Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 6:23 - ಕನ್ನಡ ಸಮಕಾಲಿಕ ಅನುವಾದ

23 “ಆ ದಿನದಲ್ಲಿ ನೀವು ಸಂತೋಷಪಡಿರಿ, ಉಲ್ಲಾಸದಿಂದ ಕುಣಿದಾಡಿರಿ. ಇಗೋ, ಪರಲೋಕದಲ್ಲಿ ನಿಮಗೆ ಮಹಾ ಪ್ರತಿಫಲ ಸಿಕ್ಕುವುದು. ಈ ಜನರ ಪಿತೃಗಳು ಪ್ರವಾದಿಗಳಿಗೆ ಅದೇ ರೀತಿಯಲ್ಲಿ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆ ದಿನದಲ್ಲಿ ಸಂತೋಷಿಸಿ, ಕುಣಿದಾಡುವಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು ಎಂದು ತಿಳಿದುಕೊಳ್ಳಿರಿ. ಈ ಜನರ ಪೂರ್ವಿಕರು ಪ್ರವಾದಿಗಳಿಗೂ ಹಾಗೆಯೇ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಆ ದಿನದಲ್ಲಿ ಸಂತೋಷಪಡಿರಿ, ಕುಣಿದಾಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು ಎಂದು ತಿಳುಕೊಳ್ಳಿರಿ. ಈ ಜನರ ಪಿತೃಗಳು ಪ್ರವಾದಿಗಳಿಗೂ ಹಾಗೆಯೇ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಆ ಸಮಯದಲ್ಲಿ ಆನಂದಪಡಿರಿ. ಏಕೆಂದರೆ ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು. ಈ ಜನರು ನಿಮಗೆ ಮಾಡಿದಂತೆಯೇ ಅವರ ಪಿತೃಗಳು ಪ್ರವಾದಿಗಳಿಗೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

23 ಅಶೆ ತುಮ್ಕಾ ಹೊಲ್ಲ್ಯಾ ತನ್ನಾ ಕುಶಿ ಹೊವಾ ಅನಿ ನಾಚಾ, ಕಶ್ಯಾಕ್ ಮಟ್ಲ್ಯಾರ್ ಸರ್‍ಗಾರ್ ಮೊಟೆ ಭೊಮಾನ್ ತುಮ್ಕಾ ತಯಾರ್ ಹಾಯ್. ತೆಂಚ್ಯಾ ವಾಡ್ ವಡ್ಲಾನಿಬಿ ಪ್ರವಾದ್ಯಾಕ್ನಿ ಅಸೆಚ್ ಕರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 6:23
45 ತಿಳಿವುಗಳ ಹೋಲಿಕೆ  

ಜಯಹೊಂದುವವರು ಇವುಗಳಿಗೆ ಬಾಧ್ಯನಾಗುವರು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಮಕ್ಕಳಾಗಿರುವರು.


ಯಾರು ಜಯ ಹೊಂದುತ್ತಾರೋ, ಅವರನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ಸ್ಥಾಪಿಸುವೆನು. ಅವರು ಎಂದಿಗೂ ಅದರೊಳಗಿಂದ ಹೊರಗೆ ಹೋಗುವುದಿಲ್ಲ. ನಾನು ನನ್ನ ದೇವರ ಹೆಸರನ್ನು ಪರಲೋಕದಲ್ಲಿರುವ ನನ್ನ ದೇವರಿಂದ ಇಳಿದು ಬರುವ ಹೊಸ ಯೆರೂಸಲೇಮಿನ ಹೆಸರನ್ನೂ ಹಾಗೂ ನನ್ನ ಹೊಸ ಹೆಸರನ್ನೂ ಅವರ ಮೇಲೆ ಬರೆಯುವೆನು.


ಜಯಹೊಂದುವವರಿಗೆ ಹೀಗೆ ಬಿಳಿಯ ವಸ್ತ್ರಗಳನ್ನು ಹೊದಿಸಲಾಗುವುದು. ಅವರ ಹೆಸರನ್ನು ಜೀವಬಾಧ್ಯರ ಪಟ್ಟಿಯಿಂದ ನಾನು ಅಳಿಸಿಬಿಡದೆ, ಅವರ ಹೆಸರನ್ನು ನನ್ನ ತಂದೆಯ ಮುಂದೆಯೂ ಅವರ ದೂತರ ಮುಂದೆಯೂ ಅರಿಕೆ ಮಾಡುವೆನು.


ಆದ್ದರಿಂದ ಯೇಸುವಿನ ನಾಮದ ನಿಮಿತ್ತ ಅವಮಾನಪಡಲು ತಾವು ಯೋಗ್ಯರಾದೆವಲ್ಲಾ ಎಂದು ಅಪೊಸ್ತಲರು ಸಂತೋಷಪಡುತ್ತಾ ನ್ಯಾಯಸಭೆಯಿಂದ ಹೊರಗೆ ಹೋದರು.


ಸಂತೋಷಪಟ್ಟು ಆನಂದಿಸಿರಿ. ಏಕೆಂದರೆ ಪರಲೋಕದಲ್ಲಿ ನಿಮಗೆ ಮಹಾ ಪ್ರತಿಫಲ ಸಿಕ್ಕುವುದು. ಅವರು ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಸಹ ಇದೇ ರೀತಿಯಲ್ಲಿ ಹಿಂಸೆಪಡಿಸಿದರು.


ಯಾರು ಜಯಶಾಲಿಯಾಗಿದ್ದು, ನನ್ನ ಚಿತ್ತವನ್ನು ಅಂತ್ಯದವರೆಗೂ ಯಾರು ನಡೆಸುತ್ತಾರೋ, ಅವರಿಗೆ ನಾನು ರಾಷ್ಟ್ರಗಳ ಮೇಲೆ ಅಧಿಕಾರವನ್ನು ನೀಡುವೆನು.


ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವರು ಕೇಳಲಿ. ಯಾರು ಜಯ ಹೊಂದುತ್ತಾರೋ ಅವರಿಗೆ ಬಚ್ಚಿಟ್ಟಿರುವ ಮನ್ನಾವನ್ನು ಕೊಡುವೆನು. ಇದಲ್ಲದೆ ಅವರಿಗೆ ಬಿಳಿಕಲ್ಲನ್ನೂ ಆ ಕಲ್ಲಿನ ಮೇಲೆ ಕೆತ್ತಿದ ಹೊಸ ಹೆಸರನ್ನೂ ಕೊಡುವೆನು. ಆ ಹೆಸರನ್ನು ಹೊಂದಿದವನಿಗೇ ಹೊರತು, ಅದು ಮತ್ತಾರಿಗೂ ತಿಳಿಯದು.


ಪವಿತ್ರಾತ್ಮ ದೇವರು ಸಭೆಗಳಿಗೆ ಹೇಳುವುದನ್ನು, ಕಿವಿಯುಳ್ಳವರು ಕೇಳಲಿ. ಯಾರು ಜಯ ಹೊಂದುತ್ತಾರೋ ಅವರಿಗೆ ದೇವರ ಪರಲೋಕದಲ್ಲಿರುವ ಜೀವವೃಕ್ಷದ ಹಣ್ಣನ್ನು ತಿನ್ನಲು ಕೊಡುವೆನು.


ನೀವು ಕ್ರಿಸ್ತ ಯೇಸುವಿನ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ಸಂತೋಷವುಳ್ಳವರಾಗಿರಿ. ಆಗ ಕ್ರಿಸ್ತ ಯೇಸುವಿನ ಮಹಿಮೆಯ ಪ್ರತ್ಯಕ್ಷತೆಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ.


ನನ್ನ ಪ್ರಿಯರೇ, ನಿಮ್ಮ ನಂಬಿಕೆಯು ವಿವಿಧ ಕಷ್ಟಗಳಿಗೆ ಗುರಿಯಾಗುವಾಗ ಅವುಗಳನ್ನು ಸಂತೋಷದಿಂದ ಎಣಿಸಿಕೊಳ್ಳಿರಿ.


ಅವನು ಜಿಗಿದು ನಿಂತು ನಡೆದಾಡಲು ಪ್ರಾರಂಭಿಸಿದನು. ಆಮೇಲೆ ನಡೆಯುತ್ತಾ, ಕುಣಿಯುತ್ತಾ, ದೇವರ ಸ್ತೋತ್ರ ಮಾಡುತ್ತಾ, ಅವರೊಂದಿಗೆ ದೇವಾಲಯದೊಳಗೆ ಪ್ರವೇಶಿಸಿದನು.


ಆದರೆ ಯೆಹೋವ ದೇವರ ಕೋಪವು ತಮ್ಮ ಜನರಿಗೆ ವಿರೋಧವಾಗಿ ಏಳುವವರೆಗೂ, ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ, ದೇವರ ವಾಕ್ಯಗಳನ್ನು ತಿರಸ್ಕರಿಸಿ, ದೇವರ ಪ್ರವಾದಿಗಳಿಗೆ ಅಪಹಾಸ್ಯ ಮಾಡಿದರು.


ಯೆಹೋವ ದೇವರ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ, ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ನೋಡಿ, ಅರಸನಾದ ದಾವೀದನು ಯೆಹೋವ ದೇವರ ಮುಂದೆ ಕುಣಿದಾಡುವುದನ್ನು ಕಂಡು, ತನ್ನ ಹೃದಯದಲ್ಲಿ ಅವನನ್ನು ತಿರಸ್ಕರಿಸಿದಳು.


ಈಜಿಪ್ಟಿನ ನಿಕ್ಷೇಪಕ್ಕಿಂತಲೂ ಕ್ರಿಸ್ತ ಯೇಸುವಿಗಾಗಿ ನಿಂದೆಯನ್ನು ಹೊಂದುವುದು ಮಹಾಐಶ್ವರ್ಯವೆಂದೆಣಿಸಿಕೊಂಡನು. ಏಕೆಂದರೆ ಅವನು ತನ್ನ ಬಹುಮಾನಕ್ಕಾಗಿ ಎದುರು ನೋಡಿದನು.


ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವರು, ದೇವರು ಇದ್ದಾರೆಂತಲೂ ತಮ್ಮನ್ನು ಜಾಗ್ರತೆಯಿಂದ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾರೆಂತಲೂ ನಂಬಬೇಕು.


ನಾವು ಸಹಿಸಿಕೊಳ್ಳುವವರಾಗಿದ್ದರೆ ಕ್ರಿಸ್ತ ಯೇಸುವಿನ ಜೊತೆಯಲ್ಲಿ ನಾವು ಸಹ ಆಳುವೆವು. ಅವರನ್ನು ನಿರಾಕರಿಸಿದರೆ ಅವರು ಸಹ ನಮ್ಮನ್ನು ನಿರಾಕರಿಸುವರು.


ಈಗ ನಾನು ನಿಮಗೋಸ್ಕರ ಸಹಿಸುತ್ತಿರುವ ಬಾಧೆಗಳಲ್ಲಿ ಆನಂದಿಸುತ್ತೇನೆ. ಕ್ರಿಸ್ತ ಯೇಸುವಿನ ಸಂಕಟಗಳೊಳಗೆ ಇನ್ನೂ ಕೊರತೆಯಾಗಿರುವುದನ್ನು ಅವರ ದೇಹವಾಗಿರುವ ಸಭೆಗಾಗಿ ನನ್ನ ದೇಹದಲ್ಲಿ ತೀರಿಸುತ್ತೇನೆ.


ಹೀಗಿರುವುದರಿಂದ ಕ್ರಿಸ್ತ ಯೇಸುವಿನ ನಿಮಿತ್ತ ನನಗೆ ಬಲಹೀನತೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಹರ್ಷಿಸುತ್ತೇನೆ. ಏಕೆಂದರೆ, ಬಲಹೀನತೆಯಲ್ಲಿಯೇ ನಾನು ಶಕ್ತನಾಗಿರುವೆನು.


ಅಷ್ಟು ಮಾತ್ರವೇ ಅಲ್ಲ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷ ಪಡುವವರಾಗಿರುತ್ತೇವೆ. ಏಕೆಂದರೆ ಕಷ್ಟಸಂಕಟವು ತಾಳ್ಮೆಯನ್ನು ಉಂಟುಮಾಡುತ್ತದೆಂದೂ


“ಎದ್ದೇಳು, ಕಾಲೂರಿ ನಿಲ್ಲು!” ಎಂದು ದೊಡ್ಡ ಧ್ವನಿಯಿಂದ ಹೇಳಿದನು. ಆ ಮನುಷ್ಯನು ಜಿಗಿದು ನಿಂತು, ನಡೆದಾಡಲು ಪ್ರಾರಂಭಿಸಿದನು.


ಆದರೆ ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಅವರಿಗೆ ಒಳ್ಳೆಯದನ್ನು ಮಾಡಿರಿ. ಏನನ್ನೂ ತಿರುಗಿ ನಿರೀಕ್ಷಿಸದೆ ಸಾಲ ಕೊಡಿರಿ, ಆಗ ನಿಮ್ಮ ಪ್ರತಿಫಲ ದೊಡ್ಡದಾಗಿರುವುದು. ನೀವು ಮಹೋನ್ನತ ದೇವರ ಮಕ್ಕಳಾಗಿರುವಿರಿ, ಅವರು ಕೃತಜ್ಞತೆಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವರಾಗಿದ್ದಾರೆ.


ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿಗಳಲ್ಲಿ ಬಿದ್ದ ಕೂಡಲೇ, ಶಿಶುವು ನನ್ನ ಗರ್ಭದಲ್ಲಿ ಉಲ್ಲಾಸದಿಂದ ನಲಿದಾಡಿತು.


ಮರಿಯಳ ವಂದನೆಯನ್ನು ಕೇಳಿದಾಗ, ಎಲಿಸಬೇತಳ ಗರ್ಭದಲ್ಲಿದ್ದ ಕೂಸು ನಲಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮ ಭರಿತಳಾಗಿ


“ನಾನು ನಿಮ್ಮ ಜನರನ್ನು ದಂಡಿಸಿದ್ದು ವ್ಯರ್ಥವಾಯಿತು. ಅವರು ಶಿಕ್ಷೆಯನ್ನು ತೆಗೆದುಕೊಳ್ಳಲಿಲ್ಲ. ನಿಮ್ಮ ಸ್ವಂತ ಖಡ್ಗವು ನಾಶಮಾಡುವ ಸಿಂಹದಂತೆ ನಿಮ್ಮ ಪ್ರವಾದಿಗಳನ್ನು ನುಂಗಿಬಿಟ್ಟಿವೆ.


ಆಗ ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯೂ ಹರ್ಷದಿಂದ ಹಾಡುವುದು. ಏಕೆಂದರೆ ಮರುಭೂಮಿಯಲ್ಲಿ ನೀರೂ, ಮರುಭೂಮಿಯಲ್ಲಿ ಒರತೆಗಳೂ ಒಡೆಯುವುವು.


“ಆದರೂ ಅವರು ನಿಮಗೆ ಅವಿಧೇಯರಾಗಿ ತಿರುಗಿಬಿದ್ದು, ನಿಮ್ಮ ನಿಯಮವನ್ನು ಉಲ್ಲಂಘಿಸಿ, ತಮ್ಮನ್ನು ಎಚ್ಚರಿಸುವುದಕ್ಕೂ, ನಿಮ್ಮ ಕಡೆಗೆ ತಿರುಗಿಸುವುದಕ್ಕೂ ಪ್ರಯತ್ನಿಸುತ್ತಿದ್ದ ನಿಮ್ಮ ಪ್ರವಾದಿಗಳನ್ನೇ ಕೊಂದುಹಾಕಿದರು. ಹೀಗೆ ನಿಮ್ಮನ್ನೇ ಬಹು ದೂಷಿಸಿ ಅಸಡ್ಡೆಮಾಡಿಬಿಟ್ಟರು.


ಆಗ ಅವನು, “ಶಾಫಾಟನ ಮಗ ಎಲೀಷನ ತಲೆಯನ್ನು ಹಾರಿಸದಿದ್ದರೆ, ದೇವರು ನನಗೆ ಇದರಂತೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ,” ಎಂದನು.


‘ನಾನು ಸಮಾಧಾನವಾಗಿ ತಿರುಗಿ ಬರುವವರೆಗೂ ನೀವು ಇವನನ್ನು ಸೆರೆಮನೆಯಲ್ಲಿಟ್ಟು, ಅವನಿಗೆ ರೊಟ್ಟಿ ಮತ್ತು ನೀರನ್ನು ಬಿಟ್ಟು ಮತ್ತೇನೂ ಕೊಡಬೇಡಿರೆಂದು ಅರಸನು ಹೇಳಿದ್ದಾನೆ,’ ಎಂದು ತಿಳಿಸು,” ಎಂದನು.


ಆಗ ಇಸ್ರಾಯೇಲಿನ ಅರಸನು ಯೆಹೋಷಾಫಾಟನಿಗೆ, “ನಾವು ಯೆಹೋವ ದೇವರನ್ನು ವಿಚಾರಿಸುವ ಹಾಗೆ ಇಮ್ಲನ ಮಗ ಮೀಕಾಯನೆಂಬ ಇನ್ನೊಬ್ಬನಿದ್ದಾನೆ. ಆದರೆ ನಾನು ಅವನನ್ನು ದ್ವೇಷ ಮಾಡುತ್ತೇನೆ. ಏಕೆಂದರೆ ಅವನು ನನ್ನನ್ನು ಕುರಿತು ಒಳ್ಳೆಯದನ್ನಲ್ಲ ಯಾವಾಗಲೂ ಕೆಟ್ಟದ್ದನ್ನು ಪ್ರವಾದಿಸುತ್ತಾನೆ,” ಎಂದನು. ಅದಕ್ಕೆ ಯೆಹೋಷಾಫಾಟನು, “ಅರಸನು ಹಾಗೆ ಅನ್ನದಿರಲಿ,” ಎಂದನು.


ಆಗ ಅಹಾಬನು ಎಲೀಯನಿಗೆ, “ನನ್ನ ಶತ್ರುವೇ, ನೀನು ನನ್ನನ್ನು ಕಂಡುಹಿಡಿದೆಯಾ,” ಎಂದನು. ಅದಕ್ಕೆ ಎಲೀಯನು, “ಕಂಡುಕೊಂಡೆನು, ನೀನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವಂತೆ ನಿನ್ನನ್ನು ಮಾರಿಕೊಂಡದ್ದರಿಂದ,


ಅದಕ್ಕೆ ಅವನು, “ಸರ್ವಶಕ್ತ ದೇವರಾದ ಯೆಹೋವ ದೇವರೇ, ಇಸ್ರಾಯೇಲರಿಗೋಸ್ಕರ ನಾನು ಬಹು ರೋಷವುಳ್ಳವನಾಗಿದ್ದೇನೆ. ಏಕೆಂದರೆ ಇಸ್ರಾಯೇಲರು ನಿಮ್ಮ ಒಡಂಬಡಿಕೆಯನ್ನು ಬಿಟ್ಟು, ನಿಮ್ಮ ಬಲಿಪೀಠಗಳನ್ನು ಕೆಡವಿ, ನಿಮ್ಮ ಪ್ರವಾದಿಗಳನ್ನು ಖಡ್ಗದಿಂದ ಕೊಂದುಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಲು ಹುಡುಕುತ್ತಿದ್ದಾರೆ,” ಎಂದನು.


ಅದಕ್ಕೆ ಅವನು, “ಸರ್ವಶಕ್ತ ದೇವರಾದ ಯೆಹೋವ ದೇವರೇ, ಇಸ್ರಾಯೇಲರಿಗೋಸ್ಕರ ನಾನು ಬಹು ರೋಷವುಳ್ಳವನಾಗಿದ್ದೇನೆ. ಏಕೆಂದರೆ ಇಸ್ರಾಯೇಲರು ನಿಮ್ಮ ಒಡಂಬಡಿಕೆಯನ್ನು ಬಿಟ್ಟು, ನಿಮ್ಮ ಬಲಿಪೀಠಗಳನ್ನು ಕೆಡವಿ, ನಿಮ್ಮ ಪ್ರವಾದಿಗಳನ್ನು ಖಡ್ಗದಿಂದ ಕೊಂದುಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಲು ಹುಡುಕುತ್ತಿದ್ದಾರೆ,” ಎಂದನು.


ಈಜೆಬೆಲಳು ಎಲೀಯನ ಬಳಿಗೆ ದೂತನನ್ನು ಕಳುಹಿಸಿ, “ನಾನು ನಾಳೆ ಇಷ್ಟು ಹೊತ್ತಿಗೆ ಅವರಲ್ಲಿರುವ ಒಬ್ಬೊಬ್ಬನ ಪ್ರಾಣಕ್ಕೆ ಬದಲಾಗಿ ನಿನ್ನ ಪ್ರಾಣವನ್ನು ತೆಗೆಯದೆ ಹೋದರೆ, ದೇವರುಗಳು ನನಗೆ ಬೇಕಾದದ್ದನ್ನು ಮಾಡಲಿ,” ಎಂದು ಹೇಳಿದಳು.


ಈಜೆಬೆಲಳು ಯೆಹೋವ ದೇವರ ಪ್ರವಾದಿಗಳನ್ನು ಕೊಲ್ಲುತ್ತಿದ್ದಾಗ, ಓಬದ್ಯನು ನೂರು ಮಂದಿ ಪ್ರವಾದಿಗಳನ್ನು ತೆಗೆದುಕೊಂಡು, ಐವತ್ತು ಮಂದಿಯಾಗಿ ಅವರನ್ನು ಗವಿಯಲ್ಲಿ ಬಚ್ಚಿಟ್ಟು, ಅವರಿಗೆ ಆಹಾರವನ್ನೂ, ನೀರನ್ನೂ ಕೊಟ್ಟು, ಅವರನ್ನು ಸಂರಕ್ಷಣೆ ಮಾಡುತ್ತಾ ಇದ್ದನು.


ಆಗ ಜನರು ಹೀಗೆ ಹೇಳಿಕೊಳ್ಳುವರು, “ನಿಶ್ಚಯವಾಗಿ ನೀತಿವಂತನಿಗೆ ಫಲವಿದೆ. ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯತೀರಿಸುವ ದೇವರು ಇದ್ದಾರೆ.”


“ಖಂಡಿತವಾಗಿ ಆ ದಿನ ಬರುತ್ತದೆ, ಅದು ಒಲೆಯಂತೆ ಉರಿಯುತ್ತದೆ. ಆಗ ಗರ್ವಿಷ್ಠರೆಲ್ಲರೂ ಕೆಟ್ಟದ್ದನ್ನು ಮಾಡುವವರೆಲ್ಲರೂ ಹುಲ್ಲಿನಂತಿರುವರು. ಬರುವ ಆ ದಿನವು ಅವರನ್ನು ಸುಟ್ಟುಬಿಡುವುದು. ಬೇರನ್ನಾದರೂ, ಕೊಂಬೆಯನ್ನಾದರೂ ಅವರಿಗೆ ಬಿಡದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು