Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 14:1 - ಕನ್ನಡ ಸಮಕಾಲಿಕ ಅನುವಾದ

1 ಅಂಥವನ ಅಭಿಪ್ರಾಯಗಳ ಬಗ್ಗೆ ವಾಗ್ವಾದ ಮಾಡಬೇಡಿರಿ. ವಿಶ್ವಾಸದಲ್ಲಿ ಬಲಹೀನನಾಗಿರುವವನನ್ನು ಸ್ವೀಕರಿಸಿಕೊಳ್ಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನಂಬಿಕೆಯಲ್ಲಿ ದೃಢವಿಲ್ಲದವರನ್ನು ಸೇರಿಸಿಕೊಳ್ಳಿರಿ, ಆದರೆ ಸಂದೇಹಾಸ್ಪದವಾದ ವಿಷಯಗಳ ಬಗ್ಗೆ ವಾಗ್ವಾದ ಮಾಡಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ವಿಶ್ವಾಸದಲ್ಲಿ ಸ್ಥಿರವಿಲ್ಲದವರನ್ನೂ ನಿಮ್ಮ ಸಂಗಡ ಸೇರಿಸಿಕೊಳ್ಳಿರಿ. ಆದರೆ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ವಾಗ್ವಾದ ನಡೆಸಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ನಂಬಿಕೆಯಲ್ಲಿ ದೃಢವಿಲ್ಲದವರನ್ನೂ ಸೇರಿಸಿಕೊಳ್ಳಿರಿ. ಆದರೆ ಸಂದೇಹಾಸ್ಪದವಾದ ಕಾರ್ಯಗಳನ್ನು ಅವರ ಮುಂದೆ ಚರ್ಚಿಸಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಂಬಿಕೆಯಲ್ಲಿ ಬಲಹೀನನಾಗಿರುವ ವ್ಯಕ್ತಿಯನ್ನು ನಿಮ್ಮ ಸಮುದಾಯಕ್ಕೆ ಸೇರಿಸಿಕೊಳ್ಳಿರಿ. ಅವನ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ಅವನೊಂದಿಗೆ ವಾಗ್ವಾದ ಮಾಡಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

1 ವಿಶ್ವಾಸಾತ್ ಘಟ್ ನಸಲ್ಲ್ಯಾಕ್ನಿ ತುಮಿ ಸ್ವಾಗತ್ ಕರಾ, ಖರೆ ತೆಂಚ್ಯಾ ಅಬಿಪ್ರಾಯಾಂಚ್ಯಾ ವಿಶಯಾತ್ ತೆಂಚೆಕ್ನಾ ವಾದ್ ಖೆಳುಕ್ ಜಾವ್‍ನಕಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 14:1
31 ತಿಳಿವುಗಳ ಹೋಲಿಕೆ  

ವಿಶ್ವಾಸದಲ್ಲಿ ಬಲವುಳ್ಳವರಾದ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ, ಬಲಹೀನರ ಬಲಹೀನತೆಗಳನ್ನು ಸಹಿಸಿಕೊಳ್ಳಬೇಕು.


ಬಲವಿಲ್ಲದವರನ್ನು ಸಂಪಾದಿಸುವುದಕ್ಕಾಗಿ ಬಲವಿಲ್ಲದವರಿಗೆ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಎಲ್ಲರಿಗೂ ಎಲ್ಲವೂ ಆದೆನು.


ದೇವರಿಗೆ ಮಹಿಮೆಯಾಗುವುದಕ್ಕಾಗಿ ಕ್ರಿಸ್ತನು ನಿಮ್ಮನ್ನು ಸ್ವೀಕರಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಸ್ವೀಕರಿಸಿರಿ.


ಮಾಂಸ ತಿನ್ನುವುದಾಗಲಿ, ದ್ರಾಕ್ಷಾರಸವನ್ನು ಕುಡಿಯುವುದಾಗಲಿ ಅಥವಾ ಬೇರೆ ಏನನ್ನೇ ಆಗಲಿ, ಅದು ನಿಮ್ಮ ಸಹೋದರರನ್ನು ಎಡವುವಂತೆ ಮಾಡುವುದಾದರೆ ಅದನ್ನು ಮಾಡದೆ ಇರುವುದೇ ಒಳ್ಳೆಯದು.


ಈ ಬೋಧನೆಯನ್ನು ಒಪ್ಪದಿರುವ ಯಾರಾದರೂ ನಿಮ್ಮ ಬಳಿಗೆ ಬಂದರೆ, ಅವರನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ. ಅವರಿಗೆ, “ವಂದನೆ” ಎಂದೂ ಹೇಳಬೇಡಿರಿ.


ಅವನು ಆಗಲೇ ಸುಮಾರು ನೂರು ವರ್ಷದವನಾಗಿದ್ದು, ತನ್ನ ದೇಹವು ದುರ್ಬಲವಾಗಿದ್ದರೂ ಹೆಂಡತಿಯಾದ ಸಾರಳಿಗೆ ಗರ್ಭಧರಿಸುವ ಕಾಲ ಮುಗಿದು ಹೋಗಿದ್ದರೂ ನಂಬಿಕೆಯಲ್ಲಿ ಬಲಹೀನನಾಗಲಿಲ್ಲ.


ಅಂಥವರು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ನಡೆಸುವುದಕ್ಕಿಂತ ಅವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದೊಳಗೆ ಬಿಸಾಡುವುದು ಉತ್ತಮವಾಗಿರುವುದು.


ತಕ್ಷಣವೇ ಯೇಸು ತಮ್ಮ ಕೈಯನ್ನು ಚಾಚಿ ಪೇತ್ರನನ್ನು ಹಿಡಿದು, “ಅಲ್ಪ ವಿಶ್ವಾಸಿಯೇ, ನೀನು ಏಕೆ ಸಂದೇಹಪಟ್ಟೆ?” ಎಂದರು.


ಈತನು ನ್ಯಾಯವನ್ನು ಜಯಕ್ಕೆ ನಡೆಸುವವರೆಗೆ, ಜಜ್ಜಿದ ದಂಟನ್ನು ಮುರಿಯುವವನಲ್ಲ, ಆರಿ ಹೋಗುತ್ತಿರುವ ಬತ್ತಿಯನ್ನು ನಂದಿಸುವವನೂ ಅಲ್ಲ.


ಜಜ್ಜಿದ ದಂಟನ್ನು ಮುರಿದು ಹಾಕದೆ, ಕಳೆಗುಂದಿದ ದೀಪವನ್ನು ನಂದಿಸದೆ, ನಂಬಿಕೆಯಿಂದ ನ್ಯಾಯವನ್ನು ಹೊರತರುತ್ತಾನೆ.


ಅವರು ತಮ್ಮ ಮಂದೆಯನ್ನು ಕುರುಬನಂತೆ ಮೇಯಿಸುವರು. ಕುರಿಮರಿಗಳನ್ನು ಕೂಡಿಸಿ, ಅವುಗಳನ್ನು ತಮ್ಮ ಎದೆಗಪ್ಪಿಕೊಳ್ಳುವರು, ಎಳೆಯ ಮರಿಗಳನ್ನು ಮೆಲ್ಲಗೆ ನಡಿಸುವರು.


ಅನೇಕರಿಗೆ ನೀನು ಶಿಕ್ಷಣ ಕೊಟ್ಟದ್ದನ್ನೂ ಬಲಹೀನ ಕೈಗಳನ್ನು ಬಲಪಡಿಸಿದ್ದನ್ನೂ ಯೋಚಿಸು.


ಕಳೆದುಹೋದದ್ದನ್ನು ನಾನೇ ಹುಡುಕುವೆನು. ದಾರಿ ತಪ್ಪಿದ್ದನ್ನು ನಾನೇ ಮತ್ತೆ ತರುವೆನು, ಮುರಿದ ಅಂಗವನ್ನು ನಾನೇ ಕಟ್ಟುವೆನು. ದುರ್ಬಲವಾದುದನ್ನು ಬಲಗೊಳಿಸುವೆನು, ಆದರೆ ಕೊಬ್ಬಿದ್ದನ್ನೂ ಬಲಿಷ್ಠವಾದದ್ದನ್ನೂ ನಾನೇ ಸಂಹರಿಸುವೆನು. ನಾನು ನ್ಯಾಯದಿಂದ ಮಂದೆಯನ್ನು ಮೇಯಿಸುವೆನು.


ನೀವು ದುರ್ಬಲರನ್ನು ಬಲಪಡಿಸಲಿಲ್ಲ ಅಥವಾ ರೋಗಿಗಳನ್ನು ಗುಣಪಡಿಸಲಿಲ್ಲ ಅಥವಾ ಮುರಿದದ್ದನ್ನು ಕಟ್ಟುವುದಿಲ್ಲ. ಕಳೆದುಹೋದದ್ದನ್ನು ಹುಡುಕುವುದಿಲ್ಲ, ಓಡಿಸಿದ್ದನ್ನು ನೀವು ಹಿಂದಕ್ಕೆ ತರುವುದಿಲ್ಲ. ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ.


ನೀವು ಅವನನ್ನು ಪೂರ್ಣ ಆನಂದದಿಂದ ಕರ್ತನಲ್ಲಿ ಸೇರಿಸಿಕೊಳ್ಳಿರಿ ಮತ್ತು ಅಂಥವರನ್ನು ಸನ್ಮಾನಿಸಿರಿ.


ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ಕಳುಹಿಸಿದ ತಂದೆಯನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುತ್ತಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿದ ತಂದೆಯನ್ನೇ ಸ್ವೀಕರಿಸುತ್ತಾನೆ.”


“ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ಹೀನೈಸದಂತೆ ನೋಡಿಕೊಳ್ಳಿರಿ. ಪರಲೋಕದಲ್ಲಿರುವ ಅವರ ದೂತರು ಪರಲೋಕದ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿದ್ದಾರೆ.


ಏಕೆಂದರೆ ನಾನು ದೇಶದಲ್ಲಿ ಒಬ್ಬ ಕುರುಬನನ್ನು ಎಬ್ಬಿಸುವೆನು. ಅವನು ಕಳೆದುಹೋದ ಕುರಿಗಳ ಬಗ್ಗೆ ಕಾಳಜಿವಹಿಸುವುದಿಲ್ಲ ಮತ್ತು ಪ್ರಾಯದ ಕುರಿಗಳನ್ನು ಹುಡುಕುವುದಿಲ್ಲ, ಗಾಯಗೊಂಡದ್ದನ್ನು ಅವನು ಗುಣ ಮಾಡುವುದಿಲ್ಲ, ಇನ್ನೂ ಆರೋಗ್ಯದಿಂದಿರುವುದನ್ನು ಅವನು ಪೋಷಿಸುವುದಿಲ್ಲ. ಆದರೆ ಕೊಬ್ಬಿದವುಗಳ ಮಾಂಸವನ್ನು ತಿನ್ನುವನು. ಅವುಗಳ ಗೊರಸುಗಳನ್ನು ಮುರಿದು ಬಿಡುವನು.


ಏಕೆಂದರೆ ಅದು ಅವನ ಹೃದಯದೊಳಗೆ ಹೋಗದೆ ಹೊಟ್ಟೆಯನ್ನು ಸೇರಿ ಬಳಿಕ ವಿಸರ್ಜಿತವಾಗುತ್ತದೆ. ಹೀಗೆ ಹೇಳುವುದರ ಮೂಲಕ ಎಲ್ಲಾ ಆಹಾರ ಪದಾರ್ಥಗಳು ಶುದ್ಧವಾಗಿವೆ,” ಎಂದು ಯೇಸು ಸೂಚಿಸಿದರು.


ಆ ದ್ವೀಪದ ನಿವಾಸಿಗಳು ನಮಗೆ ಅಸಾಧಾರಣವಾದ ದಯೆತೋರಿಸಿದರು. ಆಗ ಮಳೆ ಬರುತ್ತಿದ್ದು ಬಹಳ ಚಳಿಯಿದ್ದುದರಿಂದ ಅವರು ಬೆಂಕಿಹೊತ್ತಿಸಿ ನಮ್ಮನ್ನು ಬರಮಾಡಿಕೊಂಡರು.


ಏಕೆಂದರೆ ಇಸ್ರಾಯೇಲರನ್ನು ತ್ಯಜಿಸುವುದರಿಂದ ಜಗತ್ತು ದೇವರೊಡನೆ ಸಂಧಾನವಾಗುವುದಾದರೆ, ಅವರನ್ನು ಸ್ವೀಕರಿಸುವುದು, ಸತ್ತವರು ಜೀವಿತರಾಗಿ ಎದ್ದು ಬಂದಂತಾಗಿರುವುದಲ್ಲವೇ?


ಒಬ್ಬನ ವಿಶ್ವಾಸವು ಎಲ್ಲವನ್ನೂ ತಿನ್ನುವಂತೆ ಮಾಡುತ್ತದೆ. ಆದರೆ ವಿಶ್ವಾಸದಲ್ಲಿ ಬಲಹೀನನಾಗಿರುವವನು ಸಸ್ಯಾಹಾರಿಯಾಗಿಯೇ ಇರುತ್ತಾನೆ.


ಮಾಂಸಾಹಾರಿಯು ಸಸ್ಯಾಹಾರಿಯನ್ನು ಹೀನೈಸದಿರಲಿ. ಸಸ್ಯಾಹಾರಿಯು ಮಾಂಸಾಹಾರಿಯನ್ನು ತೀರ್ಪು ಮಾಡದಿರಲಿ. ಏಕೆಂದರೆ ದೇವರು ಇಬ್ಬರನ್ನು ಸ್ವೀಕಾರ ಮಾಡಿರುತ್ತಾರೆ.


ಪ್ರಿಯರೇ, ಶಿಸ್ತು ಇಲ್ಲದವರನ್ನು ಎಚ್ಚರಿಸಿರಿ. ಮನಗುಂದಿದವರನ್ನು ಆದರಿಸಿರಿ. ಬಲಹೀನರಿಗೆ ಆಧಾರವಾಗಿರಿ. ಎಲ್ಲರೊಂದಿಗೂ ತಾಳ್ಮೆಯುಳ್ಳವರಾಗಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.


ಆದರೆ ಗಟ್ಟಿಯಾದ ಆಹಾರವು, ತಮ್ಮ ಜ್ಞಾನೇಂದ್ರಿಯಗಳನ್ನು ಅಭ್ಯಾಸಿಸಿ, ತರಬೇತುಗೊಂಡದ್ದರಿಂದ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ವಿವೇಚಿಸಿ ಪೂರ್ಣ ಬೆಳವಣಿಗೆ ಹೊಂದಿದವರಿಗೆ ಸೇರಿದ್ದಾಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು