Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಲೂಕ 10:34 - ಕನ್ನಡ ಸಮಕಾಲಿಕ ಅನುವಾದ

34 ಅವನ ಬಳಿಗೆ ಹೋಗಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು, ಅವನ ಗಾಯಗಳನ್ನು ಕಟ್ಟಿ ತನ್ನ ಸ್ವಂತ ವಾಹಕಪಶುವಿನ ಮೇಲೆ ಕುಳ್ಳಿರಿಸಿ, ವಸತಿಗೃಹಕ್ಕೆ ತಂದು ಅವನನ್ನು ಆರೈಕೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಗಾಯವನು ಕಟ್ಟಿ ತನ್ನ ಸ್ವಂತ ವಾಹನ ಪಶುವಿನ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರೆದುಕೊಂಡು ಹೋಗಿ ಅವನನ್ನು ಆರೈಕೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ ವಾಹಕಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಕನಿಕರಿಸಿ ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಕಟ್ಟಿ ತನ್ನ ಸ್ವಂತ ವಾಹನದ ಮೇಲೆ ಹತ್ತಿಸಿಕೊಂಡು ಛತ್ರಕ್ಕೆ ಕರಕೊಂಡು ಹೋಗಿ ಅವನನ್ನು ಆರೈಕೆಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಸಮಾರ್ಯದವನು ಅವನ ಬಳಿಗೆ ಹೋಗಿ ಅವನ ಗಾಯಗಳಿಗೆ ಆಲಿವ್ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಬಟ್ಟೆಯಿಂದ ಕಟ್ಟಿದನು. ಸಮಾರ್ಯದವನು ಒಂದು ಕತ್ತೆಯ ಮೇಲೆ ಪ್ರಯಾಣ ಮಾಡುತ್ತಾ ಅಲ್ಲಿಗೆ ಬಂದಿದ್ದನು. ಗಾಯಗೊಂಡಿದ್ದ ಆ ಮನುಷ್ಯನನ್ನು ಅವನು ತನ್ನ ಕತ್ತೆಯ ಮೇಲೆ ಕುಳ್ಳಿರಿಸಿ, ಛತ್ರಕ್ಕೆ ಕರೆದುಕೊಂಡು ಹೋಗಿ, ಅವನನ್ನು ಆರೈಕೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

34 ತೊ ತೆಚ್ಯಾ ಜಗ್ಗೊಳ್ ಗೆಲೊ, ಅನಿ ತೆಚ್ಯಾ ದುಕ್ಕಾಕ್ನಿ ತೆಲ್‍ ಅನಿ ವಾಯ್ನ್ ಲಾವ್ಲ್ಯಾನ್, ಅನಿ ದುಕ್ಕಾಕ್ನಿ ಫಾಳಿಯಾನಿ ಭಾಂದ್ಲ್ಯಾನ್. ಅನಿ ಅಪ್ನಾಚ್ಯಾ ಜನಾವರಾ ವರ್‍ತಿ ಬಸ್ವುನ್ ಘೆವ್ನ್, ತೆಕಾ ಎಕ್ ಘರಾಕ್ ಘೆವ್ನ್ ಗೆಲ್ಯಾನ್. ಅನಿ ತೆಚಿ ಉಳ್ಗಿ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಲೂಕ 10:34
14 ತಿಳಿವುಗಳ ಹೋಲಿಕೆ  

“ಆದರೆ, ನಿನ್ನ ವೈರಿಯು ಹಸಿದಿದ್ದರೆ, ಅವನಿಗೆ ಆಹಾರ ಕೊಡು, ಅವನು ಬಾಯಾರಿದ್ದರೆ ಕುಡಿಯಲು ಕೊಡು. ಹೀಗೆ ಮಾಡುವುದರಿಂದ ನೀನು ಅವನ ತಲೆಯ ಮೇಲೆ ಉರಿಯುವ ಕೆಂಡವನ್ನು ಸುರಿದಂತಾಗುವುದು.”


ದೇವರು ಮುರಿದ ಹೃದಯದವರನ್ನು ಸ್ವಸ್ಥಮಾಡಿ, ಅವರ ಗಾಯಗಳನ್ನು ಕಟ್ಟುತ್ತಾರೆ.


ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿಕೊಳ್ಳಿರಿ. ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಳ್ಳುವುದಲ್ಲದೆ ಎಲ್ಲರಿಗೂ ಹಿತವನ್ನು ಮಾಡುವವರಾಗಿರಿ.


ಮರಿಯಳು ತನ್ನ ಚೊಚ್ಚಲು ಮಗನನ್ನು ಹೆತ್ತು, ಬಟ್ಟೆಗಳಿಂದ ಸುತ್ತಿ, ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಶಿಶುವನ್ನು ದನದ ಕೊಟ್ಟಿಗೆಯಲ್ಲಿ ಮಲಗಿಸಿದಳು.


ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ. ನನ್ನ ಶವಸಂಸ್ಕಾರಕ್ಕಾಗಿ ಮುಂಚಿತವಾಗಿ ನನ್ನ ದೇಹವನ್ನು ಅಭಿಷೇಕಿಸಿದ್ದಾಳೆ.


ಇದಲ್ಲದೆ ಮೋಶೆಯು ಹೋಗುವ ದಾರಿಯಲ್ಲಿ ವಸತಿಗೃಹದಲ್ಲಿದ್ದಾಗ, ಯೆಹೋವ ದೇವರು ಮೋಶೆಯ ಎದುರಿಗೆ ಬಂದು ಅವನನ್ನು ಕೊಲ್ಲುವುದಕ್ಕಿದ್ದಾಗ,


ಆಗ ಒಬ್ಬನು ತನ್ನ ಕತ್ತೆಗೆ ಆಹಾರವನ್ನು ಕೊಡುವುದಕ್ಕೆ ವಸತಿಗೃಹದಲ್ಲಿ ತನ್ನ ಚೀಲವನ್ನು ಬಿಚ್ಚಿದಾಗ, ಚೀಲದ ಬಾಯಲ್ಲಿಟ್ಟಿದ್ದ ತನ್ನ ಹಣವನ್ನು ಕಂಡನು.


ಆದರೆ ಒಬ್ಬ ಸಮಾರ್ಯದವನು, ಪ್ರಯಾಣ ಮಾಡುತ್ತಾ ಅವನಿದ್ದಲ್ಲಿಗೆ ಬಂದನು; ಅವನನ್ನು ಕಂಡು, ಕನಿಕರಪಟ್ಟು,


ಮರುದಿವಸ ಅವನು ಹೊರಟು ಹೋಗುತ್ತಿದ್ದಾಗ ಎರಡು ಬೆಳ್ಳಿ ನಾಣ್ಯವನ್ನು ತೆಗೆದು ಛತ್ರದ ಯಜಮಾನನಿಗೆ ಕೊಟ್ಟು ಅವನಿಗೆ, ‘ಇವನನ್ನು ಆರೈಕೆ ಮಾಡು, ನೀನು ಏನಾದರೂ ಹೆಚ್ಚು ವೆಚ್ಚಮಾಡಿದರೆ, ನಾನು ತಿರುಗಿ ಬರುವಾಗ ಕೊಟ್ಟು ತೀರಿಸುತ್ತೇನೆ,’ ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು