Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 10:19 - ಕನ್ನಡ ಸಮಕಾಲಿಕ ಅನುವಾದ

19 ಆದರೆ ಇಸ್ರಾಯೇಲರಿಗೆ ಅರ್ಥವಾಗಲಿಲ್ಲವೇ? ಎಂದು ನಾನು ಪ್ರಶ್ನಿಸುತ್ತೇನೆ. ಮೊದಲನೆಯದಾಗಿ ಮೋಶೆಯು, “ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ತಿಳುವಳಿಕೆಯಿಲ್ಲದ ಜನಾಂಗದವರ ಮೂಲಕ ನೀವು ಕೋಪಗೊಳ್ಳುವಂತೆ ಮಾಡುವೆನು,” ಎಂದು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಆದರೆ “ಇಸ್ರಾಯೇಲ್ಯರು ಆ ವಾರ್ತೆಯನ್ನು ತಿಳಿದುಕೊಳ್ಳಲಿಲ್ಲವೇನು” ಎಂದು ಹೇಳುತ್ತೇನೆ. ಈ ವಿಷಯದಲ್ಲಿ, “ಜನಾಂಗವಲ್ಲದವರ ಮೂಲಕ ನಿಮ್ಮಲ್ಲಿ ಅಸೂಯೆ ಹುಟ್ಟುವಂತೆ ಪ್ರೆರೇಪಿಸುತ್ತೇನೆ; ವಿವೇಕವಿಲ್ಲದ ಜನರ ಮೂಲಕ ನಿಮ್ಮನ್ನು ರೊಚ್ಚಿಗೆಬ್ಬಿಸುವೆನು” ಎಂದು ಮೊದಲು ಮೋಶೆಯು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಹಾಗೆಂದ ಮೇಲೆ ಇಸ್ರಯೇಲರು ಆ ಶುಭಸಂದೇಶವನ್ನು ಅರ್ಥಮಾಡಿಕೊಳ್ಳಲಿಲ್ಲ. ಎನ್ನೋಣವೆ? ಮೊದಲನೆಯದಾಗಿ, ಮೋಶೆಯ ಮಾತಿನಲ್ಲಿ ಉತ್ತರಿಸುವುದಾದರೆ: “ ‘ಜನಾಂಗ’ ಎನಿಸಿಕೊಳ್ಳದವರನ್ನು ನೋಡಿ ನೀವು ಅಸೂಯೆಪಡುವಂತೆ ಮಾಡುತ್ತೇನೆ; ಮತಿಹೀನರೆನಿಸಿಕೊಂಡ ಜನಾಂಗವನ್ನು ನೋಡಿ ನೀವು ಕೆರಳುವಂತೆ ಮಾಡುತ್ತೇನೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಆದರೆ ಇಸ್ರಾಯೇಲ್ಯರು ಆ ವಾರ್ತೆಯನ್ನು ತಿಳುಕೊಳ್ಳಲಿಲ್ಲವೇನು ಎಂದು ಕೇಳುತ್ತೇನೆ. ಈ ವಿಷಯದಲ್ಲಿ - ಜನಾಂಗವಲ್ಲದವರ ಮೂಲಕ ನಿಮ್ಮಲ್ಲಿ ಹುರುಡುಹುಟ್ಟಿಸುವೆನು; ವಿವೇಕವಿಲ್ಲದ ಜನರ ಮೂಲಕ ನಿಮ್ಮನ್ನು ಸಿಟ್ಟಿಗೆಬ್ಬಿಸುವೆನು ಎಂದು ಮೊದಲು ಮೋಶೆಯು ಹೇಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 “ಇಸ್ರೇಲಿನ ಜನರು ಅರ್ಥಮಾಡಿಕೊಳ್ಳಲಿಲ್ಲವೇ?” ಎಂದು ನಾನು ಮತ್ತೆ ಕೇಳುತ್ತೇನೆ. ಹೌದು, ಅವರು ಅರ್ಥಮಾಡಿಕೊಂಡರು. ಮೊದಲನೆಯದಾಗಿ, ದೇವರು ಮೋಶೆಯ ಮೂಲಕ ಹೀಗೆ ತಿಳಿಸಿದ್ದಾನೆ: “ಜನಾಂಗವೆನಿಸಿಕೊಳ್ಳದವರ ಮೂಲಕ ಹೀಗೆ ನಾನು ನಿಮ್ಮಲ್ಲಿ ಅಸೂಯೆ ಹುಟ್ಟಿಸುವೆನು. ಬುದ್ದಿಹೀನರೆನಿಸಿಕೊಂಡ ಜನಾಂಗದ ಮೂಲಕ ನಾನು ನಿಮ್ಮನ್ನು ಸಿಟ್ಟಿಗೆಬ್ಬಿಸುವೆನು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

19 ಅನಿ ಪರ್ತುನ್ ಮಿಯಾ ಇಚಾರ್ತಾ: ಇಸ್ರಾಯೆಲಾಚ್ಯಾ ಲೊಕಾಕ್ನಿ ಹೆ ಕಳುಕ್‍ ನಾ ಅಶಿಲ್ ಕಾಯ್? ಮೊಯ್ಜೆ ಅಪ್ನಿಚ್ ಅದ್ದಿ ಜಬಾಬ್ ದಿತಾ, ಮಾಜ್ಯಾ ಲೊಕಾಂಚ್ಯಾ ಪೊಟಾತ್ನಿ ಝಳ್ ಪಡಿ ಸರ್ಕೆ ಕರುಕ್ ಮಿಯಾ ದುಸ್ರ್ಯಾ ದೆಶಾಕ್ನಿ ವಾಪರ್‍ತಾ; ಅನಿ ಪಿಶ್ಯಾಂಚ್ಯಾ ಎಕ್ ದೆಸಾಕ್ ಲಾಗುನ್ ಮಿಯಾ ಮಾಜ್ಯಾ ಲೊಕಾಕ್ನಿ ರಾಗ್ ಯೆಯ್ ಸರ್ಕೆ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 10:19
19 ತಿಳಿವುಗಳ ಹೋಲಿಕೆ  

ದೇವರಲ್ಲದವುಗಳಿಂದ ಅವರು ನನಗೆ ರೋಷ ಹುಟ್ಟಿಸಿದರು. ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪವನ್ನು ಎಬ್ಬಿಸಿದರು. ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.


ಇಸ್ರಾಯೇಲರು ಏಳಲಾರದ ಹಾಗೇ ಎಡವಿದರೋ? ಎಂದು ನಾನು ಕೇಳುತ್ತೇನೆ. ಇಲ್ಲವೇ ಇಲ್ಲ! ಆದರೆ, ಇಸ್ರಾಯೇಲರಲ್ಲಿ ಮತ್ಸರ ಉಂಟಾಗುವಂತೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆಯು ಉಂಟಾಯಿತು.


ಹೇಗೂ ನಾನು ನನ್ನ ಸ್ವಂತ ಜನರಾದ ಯೆಹೂದ್ಯರಲ್ಲಿ ಮತ್ಸರವನ್ನು ಉದ್ರೇಕಿಸಿ ಅವರಲ್ಲಿ ಕೆಲವರನ್ನಾದರೂ ರಕ್ಷಿಸಬೇಕು.


ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸ ಹೋದವರೂ ವಿವಿಧ ಆಶೆಗಳಿಗೂ ಭೋಗಗಳಿಗೂ ದಾಸರಾಗಿದ್ದೆವು. ಕೆಟ್ಟತನ ಹಾಗೂ ಮತ್ಸರಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ದ್ವೇಷಿಸುವವರೂ ಆಗಿದ್ದೆವು.


ಮೊದಲು ನೀವು ಪ್ರಜೆಗಳಾಗಿರಲಿಲ್ಲ. ಈಗ ದೇವರ ಪ್ರಜೆಗಳಾಗಿದ್ದೀರಿ. ಮೊದಲು ಕರುಣೆ ಹೊಂದಿರಲಿಲ್ಲ. ಈಗ ಕರುಣೆ ಹೊಂದಿದ್ದೀರಿ.


ನಿಮ್ಮಲ್ಲಿ ಒಬ್ಬನು, “ನಾನು ಪೌಲನವನು,” ಇನ್ನೊಬ್ಬನು, “ನಾನು ಅಪೊಲ್ಲೋಸನವನು,” ಬೇರೊಬ್ಬನು, “ನಾನು ಕೇಫನವನು,” ಇನ್ನೊಬ್ಬನು, “ನಾನು ಕ್ರಿಸ್ತನವನು,” ಎಂದು ಹೇಳುತ್ತೀರಂತೆ.


ಪ್ರಿಯರೇ, ನಾನು ಹೇಳುವುದೇನೆಂದರೆ, ರಕ್ತಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರವು. ಅಳಿಯುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲಾರದು.


ನೀವು ಕ್ರಿಸ್ತನನ್ನು ನಂಬದಿದ್ದಾಗ, ಹೇಗೆ ಮೂಕ ವಿಗ್ರಹಗಳ ಕಡೆಗೆ ಪ್ರಭಾವಗೊಂಡು ದಾರಿತಪ್ಪಿ ಹೋಗಿದ್ದಿರಿ ಎಂಬುದನ್ನು ಬಲ್ಲಿರಿ.


ಉಣ್ಣುವುದಕ್ಕೂ, ಕುಡಿಯುವುದಕ್ಕೂ ನಿಮಗೆ ಮನೆಗಳಿಲ್ಲವೇ? ಅಥವಾ ದೇವರ ಸಭೆಯನ್ನು ಹೀನೈಸಿ ಏನೂ ಇಲ್ಲದವರನ್ನು ನಾಚಿಕೆಪಡಿಸುತ್ತೀರಾ? ನಾನು ನಿಮಗೇನು ಹೇಳಲಿ? ಇದಕ್ಕಾಗಿ ನಾನು ನಿಮ್ಮನ್ನು ಹೊಗಳಬೇಕೆ? ಖಂಡಿತ ಇಲ್ಲ.


ಹಾಗಾದರೆ ನಾನು ಹೇಳುವುದೇನು? ವಿಗ್ರಹಕ್ಕೆ ಅರ್ಪಿಸಿದ್ದು ಅಥವಾ ವಿಗ್ರಹಕ್ಕೆ ಏನಾದರೂ ಮಹತ್ವವಿರುತ್ತದೆಯೋ? ನಿಶ್ಚಯವಾಗಿಯೂ ಇಲ್ಲ.


ಪ್ರಿಯರೇ, ಸಮಯವು ಕೊಂಚವಾಗಿರುವುದರಿಂದ ಇನ್ನು ಮೇಲೆ, ಮದುವೆಯಾದವರು ಮದುವೆಯಾಗದವರಂತೆಯೂ


ಆದರೆ ಇಸ್ರಾಯೇಲರು ಎಂದೂ ಸುವಾರ್ತೆಯನ್ನು ಕೇಳಲಿಲ್ಲವೋ ಎಂದು ನಾನು ಪ್ರಶ್ನಿಸುತ್ತೇನೆ? ಅವರು ನಿಶ್ಚಯವಾಗಿ ಕೇಳಿದ್ದಾರೆ. ಪವಿತ್ರ ವೇದದಲ್ಲಿ ಹೇಳಿರುವಂತೆ: “ಅವರ ಸ್ವರವು ಭೂಮಿಯ ಎಲ್ಲಾ ಕಡೆಗಳಲ್ಲಿ ಹೋಗಿರುತ್ತದೆ, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿವೆ.”


ಈಗಿನ ಕಾಲದಲ್ಲಿ ದೇವರು ತಮ್ಮ ನೀತಿಯನ್ನು ತೋರ್ಪಡಿಸಲೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕಾಗಿಯೂ ದೀರ್ಘಶಾಂತರಾಗಿದ್ದಾರೆ.


ನಾನು ದೇಶದಲ್ಲಿ ಆಕೆಯನ್ನು ನನಗಾಗಿ ಬಿತ್ತಿಕೊಳ್ಳುವೆನು. ‘ನನ್ನ ಪ್ರಿಯರಲ್ಲ’ ಎಂದು ಕರೆದವರಿಗೆ, ನಾನು ನನ್ನ ಪ್ರೀತಿಯನ್ನು ತೋರಿಸುವೆನು. ನಾನು, ‘ನೀವು ನನ್ನ ಜನರಲ್ಲ’ ಎಂದು ಹೇಳಿದವರನ್ನು, ‘ನೀವು ನನ್ನ ಜನರು,’ ಎಂದು ಹೇಳುವೆನು. ಅವರು, ‘ನೀವು ನಮ್ಮ ದೇವರು’ ” ಎಂದು ಹೇಳುವರು.


ಪ್ರತಿ ಮನುಷ್ಯನು ತಿಳುವಳಿಕೆ ಇಲ್ಲದವನೂ ಬುದ್ಧಿಹೀನನೂ ಆಗಿದ್ದಾನೆ. ತಾನು ಕೆತ್ತಿದ ವಿಗ್ರಹಕ್ಕೋಸ್ಕರ ಪ್ರತಿಯೊಬ್ಬ ಅಕ್ಕಸಾಲಿಗನೂ ನಾಚಿಕೆಪಡುತ್ತಾನೆ. ಏಕೆಂದರೆ ಅವರ ಎರಕದ ವಿಗ್ರಹಗಳು ಸುಳ್ಳೇ, ಅವುಗಳಲ್ಲಿ ಉಸಿರೇ ಇಲ್ಲ.


ಆದರೆ ಅವರು ಮಂದರೂ ಮೂರ್ಖರೂ ಆಗಿದ್ದಾರೆ. ಅವರಿಗೆ ವ್ಯರ್ಥವಾದ ಮರ, ಬೊಂಬೆಗಳಿಂದ ಬೋಧನೆಯಾಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು