ಲೂಕ 12:33 - ಕನ್ನಡ ಸಮಕಾಲಿಕ ಅನುವಾದ33 ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ ಬಡವರಿಗೆ ಕೊಡಿರಿ. ನಿಮಗೋಸ್ಕರ ನಾಶವಾಗದ ಹಣದ ಚೀಲಗಳನ್ನೂ, ಕ್ಷಯವಾಗದ ಸಂಪತ್ತನ್ನೂ ಪರಲೋಕದಲ್ಲಿ ಮಾಡಿಕೊಳ್ಳಿರಿ, ಅಲ್ಲಿ ಕಳ್ಳನು ಸಮೀಪಕ್ಕೆ ಬರುವುದಿಲ್ಲ. ನುಸಿಹಿಡಿದು ಕೆಟ್ಟುಹೋಗುವುದಿಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201933 ನಿಮಗಿರುವುದನ್ನು ಮಾರಿಬಿಟ್ಟು ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ. ಪರಲೋಕದಲ್ಲಿ ಲಯವಾಗದ ಸಂಪತ್ತನ್ನು ಇಟ್ಟುಕೊಳ್ಳಿರಿ. ಅದನ್ನು ಕದಿಯುವುದಕ್ಕೆ ಕಳ್ಳನು ಸಮೀಪಕ್ಕೆ ಬರಲಾರನು. ಅವು ನುಸಿ ಹಿಡಿದು ನಾಶವಾಗುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)33 ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ, ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ; ಲಯವಾಗದ ಸಂಪತ್ತನ್ನು ಸ್ವರ್ಗದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಅಲ್ಲಿ ಅದು ಕಳ್ಳನಿಗೆ ದಕ್ಕುವಂತಿಲ್ಲ; ನುಸಿಹಿಡಿದು ನಾಶವಾಗುವಂತಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)33 ನಿಮಗಿರುವದನ್ನು ಮಾರಿಬಿಟ್ಟು ದಾನಾ ಕೊಡಿರಿ; ಹಳೇವಾಗದಂಥ ಹಮ್ಮೀಣಿಗಳನ್ನು ಮಾಡಿಕೊಂಡು ಪರಲೋಕದಲ್ಲಿ ಲಯವಾಗದ ದ್ರವ್ಯವನ್ನು ಇಟ್ಟುಕೊಳ್ಳಿರಿ. ಅಲ್ಲಿ ಕಳ್ಳನು ಸಮೀಪಕ್ಕೆ ಬರುವದಿಲ್ಲ; ಅದು ನುಸಿಹಿಡಿದು ನಾಶವಾಗುವದಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್33 ನಿಮ್ಮಲ್ಲಿರುವ ಆಸ್ತಿಯನ್ನು ಮಾರಿ, ಬಂದ ಹಣವನ್ನು ಕೊರತೆಯಲ್ಲಿರುವ ಜನರಿಗೆ ಕೊಡಿರಿ. ಈ ಲೋಕದ ಐಶ್ವರ್ಯ ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಐಶ್ವರ್ಯವನ್ನು ಗಳಿಸಿಕೊಳ್ಳಿರಿ. ಲಯವಾಗದ ಸಂಪತ್ತನ್ನು ಪರಲೋಕದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಆ ಭಂಡಾರವನ್ನು ಕಳ್ಳರು ಕದಿಯಲಾಗುವುದಿಲ್ಲ ಮತ್ತು ಹುಳಗಳು ನಾಶಮಾಡಲಾಗುವುದಿಲ್ಲ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್33 ತುಮ್ಚೆ ಮನುನ್ ಹೊತ್ತೆ ಸಗ್ಳೆ ಇಕಾ, ಅನಿ ಯಲ್ಲೆ ಪೈಸೆ ಗರಿಬಾಕ್ನಿ ದಿವಾ, ಕೊನಾಕ್ಬಿ ಪಿಂಜುಕ್ ಹೊಯ್ ನಸಲ್ಲ್ಯಾ ಪಿಸ್ವಿಯಾ ತುಮ್ಕಾಚ್ ತುಮಿ ತಯಾರ್ ಕರುನ್ ಘೆವಾ, ಅನಿ ತುಮ್ಚೆ ಬದಿಕ್ ಸರ್‍ಗಾತ್ ಗೊಳಾ ಕರುನ್ ಥವಾ, ಥೈ ತೆ ಕನ್ನಾಚ್ ಕಮಿ ಹೊಯ್ನಾ! ಕಶ್ಯಾಕ್ ಮಟ್ಲ್ಯಾರ್, ತೆ ಬದಿಕ್ ಚೊರಾಕ್ ಕನ್ನಾಚ್ ಗಾವಿನಾ, ಅನಿ ಥೈ ಕುಸಡ್ ಲಾಗಿನಾ. ಅಧ್ಯಾಯವನ್ನು ನೋಡಿ |