Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೂತಳು 4:4 - ಕನ್ನಡ ಸಮಕಾಲಿಕ ಅನುವಾದ

4 ನಿವಾಸಿಗಳ ಮುಂದೆಯೂ ನನ್ನ ಜನರಾದ ಹಿರಿಯರ ಮುಂದೆಯೂ ಅದನ್ನು ಕೊಂಡು ಬಿಡಿಸಿಕೊಂಡರೆ ಬಿಡಿಸಿಕೋ. ಬಿಡಿಸಿಕೊಳ್ಳದಿದ್ದರೆ ನಾನು ತಿಳಿದುಕೊಳ್ಳುವ ಹಾಗೆ ನನಗೆ ಹೇಳು. ಏಕೆಂದರೆ ನೀನೂ ನಿನ್ನ ತರುವಾಯ ನಾನೂ ಅಲ್ಲದೆ ಬಿಡಿಸಿಕೊಳ್ಳುವವನು ಯಾರೂ ಇಲ್ಲ,” ಎಂದು ಹೇಳಿದನು. ಅದಕ್ಕೆ ಅವನು, “ನಾನು ಬಿಡಿಸಿಕೊಳ್ಳುವೆನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಾನು ನಿನಗೆ ಹೇಳಬೇಕೆಂದಿರುವುದೇನಂದರೆ ‘ನಿನಗೆ ಅದನ್ನು ಕೊಂಡುಕೊಳ್ಳುವ ಮನಸ್ಸಿದ್ದರೆ ಇಲ್ಲಿ ಕುಳಿತಿರುವ ಊರಿನ ಹಿರಿಯರ ಮುಂದೆಯೇ ಕೊಂಡುಕೋ.’ ಇಲ್ಲದಿದ್ದರೆ ನನಗೆ ತಿಳಿಸು; ಇದು ನನಗೆ ಗೊತ್ತಾಗಬೇಕು. ನೀನೂ, ನಿನ್ನ ತರುವಾಯ ನಾನೂ ಅಲ್ಲದೆ ಅದನ್ನು ಕೊಂಡುಕೊಳ್ಳತಕ್ಕ ಬಾಧ್ಯರು ಬೇರೆ ಯಾರೂ ಇಲ್ಲ” ಎಂದು ಹೇಳಲು ಅವನು “ನಾನೇ ಕೊಂಡುಕೊಳ್ಳುತ್ತೇನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಆ ಹೊಲವನ್ನು ಕೊಂಡುಕೊಳ್ಳಲು ನಿನಗೆ ಮನಸ್ಸಿದ್ದರೆ ಇಲ್ಲಿ ಕುಳಿತಿರುವ ಹಿರಿಯರ ಮುಂದೆ ಕೊಂಡುಕೊಳ್ಳುವ ಹಕ್ಕು ಮೊದಲು ನಿನಗೆ, ಅನಂತರ ನನಗೆ ಸೇರಿದ್ದು; ಬೇರೆಯವರಿಗಲ್ಲ,” ಎಂದನು. ಆಗ ಆ ವ್ಯಕ್ತಿ: “ನಾನೇ ಕೊಂಡುಕೊಳ್ಳುತ್ತೇನೆ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಿನಗೆ ಅದನ್ನು ಕೊಂಡುಕೊಳ್ಳುವ ಮನಸ್ಸಿದ್ದರೆ ಇಲ್ಲಿ ಕೂತಿರುವ ಊರಿನ ಹಿರಿಯರ ಮುಂದೆಯೇ ಕೊಂಡುಕೋ. ಇಲ್ಲದಿದ್ದರೆ ನನಗೆ ತಿಳಿಸು; ನನಗೆ ಗೊತ್ತಾಗಬೇಕು. ನೀನೂ ನಿನ್ನ ತರುವಾಯ ನಾನೂ ಅಲ್ಲದೆ ಅದನ್ನು ಕೊಂಡುಕೊಳ್ಳತಕ್ಕ ಬಾಧ್ಯರು ಬೇರೆ ಯಾರೂ ಇಲ್ಲ ಎಂದು ಹೇಳಲು ಅವನು - ನಾನೇ ಕೊಂಡುಕೊಳ್ಳುತ್ತೇನೆ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ನಾನು ಇದರ ಬಗ್ಗೆ ನಿನಗೆ ಈ ಜನರ ಸಮ್ಮುಖದಲ್ಲಿ ಮತ್ತು ನಮ್ಮ ಹಿರಿಯರ ಸಮ್ಮುಖದಲ್ಲಿ ಹೇಳಬೇಕೆಂದು ತೀರ್ಮಾನಿಸಿದ್ದೇನೆ. ನೀನು ಆ ಹೊಲವನ್ನು ಕೊಂಡುಕೊಳ್ಳ ಬಯಸಿದರೆ ಕೊಂಡುಕೋ. ನಿನಗೆ ಕೊಂಡುಕೊಳ್ಳಲು ಇಷ್ಟವಿಲ್ಲದಿದ್ದರೆ ನನಗೆ ಹೇಳು. ನಿನ್ನ ಬಳಿಕ ಆ ಹೊಲವನ್ನು ಕೊಂಡುಕೊಳ್ಳುವ ಹಕ್ಕು ನನಗಿದೆ. ನೀನು ಆ ಹೊಲವನ್ನು ಕೊಂಡುಕೊಳ್ಳದಿದ್ದರೆ ನಾನು ಕೊಂಡುಕೊಳ್ಳುತ್ತೇನೆ.” ಅದಕ್ಕೆ ಅವನು, “ಸರಿ, ನಾನೇ ಕೊಂಡುಕೊಳ್ಳುತ್ತೇನೆ.” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೂತಳು 4:4
12 ತಿಳಿವುಗಳ ಹೋಲಿಕೆ  

ಕಡೆಯದಾಗಿ ಪ್ರಿಯರೇ, ಯಾವುದು ಸತ್ಯವೂ ಯಾವುದು ಮಾನ್ಯವೂ ಯಾವುದು ನ್ಯಾಯವೂ ಯಾವುದು ಶುದ್ಧವೂ ಯಾವುದು ಪ್ರೀತಿಕರವೂ ಯಾವುದು ಮನೋಹರವೂ ಯಾವುದು ಉತ್ತಮವಾದದ್ದೋ ಯಾವುದು ಕೀರ್ತಿಗೆ ಯೋಗ್ಯವೋ ಅವೆಲ್ಲವುಗಳನ್ನೇ ಆಲೋಚಿಸಿರಿ.


ಏಕೆಂದರೆ, ಕರ್ತ ಯೇಸುವಿನ ದೃಷ್ಟಿಯಲ್ಲಿ ಮಾತ್ರ ಅಲ್ಲ, ಜನರ ದೃಷ್ಟಿಯಲ್ಲಿಯೂ ಯೋಗ್ಯವಾದದ್ದನ್ನು ಮಾಡಬೇಕೆಂಬುದು ನಮ್ಮ ಪ್ರಯಾಸವಾಗಿದೆ.


ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿಯೂ ಒಳ್ಳೆಯದನ್ನು ಮಾಡಿರಿ.


ಆದರೂ ಓ ಸಾರ್ವಭೌಮ ಯೆಹೋವ ದೇವರೇ, ನೀನು ನನಗೆ, ‘ಹೊಲವನ್ನು ಹಣಕ್ಕೆ ಕೊಂಡುಕೋ, ಸಾಕ್ಷಿಗಳನ್ನು ಇಡು,’ ಎಂದು ಹೇಳಿದ್ದೀ. ಆದರೂ ಪಟ್ಟಣವು ಬಾಬಿಲೋನಿಯರ ಕೈಯಲ್ಲಿ ಒಪ್ಪಿಸಲಾಗಿದೆಯಲ್ಲಾ?”


ಹಿತ್ತಿಯರ ಮುಂದೆಯೂ, ಅವರ ಪಟ್ಟಣದ ಹೆಬ್ಬಾಗಿಲಿನಲ್ಲಿ ಸೇರುವ ಎಲ್ಲರ ಮುಂದೆಯೂ ಅಬ್ರಹಾಮನ ಆಸ್ತಿಯೆಂದು ದೃಢವಾಯಿತು.


“ಒಡೆಯನೇ ಹಾಗಲ್ಲ, ನನ್ನ ಮಾತನ್ನು ಕೇಳು. ಆ ಹೊಲವನ್ನು ನಿನಗೆ ಕೊಡುತ್ತೇನೆ. ಅದರಲ್ಲಿರುವ ಗವಿಯನ್ನೂ ನಿನಗೆ ಕೊಡುತ್ತೇನೆ. ಅದನ್ನು ನನ್ನ ಜನರ ಎದುರಿನಲ್ಲಿ ನಿನಗೆ ಕೊಡುತ್ತೇನೆ. ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು.


ಆಗ ಅವನ ಪಟ್ಟಣದ ಹಿರಿಯರು ಅವನನ್ನು ಕರೆದು, ಅವನ ಸಂಗಡ ಮಾತನಾಡಬೇಕು. ಅವನು ನಿಂತುಕೊಂಡು, “ಅವಳನ್ನು ಮದುವೆಯಾಗುವುದಕ್ಕೆ ನನಗೆ ಮನಸ್ಸಿಲ್ಲ,” ಎಂದು ಹೇಳಿದರೆ,


ನೊವೊಮಿ ತನ್ನ ಸೊಸೆಗೆ, “ಜೀವಂತ ಇರುವವರಿಗೂ ಸತ್ತವರಿಗೂ ದಯೆ ತೋರಿಸುತ್ತಿರುವ ಯೆಹೋವ ದೇವರಿಂದ ಅವನಿಗೆ ಆಶೀರ್ವಾದವಾಗಲಿ,” ಎಂದಳು. ಅನಂತರ ನೊವೊಮಿ ಅವಳಿಗೆ, “ಆ ಮನುಷ್ಯನು ನಮ್ಮ ಬಂಧುವೂ ವಿಮೋಚಿಸತಕ್ಕ ನಮ್ಮ ಬಾಧ್ಯರಲ್ಲಿ ಒಬ್ಬನಾಗಿಯೂ ಇದ್ದಾನೆ,” ಎಂದಳು.


ಆಗ ಅವನು, “ನೀನು ಯಾರು?” ಎಂದನು. ಅದಕ್ಕವಳು, “ನಾನು ನಿಮ್ಮ ದಾಸಿಯಾದ ರೂತಳು. ನೀವು ನಿಮ್ಮ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕಿರಿ. ಏಕೆಂದರೆ ನೀವು ನನ್ನನ್ನು ವಿಮೋಚಿಸತಕ್ಕ ಹತ್ತಿರ ಸಂಬಂಧಿಕನು,” ಎಂದಳು.


ಈಗ ನಾನು ನಿನ್ನ ವಿಮೋಚಿಸತಕ್ಕ ಸಮೀಪ ಬಂಧುವಾಗಿದ್ದೇನೆ ಎಂಬುದು ನಿಜವೇ. ಆದರೆ ನನಗಿಂತಲೂ ಸಮೀಪಸ್ಥನಾದ ಬಂಧುವು ಒಬ್ಬನಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು