Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೋಮಾಪುರದವರಿಗೆ 10:18 - ಕನ್ನಡ ಸಮಕಾಲಿಕ ಅನುವಾದ

18 ಆದರೆ ಇಸ್ರಾಯೇಲರು ಎಂದೂ ಸುವಾರ್ತೆಯನ್ನು ಕೇಳಲಿಲ್ಲವೋ ಎಂದು ನಾನು ಪ್ರಶ್ನಿಸುತ್ತೇನೆ? ಅವರು ನಿಶ್ಚಯವಾಗಿ ಕೇಳಿದ್ದಾರೆ. ಪವಿತ್ರ ವೇದದಲ್ಲಿ ಹೇಳಿರುವಂತೆ: “ಅವರ ಸ್ವರವು ಭೂಮಿಯ ಎಲ್ಲಾ ಕಡೆಗಳಲ್ಲಿ ಹೋಗಿರುತ್ತದೆ, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆದರೂ “ಅವರಿಗೆ ಕೇಳಿಸಲಿಲ್ಲವೇನೋ?” ಎಂದು ಹೇಳುತ್ತೇನೆ. ಹೌದು ನಿಶ್ಚಯವಾಗಿ ಕೇಳಿಸಿಕೊಂಡಿದ್ದರು. “ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಈಗ ನನ್ನದೊಂದು ಪ್ರಶ್ನೆ: “ಇಸ್ರಯೇಲರಿಗೆ ಶುಭಸಂದೇಶವನ್ನು ಕೇಳುವ ಸಂದರ್ಭ ಇರಲಿಲ್ಲವೆ?” ನಿಶ್ಚಯವಾಗಿ ಇತ್ತು. ಪವಿತ್ರಗ್ರಂಥದಲ್ಲಿ ಹೇಳಿರುವಂತೆ: “ಸಾರುವವರ ಧ್ವನಿ ಜಗದಲ್ಲೆಲ್ಲಾ ಹರಡಿತು. ಅವರ ನುಡಿ ಭೂಮಿಯ ತುತ್ತತುದಿಯನ್ನು ಮುಟ್ಟಿತು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆದರೂ ಅವರ ಕಿವಿಗೆ ಬೀಳಲಿಲ್ಲವೇನು ಎಂದು ಕೇಳುತ್ತೇನೆ. ಬಿದ್ದದ್ದು ನಿಶ್ಚಯ. ಸಾರುವವರ ಧ್ವನಿಯು ಭೂವಿುಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆದರೆ, “ಜನರು ಸುವಾರ್ತೆಯನ್ನು ಕೇಳಲಿಲ್ಲವೇ?” ಎಂದು ನಾನು ಪ್ರಶ್ನಿಸುತ್ತೇನೆ. ಹೌದು, ಅವರು ಕೇಳಿದರು ಪವಿತ್ರ ಗ್ರಂಥ ಹೇಳುವಂತೆ: “ಅವರ ಸ್ವರಗಳು ಲೋಕದಲ್ಲೆಲ್ಲಾ ಪ್ರಸಾರಗೊಂಡವು. ಅವರ ಮಾತುಗಳು ಪ್ರಪಂಚದ ಎಲ್ಲಾ ಕಡೆಗಳಿಗೂ ಹೋದವು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

18 ಖರೆ ಮಿಯಾ ಇಚಾರ್ತಾ: ತೆನಿ ಬಾತ್ಮಿ ಆಯ್ಕಿನಸಲ್ಲೆ ಖರೆ ಹಾಯ್? ಹೊಯ್ ತೆನಿ ಖರೆ ಹೊತ್ತೆ ಕರ್‍ಲ್ಯಾನಿ. ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ, ತೆಂಚ್ಯಾ ಧನಾಚೊ ಅವಾಜ್ ಸಗ್ಳ್ಯಾ ಜಗಾವರ್ತಿ ಜಾವ್ನ್ ಪಾವ್ಲೊ: ತೆಂಚ್ಯಾ ಗೊಸ್ಟಿಯಾ ಜಿಮ್ನಿಚ್ಯಾ ಆಕ್ರಿ ಪತರ್ ಜಾವ್ನ್ ಪಾವ್ಲ್ಯಾತ್:

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೋಮಾಪುರದವರಿಗೆ 10:18
23 ತಿಳಿವುಗಳ ಹೋಲಿಕೆ  

ಅವುಗಳ ಧ್ವನಿ ಭೂಲೋಕವೆಲ್ಲಾ ಹರಡಿವೆ; ಅವುಗಳ ಮಾತುಗಳೋ ಲೋಕದ ಕಟ್ಟಕಡೆಯವರೆಗೂ ಹೋಗುತ್ತವೆ; ಆಕಾಶದಲ್ಲಿ ದೇವರು ಸೂರ್ಯನಿಗೆ ಗುಡಾರ ಹಾಕಿದ್ದಾರೆ.


ಮೊದಲನೆಯದಾಗಿ, ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಕ್ರಿಸ್ತ ಯೇಸುವಿನ ಮೂಲಕ ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.


ಪರಲೋಕ ರಾಜ್ಯದ ಈ ಸುವಾರ್ತೆಯು ಲೋಕದಲ್ಲೆಲ್ಲಾ ಸರ್ವಜನಾಂಗಗಳಿಗೆ ಸಾಕ್ಷಿಯಾಗಿ ಸಾರಲಾಗುವದು, ತರುವಾಯ ಅಂತ್ಯ ಬರುವುದು.


ಕರ್ತನ ವಾಕ್ಯವು ನಿಮ್ಮಿಂದಲೇ ಮಕೆದೋನ್ಯ ಹಾಗೂ ಅಖಾಯದಲ್ಲಿ ಘೋಷಿತವಾದದ್ದಲ್ಲದೆ, ದೇವರ ಮೇಲೆ ನೀವು ಇಟ್ಟಿರುವ ನಂಬಿಕೆಯು ಎಲ್ಲಾ ಸ್ಥಳಗಳಲ್ಲಿಯೂ ಹರಡಿತು. ಆದ್ದರಿಂದ ಇದನ್ನು ಕುರಿತು ನಾವು ಹೇಳಬೇಕಾದ ಅವಶ್ಯ ಏನೂ ಇಲ್ಲ.


ನೀವು ನಿಮ್ಮ ನಂಬಿಕೆಯಲ್ಲಿ ಸ್ಥಿರವಾಗಿ ಮುಂದುವರೆದು ನೆಲೆಗೊಂಡು, ಸುವಾರ್ತೆಯ ನಿರೀಕ್ಷೆಯಿಂದ ತೊಲಗಿ ಹೋಗದಿರಿ. ನೀವು ಕೇಳಿದಂಥ ಮತ್ತು ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲಾದ ಈ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾದೆನು.


ಆ ಸುವಾರ್ತೆಯು ಲೋಕದಲ್ಲೆಲ್ಲಾ ಹರಡಿದಂತೆ, ನಿಮಗೂ ತಲುಪಲು ನೀವು ಸಹ ಅದನ್ನು ಕೇಳಿ ದೇವರ ಕೃಪೆಯನ್ನು ನಿಜವಾಗಿಯೂ ತಿಳಿದುಕೊಂಡ ದಿವಸದಿಂದ ನಿಮ್ಮಲ್ಲಿಯೂ ಫಲಕೊಟ್ಟು ವೃದ್ಧಿಯಾಗುತ್ತಿದೆ.


ಯೇಸು ಅವರಿಗೆ, “ನೀವು ಜಗತ್ತಿನ ಎಲ್ಲಾ ಕಡೆಗಳಿಗೆ ಹೋಗಿ ಸರ್ವಸೃಷ್ಟಿಗೂ ಸುವಾರ್ತೆಯನ್ನು ಸಾರಿರಿ.


ಆದ್ದರಿಂದ ನೀವು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ,


ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಲೋಕದಾದ್ಯಂತ ಎಲ್ಲೆಲ್ಲಿ ಸುವಾರ್ತೆಯು ಸಾರಲಾಗುವದೋ, ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದನ್ನು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲಾಗುವುದು,” ಎಂದರು.


ಓ ಯೆಹೋವ ದೇವರೇ, ನನ್ನ ಬಲವೇ, ನನ್ನ ಕೋಟೆಯೇ, ಇಕ್ಕಟ್ಟಿನ ದಿವಸದಲ್ಲಿ ನನ್ನ ಆಶ್ರಯವೇ, ಭೂಮಿಯ ಅಂತ್ಯಗಳಿಂದ ಜಗದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಬರುವುವು. “ನಮ್ಮ ಪೂರ್ವಜರು ನಿಶ್ಚಯವಾಗಿ ಸುಳ್ಳಾದದ್ದನ್ನು ಪಾರಂಪರ್ಯವಾಗಿ ಹೊಂದಿದ್ದಾರೆ. ಅವು ವ್ಯರ್ಥವೇ. ಅವುಗಳಲ್ಲಿ ಏನೂ ಪ್ರಯೋಜನವಿಲ್ಲ.


ಅನಂತರ ಸೈತಾನನು ಯೇಸುವನ್ನು ಬಹಳ ಎತ್ತರವಾದ ಪರ್ವತಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ಮಹಿಮೆಯನ್ನೂ ಅವರಿಗೆ ತೋರಿಸಿ,


ಯೆಹೋವ ದೇವರು ತಮ್ಮ ಪವಿತ್ರ ಬಾಹುವನ್ನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತೋರಿಸಿಕೊಂಡಿದ್ದಾನೆ ಮತ್ತು ಭೂಮಿಯ ಅಂತ್ಯದವರೆಗೂ ನಮ್ಮ ದೇವರ ರಕ್ಷಣೆಯನ್ನು ಕಾಣುವರು.


ಆತನೇ ಈಗ ಹೀಗೆನ್ನುತ್ತಾನೆ, “ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವಲ್ಲವೇ, ನನ್ನ ರಕ್ಷಣೆಯು ಭೂಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಸರ್ವಜನಾಂಗಗಳಿಗೂ ಬೆಳಕನ್ನಾಗಿ ಮಾಡುವೆನು.”


ಇಸ್ರಾಯೇಲರ ಕಡೆಗೆ ತಮ್ಮ ಪ್ರೀತಿಯನ್ನೂ, ತಮ್ಮ ಸತ್ಯತೆಯನ್ನೂ ಜ್ಞಾಪಕ ಮಾಡಿಕೊಂಡಿದ್ದಾರೆ; ಭೂಮಿಯ ಅಂತ್ಯಗಳಲ್ಲೆವೂ ನಮ್ಮ ದೇವರ ರಕ್ಷಣೆಯನ್ನು ನೋಡಿವೆ.


ಲೋಕದಲ್ಲಿರುವ ಎಲ್ಲರೂ ಎಚ್ಚರವಾಗಿ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳುವರು; ಜನಾಂಗಗಳ ಕುಟುಂಬಗಳೆಲ್ಲಾ ದೇವರ ಮುಂದೆ ಅಡ್ಡಬೀಳುವವು.


ಭೂಮಂಡಲದ ಕಟ್ಟಕಡೆಯಿಂದ “ನೀತಿವಂತರಿಗೆ ಮಹಿಮೆಯಾಗಲಿ” ಎಂಬ ಗೀತೆಗಳು ನಮಗೆ ಕೇಳಿಬರುತ್ತಿವೆ. ಆದರೆ, “ನಾನಾದರೋ ಕ್ಷಯಿಸೇ ಕ್ಷಯಿಸುತ್ತೇನೆ. ನನಗೆ ಕಷ್ಟ! ಬಾಧಕರು ಬಾಧಿಸುವುದರಲ್ಲಿಯೇ ನಿರತರಾಗಿದ್ದಾರೆ. ಹೌದು, ಬಾಧಕರು ಬಹಳವಾಗಿ ಬಾಧಿಸುವುದರಲ್ಲಿ ನಿರತರಾಗಿದ್ದಾರೆ.”


ನಿನ್ನ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಯಜಮಾನನು ನಿನ್ನನ್ನು ಹುಡುಕಲು ಕಳುಹಿಸದ ಜನಾಂಗವೂ, ರಾಜ್ಯವೂ ಒಂದೂ ಇಲ್ಲ. ಅವರು, ‘ಎಲೀಯನು ನಮ್ಮಲ್ಲಿ ಇಲ್ಲ,’ ಎಂದು ಹೇಳಿದಾಗ, ಅಹಾಬನು ಆ ರಾಜ್ಯಕ್ಕೂ, ಜನಾಂಗಕ್ಕೂ ಆಣೆ ಇಡಿಸಿಕೊಂಡನು.


ಬಲವಾದ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಪವಿತ್ರಾತ್ಮ ಶಕ್ತಿಯಿಂದಲೂ ಮಾಡಿದ ಕಾರ್ಯಗಳನ್ನೇ ಹೊರತು ಬೇರೆ ಯಾವ ಕಾರ್ಯಗಳನ್ನೂ ಹೇಳುವುದಕ್ಕೆ ನನಗೆ ಧೈರ್ಯ ಸಾಲದು. ಯೆರೂಸಲೇಮಿನಿಂದ ಪ್ರಾರಂಭಿಸಿ, ಇಲ್ಲುರಿಕದವರೆಗೆ ನಾನು ಕ್ರಿಸ್ತನ ಸುವಾರ್ತೆಯನ್ನು ಸಂಪೂರ್ಣವಾಗಿ ಸಾರಿದ್ದೇನೆ.


ಅವರು ಒಂದು ದಿನ ಪೌಲನೊಂದಿಗಿರಲು ಏರ್ಪಡಿಸಿ, ಅವನಿದ್ದ ಸ್ಥಳಕ್ಕೆ ಬಹುಮಂದಿ ಕೂಡಿಬಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಅವನು ದೇವರ ರಾಜ್ಯದ ಬಗ್ಗೆ ಖಚಿತವಾಗಿ ಸಾಕ್ಷಿ ಕೊಡುತ್ತಾ, ಮೋಶೆಯ ನಿಯಮ ಮತ್ತು ಪ್ರವಾದಿಗಳ ಗ್ರಂಥಗಳಿಂದ ಯೇಸುವಿನ ಬಗ್ಗೆ ವಿವರಿಸಿ ಅವರ ಮನವೊಲಿಸಲು ಪ್ರಯತ್ನಿಸಿದನು.


ಶಿಷ್ಯರು ಹೊರಟುಹೋಗಿ ಎಲ್ಲಾ ಕಡೆಗಳಲ್ಲಿಯೂ ಸುವಾರ್ತೆಯನ್ನು ಸಾರಿದರು. ಕರ್ತನು ಅವರ ಜೊತೆಯಲ್ಲಿ ಕೆಲಸ ಮಾಡುತ್ತಾ, ಸೂಚಕಕಾರ್ಯಗಳಿಂದ ತಮ್ಮ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದರು.


ಆದರೆ ಮೊದಲು ದಮಸ್ಕದಲ್ಲಿದ್ದವರಿಗೂ ಆಮೇಲೆ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಕಡೆಗಳಲ್ಲಿ ಇದ್ದವರಿಗೂ ಯೆಹೂದ್ಯರಲ್ಲದವರಿಗೂ ನಾನು ಬೋಧಿಸಿದೆನು. ಅವರು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು, ಪಶ್ಚಾತ್ತಾಪಕ್ಕೆ ಯೋಗ್ಯ ಕೃತ್ಯಗಳನ್ನು ನಡೆಸಬೇಕೆಂದು ನಾನು ಘೋಷಿಸಿದೆನು.


ಆದರೆ ಪವಿತ್ರಾತ್ಮ ದೇವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯನ್ನು ಪಡೆಯುವಿರಿ. ಆಗ ನೀವು ಯೆರೂಸಲೇಮಿನಲ್ಲಿ, ಯೂದಾಯ ಪ್ರಾಂತ ಮತ್ತು ಸಮಾರ್ಯ ಪ್ರಾಂತದ ಎಲ್ಲಾ ಕಡೆಗಳಲ್ಲಿಯೂ ಹಾಗೂ ಭೂಲೋಕದ ಕೊನೆಯ ಮೇರೆಗಳವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು