Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 14:21 - ಕನ್ನಡ ಸಮಕಾಲಿಕ ಅನುವಾದ

21 “ಆ ಸೇವಕನು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ತಿಳಿಸಲು, ಆ ಮನೆಯಜಮಾನನು ಕೋಪಗೊಂಡು ತನ್ನ ಸೇವಕನಿಗೆ, ‘ನೀನು ಬೇಗನೆ ಪಟ್ಟಣದ ಬೀದಿಗಳಿಗೂ ಸಂದುಗಳಿಗೂ ಹೋಗಿ, ಬಡವರನ್ನೂ ಊನವಾದವರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿ ಕರೆದುಕೊಂಡು ಬಾ,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆ ಆಳು ಬಂದು ತನ್ನ ಯಜಮಾನನಿಗೆ ಈ ಸಂಗತಿಗಳನ್ನು ತಿಳಿಸಲು ಮನೆಯ ಯಜಮಾನನು ಸಿಟ್ಟುಗೊಂಡು ಆಳಿಗೆ, ‘ನೀನು ತಟ್ಟನೆ ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು, ಅಂಗಹೀನರು, ಕುರುಡರು, ಕುಂಟರು, ಇಂಥವರನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 “ಆ ಸೇವಕನು ಬಂದು ಯಜಮಾನನಿಗೆ ಹಾಗೆಯೇ ವರದಿ ಮಾಡಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆ ಆಳು ಬಂದು ತನ್ನ ಯಜಮಾನನಿಗೆ ಈ ಸಂಗತಿಗಳನ್ನು ತಿಳಿಸಲು ಮನೇಯಜಮಾನನು ಸಿಟ್ಟುಗೊಂಡು ಆಳಿಗೆ - ನೀನು ತಟ್ಟನೆ ಈ ಊರಿನ ಬೀದಿಬೀದಿಗೂ ಸಂದುಸಂದಿಗೂ ಹೋಗಿ ಬಡವರು ಊನವಾದವರು ಕುರುಡರು ಕುಂಟರು ಇಂಥವರನ್ನು ಇಲ್ಲಿಗೆ ಕರಕೊಂಡು ಬಾ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 “ಆದ್ದರಿಂದ ಆ ಸೇವಕನು ಹಿಂತಿರುಗಿ ಹೋಗಿ ಅವರು ಹೇಳಿದ್ದನ್ನೆಲ್ಲ ತನ್ನ ಯಜಮಾನನಿಗೆ ತಿಳಿಸಿದನು. ಆಗ ಯಜಮಾನನು ಬಹಳ ಕೋಪಗೊಂಡು ಆ ಸೇವಕನಿಗೆ, ‘ಈ ಊರಿನ ಬೀದಿಗಳಿಗೂ ಸಂದಿಗಳಿಗೂ ಬೇಗನೆ ಹೋಗಿ ಬಡವರನ್ನೂ ಅಂಗವಿಕಲರನ್ನೂ ಕುರುಡರನ್ನೂ ಕುಂಟರನ್ನೂ ಇಲ್ಲಿಗೆ ಕರೆದುಕೊಂಡು ಬಾ’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

21 “ಪರ್ತುನ್ ಜಾವ್ನ್ ಆಳಾನ್ ಹೆ ಸಗ್ಳೆ ಅಪ್ನಾಚ್ಯಾ ಧನಿಯಾಕ್ ಸಾಂಗಟ್ಲ್ಯಾನ್. ತನ್ನಾ ಧನಿಯಾಕ್ ರಾಗ್ ಯೆಲೊ, ಅನಿ ಧನಿಯಾನ್ ಆಳಾಕ್” ತಾಬೊಡ್ತೊಬ್ ಶಾರಾನಿತ್ನಿ, ವನಿಯಾತ್ನಿ, ಸಂದ್ಡಿಯಾತ್ನಿ ಜಾ, ಅನಿ ಗರಿಬಾಕ್ನಿ, ಸೊಟ್ಟ್ಯಾಕ್ನಿ, ಕುಡ್ಡ್ಯಾಕ್ನಿ, ಅದು ಹೊತ್ತ್ಯಾಕ್ನಿ ಬಲ್ವುನ್ ಘೆವ್ನ್ ಯೆ, ಮನುನ್ ಸಾಂಗಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 14:21
38 ತಿಳಿವುಗಳ ಹೋಲಿಕೆ  

ಆದರೆ ನೀನು ಔತಣಮಾಡಿಸಿದಾಗ, ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಆಹ್ವಾನಿಸು.


ನನ್ನ ಪ್ರಿಯರೇ, ಕೇಳಿರಿ, ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿಯೂ ತಮ್ಮನ್ನು ಪ್ರೀತಿಸುವವರಿಗೆ ತಾವು ವಾಗ್ದಾನಮಾಡಿದ ರಾಜ್ಯಕ್ಕೆ ಬಾಧ್ಯರನ್ನಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?


ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಮರಣಹೊಂದಿದವರು ಜೀವ ಪಡೆಯುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲಾಗುತ್ತದೆ.


ಯೇಸು, “ಕುರುಡರು ನೋಡುವಂತೆಯೂ ನೋಡುವವರು ಕುರುಡರಾಗುವಂತೆಯೂ ನಾನು ನ್ಯಾಯತೀರ್ಪು ಮಾಡುವುದಕ್ಕಾಗಿ ಈ ಲೋಕಕ್ಕೆ ಬಂದಿದ್ದೇನೆ,” ಎಂದರು.


ಆದರೆ, ಮೊದಲು ಆಹ್ವಾನಿತರಲ್ಲಿ ಒಬ್ಬನಾದರೂ ನನ್ನ ಔತಣವನ್ನು ರುಚಿ ನೋಡಬಾರದು ಎಂದು ನಾನು ನಿನಗೆ ಹೇಳುತ್ತೇನೆ.’ ”


ಆಗ ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯೂ ಹರ್ಷದಿಂದ ಹಾಡುವುದು. ಏಕೆಂದರೆ ಮರುಭೂಮಿಯಲ್ಲಿ ನೀರೂ, ಮರುಭೂಮಿಯಲ್ಲಿ ಒರತೆಗಳೂ ಒಡೆಯುವುವು.


ಇಂತಹ ಮಹಾ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದು ಹೇಗೆ? ಈ ರಕ್ಷಣೆಯನ್ನು ನಮಗೆ ಕರ್ತ ಆಗಿರುವ ಯೇಸುವೇ ಮೊದಲು ತಿಳಿಸಿದ್ದಾರೆ. ಅವರಿಂದ ಕೇಳಿಸಿಕೊಂಡವರೂ ನಮಗೆ ಆ ರಕ್ಷಣೆಯನ್ನು ದೃಢಪಡಿಸಿದ್ದಾರೆ.


ದೇವರು ದರಿದ್ರನನ್ನು ಭೂಮಿಯ ಧೂಳಿನಿಂದ ಎತ್ತುತ್ತಾರೆ. ಭಿಕ್ಷುಕನನ್ನು ತಿಪ್ಪೆ ಗುಂಡಿಯಿಂದ ತೆಗೆದು ಉನ್ನತಕ್ಕೇರಿಸುವವರೂ ಆಗಿದ್ದಾರೆ. ಅವರನ್ನು ಪ್ರಧಾನರ ಮಧ್ಯದಲ್ಲಿ ಕೂಡ್ರಿಸುತ್ತಾರೆ. ಘನತೆಯ ಸಿಂಹಾಸನವನ್ನು ಬಾಧ್ಯವಾಗಿ ಕೊಡುತ್ತಾರೆ. “ಭೂಮಿಯ ಆಧಾರ ಸ್ತಂಭಗಳು ಯೆಹೋವ ದೇವರದ್ದೇ. ಭೂಲೋಕವನ್ನು ಅವುಗಳ ಮೇಲೆ ಇಟ್ಟಿದ್ದಾರೆ.


ದೇವರಾತ್ಮ ಹಾಗು ವಧುವೂ “ಬಾ” ಎನ್ನುತ್ತಾರೆ, ಕೇಳುವವರು, “ಬಾ” ಎನ್ನಲಿ. ಬಾಯಾರಿದವರು ಬರಲಿ, ಇಷ್ಟವುಳ್ಳವರು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.


ರಾಷ್ಟ್ರಗಳನ್ನು ಹೊಡೆಯಲು ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. “ಆತನು ಕಬ್ಬಿಣದ ದಂಡದಿಂದ ಅವರನ್ನು ಪಾಲಿಸುವನು.” ಆತನು ಸರ್ವಶಕ್ತ ಆಗಿರುವ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ತೊಟ್ಟಿಯಲ್ಲಿರುವುದನ್ನು ತುಳಿಯುತ್ತಾನೆ.


ನಿಮ್ಮ ನಾಯಕರಿಗೆ ವಿಧೇಯರಾಗಿದ್ದು, ಅವರಿಗೆ ಅಧೀನರಾಗಿರಿ. ಏಕೆಂದರೆ ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ಮನನೊಂದವರಾಗದೆ ಸಂತೋಷದಿಂದ ಇದನ್ನು ಮಾಡುವವರಾಗಲಿ. ಏಕೆಂದರೆ ಅವರು ಮನನೊಂದವರಾಗಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.


ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವರೊಳಗೆ ಆತನ ಹೆಸರಿನಲ್ಲಿ ಪಶ್ಚಾತ್ತಾಪಪಟ್ಟು ಮತ್ತು ಪಾಪಗಳ ಕ್ಷಮಾಪಣೆ ಸಾರಬೇಕೆಂತಲೂ ಬರೆಯಲಾಗಿದೆ.


“ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.


ನಿನ್ನ ಹಗ್ಗಗಳು ಸಡಲಿ, ಸ್ತಂಭದ ಪಾದವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು. ಪಠವನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ. ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವುದಕ್ಕೆ ಆಸ್ಪದವಾಯಿತು. ಕುಂಟರೂ ಸುಲಿಗೆ ಮಾಡಿದರು.


ಅಪೊಸ್ತಲರು ಹಿಂದಿರುಗಿ ಬಂದು, ತಾವು ಮಾಡಿದವುಗಳನ್ನೆಲ್ಲಾ ಯೇಸುವಿಗೆ ತಿಳಿಸಿದರು. ಆಗ ಯೇಸು ಬೇತ್ಸಾಯಿದ ಎಂಬ ಹೆಸರಿನ ಪಟ್ಟಣಕ್ಕೆ ಪ್ರತ್ಯೇಕವಾಗಿ ಅವರನ್ನು ಕರೆದುಕೊಂಡು ಹೋದರು.


ಅವನ ಜೊತೆಯ ಸೇವಕರು ನಡೆದದ್ದನ್ನು ನೋಡಿ, ಬಹಳ ವ್ಯಥೆಪಟ್ಟು ಹೋಗಿ ತಮ್ಮ ಅರಸನಿಗೆ ನಡೆದದ್ದೆಲ್ಲವನ್ನು ವರದಿಮಾಡಿದರು.


ತರುವಾಯ ಯೇಸುವಿನ ಶಿಷ್ಯರು ಬಂದು, “ಫರಿಸಾಯರು ನಿಮ್ಮ ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿಮಗೆ ತಿಳಿಯಿತೇ?” ಎಂದು ಕೇಳಿದರು.


ಅದೇ ದಿವಸದಲ್ಲಿ ಅದು ರದ್ದುಗೊಂಡಿತು. ಆಗ ನನ್ನನ್ನು ನೋಡಿಕೊಳ್ಳುತ್ತಿದ್ದ ಬಡ ಕುರಿ ಮಂದೆಯು, ಅದು ಯೆಹೋವ ದೇವರ ವಾಕ್ಯವೆಂದು ತಿಳಿದುಕೊಂಡಿತು.


ಆಗ ಹತ್ಯೆಗಾಗಿ ಗುರುತಿಸಲಾಗಿರುವ ಮಂದೆಯನ್ನು, ವಿಶೇಷವಾಗಿ ಬಡವಾದ ಮಂದೆಯನ್ನು ಮೇಯಿಸಿದೆನು. ನಾನು ಎರಡು ಕೋಲುಗಳನ್ನು ತೆಗೆದುಕೊಂಡೆನು. ಒಂದಕ್ಕೆ “ಕೃಪೆ” ಎಂದೂ ಮತ್ತೊಂದಕ್ಕೆ “ಐಕ್ಯ” ಎಂದು ಹೆಸರಿಟ್ಟೆನು. ಹೀಗೆ ಮಂದೆಯನ್ನು ಮೇಯಿಸಿದೆನು.


“ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡಿ, ನ್ಯಾಯವನ್ನು ಮಾಡುವವನೂ, ಸತ್ಯವನ್ನು ಹುಡುಕುವವನೂ ನಿಮಗೆ ಒಬ್ಬನಾದರೂ ಸಿಕ್ಕುವನೋ? ಅವಳ ವಿಶಾಲ ಸ್ಥಳಗಳಲ್ಲಿ ನೋಡಿ, ತಿಳಿದು ಹುಡುಕಿರಿ; ಸಿಕ್ಕಿದರೆ ಅವಳಿಗೆ ಮನ್ನಿಸುವೆನು.


ಹೀಗೆ ದಾವೀದನ ಯುವಕರು ತಮ್ಮ ಮಾರ್ಗವಾಗಿ ಹಿಂದಕ್ಕೆ ತಿರುಗಿ ದಾವೀದನ ಬಳಿಗೆ ಬಂದು, ಈ ಮಾತುಗಳನ್ನೆಲ್ಲಾ ತಿಳಿಸಿದರು.


ನನ್ನ ಸೊಂಟ ಬಹು ಬೇನೆಯಿಂದ ತುಂಬಿದೆ. ನನ್ನ ದೇಹದಲ್ಲಿ ಕ್ಷೇಮವೇ ಇಲ್ಲ.


ಯೆಹೋವ ದೇವರು ಬೇಸರಗೊಂಡು, ನೀವು ನಿಮ್ಮ ಮಾರ್ಗದಲ್ಲಿ ನಾಶವಾಗದಂತೆ ಅವರ ಮಗನನ್ನು ಮುದ್ದಿಸಿರಿ. ಏಕೆಂದರೆ ದೇವರ ರೋಷವು ಕ್ಷಣಮಾತ್ರದಲ್ಲಿ ಜ್ವಾಲಿಸುವುದು. ದೇವರ ಆಶ್ರಯ ಪಡೆಯುವವರೆಲ್ಲಾ ಧನ್ಯರು.


“ಮತ್ತೊಬ್ಬನು, ‘ನಾನು ಮದುವೆ ಮಾಡಿಕೊಂಡಿದ್ದೇನೆ, ಆದ್ದರಿಂದ ಬರಲಾರೆ,’ ಎಂದನು.


“ಆ ಸೇವಕನು, ‘ಸ್ವಾಮಿ, ನೀನು ಅಪ್ಪಣೆ ಕೊಟ್ಟಂತೆ ಮಾಡಿದ್ದಾಯಿತು, ಆದರೂ ಸ್ಥಳವಿದೆ,’ ಎಂದನು.


“ಅವರು, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ,’ ಎಂದರು. “ಆಗ ಅವನು, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ,’ ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು