Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 5:14 - ಕನ್ನಡ ಸಮಕಾಲಿಕ ಅನುವಾದ

14 ಆದರೂ ಮರಣವು ಆದಾಮನಿಂದ ಮೋಶೆಯವರೆಗೂ ದೊರೆತನ ಮಾಡುತ್ತಿತ್ತು. ಆದಾಮನು ಮಾಡಿದ ಅಪರಾಧಕ್ಕೆ ಸಮಾನವಾಗಿ ಪಾಪಮಾಡಿದವರ ಮೇಲೆಯೂ ಅದು ದೊರೆತನ ಮಾಡುತ್ತಿತ್ತು. ಆದಾಮನು ಮುಂದೆ ಬರಲಿಕ್ಕಿದ್ದ ಒಬ್ಬಾತನಿಗೆ ಸಂಕೇತವಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಆದರೂ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣದ ಆಳ್ವಿಕೆಯು ನಡೆಯುತ್ತಿತ್ತು. ಆದಾಮನು ದೇವರ ಆಜ್ಞೆಯನ್ನು ಮೀರಿ ಮಾಡಿದ ಪಾಪಕ್ಕೆ ಸಮಾನವಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ ಅದು ನಡೆಯುತ್ತಿತ್ತು. ಆ ಆದಾಮನು ಬರಬೇಕಾದ ಒಬ್ಬಾತನಾದ ಕ್ರಿಸ್ತನಿಗೆ ಪ್ರತಿರೂಪನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಆದರೂ, ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣವು ದಬ್ಬಾಳಿಕೆ ನಡೆಸುತ್ತಿತ್ತು. ದೇವರ ಆಜ್ಞಾವಿಧಿಗಳನ್ನು ಮೀರಿ ಆದಾಮನು ಮಾಡಿದ ಪಾಪಕ್ಕೆ ಸಮನಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ, ಮರಣದ ಆಳ್ವಿಕೆ ನಡೆಯುತ್ತಿತ್ತು. ಆದಾಮನು ಮುಂಬರಲಿದ್ದ ಮಹಾತ್ಮನ ಮುನ್ಸೂಚನೆಯಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆದರೂ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣದ ಆಳಿಕೆಯು ನಡೆಯುತ್ತಿತ್ತು. ಆದಾಮನು ದೇವಾಜ್ಞೆಮೀರಿ ಮಾಡಿದ ಪಾಪಕ್ಕೆ ಸಮಾನವಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ ಅದು ನಡೆಯುತ್ತಿತ್ತು. ಆ ಆದಾಮನು ಬರಬೇಕಾದ ಒಬ್ಬಾತನಿಗೆ ಸೂಚಕಪುರುಷನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಆದರೆ ಆದಾಮನ ಕಾಲದಿಂದ ಮೋಶೆಯ ಕಾಲದವರೆಗೆ ಎಲ್ಲಾ ಜನರು ಸಾಯಲೇಬೇಕಾಯಿತು. ಆದಾಮನು ಪಾಪ ಮಾಡಿದ್ದರಿಂದ ಸತ್ತನು. ದೇವರ ಆಜ್ಞೆಗೆ ಅವಿಧೇಯನಾದದ್ದೇ ಆ ಪಾಪ. ಆದರೆ ಆದಾಮನು ಮಾಡಿದ ಪಾಪಕ್ಕೆ ಸರಿಸಮಾನವಾದ ಪಾಪವನ್ನು ಮಾಡಿಲ್ಲದವರು ಸಹ ಸಾಯಬೇಕಾಯಿತು. ಆದಾಮನು ಮುಂದಿನ ಕಾಲದಲ್ಲಿ ಬರಲಿದ್ದ ಒಬ್ಬಾತನಿಗೆ (ಕ್ರಿಸ್ತನಿಗೆ) ಮುನ್ಸೂಚನೆಯಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

14 ಖರೆ ಆದಾಮಾಚ್ಯಾ ಎಳಾಕ್ನಾ ಮೊಯ್ಜೆಚ್ಯಾ ಎಳಾ ಪತರ್ ಮರ್ನಾನ್ ಸಗ್ಳ್ಯಾ ಮಾನ್ಸಾಂಚ್ಯಾ ವರ್‍ತಿ ಅಪ್ನಾಚೊ ಅದಿಕಾರ್ ಚಾಲ್ವುಲ್ಯಾನ್, ಆದಾಂವಾನ್ ದೆವಾಚ್ಯಾ ಗೊಸ್ಟಿಕ್ ಖಾಲ್ತಿ ಹೊವ್ನ್ ಚಲಿನಸ್ತಾನಾ ಪಾಪ್ ಕರಲ್ಲ್ಯಾ ಸಾರ್ಕೆ ಪಾಪ್ ಕರುನಸಲ್ಲ್ಯಾ ವರ್‍ತಿ ಸೈತ್ ಮರ್ನಾನ್ ಅದಿಕಾರ್ ಚಾಲ್ವುಲ್ಯಾನ್. ಆದಾಮಾನ್ ಜೊ ಕೊನ್ ಯೆತಲೊ ಹಾಯ್ ತ್ಯಾ ಕ್ರಿಸ್ತಾಕ್ ದಾಕ್ವುನ್ ದಿತಲೊ ಹೊವ್ನ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 5:14
17 ತಿಳಿವುಗಳ ಹೋಲಿಕೆ  

“ಮೊದಲನೆಯ ಮನುಷ್ಯನಾದ ಆದಾಮನು ಜೀವಿಸುವ ವ್ಯಕ್ತಿಯಾದನು,” ಎಂದು ಬರೆದಿದೆಯಲ್ಲವೇ? ಕಡೇ ಆದಾಮನು ಜೀವಕೊಡುವ ಆತ್ಮನಾದನು.


ಒಂದೇ ಸಾರಿ ಸಾಯುವುದೂ ತರುವಾಯ ನ್ಯಾಯತೀರ್ಪು ಪಡೆಯುವುದೂ ಮನುಷ್ಯರಿಗಾಗಿ ನೇಮಕವಾಗಿದೆ.


ಒಬ್ಬ ಮನುಷ್ಯನು ಮಾಡಿದ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ಮುಖಾಂತರ ಮರಣವು ಆಳುವುದಾದರೆ, ದೇವರ ಧಾರಾಳವಾದ ಕೃಪೆಯನ್ನೂ ನೀತಿಯ ವರವನ್ನೂ ಹೊಂದಿದವರಾಗಿ ಕ್ರಿಸ್ತ ಯೇಸುವೆಂಬ ಒಬ್ಬಾತನ ಮೂಲಕ ಜೀವದಲ್ಲಿ ಆಳುವುದು ಇನ್ನೂ ಹೆಚ್ಚಾದದ್ದಲ್ಲವೆ!


ಈವರೆಗೂ ಸೃಷ್ಟಿಯೆಲ್ಲ ಪ್ರಸವ ವೇದನೆಯಂಥ ನೋವಿನಿಂದ ನರಳುತ್ತಿದೆ ಎಂದು ನಾವು ಬಲ್ಲೆವು.


ಹೀಗೆ ಪಾಪವು ಮರಣದ ಮೂಲಕ ಆಳಿದಂತೆಯೇ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಿತ್ಯಜೀವವನ್ನುಂಟು ಮಾಡಲು ಕೃಪೆಯು ನೀತಿಯ ಮೂಲಕ ಆಳುವುದು.


ಒಣನೆಲದ ಮೇಲಿದ್ದ ಮೂಗಿನಿಂದ ಶ್ವಾಸಬೀಡುವ ಜೀವಿಗಳೆಲ್ಲವೂ ಸತ್ತು ಹೋದವು.


ಸೃಷ್ಟಿಯು ನಾಶಕ್ಕೆ ಒಳಗಾಯಿತು. ಆದರೆ ಸ್ವಂತ ಇಚ್ಛೆಯಿಂದಲ್ಲ. ಅದನ್ನು ನಿರೀಕ್ಷೆಯಿಂದ ಒಳಪಡಿಸಿದ ದೇವರಿಂದಲೇ ಆಯಿತು. ಆದರೂ ಸೃಷ್ಟಿಗೂ ನಿರೀಕ್ಷೆಯಿದೆ.


ಹಾಗಾದರೆ ಎಡಬಲ ಕೈಗಳನ್ನು ತಿಳಿಯದವರಾದ ಲಕ್ಷದ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾದ ಜನರು ಬಹಳ ಪಶುಪ್ರಾಣಿಗಳೂ ಸಹ ಇರುವ ಆ ದೊಡ್ಡ ಪಟ್ಟಣವಾದ ನಿನೆವೆಯನ್ನು ನಾನು ಚಿಂತಿಸಬಾರದೋ?” ಎಂದರು.


ಅವರು ಆದಾಮನಂತೆ ಒಡಂಬಡಿಕೆಯನ್ನು ಮೀರಿದ್ದಾರೆ. ಅಲ್ಲಿ ಅವರು ನನಗೆ ವಿರುದ್ಧವಾಗಿ ಅಪನಂಬಿಗಸ್ತಿಕೆಯಿಂದ ನಡೆದುಕೊಂಡಿದ್ದಾರೆ.


ಹೀಗೆ ದೇವರು ಆ ಪಟ್ಟಣಗಳನ್ನೂ, ಅಲ್ಲಿಯ ಪ್ರದೇಶವನ್ನೂ, ಪಟ್ಟಣಗಳ ಎಲ್ಲಾ ನಿವಾಸಿಗಳನ್ನೂ, ಭೂಮಿಯ ಮೇಲೆ ಬೆಳೆದ ಬೆಳೆಯನ್ನೂ ಅಳಿಸಿಬಿಟ್ಟರು.


ಅನಂತರ ಕಾಯಿನನು, “ಅಡವಿಗೆ ಹೋಗೋಣ ಬಾ,” ಎಂದು ತನ್ನ ತಮ್ಮನಿಗೆ ಹೇಳಿದನು. ಅವರು ಅಲ್ಲಿ ಬಂದಾಗ ಕಾಯಿನನು ತನ್ನ ತಮ್ಮ ಹೇಬೆಲನ ಮೇಲೆ ದಾಳಿಮಾಡಿ, ಅವನನ್ನು ಕೊಂದುಹಾಕಿದನು.


ಆದರೆ ಫರೋಹನು ತನ್ನ ಎಲ್ಲಾ ಜನರಿಗೆ, “ಹುಟ್ಟುವ ಹಿಬ್ರಿಯರ ಗಂಡು ಮಕ್ಕಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಮಕ್ಕಳನ್ನೆಲ್ಲಾ ಬದುಕಿಸಬೇಕು,” ಎಂದು ಅಪ್ಪಣೆಕೊಟ್ಟನು.


ಹಲವು ವರ್ಷಗಳ ಬಳಿಕ ಯೋಸೇಫನೂ ಅವನ ಸಹೋದರರೆಲ್ಲರೂ ಆ ಸಂತತಿಯವರೆಲ್ಲರೂ ಸತ್ತರು.


ಆದ್ದರಿಂದ, ಒಬ್ಬ ಮನುಷ್ಯನ ಮೂಲಕ ಪಾಪವೂ ಪಾಪದ ಮೂಲಕ ಮರಣವೂ ಲೋಕದೊಳಗೆ ಪ್ರವೇಶಿಸಿದ ಹಾಗೆಯೇ ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.


ಏಕೆಂದರೆ, ಆದಾಮನಲ್ಲಿ ಎಲ್ಲರೂ ಸತ್ತಂತೆಯೇ, ಕ್ರಿಸ್ತನಲ್ಲಿ ಎಲ್ಲರೂ ಜೀವಂತರಾಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು