ವಿಮೋಚನಕಾಂಡ 10:10 - ಕನ್ನಡ ಸಮಕಾಲಿಕ ಅನುವಾದ10 ಫರೋಹನು ಅವರಿಗೆ, “ನಾನು ನಿಮ್ಮ ಮಡದಿ ಮಕ್ಕಳನ್ನೂ ಕಳುಹಿಸಿಕೊಟ್ಟು, ಯೆಹೋವ ದೇವರು ನಿಮ್ಮ ಸಂಗಡ ಇರಲಿ ಎಂದು ನಾನು ಹೇಳಬಯಸುವಿರೋ? ಇಲ್ಲಾ! ನೀವು ಕೇಡು ಮಾಡಲು ನಿರ್ಧರಿಸಿರುವಿರಿ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಅದಕ್ಕೆ ಫರೋಹನು, “ನಾನು ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಹೋಗುವುದಕ್ಕೆ ಅಪ್ಪಣೆ ಕೊಡುವುದಿಲ್ಲ; ಕಳುಹಿಸಿಕೊಟ್ಟರೆ, ಯೆಹೋವನು ನಿಮ್ಮ ಸಂಗಡವಿರುವನು. ನೋಡಿ, ನೀವು ದುರಾಲೋಚನೆಯಿಂದ ಕೂಡಿದವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಆಗ ಫರೋಹನು, “ನೀವು ನಿಮ್ಮ ಮನೆಯವರೆಲ್ಲರನ್ನು ಕರೆದುಕೊಂಡು ಹೋಗುವುದಕ್ಕೆ ನಾನೆಂದಿಗೂ ಅಪ್ಪಣೆಕೊಡುವುದಿಲ್ಲ. ಕೊಟ್ಟೆನಾದರೆ ಸರ್ವೇಶ್ವರನ ದಯೆಯೊಂದೇ ನಿಮ್ಮನ್ನು ಕಾಪಾಡಬೇಕಾಗುವುದು. ನೋಡಿ, ನೀವು ದುರಾಲೋಚನೆಯಿಂದ ಕೂಡಿದವರು ಎಂಬುದು ಸರಿಯಷ್ಟೆ! ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಅದಕ್ಕೆ ಫರೋಹನು - ನೀವು ನಿಮ್ಮ ಮನೆಯವರೆಲ್ಲರನ್ನು ಕರೆದುಕೊಂಡು ಹೋಗುವದಕ್ಕೆ ನಾನು ಎಂದಿಗೂ ಅಪ್ಪಣೆ ಕೊಡುವದಿಲ್ಲ; ನಾನು ಅಪ್ಪಣೆಕೊಟ್ಟರೆ ಯೆಹೋವನ ದಯವು ನಿಮಗುಂಟಾಗಬಹುದು, ಸರಿ. ನೋಡಿಕೊಳ್ಳಿರಿ, ನೀವು ದುರಾಲೋಚನೆ ಮಾಡಿಕೊಂಡವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಫರೋಹನು ಅವರಿಗೆ, “ಯೆಹೋವನಾಣೆ, ನೀವು ನಿಮ್ಮ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಹೋಗಲು ನಾನು ಅನುಮತಿ ಕೊಡುವುದೇ ಇಲ್ಲ. ಅಧ್ಯಾಯವನ್ನು ನೋಡಿ |