೋವ ದೇವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆ ರಾತ್ರಿ ನಾನು ಐಗುಪ್ತದೇಶದ ಮೇಲೆ ಹಾದುಹೋಗಿ ಮನುಷ್ಯರಲ್ಲಾಗಲಿ, ಪಶುಗಳಲ್ಲಾಗಲಿ, ಚೊಚ್ಚಲಾಗಿರುವುದನ್ನೆಲ್ಲಾ ಸಂಹರಿಸುವೆನು. ಐಗುಪ್ತ ದೇಶದ ಸಮಸ್ತ ದೇವತೆಗಳಿಗೂ ನ್ಯಾಯತೀರಿಸುವೆನು. ನಾನೇ ಯೆಹೋವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದುಹೋಗುವೆನು; ಮನುಷ್ಯರಾಗಲಿ, ಪ್ರಾಣಿಗಳಾಗಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆ ರಾತ್ರಿ ನಾನು ಐಗುಪ್ತ ದೇಶದ ನಡುವೆ ಹಾದುಹೋಗಿ ಮನುಷ್ಯರಲ್ಲಾಗಲಿ ಪಶುಗಳಲ್ಲಾಗಲಿ ಚೊಚ್ಚಲಾಗಿರುವದನ್ನೆಲ್ಲಾ ಸಂಹರಿಸುವೆನು; ಐಗುಪ್ತ ದೇಶದ ಸಮಸ್ತ ದೇವತೆಗಳಿಗೂ ಶಿಕ್ಷೆಮಾಡುವೆನು; ನಾನು ಯೆಹೋವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 “ಆ ರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗಿ ಈಜಿಪ್ಟಿನ ಚೊಚ್ಚಲು ಪಶುಗಳನ್ನೂ ಚೊಚ್ಚಲು ಗಂಡುಮಕ್ಕಳನ್ನೂ ಕೊಲ್ಲುವೆನು; ಈಜಿಪ್ಟಿನ ಎಲ್ಲಾ ದೇವರುಗಳಿಗೆ ತೀರ್ಪು ಮಾಡುವೆನು. ನಾನೇ ಯೆಹೋವನೆಂದು ತೋರಿಸಿಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 12:12
26 ತಿಳಿವುಗಳ ಹೋಲಿಕೆ  

ಹೇಗೆಂದರೆ ಆ ಕಾಲದಲ್ಲಿ ಯೆಹೋವ ದೇವರು ಈಜಿಪ್ಟಿನವರ ಸಮಸ್ತ ಚೊಚ್ಚಲಿನವರನ್ನು ಹೊಡೆದು ಆ ಮಕ್ಕಳ ಶವಗಳನ್ನು ಹೂಣಿಟ್ಟರು, ಯೆಹೋವ ದೇವರು ಅವರ ದೇವರುಗಳಿಗೂ ಶಿಕ್ಷೆ ಮಾಡಿದರು.


ಏಕೆಂದರೆ ಯೆಹೋವ ದೇವರು ಈಜಿಪ್ಟಿನವರನ್ನು ಸಂಹರಿಸುವುದಕ್ಕಾಗಿ ಹಾದುಹೋಗುವರು. ಅವರು ಅಡ್ಡ ಪಟ್ಟಿಯ ಮೇಲೂ, ಅದರ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ, ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡದಂತೆ, ಯೆಹೋವ ದೇವರು ನಿಮ್ಮ ಬಾಗಿಲುಗಳನ್ನು ದಾಟಿಹೋಗುವರು.


ಅವರು ಭೂಮಿಯ ಎಲ್ಲಾ ದೇವರುಗಳನ್ನು ನಾಶಮಾಡುವಾಗ, ಯೆಹೋವ ದೇವರು ಅವರಿಗೆ ಭಯಂಕರವಾಗಿರುವರು. ಇತರ ಜನಾಂಗಗಳ ದ್ವೀಪಗಳವರೆಲ್ಲರು ತಮ್ಮ ತಮ್ಮ ಸ್ಥಳಗಳಲ್ಲಿ ಅವರನ್ನು ಆರಾಧಿಸುವರು.


ಆದರೆ ಅವರು ಎಲ್ಲಿ ಹೋಗುವರೋ, ಆ ಜನಾಂಗಗಳೊಳಗೆ ಅವರ ಹೇಯ ಕಾರ್ಯಗಳನ್ನು ಇವರು ತಿಳಿದುಕೊಳ್ಳುವಂತೆ ಅವರಲ್ಲಿ ಕೆಲವರನ್ನು ಖಡ್ಗದಿಂದಲೂ ಬರಗಾಲದಿಂದಲೂ ವ್ಯಾಧಿಯಿಂದಲೂ ಉಳಿಸುವೆನು. ಆಗ ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವರು.”


ಇದಲ್ಲದೆ ಈಜಿಪ್ಟಿನ ದೇಶದಲ್ಲಿರುವ ಸೂರ್ಯ ದೇವಾಲಯವನ್ನು ಒಡೆದುಹಾಕಿ, ಈಜಿಪ್ಟ್ ದೇವರುಗಳ ಆಲಯಗಳನ್ನು ಬೆಂಕಿಯಿಂದ ಸುಡುವನು.’ ”


ಈಜಿಪ್ಟಿನವರ ವಿಷಯವಾದ ಪ್ರವಾದನೆ: ಇಗೋ, ಯೆಹೋವ ದೇವರು ವೇಗವುಳ್ಳ ಮೇಘವನ್ನು ಹತ್ತಿಕೊಂಡು ಈಜಿಪ್ಟಿಗೆ ಬರುತ್ತಾರೆ. ಅವರು ಸಮ್ಮುಖರಾದಾಗ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯಗಳು ಅದರ ಮಧ್ಯೆ ಭಯದಿಂದ ಕರಗುವುವು.


“ನಾನು ಮುಂದುವರೆಸಿ ಅವರಿಗೆ ಹೇಳಿದ್ದು, ‘ನೀವು ದೇವರುಗಳು, ನೀವೆಲ್ಲರು ಮಹೋನ್ನತ ದೇವರ ಮಕ್ಕಳು,’ ಎಂದು ಹೇಳಿದೆನು.


ದೇವರು ಮಹಾಸಭೆಯಲ್ಲಿ ಅಧ್ಯಕ್ಷತೆವಹಿಸಿ, ದೇವರುಗಳ ಮಧ್ಯದಲ್ಲಿ ನ್ಯಾಯತೀರಿಸುತ್ತಾರೆ.


ಇದಲ್ಲದೆ ದೇವರು ಮೋಶೆಯ ಸಂಗಡ ಮಾತನಾಡಿ, “ನಾನೇ ಯೆಹೋವ ದೇವರು.


ಎಲ್ಲಾ ದ್ರಾಕ್ಷಿ ತೋಟಗಳಲ್ಲೂ ಗೋಳಾಟವು ಇರುವುದು. ಏಕೆಂದರೆ ನಾನು ನಿನ್ನ ಮಧ್ಯೆ ಹಾದು ಹೋಗುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ಅಲ್ಲಿ ಫಿಲಿಷ್ಟಿಯರು ತಮ್ಮ ದೇವರುಗಳನ್ನು ಬಿಟ್ಟು ಹೋದುದರಿಂದ, ದಾವೀದನು ಅವುಗಳನ್ನು ಸುಟ್ಟುಹಾಕಬೇಕೆಂದು ಅಪ್ಪಣೆಮಾಡಿದನು.


ಅಷ್ಡೋದ್ಯರು ಮಾರನೆಯ ದಿವಸ ಎದ್ದಾಗ, ದಾಗೋನ್ ವಿಗ್ರಹ ಯೆಹೋವ ದೇವರ ಮಂಜೂಷದ ಮುಂದೆ ಬೋರಲು ಬಿದ್ದಿತ್ತು.


“ದೇವರನ್ನು ದೂಷಿಸಬೇಡ, ನಿನ್ನ ಜನರ ಅಧಿಕಾರಿಗಳನ್ನು ಶಪಿಸಬೇಡ.


ಏಕೆಂದರೆ ನಿಮ್ಮೆಲ್ಲರ ನಾಶಕ್ಕೆ ಕಾರಣವಾದ ಈ ಗಡ್ಡೆಗಳ ಹಾಗು ಇಲಿಗಳ ಸ್ವರೂಪಗಳನ್ನು ನೀವು ಮಾಡಿ ಇಸ್ರಾಯೇಲ್ ದೇವರಿಗೆ ಮಹಿಮೆಯನ್ನು ಸಲ್ಲಿಸಬೇಕು. ಆಗ ಒಂದು ವೇಳೆ ಅವರು ನಿಮ್ಮ ಮೇಲೆಯೂ, ನಿಮ್ಮ ದೇವರುಗಳ ಮೇಲೆಯೂ, ನಿಮ್ಮ ಭೂಮಿಯ ಮೇಲೆಯೂ ಇರುವ ತಮ್ಮ ಕೈಯನ್ನು ತೆಗೆದು ಹಗುರಮಾಡುವರು.


ಅವನ ಯಜಮಾನನು ಅವನನ್ನು ನ್ಯಾಯಾಧೀಶರ ಬಳಿಗೆ ಕರಕೊಂಡು ಬಂದು, ಬಾಗಿಲಿನ ಬಳಿಗಾದರೂ ಅದರ ಕಂಬದ ಬಳಿಗಾದರೂ ಬರಮಾಡಿ, ಅವನ ಯಜಮಾನನು ಅವನ ಕಿವಿಯನ್ನು ದಬ್ಬಳದಿಂದ ಚುಚ್ಚಬೇಕು. ಆಗ ಅವನು ಸದಾಕಾಲಕ್ಕೂ ಅವನ ದಾಸನಾಗಿರಬೇಕು.


ಎಲ್ಲಾ ದೇವರುಗಳಿಗಿಂತ ಯೆಹೋವ ದೇವರೇ ದೊಡ್ಡವರೆಂದು ಈಗ ನಾನು ತಿಳಿದುಕೊಂಡಿದ್ದೇನೆ. ಏಕೆಂದರೆ ಈಜಿಪ್ಟಿನವರು ಗರ್ವಪಟ್ಟಿದ್ದರಿಂದ ಯೆಹೋವ ದೇವರು ಅವರನ್ನು ತಗ್ಗಿಸಿದರು,” ಎಂದನು.


ದೇವರು ಈಜಿಪ್ಟ್ ಜನರನ್ನು ಮೊದಲುಗೊಂಡು ಪಶುಗಳವರೆಗೂ ಚೊಚ್ಚಲುಗಳನ್ನೆಲ್ಲಾ ದಂಡಿಸಿದರು.


ನಾನು ಈಜಿಪ್ಟ್ ದೇವರುಗಳ ಆಲಯಗಳಲ್ಲಿ ಬೆಂಕಿ ಹಚ್ಚುವೆನು. ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು. ಕುರುಬನು ತನ್ನ ಉಡುಪನ್ನು ಹೇನುಗಳಿಂದ ಶುದ್ಧೀಕರಿಸುವಂತೆ ಅವನು ಈಜಿಪ್ಟ್ ದೇಶವನ್ನು ಶುದ್ಧವಾಗಿಸಿಕೊಂಡು ಅಲ್ಲಿಂದ ಸಮಾಧಾನವಾಗಿ ಹೊರಟು ಹೋಗುತ್ತಾನೆ.


ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ತೆಬೆಸ್ ನಗರದಲ್ಲಿನ ಆಮೋನ್ ದೇವತೆಯನ್ನೂ, ಫರೋಹನನ್ನೂ, ಈಜಿಪ್ಟನ್ನೂ, ಅದರ ದೇವರುಗಳನ್ನೂ, ಅದರ ಅರಸರನ್ನೂ, ಅಂತೂ ಫರೋಹನನ್ನೂ, ಅವನಲ್ಲಿ ನಂಬಿಕೆ ಇಡುವ ಎಲ್ಲರನ್ನೂ ದಂಡಿಸುವೆನು.


ಮಾರನೆಯ ದಿನವೇ ಯೆಹೋವ ದೇವರು ಆ ಕಾರ್ಯವನ್ನು ಮಾಡಲಾರಂಭಿಸಿದರು. ಈಜಿಪ್ಟಿನ ಪಶುಗಳೆಲ್ಲಾ ಸತ್ತು ಹೋದವು. ಆದರೆ ಇಸ್ರಾಯೇಲರ ಪಶುಗಳಲ್ಲಿ ಒಂದೂ ಸಾಯಲಿಲ್ಲ.


ನಿಮ್ಮ ಪಕ್ಕದಲ್ಲಿ ಸಾವಿರ ಜನರು ಬಿದ್ದರೂ ನಿಮ್ಮ ಬಲಗಡೆಯಲ್ಲಿ ಹತ್ತು ಸಾವಿರ ಜನರು ಬಿದ್ದಾಗ್ಯೂ, ನಿಮ್ಮ ಸಮೀಪಕ್ಕೆ ಅದು ಬರುವುದಿಲ್ಲ.


ಯೆಹೋವ ದೇವರು ಮಹಾ ದೇವರು, ಎಲ್ಲಾ ದೇವರುಗಳ ಮೇಲೆ ಮಹಾರಾಜರೂ ಆಗಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು