Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 19:4 - ಕನ್ನಡ ಸಮಕಾಲಿಕ ಅನುವಾದ

4 ಆಗ ಯೇಸುವನ್ನು ಕಾಣುವಂತೆ ಅವನು ಮುಂದಾಗಿ ಓಡಿಹೋಗಿ, ಒಂದು ಅತ್ತಿಮರವನ್ನು ಹತ್ತಿದನು. ಏಕೆಂದರೆ ಯೇಸು ಆ ಮಾರ್ಗವಾಗಿಯೇ ಬರುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆದಕಾರಣ ಆತನನ್ನು ನೋಡುವುದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆದಕಾರಣ ಆತನನ್ನು ನೋಡುವದಕ್ಕಾಗಿ ಮುಂದೆ ಓಡಿಹೋಗಿ ಆತನು ಬರುತ್ತಿರುವ ಮಾರ್ಗದಲ್ಲಿದ್ದ ಆಲದ ಮರವನ್ನು ಹತ್ತಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದ್ದರಿಂದ ಅವನು ಬೇರೊಂದು ಸ್ಥಳಕ್ಕೆ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿ ಕುಳಿತುಕೊಂಡನು. ಯೇಸು ಆ ಸ್ಥಳದ ಮೂಲಕ ಹೋಗುವನೆಂದು ಜಕ್ಕಾಯನಿಗೆ ಗೊತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

4 ತಸೆ ಮನುನ್ ತೊ ತ್ಯಾ ತಾಂಡ್ಯಾಚ್ಯಾ ಫಿಡೆ ಗೆಲೊ, ಅನಿ ಜೆಜುಕ್ ಬಗುಕ್ ಮನುನ್ ಎಕ್ ಅಂಜುರಾಚ್ಯಾ ಝಾಡಾ ವರ್‍ತಿ ಚಡ್ಲೊ. ಜೆಜು ತ್ಯಾ ಝಾಡಾಚ್ಯಾ ಬುಡ್ನಾಚ್ ಪಾರ್ ಹೊವ್ನ್ ಜಾನಾರ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 19:4
11 ತಿಳಿವುಗಳ ಹೋಲಿಕೆ  

“ಇಟ್ಟಿಗೆಗಳು ಬಿದ್ದು ಹೋದರೂ ಕೆತ್ತಿದ ಕಲ್ಲುಗಳಿಂದ ಕಟ್ಟುವೆವು. ಅತ್ತಿಮರಗಳನ್ನು ಕಡಿದಿದ್ದರೂ ಅಲ್ಲಿಯೇ ನಾವು ದೇವದಾರು ವೃಕ್ಷಗಳನ್ನು ನೆಡುವೆವು,”


ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ, ಮನೆಯ ಮೇಲೆ ಹೋಗಿ ಹೆಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ಯೇಸುವಿನ ಮುಂದೆ ಇಳಿಸಿದರು.


ತಗ್ಗಿನಲ್ಲಿರುವ ಓಲಿವ್ ಮರಗಳ ಮೇಲೆಯೂ, ಅತ್ತಿಮರಗಳ ಮೇಲೆಯೂ ಗೆದೇರ್ಯನಾದ ಬಾಳ್ ಹಾನಾನನು ಇದ್ದನು. ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷನು ಜವಾಬ್ದಾರಿಯಾಗಿದ್ದನು.


ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು.


ಆಗ ಆಮೋಸನು ಅಮಚ್ಯನಿಗೆ ಉತ್ತರವಾಗಿ, “ನಾನು ಪ್ರವಾದಿಯಲ್ಲ, ಪ್ರವಾದಿಯ ಮಗನೂ ಅಲ್ಲ. ಆದರೆ ನಾನು ಕುರುಬನೂ ಅತ್ತಿಹಣ್ಣುಗಳನ್ನು ಕೂಡಿಸುವವನೂ ಆಗಿದ್ದೆನು,” ಎಂದನು.


ಅವರ ದ್ರಾಕ್ಷಿಬಳ್ಳಿಗಳು ಕಲ್ಮಳೆಯಿಂದಲೂ ಅವರ ಅತ್ತಿಮರಗಳು ಮಂಜಿನಿಂದಲೂ ನಾಶವಾದವು.


ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಬಂಗಾರವನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು.


ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು.


ಅದಕ್ಕೆ ಯೇಸು, “ಸಾಸಿವೆ ಕಾಳಿನಷ್ಟು ನಂಬಿಕೆ ನಿಮಗಿರುವುದಾದರೆ, ನೀವು ಈ ಅತ್ತಿಮರಕ್ಕೆ, ‘ನೀನು ಬೇರುಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ,’ ಎಂದು ಹೇಳುವುದಾದರೆ ಅದು ನಿಮಗೆ ವಿಧೇಯವಾಗುವುದು.


ಅವನು ಯೇಸು ಯಾರೆಂದು ಕಾಣಬೇಕೆಂದು ಅಪೇಕ್ಷಿಸಿದರೂ ತಾನು ಕುಳ್ಳನಾಗಿದ್ದದರಿಂದ ಜನರ ಗುಂಪಿನ ನಿಮಿತ್ತವಾಗಿ ಅವರನ್ನು ಕಾಣಲಾರದೆ ಇದ್ದನು.


ಯೇಸು ಆ ಸ್ಥಳಕ್ಕೆ ಬಂದು, ಮೇಲಕ್ಕೆ ನೋಡಿ ಅವನಿಗೆ, “ಜಕ್ಕಾಯನೇ, ತಕ್ಷಣವೇ ಇಳಿದು ಬಾ. ನಾನು ಇಂದು ನಿನ್ನ ಮನೆಯಲ್ಲಿ ತಂಗಬೇಕು,” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು