Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 22:3 - ಕನ್ನಡ ಸಮಕಾಲಿಕ ಅನುವಾದ

3 ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಎಂದು ಕರೆಯಲಾಗುವ ಯೂದನಲ್ಲಿ, ಸೈತಾನನು ಪ್ರವೇಶಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಗ ಸೈತಾನನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತನೆಂಬ ಯೂದನಲ್ಲಿ ಪ್ರವೇಶಿಸಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಅಷ್ಟರಲ್ಲಿ ಯೇಸುವಿನ ಹನ್ನೆರಡುಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದನು ಸೈತಾನನಿಗೆ ವಶನಾದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆಗ ಸೈತಾನನು ಹನ್ನೆರಡು ಮಂದಿ ಶಿಷ್ಯರ ಲೆಕ್ಕದಲ್ಲಿ ಸೇರಿದವನಾದ ಇಸ್ಕರಿಯೋತೆಂಬ ಯೂದನಲ್ಲಿ ಪ್ರವೇಶಿಸಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಯೇಸುವಿನ ಹನ್ನೆರಡು ಅಪೊಸ್ತಲರಲ್ಲಿ ಇಸ್ಕರಿಯೋತ ಯೂದನು ಒಬ್ಬನಾಗಿದ್ದನು. ಸೈತಾನನು ಇವನೊಳಗೆ ಪ್ರವೇಶಿಸಿ ಕೆಟ್ಟಕಾರ್ಯವೊಂದನ್ನು ಮಾಡುವಂತೆ ಪ್ರೇರೇಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

3 ತನ್ನಾ ಸೈತಾನ್ ಜೆಜುಚ್ಯಾ ಬಾರಾ ಜಾನಾ ಶಿಸಾನಿತ್ಲ್ಯಾ ಜುದಾಸ್ ಇಸ್ಕರಿಯೊತಾಚ್ಯಾ ಭುತ್ತುರ್ ಗುಸ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 22:3
16 ತಿಳಿವುಗಳ ಹೋಲಿಕೆ  

ಸಾಯಂಕಾಲ ಊಟದ ಸಮಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಯೋಚನೆಯನ್ನು, ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಹಾಕಿದ್ದನು.


“ನಾನು ನಿಮ್ಮೆಲ್ಲರನ್ನು ಕುರಿತು ಮಾತನಾಡುತ್ತಿಲ್ಲ. ನಾನು ಆರಿಸಿಕೊಂಡವರನ್ನು ನಾನು ಬಲ್ಲೆನು. ಆದರೆ ‘ನನ್ನ ಸಂಗಡ ರೊಟ್ಟಿಯನ್ನು ತಿಂದವನೇ, ನನಗೆ ದ್ರೋಹ ಬಗೆದನು,’ ಎಂಬ ಪವಿತ್ರ ವಾಕ್ಯವು ನೆರವೇರಬೇಕಾಗಿದೆ.


ಆದರೆ ಪೇತ್ರನು, “ಅನನೀಯಾ, ಪವಿತ್ರಾತ್ಮ ದೇವರಿಗೆ ಸುಳ್ಳು ಹೇಳುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿಸಿದ್ದು ಏಕೆ? ಆಸ್ತಿಯನ್ನು ಮಾರಿ ಬಂದ ಹಣದಲ್ಲಿ ಒಂದು ಭಾಗವನ್ನು ಇಟ್ಟುಕೊಂಡದ್ದೇಕೆ?


ಆದರೂ ಇಗೋ, ನನಗೆ ದ್ರೋಹಬಗೆಯುವವನ ಕೈ ನನ್ನ ಕೈಯೊಂದಿಗೆ ಮೇಜಿನ ಮೇಲೆ ಇದೆ.


ನನ್ನ ರೊಟ್ಟಿಯನ್ನು ತಿಂದವನೂ ನಾನು ನಂಬಿದ್ದವನೂ ಆಗಿರುವ ನನ್ನ ಆಪ್ತ ಸ್ನೇಹಿತನು ಸಹ ನನಗೆ ವಿರೋಧವಾಗಿ ತನ್ನ ಕಾಲನ್ನು ಎತ್ತಿದ್ದಾನೆ.


ಅವನು ಬಡವರ ಹಿತಚಿಂತನೆಯಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು, ಹಣದ ಚೀಲವನ್ನು ಇಟ್ಟುಕೊಂಡು ಅದರಲ್ಲಿ ಹಾಕಿದ್ದನ್ನು ಕದ್ದುಕೊಳ್ಳುತ್ತಿದ್ದನು. ಆದ್ದರಿಂದಲೇ ಇದನ್ನು ಹೇಳಿದನು.


ಯಾಕೋಬನ ಮಗ ಯೂದ, ಮತ್ತು ದ್ರೋಹಿಯಾದ ಇಸ್ಕರಿಯೋತ ಯೂದ.


ಅದಕ್ಕೆ ಯೇಸು ಉತ್ತರವಾಗಿ, “ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದಿದವನೇ ನನಗೆ ದ್ರೋಹ ಮಾಡುವನು.


ಯೇಸು ಅವನಿಗೆ, “ಸೈತಾನನೇ, ತೊಲಗು. ಏಕೆಂದರೆ, ‘ನಿನ್ನ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.


ಕಾನಾನ್ಯನಾದ ಸೀಮೋನ ಮತ್ತು ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು