Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 2:25 - ಕನ್ನಡ ಸಮಕಾಲಿಕ ಅನುವಾದ

25 ನೀನು ನಿಯಮವನ್ನು ಕೈಕೊಳ್ಳುವವನಾದರೆ, ಸುನ್ನತಿ ಪ್ರಯೋಜನಕರವಾಗಿರುವುದು. ಆದರೆ ನೀನು ನಿಯಮವನ್ನು ಮೀರಿ ನಡೆಯುವವನಾದರೆ, ನಿನಗೆ ಸುನ್ನತಿಯಾಗಿದ್ದರೂ ಇಲ್ಲದಂತಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ನೀನು ಧರ್ಮಶಾಸ್ತ್ರಕ್ಕನುಸಾರವಾಗಿ ನಡೆಯುವವನಾದರೆ ಸುನ್ನತಿಯೆಂಬ ಸಂಸ್ಕಾರವು ನಿನಗೆ ಪ್ರಯೋಜನಕರವಾಗಿದೆ; ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆಯುವವನಾಗಿದ್ದರೆ ನಿನಗೆ ಸುನ್ನತಿಯಿದ್ದರೂ ಇಲ್ಲದಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ನೀನು ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ನಡೆದರೆ, ನೀನು ಮಾಡಿಸಿಕೊಂಡಿರುವ ಸುನ್ನತಿಗೆ ಅರ್ಥವಿದೆ. ಆದರೆ ನಿನ್ನ ನಡತೆ ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾಗಿದ್ದರೆ ನೀನು ಸುನ್ನತಿ ಮಾಡಿಸಿಕೊಂಡಿದ್ದರೂ ಮಾಡಿಸಿಕೊಳ್ಳದಂತೆಯೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನೀನು ಧರ್ಮಶಾಸ್ತ್ರಾನುಸಾರವಾಗಿ ನಡೆಯುವವನಾದರೆ ಸುನ್ನತಿಯೆಂಬ ಸಂಸ್ಕಾರವು ಪ್ರಯೋಜನಕರವಾದದ್ದೇ ಸರಿ; ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆಯುವವನಾಗಿದ್ದರೆ ನಿನಗೆ ಸುನ್ನತಿಯಿದ್ದರೂ ಇಲ್ಲದಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ನೀನು ಧರ್ಮಶಾಸ್ತ್ರವನ್ನು ಅನುಸರಿಸಿದರೆ ನೀನು ಮಾಡಿಸಿಕೊಂಡ ಸುನ್ನತಿಗೆ ಅರ್ಥವಿದೆ. ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದರೆ ನಿನಗೆ ಸುನ್ನತಿಯಾಗಿಲ್ಲದಂತೆಯೇ ಆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

25 ತಿಯಾ ಖಾಯ್ದ್ಯಾಂಚ್ಯಾ ಸಾರ್ಕೆ ಚಲ್ಲ್ಯಾರ್, ತುಜ್ಯಾ ಸುನ್ನತಿಕ್ ಕಿಮ್ಮತ್ ಹಾಯ್; ತಿಯಾ ಖಾಯ್ದ್ಯಾಂಚ್ಯಾ ಸಾರ್ಕೆ ಚಲಿನಸ್ಲ್ಯಾರ್, ತಿಯಾ ಸುನ್ನತ್ ಕರುನ್ ಘೆವ್ನ್ ಬಿ ಕರುನ್ ಘೆಯ್‍ನಸಲ್ಲ್ಯಾರ್ ಸಾರ್ಕೆ ಹೊಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 2:25
16 ತಿಳಿವುಗಳ ಹೋಲಿಕೆ  

ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ಯೆಹೋವ ದೇವರಿಗೋಸ್ಕರ ಸುನ್ನತಿ ಮಾಡಿಕೊಳ್ಳಿರಿ; ನಿಮ್ಮ ಹೃದಯಗಳ ಮುಂದೊಗಲನ್ನು ತೆಗೆದುಹಾಕಿರಿ. ಇಲ್ಲದಿದ್ದರೆ ನನ್ನ ಉಗ್ರವು ಬೆಂಕಿಯ ಹಾಗೆ ಹೊರಟು, ನಿಮ್ಮ ಕ್ರಿಯೆಗಳ ಕೆಟ್ಟತನದ ನಿಮಿತ್ತ ಯಾರೂ ಆರಿಸಲಾಗದ ಹಾಗೆ ಉರಿಯುವುದು.”


ಸುನ್ನತಿಯಾಗುವುದರಿಂದ ಇಲ್ಲವೆ, ಸುನ್ನತಿಯಾಗದೆ ಇರುವುದರಿಂದ ಏನೂ ಪ್ರಯೋಜನವಿಲ್ಲ. ಆದರೆ ಹೊಸ ಸೃಷ್ಟಿಯೇ ಬೇಕು.


“ಹಟಮಾರಿಗಳೇ! ಹೃದಯದಲ್ಲಿಯೂ ಕಿವಿಯಲ್ಲಿಯೂ ಸುನ್ನತಿ ಹೊಂದದವರೇ, ನೀವು ಸಹ ನಿಮ್ಮ ಪಿತೃಗಳಂತೆಯೇ ಯಾವಾಗಲೂ ಪವಿತ್ರಾತ್ಮ ದೇವರನ್ನು ಎದುರಿಸುತ್ತೀರಿ!


ಆಗ ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಪ್ರೀತಿಸಿ, ನೀವು ಬದುಕಿ ಬಾಳುವಂತೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಹೃದಯವನ್ನೂ, ನಿಮ್ಮ ಸಂತತಿಯ ಹೃದಯವನ್ನೂ ಪರಿಚ್ಛೇದಿಸುವರು.


ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ. ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ.


ನಿಯಮದ ಬಗ್ಗೆ ಹೆಚ್ಚಳ ಪಡುವ ನೀನು ನಿಯಮವನ್ನು ಮೀರಿ ನಡೆದು ದೇವರನ್ನು ಅವಮಾನ ಪಡಿಸುತ್ತೀಯೋ?


ಯಾರೂ ನಿಯಮವನ್ನು ಕೇಳಿದ ಮಾತ್ರಕ್ಕೆ ದೇವರ ಮುಂದೆ ನೀತಿವಂತರಾಗುವುದಿಲ್ಲ. ಆದರೆ ನಿಯಮಕ್ಕೆ ವಿಧೇಯರಾಗುವವರೇ ನೀತಿವಂತರಾಗುವರು.


ಸುನ್ನತಿಯಿಲ್ಲದವನು ನಿಯಮಗಳನ್ನು ಕೈಗೊಳ್ಳುವವರೆಗೆ ಸುನ್ನತಿಯಿಲ್ಲದವನಾಗಿದ್ದರೂ ಸುನ್ನತಿಯಿದ್ದವನಂತೆ ಎಣಿಸುವುದಿಲ್ಲವೇ?


ಅವನು ಶಾರೀರಿಕವಾಗಿ ಸುನ್ನತಿಯಿಲ್ಲದವನಾಗಿದ್ದರೂ ನಿಯಮವನ್ನು ಅನುಸರಿಸುವುದರಿಂದ ಲಿಖಿತ ನಿಯಮವೂ ಸುನ್ನತಿಯೂ ಇದ್ದು ನಿಯಮವನ್ನು ಮೀರಿ ನಡೆಯುವ ನಿನ್ನನ್ನು ದೋಷಿಯೆಂದು ತೀರ್ಪು ಮಾಡುವನಲ್ಲವೇ?


ಸುನ್ನತಿಯಿದ್ದರೂ ಪ್ರಯೋಜನವಿಲ್ಲ, ಸುನ್ನತಿಯಿಲ್ಲದಿದ್ದರೂ ಪ್ರಯೋಜನವಿಲ್ಲ. ದೇವರ ಆಜ್ಞೆಗಳನ್ನು ಕೈಗೊಳ್ಳುವುದೇ ಪ್ರಯೋಜನಕರ.


ಸುನ್ನತಿ ಮಾಡಿಸಿಕೊಳ್ಳುವ ತಾವಾದರೋ ನಿಯಮವನ್ನು ಕೈಗೊಂಡು ನಡೆಯುವುದಿಲ್ಲ. ಆದರೆ ಅವರು ನಿಮ್ಮ ಶರೀರದ ಸುನ್ನತಿಯಿಂದ ಹೆಚ್ಚಳಪಡುವಂತೆ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು