ಲೂಕ 8:27 - ಕನ್ನಡ ಸಮಕಾಲಿಕ ಅನುವಾದ27 ಯೇಸು ದಡಕ್ಕೆ ಸೇರಿದಾಗ, ಬಹುಕಾಲದಿಂದ ದೆವ್ವಗಳು ಹಿಡಿದು ಬಟ್ಟೆ ಧರಿಸಿಕೊಳ್ಳದೆ ಯಾವ ಮನೆಯಲ್ಲಿ ಇರದೆ ಸಮಾಧಿಯ ಗುಹೆಗಳಲ್ಲಿ ವಾಸಿಸುತ್ತಿದ್ದ ಒಬ್ಬ ಮನುಷ್ಯನನ್ನು ಯೇಸು ಸಂಧಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201927 ಯೇಸು ದಡಕ್ಕೆ ಇಳಿಯುತ್ತಲೇ ಆ ಊರಿನವನಾದ ಒಬ್ಬ ಮನುಷ್ಯನು ಆತನೆದುರಿಗೆ ಬಂದನು. ಅವನಿಗೆ ದೆವ್ವಗಳು ಹಿಡಿದಿದ್ದವು. ಅವನು ಬಹುಕಾಲದಿಂದ ವಸ್ತ್ರವನ್ನೇ ಧರಿಸದೆ ಮನೆಯಲ್ಲಿ ವಾಸಿಸದೆ ಸಮಾಧಿಯ ಗವಿಗಳಲ್ಲಿಯೇ ಇರುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)27 ಯೇಸು ದಡದ ಮೇಲೆ ಕಾಲಿಟ್ಟದ್ದೇ ತಡ, ಆ ಊರಿನವನೊಬ್ಬನು ಬಂದು ಅವರನ್ನು ಎದುರುಗೊಂಡನು. ಅವನಿಗೆ ಪಿಶಾಚಿ ಹಿಡಿದಿತ್ತು. ಅವನು ಬಟ್ಟೆತೊಟ್ಟು ಬಹಳ ದಿನಗಳಾಗಿತ್ತು; ಮನೆ ಬಿಟ್ಟು ಸಮಾಧಿಗಳ ಗುಹೆಗಳಲ್ಲೇ ವಾಸಿಸುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)27 ಆತನು ದಡಕ್ಕೆ ಇಳಿಯುತ್ತಲೇ ಆ ಊರಿನವನಾದ ಒಬ್ಬ ಮನುಷ್ಯನು ಆತನೆದುರಿಗೆ ಬಂದನು. ಅವನಿಗೆ ದೆವ್ವಗಳು ಹಿಡಿದಿದ್ದವು. ಬಹುಕಾಲದಿಂದ ಬಟ್ಟೆಯನ್ನೇ ಹಾಕಿಕೊಳ್ಳದೆ ಯಾವ ಮನೆಯಲ್ಲಿಯೂ ಇರದೆ ಸಮಾಧಿಯ ಗವಿಗಳಲ್ಲಿಯೇ ಇರುತ್ತಿದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್27 ಯೇಸು ದೋಣಿಯಿಂದ ಇಳಿದಾಗ, ಆ ಪಟ್ಟಣದ ಮನುಷ್ಯನೊಬ್ಬನು ಯೇಸುವಿನ ಬಳಿಗೆ ಬಂದನು. ಈ ಮನುಷ್ಯನಿಗೆ ದೆವ್ವ ಹಿಡಿದಿತ್ತು. ಬಹಳ ಕಾಲದಿಂದ ಅವನು ಬಟ್ಟೆಯನ್ನೇ ಹಾಕಿಕೊಂಡಿರಲಿಲ್ಲ. ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್27 ಜೆಜು ಢೊನಿತ್ನಾ ದಂಡೆಕ್ ಉತರಲ್ಲ್ಯಾ ತನ್ನಾಚ್, ತ್ಯಾ ಗಾಂವಾತ್ಲ್ಯಾ ಗಿರೆ ಲಾಗಲ್ಲ್ಯಾ ಎಕ್ ಮಾನ್ಸಾಕ್ ತೊ ಭೆಟ್ಲೊ. ಲೈ ದಿಸಾಕ್ನಾ ತೊ ಮಾನುಸ್ ಆಂಗಾರ್ ಕಪ್ಡೆನಸ್ತಾನಾ ಫಿರಿ, ಅನಿ ಘರಾತ್ ರೈನಸಿ, ಲೊಕಾಕ್ನಿ ಮಾಟಿ ದಿತಲ್ಯಾ ಢೊಂಬಾತ್ನಿಚ್ ತೊ ರೈ. ಅಧ್ಯಾಯವನ್ನು ನೋಡಿ |