ರೋಮಾಪುರದವರಿಗೆ 15:21 - ಕನ್ನಡ ಸಮಕಾಲಿಕ ಅನುವಾದ21 ಪವಿತ್ರ ವೇದದಲ್ಲಿ ಬರೆದಿರುವಂತೆ : “ಯಾರಿಗೆ ಆತನ ಸುದ್ದಿ ಮುಟ್ಟಲಿಲ್ಲವೋ ಅವರು ಆತನನ್ನು ಕಾಣುವರು; ಯಾರು ಆತನ ವರ್ತಮಾನ ಕೇಳಲಿಲ್ಲವೋ ಅವರು ಗ್ರಹಿಸಿಕೊಳ್ಳುವರು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 “ಯಾರಿಗೆ ಆತನ ಸಮಾಚಾರ ತಿಳಿದಿರುವುದಿಲ್ಲವೋ ಅವರೇ ಆತನನ್ನು ನೋಡುವರು. ಯಾರು ಆತನ ಬಗ್ಗೆ ಕೇಳಿರುವುದಿಲ್ಲವೋ ಅವರು ಆತನನ್ನು ಗ್ರಹಿಸಿಕೊಳ್ಳುವರು.” ಎಂಬುದಾಗಿ ಬರೆದಿರುವ ಪ್ರಕಾರ ನನ್ನ ಕೆಲಸವನ್ನು ನಡಿಸಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 “ಯಾರಿಗೆ ಆತನ ಸುದ್ದಿ ಮುಟ್ಟಿಲ್ಲವೋ ಅವರು ಆತನನು ನೋಡುವರು; ಯಾರು ಆತನ ವರ್ತಮಾನ ಕೇಳಿಲ್ಲವೋ ಅವರು ಆತನನು ಗ್ರಹಿಸಿಕೊಳ್ಳುವರು,” ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ನನ್ನ ಕಾರ್ಯವನ್ನು ನಡೆಸಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಯಾರಿಗೆ ಆತನ ಸಮಾಚಾರ ಬಂದಿರಲಿಲ್ಲವೋ ಅವರೇ ಆತನನ್ನು ನೋಡುವರು; ಯಾರು ಆತನ ವರ್ತಮಾನವನ್ನು ಕೇಳಿರಲಿಲ್ಲವೋ ಅವರೇ ಗ್ರಹಿಸಿಕೊಳ್ಳುವರು ಎಂಬದಾಗಿ ಬರೆದಿರುವ ಪ್ರಕಾರ ನನ್ನ ಕೆಲಸವನ್ನು ನಡಿಸಿದ್ದೇನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಆದರೆ ಇದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ: “ಆತನ ಬಗ್ಗೆ ತಿಳಿಯದ ಜನರು ಆತನನ್ನು (ಕ್ರಿಸ್ತನನ್ನು) ನೋಡುವರು. ಆತನ ಬಗ್ಗೆ ಕೇಳಿಲ್ಲದ ಜನರು ಆತನನ್ನು ಅರ್ಥಮಾಡಿಕೊಳ್ಳುವರು.” ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್21 ಪವಿತ್ರ್ ಪುಸ್ತಕ್ ಮನ್ತಾ, ಜೆ ಕೊನಾಕ್ ತೆಚ್ಯಾ ವಿಶಯಾತ್ ಸಾಂಗಟಲ್ಲೆ ನಾ ತೆನಿ ಬಗ್ತ್ಯಾತ್ ಅನಿ ಜೆ ಕೊನ್ ತೆಚ್ಯಾ ವಿಶಯಾತ್ ಆಯ್ಕುಕ್ನ್ಯಾತ್ ತೆನಿ ಕಳ್ವುನ್ ಘೆತ್ಯಾತ್. ಅಧ್ಯಾಯವನ್ನು ನೋಡಿ |