Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ರೂತಳು 3:15 - ಕನ್ನಡ ಸಮಕಾಲಿಕ ಅನುವಾದ

15 ಅವನು, “ನಿನ್ನ ಮೇಲ್ಹೊದಿಕೆಯನ್ನು ಹಿಡಿ,” ಎಂದನು. ಅವಳು ಅದನ್ನು ಹಿಡಿದಾಗ ಅವನು ಅದರಲ್ಲಿ ಸುಮಾರು ಇಪ್ಪತ್ತೈದು ಕಿಲೋಗ್ರಾಂ ಜವೆಗೋಧಿಯನ್ನು ಅಳೆದು ಹಾಕಿ ಆಕೆಯ ಮೇಲೆ ಹೊರಿಸಿದನು. ಅವಳು ಅದನ್ನು ಹೊತ್ತುಕೊಂಡು ಪಟ್ಟಣಕ್ಕೆ ಬಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆಗ ಅವನು ಆಕೆಗೆ “ನಿನ್ನ ಮೇಲ್ಹೊದಿಕೆಯನ್ನು ಹಾಸು” ಎಂದು ಹೇಳಿದನು, ಆಕೆ ಹಾಸಲು ಅದರಲ್ಲಿ ಆರು ಪಡಿ ಜವೆಗೋದಿಯನ್ನು ಹಾಕಿ ಹೊರಿಸಿ ಕಳುಹಿಸಿದನು. ಆಕೆಯು ಊರೊಳಕ್ಕೆ ಹೋದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಬೋವಜನು ಆಕೆಗೆ, “ನಿನ್ನ ಮೇಲ್ಹೊದಿಕೆಯನ್ನು ಹಾಸು,” ಎಂದು ಹೇಳಿ ಅದರಲ್ಲಿ ಸುಮಾರು ಇಪ್ಪತ್ತೈದು ಕಿಲೋಗ್ರಾಂನಷ್ಟು ಜವೆಗೋದಿಯನ್ನು ಸುರಿದು, ಅದನ್ನೆತ್ತಿ ಹೊರಿಸಿದನು. ಆಕೆ ಅದನ್ನು ಹೊತ್ತುಕೊಂಡು ಊರೊಳಗೆ ಹೋದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆಗ ಅವನು ಆಕೆಗೆ - ನಿನ್ನ ಕಂಬಳಿಯನ್ನು ಹಾಸು ಎಂದು ಹೇಳಿ ಆಕೆ ಹಾಸಲು ಅದರಲ್ಲಿ ಆರು ಪಡಿ ಜವೆಗೋದಿಯನ್ನು ಹಾಕಿ ಹೊರಿಸಿದನು. ಆಕೆಯು ಊರೊಳಕ್ಕೆ ಹೋಗಿ ಅತ್ತೆಯ ಬಳಿಗೆ ಬಂದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಬೋವಜನು, “ನಿನ್ನ ಹೊದಿಕೆಯನ್ನು ಇಲ್ಲಿ ತೆಗೆದುಕೊಂಡು ಬಾ. ಅದನ್ನು ಸ್ವಲ್ಪ ಅಗಲಮಾಡಿ ಹಿಡಿದುಕೋ” ಎಂದನು. ರೂತಳು ತನ್ನ ಹೊದಿಕೆಯನ್ನು ಅಗಲಮಾಡಿ ಹಿಡಿದಳು. ಬೋವಜನು ಆರು ಸೇರಿನಷ್ಟು ಜವೆಗೋಧಿಯನ್ನು ಅದರಲ್ಲಿ ಸುರಿದು ಚೆನ್ನಾಗಿ ಕಟ್ಟಿ ಅವಳ ಮೇಲೆ ಹೊರಿಸಿದನು. ಬಳಿಕ ಆಕೆ ಊರೊಳಗೆ ಹೋದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ರೂತಳು 3:15
5 ತಿಳಿವುಗಳ ಹೋಲಿಕೆ  

ಆದ್ದರಿಂದ ನಮಗೆ ಸಮಯವಿರಲಾಗಿ ಎಲ್ಲರಿಗೂ ಒಳ್ಳೆಯದನ್ನು ಮಾಡೋಣ. ಮುಖ್ಯವಾಗಿ ವಿಶ್ವಾಸಿಗಳ ಕುಟುಂಬದವರಿಗೆ ಮಾಡೋಣ.


ಘನವಂತನಾದರೋ, ಘನಕಾರ್ಯಗಳನ್ನು ಕಲ್ಪಿಸುವನು. ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.


ಅವಳು ಹಾಗೆಯೇ ಉದಯಕಾಲದವರೆಗೂ ಅವನ ಪಾದಗಳ ಬಳಿಯಲ್ಲಿ ಮಲಗಿದ್ದು ಯಾರಿಗೂ ಗೊತ್ತಾಗಬಾರದೆಂದು ಹೊತ್ತಿಗೆ ಮುಂಚೆ ಎದ್ದಳು. ಅವನು, “ಒಬ್ಬ ಸ್ತ್ರೀ ಕಣದಲ್ಲಿ ಬಂದಳೆಂದು ಯಾರಿಗೂ ತಿಳಿಯದಿರಲಿ,” ಎಂದನು.


ಅವಳು ತನ್ನ ಅತ್ತೆಯ ಬಳಿಗೆ ಬಂದಾಗ ಅವಳ ಅತ್ತೆಯು, “ನನ್ನ ಮಗಳೇ, ಏನು ನಡೆಯಿತು?” ಎಂದಳು. ಆಗ ಅವಳು ಆ ಮನುಷ್ಯನು ತನಗೆ ಮಾಡಿದ್ದನ್ನೆಲ್ಲಾ ಅವಳಿಗೆ ತಿಳಿಸಿದಳು.


ಕೈಗನ್ನಡಿ, ನಾರುಮಡಿ, ಮುಡಿ ಮುಕುಟ, ಮೇಲ್ವಸ್ತ್ರ ಈ ಸೊಗಸು ಭೂಷಣಗಳನ್ನೆಲ್ಲಾ ತೆಗೆದುಹಾಕುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು