ಲೂಕ 20:26 - ಕನ್ನಡ ಸಮಕಾಲಿಕ ಅನುವಾದ26 ಯೇಸು ಜನರ ಮುಂದೆ ಬಹಿರಂಗವಾಗಿ ಹೇಳಿದ ಮಾತಿನಲ್ಲಿ ಅವರು ತಪ್ಪು ಕಂಡುಹಿಡಿಯಲಾರದೆ ಹೋದರು. ಯೇಸುವಿನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಾದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 ಯೇಸು ಜನರ ಮುಂದೆ ಹೇಳಿದ ಮಾತಿನಲ್ಲಿ ಅವರು ಯಾವ ತಪ್ಪನ್ನೂ ಹಿಡಿಯಲಾಗದೆ, ಆತನು ಕೊಟ್ಟ ಉತ್ತರಕ್ಕೆ ಆಶ್ಚರ್ಯಪಟ್ಟು ಸುಮ್ಮನಾದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)26 ಯೇಸು ಕೊಟ್ಟ ಈ ಉತ್ತರಕ್ಕೆ ಬೆರಗಾಗಿ ಆ ಗೂಢಚಾರರು ಬಾಯಿ ಮುಚ್ಚಿಕೊಂಡರು. ಜನರ ಮುಂದೆ, ಯೇಸುವಿನ ಮಾತುಗಳಲ್ಲಿ ತಪ್ಪು ಕಂಡುಹಿಡಿಯಲು ಅವರಿಂದ ಸಾಧ್ಯವಾಗಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 ಆತನ ಮಾತಿನಲ್ಲಿ ಅವರು ಜನರ ಮುಂದೆ ಏನೂ ಹಿಡಿಯಲಾರದೆ ಆತನು ಕೊಟ್ಟ ಉತ್ತರಕ್ಕೆ ಆಶ್ಚರ್ಯಪಟ್ಟು ಸುಮ್ಮಗಾದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 ಆ ಜನರು ಆತನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿ ಆಶ್ಚರ್ಯಪಟ್ಟು ಮರುಪ್ರಶ್ನೆ ಕೇಳದಂತಾದರು. ಜನರ ಮುಂದೆ ಯೇಸುವನ್ನು ಮಾತಿನಲ್ಲಿ ಸಿಕ್ಕಿಸಲು ಅವರಿಂದಾಗಲಿಲ್ಲ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್26 ಥೈ ಲೊಕಾಂಚ್ಯಾ ಇದ್ರಾಕ್ ತೆನಿ ತೆಕಾ ಕಸ್ಲ್ಯಾಬಿ ಚುಕಿತ್ ಸಿರ್‍ಕುಕ್ ಹೊವ್ಕ್ ನಾ, ತಸೆ ಮನುನ್ ಥಂಡ್ ಪಡ್ಲ್ಯಾನಿ. ಅನಿ ಜೆಜುನ್ ಸಾಂಗಲ್ಲೊ ಜಬಾಬ್ ಆಯ್ಕುನ್ ಅಜಾಪ್ ಹೊಲ್ಯಾನಿ. ಅಧ್ಯಾಯವನ್ನು ನೋಡಿ |