Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 9:23 - ಕನ್ನಡ ಸಮಕಾಲಿಕ ಅನುವಾದ

23 ದೇವರು ಯೆಹೂದ್ಯರೊಳಗಿಂದ ಮಾತ್ರವೇ ಕರೆಯದೆ, ಯೆಹೂದ್ಯರಲ್ಲದವರಿಂದಲೂ ಕರೆದು, ಮಹಿಮೆಗೆಂದು ಮೊದಲೇ ಸಿದ್ಧಮಾಡಿ, ತಮ್ಮ ಕರುಣೆಗೆ ಪಾತ್ರರಾದ ಜನರಿಗೆ ತಮ್ಮ ಮಹಿಮೆಯ ಐಶ್ವರ್ಯವನ್ನು ಪ್ರಕಟಿಸಲು ಇದನ್ನು ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಮತ್ತು ಮಹಿಮೆ ಹೊಂದುವುದಕ್ಕೆ ತಾನು ಮೊದಲೇ ಸಿದ್ಧಪಡಿಸಿರುವ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಈ ಮೂಲಕ ತಮ್ಮ ಕರುಣೆಯನ್ನು ಹೊಂದಲು ಅವರು ಮೊದಲೇ ತಯಾರಿಸಿದ್ದ ಕುಡಿಕೆಯನ್ನು ಹೋಲುವವರಿಗೆ ದೇವರು ತಮ್ಮ ಮಹಿಮಾತಿಶಯವನ್ನು ತೋರ್ಪಡಿಸಲು ಇಚ್ಛಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಮತ್ತು ಪ್ರಭಾವ ಹೊಂದುವದಕ್ಕೆ ತಾನು ಮುಂದಾಗಿ ಸಿದ್ಧಮಾಡಿದ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ದೇವರು ತನ್ನ ಅತಿಶಯವಾದ ಮಹಿಮೆಯನ್ನು ತೋರ್ಪಡಿಸಬೇಕೆಂದು ತಾಳ್ಮೆಯಿಂದ ಕಾದುಕೊಂಡಿದ್ದನು. ತನ್ನ ಕರುಣೆಯನ್ನು ಹೊಂದಿಕೊಳ್ಳುವ ಜನರಿಗೆ ದೇವರು ಆ ಮಹಿಮೆಯನ್ನು ಕೊಡಬೇಕೆಂದಿದ್ದನು. ತನ್ನ ಮಹಿಮೆಯನ್ನು ಹೊಂದಿಕೊಳ್ಳಲೆಂದು ದೇವರು ಆ ಜನರನ್ನು ಸಿದ್ಧಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

23 ಅನಿ ತೆನಿ ಅಮ್ಚ್ಯಾ ವರ್‍ತಿ ತೆಚ್ಯಾ ದಯೆಚ್ಯಾ ಆಯ್ದಾನಾಂಚ್ಯಾ ವರ್‍ತಿ ವೊತಲ್ಲಿ ಮೆಜುಕ್ ಹೊಯ್ನಾ ತವ್ಡಿ ಮಹಿಮಾ ಅಮ್ಕಾ ಜೆ ಕೊನಾಕ್ ತೆಚಿ ಮಹಿಮಾ ಘೆವ್ಕ್ ತಯಾರ್ ಕರಲ್ಲೆ ಹಾಯ್ ತೆಂಕಾ ದಾಕ್ವುತಲೊ ಮನ್‍ಬಿ ತೆಕಾ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 9:23
22 ತಿಳಿವುಗಳ ಹೋಲಿಕೆ  

ದೇವರ ದಯೆ, ಐಶ್ವರ್ಯ, ಸಹನೆ ಮತ್ತು ದೀರ್ಘಶಾಂತಿ ಇವುಗಳನ್ನು ತಾತ್ಸಾರ ಮಾಡುತ್ತೀಯೋ? ದೇವರ ಒಳ್ಳೆಯತನವು ನಿನ್ನನ್ನು ಪಶ್ಚಾತ್ತಾಪಕ್ಕೆ ನಡೆಸುತ್ತದೆಂಬುದು ನಿನಗೆ ತಿಳಿಯದೋ?


ದೇವರು ತಮ್ಮ ಮಹಿಮೆಯ ಐಶ್ವರ್ಯಕ್ಕನುಸಾರವಾಗಿ ತಮ್ಮ ಆತ್ಮನ ಮೂಲಕ ನಿಮ್ಮನ್ನು ಆಂತರ್ಯದಲ್ಲಿ ಶಕ್ತಿಯಿಂದ ಬಲಪಡಿಸಲಿ ಎಂದು ಪ್ರಾರ್ಥಿಸುತ್ತೇನೆ.


ನಾವು ಕ್ರಿಸ್ತ ಯೇಸುವಿನಲ್ಲಿ ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೇ ಸೃಷ್ಟಿಸಲಾದ ದೇವರ ಕಲಾಕೃತಿಯಾಗಿದ್ದೇವೆ. ಸತ್ಕ್ರಿಯೆಗಳನ್ನು ಮಾಡುತ್ತಾ ಬಾಳಬೇಕೆಂದು ದೇವರು ನಮ್ಮನ್ನು ಮುಂಚಿತವಾಗಿ ನೇಮಿಸಿದ್ದಾರೆ.


ಒಬ್ಬನು ತನ್ನನ್ನು ಸಾಮಾನ್ಯ ಘನಹೀನತೆಯಿಂದ ಶುದ್ಧಮಾಡಿಕೊಂಡರೆ, ಅವನು ವಿಶೇಷ ಉದ್ದೇಶಕ್ಕಾಗಿ ಶುದ್ಧೀಕರಗೊಂಡವನೂ ಯಜಮಾನನಿಗೆ ಉಪಯುಕ್ತನೂ ಸಕಲ ಸತ್ಕಾರ್ಯಕ್ಕೆ ಸಿದ್ಧನೂ ಆಗಿರುವ ಗೌರವದ ಪಾತ್ರೆಯಾಗಿರುವನು.


ಯೆಹೂದ್ಯರಲ್ಲದವರಲ್ಲಿ ಆ ರಹಸ್ಯದ ಮಹಿಮೆಯ ಐಶ್ವರ್ಯವು ಎಷ್ಟೆಂಬುದನ್ನು ದೇವರು ತಮ್ಮ ಜನರಿಗೆ ಪ್ರಕಟಿಸುವುದಕ್ಕೆ ಮನಸ್ಸು ಮಾಡಿದ್ದಾರೆ. ಆ ರಹಸ್ಯವು ಏನೆಂದರೆ, ನಿಮ್ಮಲ್ಲಿರುವ ಕ್ರಿಸ್ತ ಯೇಸು ಮಹಿಮೆಯ ನಿರೀಕ್ಷೆಯಾಗಿದ್ದಾರೆ ಎಂಬುದೇ.


ಮುಂದಣ ಯುಗಗಳಲ್ಲಿ ಕ್ರಿಸ್ತ ಯೇಸುವಿನ ದಯೆಯ ಮೂಲಕ ದೇವರು ತಮ್ಮ ಮಿತಿಯಿಲ್ಲದ ಕೃಪೆಯನ್ನು ನಮಗೆ ತೋರಿಸಬೇಕೆಂದಿದ್ದಾರೆ.


ದೇವರು ನಿಮ್ಮ ಮನೋನೇತ್ರಗಳನ್ನು ಬೆಳಗಿಸಲಿ ಎಂದು ಬೇಡಿಕೊಳ್ಳುತ್ತಿದ್ದೇನೆ. ಆಗ ಮಾತ್ರವೇ ನೀವು ದೇವರ ಕರೆಯ ನಿರೀಕ್ಷೆಯನ್ನೂ, ಪರಿಶುದ್ಧರಲ್ಲಿ ಅವರಿಗಿರುವ ವಾರಸುತನದ ಮಹಿಮೆಯನ್ನೂ ನೀವು ತಿಳಿದುಕೊಳ್ಳುವಿರಿ.


ಅನೇಕ ಸಹೋದರರ ಮಧ್ಯೆ ಜ್ಯೇಷ್ಠಪುತ್ರನೆನಿಸುವಂತೆ ದೇವರು ಯಾರನ್ನು ಮೊದಲು ತಿಳಿದುಕೊಂಡರೋ ಅವರನ್ನು ತಮ್ಮ ಪುತ್ರನ ಹೋಲಿಕೆಗೆ ಸಮಾನರಾಗುವಂತೆ ಮುಂದಾಗಿ ನೇಮಿಸಿದರು.


ಅವನು ತಂದೆಯರ ಹೃದಯಗಳನ್ನು ಮಕ್ಕಳ ಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತ ದೇವರಿಗೋಸ್ಕರ ಜನರನ್ನು ಸಿದ್ಧಮಾಡುವುದಕ್ಕೆ ಎಲೀಯನ ಆತ್ಮದಿಂದಲೂ ಶಕ್ತಿಯಿಂದಲೂ ಕರ್ತದೇವರ ಮುಂದೆ ಹೋಗುವನು,” ಎಂದು ಹೇಳಿದನು.


ನಮ್ಮ ಪಿತೃಗಳಾದ ಅಬ್ರಹಾಮನ, ಇಸಾಕನ, ಇಸ್ರಾಯೇಲನ ದೇವರಾದ ಯೆಹೋವ ದೇವರೇ, ನಿಮ್ಮ ಜನರ ಹೃದಯದ ಮನೋಭಾವನೆಯಲ್ಲಿ ಭಕ್ತಿಯನ್ನು ನಿರಂತರವಾಗಿ ಕಾಪಾಡಿ, ಅವರ ಹೃದಯವನ್ನು ನಿಮಗೆ ಸಿದ್ಧಮಾಡಿ.


ಏಕೆಂದರೆ ದೇವರು ನಮ್ಮನ್ನು ಕೋಪಾಗ್ನಿಗೆ ನೇಮಿಸದೆ ನಾವು ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿ ರಕ್ಷಣೆಯನ್ನು ಹೊಂದಬೇಕೆಂದೇ ನೇಮಿಸಿದರು.


ತಂದೆಯಾದ ದೇವರಿಗೆ ಹರ್ಷದಿಂದ ಕೃತಜ್ಞತೆಯನ್ನು ಸಲ್ಲಿಸುವಿರಿ. ಬೆಳಕಿನಲ್ಲಿರುವ ದೇವಭಕ್ತರ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ತಂದೆಯು ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದ್ದಾರೆ.


ನಾನು ಕರ್ತನ ಜನರೆಲ್ಲರಲ್ಲಿಯೂ ಅತ್ಯಲ್ಪನಾಗಿದ್ದೇನೆ. ಹಾಗಿದ್ದರೂ, ನನಗೆ ಈ ಕೃಪೆ ಕೊಡಲಾಯಿತು: ಏಕೆಂದರೆ, ನಾನು ಕ್ರಿಸ್ತನ ಅಪರಿಮಿತವಾದ ಐಶ್ವರ್ಯವನ್ನು ಯೆಹೂದ್ಯರಲ್ಲದವರಿಗೆ ಸಾರುವಂತೆಯೂ


ಆದರೆ ಕರ್ತ ಯೇಸುವು ಅವನಿಗೆ, “ಹೋಗು! ಯೆಹೂದ್ಯರಲ್ಲದವರಿಗೂ ಅವರ ಅರಸುಗಳಿಗೂ ಇಸ್ರಾಯೇಲ್ ದೇಶಕ್ಕೂ ನನ್ನ ಹೆಸರನ್ನು ಪ್ರಸಿದ್ಧಿಪಡಿಸಲು ಅವನು ನಾನು ಆಯ್ದುಕೊಂಡ ಸಾಧನವಾಗಿದ್ದಾನೆ.


ಆದರೆ ದೇವರು ಯಾರನ್ನು ಮುಂದಾಗಿ ನೇಮಿಸಿದರೋ, ಅವರನ್ನು ಕರೆದರು; ಯಾರನ್ನು ಕರೆದರೋ, ಅವರನ್ನು ನೀತಿವಂತರೆಂದು ನಿರ್ಣಯಿಸಿದರು; ಯಾರನ್ನು ನೀತಿವಂತರೆಂದು ನಿರ್ಣಯಿಸಿದರೋ ಅವರನ್ನು ಮಹಿಮೆಪಡಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು