Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೂತಳು 4:11 - ಕನ್ನಡ ಸಮಕಾಲಿಕ ಅನುವಾದ

11 ಆಗ ಊರುಬಾಗಿಲಲ್ಲಿ ಕೂಡಿದ್ದ ಸಮಸ್ತ ಜನರೂ ಹಿರಿಯರೂ, “ನಾವು ಸಾಕ್ಷಿಗಳೇ, ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಯೆಹೋವ ದೇವರು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡಲಿ. ಎಫ್ರಾತದಲ್ಲಿ ಧನವಂತನಾಗಿರು, ಬೇತ್ಲೆಹೇಮಿನಲ್ಲಿ ಘನವಂತನಾಗಿರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅದಕ್ಕೆ ಊರ ಬಾಗಿಲಲ್ಲಿ ಕೂಡಿ ಬಂದಿದ್ದ ಹಿರಿಯರೂ, ಎಲ್ಲಾ ಜನರೂ “ಹೌದು, ನಾವೇ ಸಾಕ್ಷಿಗಳು; ಯೆಹೋವನು ಇಸ್ರಾಯೇಲನ ಮನೆಯನ್ನು ಕಟ್ಟಿದ. ರಾಹೇಲ್, ಲೇಯಾ ಎಂಬ ಸ್ತ್ರೀಯರನ್ನು ಹೇಗೋ ಹಾಗೆಯೇ ನಿನ್ನ ಮನೆಗೆ ಬರುವ ಈ ಸ್ತ್ರೀಯನ್ನೂ ಅಭಿವೃದ್ಧಿಪಡಿಸಲಿ. ಎಫ್ರಾತದಲ್ಲಿ ಅಭಿವೃದ್ಧಿ ಹೊಂದು, ಬೇತ್ಲೆಹೇಮಿನಲ್ಲಿ ಪ್ರಸಿದ್ಧನಾಗು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಆಗ ಊರಿನ ಹಿರಿಯರು ಮತ್ತು ನೆರೆದಿದ್ದ ಸಭಿಕರು: “ಹೌದು, ನಾವೆಲ್ಲರೂ ಸಾಕ್ಷಿಗಳು. ಇಸ್ರಯೇಲಿನ ಮನೆತನವನ್ನು ವೃದ್ಧಿಗೊಳಿಸಿದ ರಾಹೆಲ್ ಮತ್ತು ಲೆಯಾ ಎಂಬ ಕುಲೀನೆಯರನ್ನು ಸರ್ವೇಶ್ವರ ಆಶೀರ್ವದಿಸಲಿ! ಎಫ್ರಾತ ಕುಲದಲ್ಲಿ ಧನವಂತನಾಗು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇದಕ್ಕೆ ನೀವು ಸಾಕ್ಷಿಗಳು ಎಂದು ಹೇಳಿದ್ದಕ್ಕೆ ಊರುಬಾಗಲಲ್ಲಿ ಕೂಡಿದ್ದ ಹಿರಿಯರೂ ಎಲ್ಲಾ ಜನರೂ - ಹೌದು, ನಾವು ಸಾಕ್ಷಿಗಳು; ಯೆಹೋವನು ಇಸ್ರಾಯೇಲನ ಮನೆಯನ್ನು ಕಟ್ಟಿದ ರಾಹೇಲ್, ಲೇಯಾ ಎಂಬ ಸ್ತ್ರೀಯರನ್ನು ಹೇಗೋ ಹಾಗೆಯೇ ನಿನ್ನ ಮನೆಗೆ ಬರುವ ಈ ಸ್ತ್ರೀಯನ್ನೂ ಅಭಿವೃದ್ಧಿಪಡಿಸಲಿ. ಎಫ್ರಾತದಲ್ಲಿ ಸತ್ಕಾರ್ಯವನ್ನು ಮಾಡು; ಬೇತ್ಲೆಹೇವಿುನಲ್ಲಿ ಘನವಂತನಾಗು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನಗರದ್ವಾರದಲ್ಲಿ ಸೇರಿದ್ದ ಜನರೆಲ್ಲರು ಮತ್ತು ಹಿರಿಯರು ಸಾಕ್ಷಿಗಳಾಗಿದ್ದರು. ಅವರು, “ಈ ಸ್ತ್ರೀಯು ನಿನ್ನ ಮನೆಗೆ ಬರುವಳು. ಯೆಹೋವನು ಅವಳನ್ನು ರಾಹೇಲಳಂತೆಯೂ ಲೇಯಾಳಂತೆಯೂ ಮಾಡಲಿ. ರಾಹೇಲಳು ಮತ್ತು ಲೇಯಾಳು ಇಸ್ರೇಲಿನ ಮನೆಯನ್ನು ಕಟ್ಟಿದರು. ಎಫ್ರಾತಿನಲ್ಲಿ ಪ್ರಭಾವ ಶಾಲಿಯಾಗು! ಬೆತ್ಲೆಹೇಮಿನಲ್ಲಿ ಸುಪ್ರಸಿದ್ಧನಾಗು!

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೂತಳು 4:11
24 ತಿಳಿವುಗಳ ಹೋಲಿಕೆ  

ಲೇಯಳು ಗರ್ಭಿಣಿಯಾಗಿ ಮಗನನ್ನು ಹೆತ್ತು, “ನಿಜವಾಗಿ ಯೆಹೋವ ದೇವರು ನನ್ನ ಬಾಧೆಯನ್ನು ನೋಡಿದ್ದಾರೆ. ಆದ್ದರಿಂದ ನನ್ನ ಗಂಡನು ನನ್ನನ್ನು ಪ್ರೀತಿ ಮಾಡುವನು,” ಎಂದು ಹೇಳಿ ಮಗುವಿಗೆ ರೂಬೇನ್ ಎಂದು ಹೆಸರಿಟ್ಟಳು.


“ ‘ಯೆಹೂದ ಪ್ರಾಂತದಲ್ಲಿರುವ ಬೇತ್ಲೆಹೇಮೇ, ಯೆಹೂದದ ಅಧಿಪತಿಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಅಲ್ಪವಲ್ಲ. ಏಕೆಂದರೆ ನನ್ನ ಪ್ರಜೆಗಳಾದ ಇಸ್ರಾಯೇಲನ್ನು ಪರಿಪಾಲಿಸಲು ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಬರುವನು,’” ಎಂದು ಹೇಳಿದರು.


ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಗೋತ್ರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳಗಿಂದ ನನಗಾಗಿ ಹೊರಡುವನು. ಆತನ ಮೂಲವು ಪೂರ್ವದಿಂದಲೂ ಅನಾದಿ ಕಾಲದಿಂದಲೂ ಆದದ್ದು.


ನಾವು ಎಫ್ರಾತದಲ್ಲಿ ಇದನ್ನು ಕೇಳಿದೆವು; ಯಹಾರ್ ಅಡವಿಯ ಬಯಲುಗಳಲ್ಲಿ ಇದನ್ನು ಕಂಡು ಹೀಗೆಂದು ಕೇಳಿಸಿಕೊಂಡೆವು:


ಆ ಮನುಷ್ಯನ ಹೆಸರು ಎಲೀಮೆಲೆಕನು. ಅವನ ಹೆಂಡತಿಯ ಹೆಸರು ನೊವೊಮಿ. ಅವನ ಪುತ್ರರಲ್ಲಿ ಒಬ್ಬನ ಹೆಸರು ಮಹ್ಲೋನನು, ಮತ್ತೊಬ್ಬನ ಹೆಸರು ಕಿಲ್ಯೋನನು. ಯೆಹೂದ ದೇಶಕ್ಕೆ ಸೇರಿದ ಎಫ್ರಾತದಲ್ಲಿರುವ ಬೇತ್ಲೆಹೇಮಿನವರಾದ ಇವರು ಬಂದು ಮೋವಾಬ್ ದೇಶದಲ್ಲಿ ವಾಸವಾಗಿದ್ದರು.


ಅವನ ಅತ್ತಿಗೆ ಹಿರಿಯರ ಮುಂದೆ ಅವನ ಬಳಿಗೆ ಬಂದು, ಕೆರವನ್ನು ಅವನ ಪಾದದಿಂದ ಬಿಡಿಸಿ, ಅವನ ಮುಖದಲ್ಲಿ ಉಗುಳಿ ಉತ್ತರಕೊಟ್ಟು, “ತನ್ನ ಸಹೋದರನ ಮನೆಯನ್ನು ಕಟ್ಟದವನಿಗೆ ಹೀಗೆಯೇ ಮಾಡಬೇಕು,” ಎಂದು ಹೇಳಲಿ.


ಇದಲ್ಲದೆ ಅವರು ರೆಬೆಕ್ಕಳನ್ನು ಹೀಗೆಂದು ಆಶೀರ್ವದಿಸಿದರು: “ನಮ್ಮ ಸಹೋದರಿಯೇ, ನೀನು ಸಹಸ್ರ ಸಹಸ್ರ ಮಕ್ಕಳಿಗೆ ತಾಯಿಯಾಗು. ನಿನ್ನ ಸಂತಾನದವರು ತಮ್ಮ ವೈರಿಗಳ ಪ್ರದೇಶಗಳನ್ನು ಸ್ವಾಧೀನಮಾಡಿಕೊಳ್ಳಲಿ.”


ಜ್ಞಾನಿಯಾದ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.


ಆಗ ಅವರ ಮಧ್ಯದಲ್ಲಿ ಕುಳಿತುಕೊಂಡಿದ್ದ ಹಿತ್ತಿಯನಾದ ಎಫ್ರೋನನು ಪಟ್ಟಣದ ದ್ವಾರದ ಬಳಿಯಲ್ಲಿ ಕೂತಿದ್ದ ಎಲ್ಲಾ ಹಿತ್ತಿಯರು ಕೇಳುವಂತೆ ಅಬ್ರಹಾಮನಿಗೆ,


ಬೆಳಿಗ್ಗೆ ನೋಡಲಾಗಿ ಆಕೆಯು ಲೇಯಳಾಗಿದ್ದಳು. ಆಗ ಯಾಕೋಬನು ಲಾಬಾನನಿಗೆ, “ಇದೇನು ನೀನು ನನಗೆ ಮಾಡಿದೆ? ರಾಹೇಲಳಿಗೋಸ್ಕರ ನಾನು ನಿನಗೆ ಸೇವೆಮಾಡಿದೆನಲ್ಲಾ? ಏಕೆ ನನಗೆ ಮೋಸಮಾಡಿದೆ?” ಎಂದನು.


ಆಕೆಯ ಪತಿಯು ಪಟ್ಟಣದಲ್ಲಿ ಸನ್ಮಾನಿತ. ದೇಶದ ಹಿರಿಯರ ಮಧ್ಯದಲ್ಲಿ ಪ್ರಸಿದ್ಧನಾಗಿ ಕುಳಿತಿರುವನು.


ಲಾಬಾನನಿಗೆ ಇಬ್ಬರು ಪುತ್ರಿಯರಿದ್ದರು. ದೊಡ್ಡವಳ ಹೆಸರು ಲೇಯಳು, ಚಿಕ್ಕವಳ ಹೆಸರು ರಾಹೇಲಳು.


ಅವರಲ್ಲಿ ಲೇಯಳ ಪುತ್ರರು: ಯಾಕೋಬನ ಚೊಚ್ಚಲ ಮಗ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್.


ರಾಹೇಲಳ ಪುತ್ರರು: ಯೋಸೇಫ್ ಮತ್ತು ಬೆನ್ಯಾಮೀನ್.


ಆದರೆ ಆ ಮನುಷ್ಯನು ತನ್ನ ಅತ್ತಿಗೆಯನ್ನು ತೆಗೆದುಕೊಳ್ಳವ ಮನಸ್ಸಿಲ್ಲದಿದ್ದರೆ, ಅತ್ತಿಗೆಯು ಚಾವಡಿಗೆ ಹೋಗಿ ಹಿರಿಯರ ಹತ್ತಿರ ಬಂದು, “ನನ್ನ ಗಂಡನ ಸಹೋದರನು ತನ್ನ ಸಹೋದರನ ಹೆಸರನ್ನು ಇಸ್ರಾಯೇಲಿನಲ್ಲಿ ಮುಂದುವರಿಸಲು ಸಿದ್ಧನಿಲ್ಲ. ಅವನು ತನ್ನ ಮೈದುನನ ಕರ್ತವ್ಯವನ್ನು ನಡೆಸಲು ಮನಸ್ಸಿಲ್ಲದವನಾಗಿದ್ದಾನೆ,” ಎಂದು ಹೇಳಬೇಕು.


ಹೀಗೆ ಅವಳು ಅಹಾಬನ ಹೆಸರಿನಲ್ಲಿ ಪತ್ರಗಳನ್ನು ಬರೆದು, ಅವುಗಳಿಗೆ ಅವನ ಮುದ್ರೆಹಾಕಿ, ಆ ಪತ್ರಗಳನ್ನು ನಾಬೋತನ ಸಂಗಡ ಅವನ ಪಟ್ಟಣದಲ್ಲಿ ವಾಸವಾಗಿರುವ ಹಿರಿಯರಿಗೂ, ಗೌರವಸ್ಥರಿಗೂ ಕಳುಹಿಸಿದಳು.


ಅವನ ಇನ್ನೊಬ್ಬ ಮಗ ಸಲ್ಮ ಬೇತ್ಲೆಹೇಮನ್ನೂ, ಅವನ ಮೂರನೆಯ ಮಗ ಹಾರೇಫ್, ಬೇತ್ಗಾದೇರ್ ಪಟ್ಟಣವನ್ನೂ ಕಟ್ಟಿಸಿದರು.


ನಾನು ಪತ್ರದಲ್ಲಿ ಬರೆದು, ಅದಕ್ಕೆ ಮುದ್ರೆಹಾಕಿ, ಸಾಕ್ಷಿಗಳನ್ನಿಟ್ಟು, ಬೆಳ್ಳಿಯನ್ನು ತ್ರಾಸಿನಲ್ಲಿ ತೂಕಮಾಡಿದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು