Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 16:25 - ಕನ್ನಡ ಸಮಕಾಲಿಕ ಅನುವಾದ

25 “ಆದರೆ ಅಬ್ರಹಾಮನು, ‘ಮಗನೇ, ನೀನು ನಿನ್ನ ಜೀವಮಾನದಲ್ಲಿ ಒಳ್ಳೆಯವುಗಳನ್ನು ಹೊಂದಿದೆಯಲ್ಲಾ, ಲಾಜರನು ಕೆಟ್ಟವುಗಳನ್ನು ಅನುಭವಿಸಿದ್ದನ್ನು ನೆನಪಿಗೆ ತಂದುಕೋ, ಈಗ ಅವನು ಆದರಣೆ ಹೊಂದುತ್ತಿದ್ದಾನೆ. ನೀನು ಯಾತನೆಪಡುತ್ತಿದ್ದೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆದರೆ ಅಬ್ರಹಾಮನು, ‘ಕಂದಾ, ನೀನು ಆಶಿಸಿದ ಸುಖಸಂಪತ್ತನ್ನು ನಿನ್ನ ಜೀವಮಾನದಲ್ಲಿ ಹೊಂದಿದ್ದಿ. ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬುದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಅದಕ್ಕೆ ಅಬ್ರಹಾಮನು, ‘ಮಗನೇ, ಜೀವಮಾನದಲ್ಲಿ ಬೇಕಾದಷ್ಟು ಸುಖಸಂಪತ್ತನ್ನು ನೀನು ಅನುಭವಿಸಿದೆ; ಲಾಜರನಾದರೋ ದುಃಖ ದಾರಿದ್ರ್ಯವನ್ನು ಅನುಭವಿಸಿದ, ಎಂಬುದನ್ನು ನೆನಪಿಗೆ ತಂದುಕೊ. ಆದರೆ ಈಗ ಅವನು ಇಲ್ಲಿ ಸುಖಪಡುತ್ತಿದ್ದಾನೆ; ನೀನು ಅಲ್ಲಿ ಸಂಕಟಪಡುತ್ತಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆದರೆ ಅಬ್ರಹಾಮನು - ಕಂದಾ, ನೀನು ಆಶಿಸಿದ ಸುಖವನ್ನು ನಿನ್ನ ಜೀವಮಾನದಲ್ಲಿ ಹೊಂದಿದಿ; ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ, ಆದರೆ ನಿನಗೆ ಸಂಕಟ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 “ಅದಕ್ಕೆ ಅಬ್ರಹಾಮನು, ‘ಕಂದಾ, ನಿನ್ನ ಜೀವಮಾನದ ದಿನಗಳು ನಿನಗೆ ನೆನಪಿಲ್ಲವೇ? ಅಲ್ಲಿ ನಿನಗೆ ಎಲ್ಲ ಬಗೆಯ ಸುಖವಿತ್ತು. ಆದರೆ ಲಾಜರಿನಿಗಾದರೋ ಕಷ್ಟಗಳೇ ತುಂಬಿಕೊಂಡಿದ್ದವು. ಆದ್ದರಿಂದ ಈಗ ಅವನು ಸುಖಪಡುತ್ತಿದ್ದಾನೆ, ನೀನು ಸಂಕಟಪಡುತ್ತಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

25 ಖರೆ ಅಬ್ರಾಹಾಮಾನ್ ತೆಕಾ, “ಮಾಜ್ಯಾ ಲೆಕಾ, ಯಾದ್‍ ಕರ್, ತುಜ್ಯಾ ಜಿವನಾತ್ ತುಕಾ ಸಾವ್ಕಾರ್‍ಕಿಚೆ ಜಿವನ್ ಹೊತ್ತೆ,ಖರೆ ಲಾಜರಸಾಚೆ ಜಿವನ್ ಲೈ ತರಾಸಾಚೆ ಹೊತ್ತೆ, ತೆಚೆಕ್ಡೆ ಕಾಯ್ಬಿ ನತ್ತೆ. ಖರೆ ಅತ್ತಾ ತಿಯಾ ತರಾಸಾನ್ ವಳ್ವಳುನ್ಗೆತ್ ಹಾಸ್, ಅನಿ ತೊ ಹಿತ್ತೆ ಮಜ್ಯಾ ಕರುನ್ಗೆತ್, ಕುಶಿನ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 16:25
25 ತಿಳಿವುಗಳ ಹೋಲಿಕೆ  

“ಆದರೆ ಐಶ್ವರ್ಯವಂತರೇ, ನಿಮಗೆ ಕಷ್ಟ, ಏಕೆಂದರೆ ನೀವು ನಿಮ್ಮ ನೆಮ್ಮದಿಯನ್ನು ಹೊಂದಿದ್ದೀರಿ.


ಲೋಕವನ್ನಾಗಲಿ, ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.


ಯೆಹೋವ ದೇವರೇ, ಈ ಲೋಕಜೀವನದಲ್ಲಿಯಷ್ಟೇ ಪ್ರತಿಫಲವೆಂದು ತಿಳಿಯುವ ಜನರಿಂದ, ನನ್ನನ್ನು ನಿಮ್ಮ ಹಸ್ತದ ಮೂಲಕ ರಕ್ಷಿಸಿ ಕಾಪಾಡಿರಿ. ಅಂಥ ಜನರಿಗಾಗಿ ನೀವು ಸಂಗ್ರಹಿಸಿ ಇಟ್ಟಿರುವುದು ಅವರ ಹೊಟ್ಟೆ ತುಂಬಲಿ; ಅವರ ಮಕ್ಕಳು ಅದರಿಂದ ಸಮೃದ್ಧಿ ಹೊಂದಲಿ, ಅವರ ಚಿಕ್ಕಮಕ್ಕಳಿಗೂ ಉಳಿದದ್ದು ಸಿಕ್ಕಲಿ.


ನಿಮ್ಮ ಕಾಲು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ನೀವು ಎರಡು ಕಾಲುಳ್ಳವರಾಗಿ ಆರದ ಬೆಂಕಿಯ ನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಕುಂಟರಾಗಿ ನಿತ್ಯಜೀವನವನ್ನು ಸೇರುವುದು ನಿಮಗೆ ಲೇಸು.


ಮಾಂಸಭಾವದ ಮನಸ್ಸು ದೇವರಿಗೆ ಶತ್ರುವಾಗಿರುತ್ತದೆ. ಏಕೆಂದರೆ, ಅದು ದೇವರ ನಿಯಮಕ್ಕೆ ಒಳಪಡುವುದೂ ಇಲ್ಲ, ಒಳಪಡುವುದಕ್ಕಾಗುವುದೂ ಇಲ್ಲ.


ವಿನಾಶನವೇ ಅವರ ಅಂತ್ಯವು. ಹೊಟ್ಟೆಯೇ ಅವರ ದೇವರು. ನಾಚಿಕೆ ಕಾರ್ಯಗಳಲ್ಲಿಯೇ ಅವರ ಪ್ರಭಾವ. ಅವರು ಲೌಕಿಕವಾದವುಗಳ ಮೇಲೆ ಮನಸ್ಸಿಡುತ್ತಾರೆ.


ಅಲ್ಲಿದ್ದ ಶಿಷ್ಯರು ವಿಶ್ವಾಸದಲ್ಲಿ ಮುಂದುವರಿಯಲು, “ನಾವು ಅನೇಕ ಸಂಕಟಗಳಿಂದ ದೇವರ ರಾಜ್ಯದೊಳಗೆ ಸೇರಬೇಕು,” ಎಂದು ಹೇಳಿ ದೃಢಪಡಿಸಿದರು.


ಮೋಶೆ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ, ದೇವಜನರೊಂದಿಗೆ ಕಷ್ಟ ಅನುಭವಿಸುವುದನ್ನೇ ಆರಿಸಿಕೊಂಡನು.


ಹೀಗಿರುವಲ್ಲಿ ಈ ಸಂಕಟಗಳಿಂದ ಒಬ್ಬರೂ ಚಂಚಲರಾಗಬೇಡಿರಿ. ಏಕೆಂದರೆ ಇವುಗಳಿಗಾಗಿಯೇ ನಾವು ನೇಮಕವಾಗಿದ್ದೇವೆ ಎಂದು ನೀವೇ ಬಲ್ಲಿರಿ.


ಅದಕ್ಕೆ ನಾನು, “ನನ್ನ ಒಡೆಯನೆ ನೀನೇ ಬಲ್ಲೆ!” ಎಂದು ಉತ್ತರಿಸಿದೆನು. ಅವನು ನನಗೆ, “ಇವರು ಆ ಮಹಾಸಂಕಟದಿಂದ ಹೊರಬಂದವರು. ಇವರು ತಮ್ಮ ನಿಲುವಂಗಿಗಳನ್ನು ಕುರಿಮರಿ ಆಗಿರುವವರ ರಕ್ತದಲ್ಲಿ ಅವುಗಳನ್ನು ಬೆಳ್ಳಗೆ ಮಾಡಿಕೊಂಡಿದ್ದಾರೆ!”


“ನನ್ನಲ್ಲಿ ನಿಮಗೆ ಸಮಾಧಾನ ಇರುವಂತೆ ಇವುಗಳನ್ನು ನಾನು ನಿಮ್ಮೊಂದಿಗೆ ಮಾತನಾಡಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟವಿರುವದು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ,” ಎಂದರು.


ಅವನು ಪಾತಾಳದಲ್ಲಿ, ಯಾತನೆಪಡುತ್ತಾ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಲ್ಲಿ ಅಬ್ರಹಾಮನನ್ನೂ, ಅವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ಕಂಡನು.


ಅವನ ಬಾಗಿಲಲ್ಲಿ, ಮೈತುಂಬಾ ಹುಣ್ಣುಗಳಿದ್ದ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದಿರುತ್ತಿದ್ದನು.


ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಹತನಾದನು.


ಯೆರೂಸಲೇಮು ಕಷ್ಟದ ಮತ್ತು ಸಂಕಟದ ದಿನಗಳಲ್ಲಿ ಪೂರ್ವದಿನಗಳಲ್ಲಿ ತನಗಿದ್ದ ಸಂಪತ್ತೆಲ್ಲವನ್ನು ಜ್ಞಾಪಕ ಮಾಡಿಕೊಂಡಿದ್ದಾಳೆ. ಆಕೆಯ ಜನರು ಶತ್ರುವಿನ ಕೈಯಲ್ಲಿ ಬಿದ್ದಾಗ, ಅವಳಿಗೆ ಯಾರೂ ಸಹಾಯ ಮಾಡಲಿಲ್ಲ. ವೈರಿಗಳು ಅವಳನ್ನು ನೋಡಿ ಅವಳ ನಾಶನದ ವಿಷಯವಾಗಿ ಅಪಹಾಸ್ಯ ಮಾಡಿದರು.


ಜಮೀನುಗಳಿಗೆ ತಮ್ಮ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೂ ಸಮಾಧಿಯೇ ಅವರಿಗೆ ಶಾಶ್ವತಮಂದಿರವು. ಅದೇ ಅವರ ತಲತಲಾಂತರಕ್ಕೂ ನಿವಾಸಸ್ಥಾನ.


ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದ್ದರು. ಅಬ್ಬಾ, ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!


ಅವರ ಹೃದಯವು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ದುಷ್ಕಲ್ಪನೆಗಳಿಗೆ ಮಿತಿಯೇ ಇಲ್ಲ.


“ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿರುವಾಗ, ‘ಮೂರು ದಿನಗಳಾದ ಮೇಲೆ ನಾನು ತಿರುಗಿ ಏಳುವೆನು,’ ಎಂದು ಹೇಳಿದ್ದು ನಮಗೆ ನೆನಪಿದೆ.


ಇದಲ್ಲದೆ ಇಲ್ಲಿಂದ ನಿಮ್ಮ ಕಡೆಗೆ ದಾಟಬೇಕೆಂದಿರುವವರು ದಾಟದ ಹಾಗೆಯೂ ಅಲ್ಲಿಂದ ನಮ್ಮ ಕಡೆಗೆ ಬರಬೇಕೆಂದಿರುವವರು ಬಾರದಂತೆಯೂ ನಮಗೂ ನಿಮಗೂ ನಡುವೆ ಒಂದು ದೊಡ್ಡ ಅಂತರ ಸ್ಥಾಪಿಸಿದೆ,’ ಎಂದನು.


ನಿಮ್ಮ ಬುಟ್ಟಿಗಳಿಗೂ, ಹಿಟ್ಟನ್ನು ನಾದುವ ಪಾತ್ರೆಗೂ ಶಾಪ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು