Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 3:9 - ಕನ್ನಡ ಸಮಕಾಲಿಕ ಅನುವಾದ

9 ಹಾಗಾದರೆ ಏನು? ಯೆಹೂದ್ಯರಾದ ನಾವು ಯೆಹೂದ್ಯರಲ್ಲದವರಿಗಿಂತಲೂ ಶ್ರೇಷ್ಠರೋ? ಎಂದಿಗೂ ಇಲ್ಲವಲ್ಲ. ಯೆಹೂದ್ಯರಾಗಲಿ, ಯೆಹೂದ್ಯರಲ್ಲದವರಾಗಲಿ ಎಲ್ಲರೂ ಪಾಪದ ಶಕ್ತಿಗೆ ಒಳಗಾದವರೆಂದು ನಾವು ಈಗಾಗಲೇ ತೋರಿಸಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಹಾಗಾದರೆ ಏನು ಹೇಳಬೇಕು? ನಾವು ಅನ್ಯರಿಗಿಂತ ಶ್ರೇಷ್ಠರೋ? ಎಷ್ಟು ಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ ಗ್ರೀಕರೇ ಆಗಲಿ ಎಲ್ಲರೂ ಪಾಪಕ್ಕೆ ಒಳಗಾಗಿ ಅಪರಾಧಿಗಳಾಗಿದ್ದಾರೆಂದು ಮೊದಲೇ ತೋರಿಸಿಕೊಟ್ಟಿದ್ದೇವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಹಾಗಾದರೆ, ಯೆಹೂದ್ಯರಾದ ನಾವು ಇತರರಿಗಿಂತಲೂ ಶ್ರೇಷ್ಠರೋ? ಎಷ್ಟುಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ, ಇತರರೇ ಆಗಲಿ, ಎಲ್ಲರೂ ಪಾಪದ ಆಳ್ವಿಕೆಗೆ ಅಧೀನರು. ಇದನ್ನು ನಾನು ಈಗಾಗಲೇ ಸ್ಪಷ್ಟೀಕರಿಸಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಹಾಗಾದರೆ ಏನು ಹೇಳಬೇಕು? ನಾವು ಅನ್ಯರಿಗಿಂತ ಉತ್ತಮಸ್ಥಾನದಲ್ಲಿದ್ದೇವೋ? ಎಷ್ಟು ಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ ಗ್ರೀಕರೇ ಆಗಲಿ ಎಲ್ಲರೂ ಪಾಪಕ್ಕೆ ಒಳಬಿದ್ದವರೆಂದು ಮೊದಲೇ ತೋರಿಸಿಕೊಟ್ಟಿದ್ದೇವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಹೀಗಿರಲು, ಯೆಹೂದ್ಯರಾದ ನಾವು ಬೇರೆಯವರಿಗಿಂತ ಉತ್ತಮರಾಗಿದ್ದೇವೋ? ಇಲ್ಲ! ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವಿಲ್ಲವೆಂದು ಆಗಲೇ ನಿರೂಪಿಸಿದ್ದೇನೆ. ಅವರೆಲ್ಲರೂ ಪಾಪಮಾಡಿ ಅಪರಾಧಿಗಳಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

9 ತಸೆ ಹೊಲ್ಯಾರ್, ಅಮಿ ಜುದೆವ್ ಲೊಕಾ, ಜುದೆವ್ ನ್ಹಯ್ ಹೊತ್ತ್ಯಾ ಲೊಕಾಂಚ್ಯಾನಿಕಿ ಬರ್‍ಯಾ ಸ್ಥಿತಿರ್ ಹಾಂವ್ ಕಾಯ್? ನಾ ಕನ್ನಾಚ್ ನಾ! ಜುದೆವ್ ಲೊಕಾ ಅನಿ ತಸೆಚ್ ಜುದೆವ್ ನ್ಹಯ್ ಹೊತ್ತಿ ಲೊಕಾ ಸಗ್ಳ್ಯೆಜಾನಾ ಪಾಪಾಚ್ಯಾ ಅದಿಕಾರಾಚ್ಯಾ ಖಾಲ್ತಿ ಹಾತ್ ಮನುನ್ ಮಿಯಾ ತುಮ್ಕಾ ಪಯ್ಲೆಚ್ ದಾಕ್ವುನ್ ದಿಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 3:9
21 ತಿಳಿವುಗಳ ಹೋಲಿಕೆ  

ಆದರೆ ಸಮಸ್ತವೂ ಪಾಪದ ಅಧೀನಕ್ಕೆ ಒಳಗಾಯಿತು ಎಂದು ಪವಿತ್ರ ವೇದ ಸ್ಪಷ್ಟೀಕರಿಸುತ್ತದೆ. ಇದು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರಿಗೂ ಮಾಡಿದ ವಾಗ್ದಾನವು ಅವರ ನಂಬಿಕೆಯ ಆಧಾರವಾಗಿ ಕೊಡಲಾಗುತ್ತದೆ.


ಹಾಗಾದರೆ ಏನು? ನಾವು ನಿಯಮಕ್ಕೆ ಅಧೀನರಾಗಿರದೆ ಕೃಪೆಗೆ ಅಧೀನರಾಗಿರುತ್ತೇವೆಂದು ಪಾಪ ಮಾಡಬಹುದೋ? ಎಂದಿಗೂ ಇಲ್ಲ!


‘ನಿನ್ನಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ. ಏಕೆಂದರೆ ನಿನಗಿಂತ ಪರಿಶುದ್ಧನಾಗಿದ್ದೇನೆ,’ ಎಂದು ಹೇಳುವರು. ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ, ದಿನವೆಲ್ಲಾ ಉರಿಯುವ ಬೆಂಕಿಯಾಗಿಯೂ ಇದ್ದಾರೆ.


ದೇವರು ತಾವು ಎಲ್ಲರಿಗೂ ಕರುಣೆ ತೋರಿಸುವುದಕ್ಕಾಗಿ ಎಲ್ಲರನ್ನೂ ಅವಿಧೇಯತೆಯಲ್ಲಿ ಕಟ್ಟಿಹಾಕಿರುತ್ತಾರೆ.


ನಿಯಮವು ಏನೇ ಹೇಳುವುದಾದರೂ ಅದು ನಿಯಮಕ್ಕೆ ಒಳಪಟ್ಟಿರುವವರಿಗೇ ಅನ್ವಯವಾಗುವುದೆಂದು ನಾವು ಬಲ್ಲೆವು. ಹೀಗೆ ಎಲ್ಲರ ಬಾಯಿ ಮುಚ್ಚಿಹೋಗುವುದು ಮತ್ತು ಲೋಕವೆಲ್ಲಾ ದೇವರ ತೀರ್ಪಿಗೆ ಒಳಗಾಗಿರುವುದು.


ಹೇಗಾದರೇನು? ಕಪಟದಿಂದಾಗಲಿ, ಸತ್ಯದಿಂದಾಗಲಿ ಯಾವ ರೀತಿಯಿಂದಾದರೂ ಕ್ರಿಸ್ತನನ್ನು ಅವರು ಸಾರುತ್ತಿರುವುದೇ ನನಗೆ ಸಂತೋಷ. ಹೌದು ಮುಂದೆಯೂ ಸಂತೋಷಿಸುವೆನು.


ಮೋಶೆಯ ನಿಯಮದ ಕ್ರಿಯೆಗಳನ್ನು ಆಶ್ರಯಿಸಿಕೊಳ್ಳುವವರೆಲ್ಲರೂ ಶಾಪಾಧೀನರಾಗಿದ್ದಾರೆ. ಏಕೆಂದರೆ, “ಮೋಶೆಯ ನಿಯಮದ ಗ್ರಂಥದಲ್ಲಿ ಬರೆದಿರುವವುಗಳನ್ನೆಲ್ಲಾ ನಿರಂತರವಾಗಿ ಕೈಗೊಳ್ಳದಿರುವ ಪ್ರತಿಯೊಬ್ಬನೂ ಶಾಪಗ್ರಸ್ತನು,” ಎಂದು ಬರೆದಿದೆ.


ಹಾಗಾದರೇನು? ನಾನು ಆತ್ಮದಿಂದ ಪ್ರಾರ್ಥಿಸುವೆನು, ಬುದ್ಧಿಯಿಂದಲೂ ಪ್ರಾರ್ಥಿಸುವೆನು. ಆತ್ಮದಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು.


ಹಾಗಾದರೆ ನಾನು ಹೇಳುವುದೇನು? ವಿಗ್ರಹಕ್ಕೆ ಅರ್ಪಿಸಿದ್ದು ಅಥವಾ ವಿಗ್ರಹಕ್ಕೆ ಏನಾದರೂ ಮಹತ್ವವಿರುತ್ತದೆಯೋ? ನಿಶ್ಚಯವಾಗಿಯೂ ಇಲ್ಲ.


ನಿಮ್ಮನ್ನು ಇತರರಿಗಿಂತಲೂ ವ್ಯತ್ಯಾಸವುಳ್ಳವರಾಗಿ ಮಾಡಿದವರು ಯಾರು? ನೀವು ದೇವರಿಂದ ಪಡೆಯದಿರುವಂಥದು ನಿಮ್ಮಲ್ಲಿ ಯಾವುದಾದರೂ ಇದೆಯೇ? ಹೀಗೆ ಎಲ್ಲವನ್ನೂ ಪಡೆದ ಮೇಲೆ, ಪಡೆಯದವರಂತೆ ನೀವು ಹೆಮ್ಮೆ ಪಟ್ಟುಕೊಳ್ಳುವುದೇಕೆ?


ಹಾಗಾದರೆ ಏನು? ಇಸ್ರಾಯೇಲ್ ಹುಡುಕಿದ್ದನ್ನು ಹೊಂದಲಿಲ್ಲ. ಆದರೆ ಅವರಲ್ಲಿ ಆಯ್ಕೆಯಾದವರು ಹೊಂದಿದರು, ಮಿಕ್ಕವರು ಕಠಿಣ ಹೃದಯಿಗಳಾದರು.


ಹೀಗೆ ನಮ್ಮ ಅನೀತಿಯೂ ದೇವರ ನೀತಿಯನ್ನು ಪ್ರಸಿದ್ಧಿಗೆ ತರುವುದಾದರೆ, ಕೋಪವನ್ನು ಸುರಿಸುವ ದೇವರು ಅನ್ಯಾಯಗಾರರೇನು? ನಾನು ಮಾನವ ರೀತಿಯಲ್ಲಿ ಮಾತನಾಡಿದ್ದೇನೆ.


ದುಷ್ಟತನದಿಂದ ಸತ್ಯವನ್ನು ಅಡಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆ ಹಾಗೂ ದುಷ್ಟತನದ ಮೇಲೆ ದೇವರ ರೌದ್ರವು ಪರಲೋಕದಿಂದ ಪ್ರಕಟವಾಗುತ್ತಿದೆ.


ಆಗ ಯೇಸುವನ್ನು ಆಮಂತ್ರಿಸಿದ ಫರಿಸಾಯನು, ಅದನ್ನು ಕಂಡು ತನ್ನೊಳಗೆ, “ಈ ಮನುಷ್ಯ ಒಬ್ಬ ಪ್ರವಾದಿಯಾಗಿದ್ದರೆ, ತನ್ನನ್ನು ಮುಟ್ಟುತ್ತಿದ್ದವಳು ಯಾರು, ಎಂಥಾ ಹೆಂಗಸು ಎಂದು ತಿಳಿದುಕೊಳ್ಳುತ್ತಿದ್ದನು. ಅವಳು ಒಬ್ಬ ಪಾಪಿ,” ಎಂದು ಅಂದುಕೊಂಡನು.


“ನನ್ನ ಹೃದಯವನ್ನು ಶುದ್ಧವಾಗಿ ಇಟ್ಟುಕೊಂಡಿದ್ದೇನೆ. ನಾನು ಶುದ್ಧನೂ ಪಾಪರಹಿತನೂ,” ಎಂದು ಯಾರು ಹೇಳಬಲ್ಲರು?


ಆದ್ದರಿಂದ, ಯಾವ ಕಾರಣಕ್ಕಾಗಿ ನೀನು ಇತರರಿಗೆ ತೀರ್ಪು ಮಾಡುತ್ತಿರುವೆಯೋ ಅದನ್ನೇ ನೀನೂ ಮಾಡುತ್ತಿರುವುದರಿಂದ ನಿನ್ನನ್ನು ನೀನೇ ತೀರ್ಪು ಮಾಡಿಕೊಂಡ ಹಾಗಾಯಿತು. ಇತರರ ಮೇಲೆ ತೀರ್ಪುಮಾಡುವ ನಿನಗೆ ಹೇಳುವುದಕ್ಕೆ ನೆಪವಿಲ್ಲ.


ಹಾಗಾದರೆ ಯೆಹೂದ್ಯರಾಗಿರುವುದರಿಂದ ಪ್ರಯೋಜನವೇನು? ಅಥವಾ ಸುನ್ನತಿಯಿಂದ ಲಾಭವೇನು?


ನಿಯಮವು ಆತ್ಮಿಕವಾದದ್ದೆಂದು ಬಲ್ಲೆವು. ಆದರೆ ನರಮಾನವನಾದ ನಾನು ಪಾಪಕ್ಕೆ ಗುಲಾಮನಂತೆ ಮಾರಿಕೊಂಡವನಾಗಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು