Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 6:10 - ಕನ್ನಡ ಸಮಕಾಲಿಕ ಅನುವಾದ

10 ಯೇಸು ಸುತ್ತಲೂ ಇದ್ದವರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದರು. ಅವನು ಹಾಗೆಯೇ ಮಾಡಿದನು. ಆಗ ಅವನ ಕೈ ಸಂಪೂರ್ಣವಾಗಿ ಗುಣವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಸುತ್ತಲೂ ಇದ್ದವರೆಲ್ಲರನ್ನೂ ನೋಡಿ ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದು ಹೇಳಿದನು. ಅವನು ಹಾಗೆಯೇ ಮಾಡಿದನು, ಕೈ ವಾಸಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಅನಂತರ ಸುತ್ತಲೂ ಇದ್ದವರೆಲ್ಲರನ್ನು ದಿಟ್ಟಿಸಿ ನೋಡಿ ಬತ್ತಿದ ಕೈಯುಳ್ಳವನ ಕಡೆಗೆ ತಿರುಗಿ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಸುತ್ತಲೂ ಅವರೆಲ್ಲರನ್ನು ನೋಡಿ ಆ ಮನುಷ್ಯನಿಗೆ - ನಿನ್ನ ಕೈಚಾಚು ಎಂದು ಹೇಳಿದನು. ಅವನು ಹಾಗೆಯೇ ಮಾಡಿದನು; ಕೈ ವಾಸಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಯೇಸು ಸುತ್ತಲೂ ನಿಂತಿದ್ದ ಅವರೆಲ್ಲರನ್ನು ನೋಡಿ, ಆ ಮನುಷ್ಯನಿಗೆ, “ನಿನ್ನ ಕೈಯನ್ನು ನನಗೆ ತೋರಿಸು” ಎಂದನು. ಅವನು ತನ್ನ ಕೈಯನ್ನು ಚಾಚಿದನು. ಆ ಕೂಡಲೇ ಅವನ ಕೈ ವಾಸಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ಜೆಜುನ್ ಭೊತ್ಯಾನಿ ಹೊತ್ತ್ಯಾ ಸಗ್ಳ್ಯಾಕ್ನಿ ಬಗಟ್ಲ್ಯಾನ್, ಅನಿ ತ್ಯಾ ಹಾತಾಕ್ ವಾರೆಮಾರಲ್ಲ್ಯಾ ಮಾನ್ಸಾಕ್ “ತುಜೊ ಹಾತ್ ಲಾಂಬ್ ಸೊಡ್” ಮಟ್ಲ್ಯಾನ್. ತೆನಿ ತೆಚೊ ಹಾತ್ ಲಾಂಬ್ ಸೊಡ್ಲ್ಯಾನ್, ಅನಿ ತೆಚೊ ಹಾತ್ ಬರೊ ಹೊಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 6:10
7 ತಿಳಿವುಗಳ ಹೋಲಿಕೆ  

ಆಗ ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ಹೃದಯಕಾಠಿಣ್ಯಕ್ಕಾಗಿ ದುಃಖಪಟ್ಟು, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದು ಹೇಳಿದರು. ಅವನು ಕೈಚಾಚಿದಾಗ, ಅವನ ಕೈ ಸಂಪೂರ್ಣವಾಗಿ ಗುಣವಾಯಿತು.


ಯೇಸು ಅವನಿಗೆ, “ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ,” ಎಂದರು.


ದೇವರು ತಮ್ಮ ವಾಕ್ಯವನ್ನು ಕಳುಹಿಸಿ, ಅವರನ್ನು ಸ್ವಸ್ಥಮಾಡಿದರು; ನಾಶನದಿಂದಲೂ ಅವರನ್ನು ತಪ್ಪಿಸಿದರು.


ಆಗ ಅರಸನು ಉತ್ತರವಾಗಿ ದೇವರ ಮನುಷ್ಯನಿಗೆ, “ನನ್ನ ಕೈ ಗುಣವಾಗುವ ಹಾಗೆ ನೀನು ನಿನ್ನ ದೇವರಾದ ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡು, ನನಗೋಸ್ಕರ ಪ್ರಾರ್ಥನೆ ಮಾಡು,” ಎಂದನು. ಆಗ ದೇವರ ಮನುಷ್ಯನು ಯೆಹೋವ ದೇವರ ಕಟಾಕ್ಷವನ್ನು ಬೇಡಿಕೊಂಡದ್ದರಿಂದ ಅರಸನ ಕೈಗುಣವಾಗಿ, ಮುಂಚಿನ ಹಾಗೆ ಆಯಿತು.


ಯೇಸು ಅವರಿಗೆ, “ನಾನು ನಿಮ್ಮನ್ನು ಕೇಳುತ್ತೇನೆ: ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ಮೋಶೆಯ ನಿಯಮಕ್ಕೆ ಸಮ್ಮತವೋ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಳಿಸುವುದೋ?” ಎಂದರು.


ಆದರೆ ಫರಿಸಾಯರೂ ನಿಯಮ ಬೋಧಕರೂ ತುಂಬಾ ಕೋಪಗೊಂಡು ಯೇಸುವಿಗೆ ಏನಾದರೂ ಮಾಡಬೇಕೆಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು