Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 11:51 - ಕನ್ನಡ ಸಮಕಾಲಿಕ ಅನುವಾದ

51 ಹೇಬೆಲನ ರಕ್ತ ಮೊದಲುಗೊಂಡು ಬಲಿಪೀಠಕ್ಕೂ ದೇವಾಲಯಕ್ಕೂ ಮಧ್ಯದಲ್ಲಿ ಹತವಾದ ಜಕರೀಯನ ರಕ್ತದವರೆಗೂ ಈ ಸಂತತಿಯು ಉತ್ತರಕೊಡಬೇಕು. ಹೌದು, ಈ ಸಂತತಿಯವರೇ ಇದಕ್ಕೆಲ್ಲಾ ಉತ್ತರಕೊಡಬೇಕೆಂದು, ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

51 ಹೇಬೆಲನನ್ನು ಕೊಂದದ್ದಕ್ಕಾಗಿಯೂ ಜಕರೀಯನನ್ನು ಕೊಂದದ್ದಕ್ಕಾಗಿಯೂ ನಿಮಗೆ ದಂಡನೆಯಾಗುವುದು. ಜಕರೀಯನನ್ನು ಯಜ್ಞವೇದಿ ಮತ್ತು ದೇವಾಲಯದ ನಡುವೆ ಕೊಲ್ಲಲಾಯಿತು. ಹೌದು, ಅವರೆಲ್ಲರ ಕೊಲೆಗಳಿಗಾಗಿ ಈಗ ಜೀವಿಸುತ್ತಿರುವ ನಿಮಗೆ ದಂಡನೆ ಆಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

51 ಅಬೆಲಾಕ್ ಜಿವಾನಿ ಮಾರಲ್ಲ್ಯಾಕ್ನಾ ಧರುನ್ ಅಲ್ತಾರ್, ಅನಿ ಪವಿತ್ರ್ ಜಾಗ್ಯಾಚ್ಯಾ ಮದ್ದಿ ಜಿವಾನಿ ಮಾರಲ್ಲ್ಯಾ ಜೆಕರಿಯಾ ಪತರ್,ಹೊಯ್, ಮಿಯಾ ತುಮ್ಕಾ ಸಾಂಗ್ತಾ ಹ್ಯಾ ಸಗ್ಳ್ಯಾಂಚ್ಯಾಸಾಟ್ನಿ ಅತ್ತಾಚ್ಯಾ ಕಾಲಾಚ್ಯಾ ಲೊಕಾಕ್ನಿ ಶಿಕ್ಷಾ ಗಾವ್ತಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 11:51
9 ತಿಳಿವುಗಳ ಹೋಲಿಕೆ  

ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಉತ್ತಮ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಅದರ ಮೂಲಕ ಅವನು ನೀತಿವಂತನೆಂದು ಸಾಕ್ಷಿಹೊಂದಿದನು. ದೇವರು ಸಹ ಅವನ ಕಾಣಿಕೆಗಳನ್ನು ಸ್ವೀಕಾರಮಾಡಿದರು. ಅವನು ಸತ್ತು ಹೋಗಿದ್ದರೂ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.


ಹೀಗೆ ನೀತಿವಂತನಾದ ಹೇಬೆಲನ ರಕ್ತ ಮೊದಲುಗೊಂಡು ದೇವಾಲಯಕ್ಕೂ ಬಲಿಪೀಠಕ್ಕೂ ನಡುವೆ ನೀವು ಕೊಂದುಹಾಕಿದ ಬರಕೀಯನ ಮಗ ಜಕರೀಯನ ರಕ್ತದವರೆಗೂ ಭೂಮಿಯಲ್ಲಿ ಸುರಿಸಲಾದ ಎಲ್ಲಾ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವುದು.


ಕೆಡುಕನಾಗಿದ್ದ ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ಅಲ್ಲ. ಅವನು ಯಾವ ಕಾರಣದಿಂದ ತಮ್ಮನನ್ನು ಕೊಂದುಹಾಕಿದನು? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದುದರಿಂದಲೇ ಅಲ್ಲವೇ?


ಪರ್ಷಿಯಾದ ಅರಸ ದಾರ್ಯಾವೆಷನ ಎರಡನೆಯ ವರ್ಷ, ಎಂಟನೆಯ ತಿಂಗಳಿನಲ್ಲಿ ಯೆಹೋವ ದೇವರ ವಾಕ್ಯವು ಇದ್ದೋನನ ಮೊಮ್ಮಗನೂ, ಬೆರಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಬಂದಿತು:


ಹೊಸ ಒಡಂಬಡಿಕೆಗೆ ಮಧ್ಯಸ್ಥರಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮವಾಗಿ ಮಾತನಾಡುವ, ಪ್ರೋಕ್ಷಿಸಿದ ರಕ್ತದ ಬಳಿಗೂ ಬಂದಿದ್ದೀರಿ.


ಆದ್ದರಿಂದ ಅವರಿಗೆ ಹೀಗೆ ಹೇಳು, ‘ಇದು ಅವರ ದೇವರಾದ ಯೆಹೋವ ದೇವರಿಗೆ ವಿಧೇಯನಾಗದ ಇಲ್ಲವೆ ಶಿಕ್ಷೆಯನ್ನು ಅಂಗೀಕರಿಸದಂಥ ಜನಾಂಗವಾಗಿದೆ. ಸತ್ಯವು ನಾಶವಾಯಿತು. ಇದು ಅವರ ಬಾಯಿಂದ ತೆಗೆದುಹಾಕಲಾಗಿದೆ.


ಅನಂತರ ಆಕೆಯು ಅವನ ತಮ್ಮನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿ ಕಾಯುವವನಾದನು ಮತ್ತು ಕಾಯಿನನು ವ್ಯವಸಾಯ ಮಾಡುವವನಾದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು