Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 20:21 - ಕನ್ನಡ ಸಮಕಾಲಿಕ ಅನುವಾದ

21 ಅವರು ಯೇಸುವಿಗೆ, “ಗುರುವೇ, ನೀವು ಮುಖ ದಾಕ್ಷಿಣ್ಯವಿಲ್ಲದೆ ಸರಿಯಾಗಿ ಬೋಧಿಸುತ್ತೀರಿ ಮತ್ತು ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವರಾಗಿದ್ದೀರೆಂದು ನಾವು ಬಲ್ಲೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಗೂಢಚಾರರು, “ಬೋಧಕನೇ, ನೀನು ಸರಿಯಾಗಿ ಮಾತನಾಡುತ್ತಾ ಉಪದೇಶಮಾಡುತ್ತೀ, ನೀನು ಮುಖದಾಕ್ಷಿಣ್ಯವಿಲ್ಲದೆ ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನಾಗಿದ್ದೀ ಎಂದು ಬಲ್ಲೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 “ಬೋಧಕರೇ, ನೀವು ಹೇಳುವುದು ಹಾಗೂ ಬೋಧಿಸುವುದು ನ್ಯಾಯಬಧ್ಧವಾಗಿಯೇ ಇದೆ. ಮುಖದಾಕ್ಷಿಣ್ಯವಿಲ್ಲದೆ ಸತ್ಯಕ್ಕನುಸಾರವಾಗಿ ಧರ್ಮಮಾರ್ಗವನ್ನು ಬೋಧಿಸುತ್ತೀರಿ. ಇದನ್ನು ನಾವು ಚೆನ್ನಾಗಿ ಬಲ್ಲೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಇವರು - ಬೋಧಕನೇ, ನೀನು ಸರಿಯಾಗಿ ಮಾತಾಡುತ್ತಾ ಉಪದೇಶಮಾಡುತ್ತೀ, ನೀನು ಮುಖದಾಕ್ಷಿಣ್ಯವಿಲ್ಲದೆ ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನಾಗಿದ್ದೀ ಎಂದು ಬಲ್ಲೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಆದ್ದರಿಂದ ಅವರು ಯೇಸುವಿಗೆ, “ಉಪದೇಶಕನೇ, ನೀನು ಸತ್ಯವನ್ನೇ ಹೇಳುವೆ ಮತ್ತು ಉಪದೇಶಿಸುವೆ ಎಂದು ನಮಗೆ ಗೊತ್ತಿದೆ. ನೀನು ಮುಖದಾಕ್ಷಿಣ್ಯ ಮಾಡುವವನಲ್ಲ. ದೇವರ ಮಾರ್ಗದ ಕುರಿತಾಗಿ ನೀನು ಯಾವಾಗಲೂ ಸತ್ಯವನ್ನೇ ಬೋಧಿಸುವೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

21 ತ್ಯಾ ಖಾಯ್ದೆ ಶಿಕ್ವುತಲ್ಯಾನಿ, ಅನಿ ಯಾಜಕಾಂಚ್ಯಾ ಮುಖಂಡಾನಿ ಶಿಕ್ವುನ್ ಧಾಡಲ್ಲ್ಯಾ ಲೊಕಾನಿ ಜೆಜುಕ್‍ ಗುರುಜಿ, ತಿಯಾ ಸಾಂಗ್ತಲೆ, ಅನಿ ತಿಯಾ ಸಿಕ್ವುತಲೆ ಸಗ್ಳೆ ಬರಬ್ಬರ್ ಹಾಯ್, ತೆ ಅಮ್ಕಾ ಗೊತ್ತ್ ಅಸಲ್ಲೆ ವಿಶಯ್, ಅನಿ ತಿಯಾ ಕೊನಾಚಿ ಪದ್ವಿ-ಗಿದ್ವಿ ಬಗಿನಸ್ತಾನಾ ದೆವಾಚ್ಯಾ ಯವ್ಜನಿ ಸರ್ಕೆ ಕಾಯ್‍ ಹಾಯ್ ತೆಚ್ ಅಮ್ಕಾ ಶಿಕ್ವುತೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 20:21
16 ತಿಳಿವುಗಳ ಹೋಲಿಕೆ  

ಅವರು ತಮ್ಮ ಶಿಷ್ಯರನ್ನು ಹೆರೋದ್ಯರೊಂದಿಗೆ ಯೇಸುವಿನ ಬಳಿಗೆ ಕಳುಹಿಸಿ, “ಬೋಧಕರೇ, ನೀವು ಸತ್ಯವಂತರು, ದೇವರ ಮಾರ್ಗವನ್ನು ಸತ್ಯದಿಂದಲೇ ಬೋಧಿಸುವವರು, ನೀವು ಯಾರನ್ನೂ ಲಕ್ಷ್ಯ ಮಾಡುವವರಲ್ಲ, ನೀವು ಮುಖದಾಕ್ಷಿಣ್ಯ ಮಾಡುವವರೂ ಅಲ್ಲ ಎಂದು ನಮಗೆ ಗೊತ್ತಿದೆ.


ನಾನು ಈಗ ಯಾರ ಅನುಮೋದವನ್ನು ಗಳಿಸಲು ಯತ್ನಿಸುತ್ತಿದ್ದೇನೆ? ಮಾನವರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತಿಸುತ್ತಿದ್ದೇನೋ? ಇನ್ನೂ ಮನುಷ್ಯರನ್ನೇ ಮೆಚ್ಚಿಸುವವನಾಗಿದ್ದರೆ, ನಾನು ಕ್ರಿಸ್ತ ಯೇಸುವಿನ ದಾಸನಾಗಿರಲಾರೆ.


ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ, ಅದರಿಂದ ಹಣಗಳಿಸುತ್ತಾರೆ. ನಾವಾದರೋ ಹಾಗೆ ಮಾಡುವವರಲ್ಲ. ನಾವು ದೇವರಿಂದ ಕಳುಹಿಸಲಾದವರಾಗಿ ಕ್ರಿಸ್ತ ಯೇಸುವಿನಲ್ಲಿದ್ದುಕೊಂಡು ದೇವರ ಮುಂದೆ ಯಥಾರ್ಥವಾಗಿ ಮಾತನಾಡುತ್ತೇವೆ.


ಇವನು ಒಂದು ರಾತ್ರಿ ಯೇಸುವಿನ ಬಳಿಗೆ ಬಂದು, “ಗುರುವೇ, ನೀವು ದೇವರ ಬಳಿಯಿಂದ ಬಂದ ಬೋಧಕರೆಂದು ನಾವು ಬಲ್ಲೆವು. ಏಕೆಂದರೆ ದೇವರು ಒಬ್ಬನ ಸಂಗಡ ಇಲ್ಲದಿದ್ದರೆ ನೀವು ಮಾಡುವ ಸೂಚಕಕಾರ್ಯಗಳನ್ನು ಯಾವ ಮನುಷ್ಯನೂ ಮಾಡಲಾರನು,” ಎಂದನು.


ಅವರು ಬಂದು ಯೇಸುವಿಗೆ, “ಬೋಧಕರೇ, ನೀವು ಸತ್ಯವಂತರು ಮತ್ತು ಯಾವ ಮನುಷ್ಯನನ್ನೂ ಲಕ್ಷಿಸದವರೂ ನೀವು ಮನುಷ್ಯರ ಮುಖದಾಕ್ಷಿಣ್ಯ ಮಾಡದೆ ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುತ್ತೀರಿ ಎಂದೂ ನಾವು ಬಲ್ಲೆವು. ಕೈಸರನಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಇಲ್ಲವೋ?


ಅವನ ಬಾಯಿಯ ಮಾತುಗಳು ಬೆಣ್ಣೆಗಿಂತ ನುಣ್ಣಗಾಗಿವೆ; ಆದರೆ ಅವನ ಹೃದಯದಲ್ಲಿ ಕಾಳಗವಿದೆ; ಅವನ ಮಾತುಗಳು ಎಣ್ಣೆಗಿಂತ ನಯವಾಗಿವೆ; ಆದರೆ ಅವು ಬಿಚ್ಚುಗತ್ತಿಗಳಾಗಿವೆ.


ಪ್ರತಿಯೊಬ್ಬರು ತಮ್ಮ ನೆರೆಯವರ ಸಂಗಡ ಸುಳ್ಳಾಡುತ್ತಾರೆ; ಅವರು ತಮ್ಮ ತುಟಿಯಿಂದ ಹೊಗಳಿ, ಹೃದಯದಲ್ಲಿ ವಂಚನೆಯನ್ನು ಮಾತನಾಡುತ್ತಾರೆ.


ದೇವರು ಅಧಿಪತಿಗಳಿಗೆ ಮುಖದಾಕ್ಷಿಣ್ಯ ತೋರಿಸುವರೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ದೇವರು ಲಕ್ಷಿಸುವರೋ? ಏಕೆಂದರೆ ಅವರೆಲ್ಲರೂ ದೇವರ ಸೃಷ್ಟಿಯಾಗಿದ್ದಾರೆ.


ಆದಕಾರಣ ಯೆಹೋವ ದೇವರ ಭಯವು ನಿಮ್ಮ ಮೇಲೆ ಇರಲಿ. ನೀವು ಜಾಗ್ರತೆಯಾಗಿದ್ದು ನಡೆಯಿರಿ. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರ ಬಳಿಯಲ್ಲಿ ಅನ್ಯಾಯವಾದರೂ, ಮುಖದಾಕ್ಷಿಣ್ಯವಾದರೂ, ಲಂಚ ತೆಗೆದುಕೊಳ್ಳುವುದಾದರೂ ಇಲ್ಲ,” ಎಂದನು.


ಅಲ್ಲಿದ್ದ ಸಭೆಯ ನಾಯಕರೂ ಸಹ ನನ್ನ ಸಂದೇಶದ ಬಗ್ಗೆ ನನಗೆ ಏನೂ ಹೇಳಲಿಲ್ಲ. ಅವರು ಎಂಥವರು ಎಂಬುದು ನನಗೆ ಮುಖ್ಯವಲ್ಲ; ಏಕೆಂದರೆ, ದೇವರು ಪಕ್ಷಪಾತಿಯಲ್ಲ.


ಅವರು ಯೇಸುವನ್ನು ಹೊಂಚಿ ನೋಡುತ್ತಾ, ಮಾತಿನಲ್ಲಿ ಅವರನ್ನು ಸಿಕ್ಕಿಸುವಂತೆ ಅಧಿಪತಿಗೂ ಅಧಿಕಾರಕ್ಕೂ ಒಪ್ಪಿಸಿಕೊಡಲು, ನೀತಿವಂತರೆಂದು ನಟಿಸುವ ಗೂಢಚಾರರನ್ನು ಕಳುಹಿಸಿದರು.


ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ನಮಗೆ ಮೋಶೆಯ ನಿಯಮಕ್ಕೆ ಅನುಸಾರವಾದದ್ದೋ?” ಎಂದು ಕೇಳಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು