Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 8:59 - ಕನ್ನಡ ಸಮಕಾಲಿಕ ಅನುವಾದ

59 ಆಗ ಅವರು ಯೇಸುವಿನ ಮೇಲೆ ಎಸೆಯಲು ಕಲ್ಲುಗಳನ್ನು ಎತ್ತಿಕೊಂಡರು. ಆದರೆ ಯೇಸು ಅಡಗಿಕೊಂಡು ದೇವಾಲಯದೊಳಗಿಂದ ಹೊರಟು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

59 ಆಗ ಅವರು ಆತನ ಮೇಲೆ ಎಸೆಯಲು, ಕಲ್ಲುಗಳನ್ನು ಎತ್ತಿಕೊಂಡರು. ಆದರೆ ಯೇಸು ಮರೆಯಾಗಿ ದೇವಾಲಯದೊಳಗಿನಿಂದ ಹೊರಗೆ ಹೊರಟು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

59 ಇದನ್ನು ಕೇಳಿದ್ದೇ ಆ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಎತ್ತಿಕೊಂಡರು. ಯೇಸುವಾದರೋ ಮರೆಯಾಗಿ ಮಹಾದೇವಾಲಯದಿಂದ ಹೊರಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

59 ಅವರು ಈ ಮಾತನ್ನು ಕೇಳಿ ಆತನನ್ನು ಕೊಲ್ಲುವದಕ್ಕಾಗಿ ಕಲ್ಲು ತಕ್ಕೊಳ್ಳಲು ಯೇಸು ಅಡಗಿಕೊಂಡು ದೇವಾಲಯದೊಳಗಿಂದ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

59 ಇದನ್ನು ಕೇಳಿದ ಕೂಡಲೇ ಜನರು ಆತನತ್ತ ಬೀರಲು ಕಲ್ಲುಗಳನ್ನು ತೆಗೆದುಕೊಂಡರು. ಆದರೆ ಯೇಸು ಅಡಗಿಕೊಂಡು ದೇವಾಲಯದಿಂದ ಹೊರಟುಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

59 ತನ್ನಾ ತೆನಿ ಜೆಜುಕ್ ಮಾರುಕ್ ಮನುನ್ ಗುಂಡೆ ಎಚುನ್ ಘೆಟ್ಲ್ಯಾನಿ , ಖರೆ ಜೆಜುನ್ ತೆಂಕಾ ಚುಕ್ವುನ್ ದೆವಾಚ್ಯಾ ಗುಡಿತ್ನಾ ಭಾಯ್ರ್ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 8:59
18 ತಿಳಿವುಗಳ ಹೋಲಿಕೆ  

ಯೇಸುವಿನ ಶಿಷ್ಯರು ಅವರಿಗೆ, “ಬೋಧಕರೇ, ಈಗ ಯೆಹೂದ್ಯರು ನಿಮ್ಮ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿದ್ದಾರೆ. ತಿರುಗಿ ನೀವು ಅಲ್ಲಿಗೆ ಹೋಗಬೇಕೆಂದಿರುವಿರಾ?” ಎಂದರು.


ಯೆಹೋವ ದೇವರ ನಾಮವನ್ನು ದೂಷಣೆ ಮಾಡುವವನಿಗೆ ನಿಶ್ಚಯವಾಗಿ ಮರಣವನ್ನು ವಿಧಿಸಬೇಕು. ಸಭೆಯವರೆಲ್ಲರೂ ನಿಶ್ಚಯವಾಗಿ ಅವನಿಗೆ ಕಲ್ಲೆಸೆಯಬೇಕು. ಇದಲ್ಲದೆ ಸ್ವದೇಶೀಯನಾಗಿರಲಿ, ಪರಕೀಯನಾಗಿರಲಿ ಯೆಹೋವ ದೇವರ ಹೆಸರನ್ನು ದೂಷಣೆ ಮಾಡಿದಾಗ, ಅವನನ್ನು ಮರಣ ಶಿಕ್ಷೆಗೆ ಒಳಪಡಿಸಬೇಕು.


ಈ ಮಾತಿಗೆ ಅವರು ತಮ್ಮ ಕಿವಿಗಳನ್ನು ಮುಚ್ಚಿಕೊಂಡು, ಆರ್ಭಟಿಸುತ್ತಾ, ಅವನ ಕಡೆಗೆ ಓಡಿಹೋಗಿ ಅವನನ್ನು ಹೊಡೆದರು.


ಆಗ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡುಹೋಗಿ ನಿಮ್ಮ ನಿಯಮದ ಪ್ರಕಾರ ಆತನಿಗೆ ತೀರ್ಪು ಮಾಡಿರಿ,” ಎಂದನು. ಅದಕ್ಕೆ ಯೆಹೂದ್ಯರು ಅವನಿಗೆ, “ಮರಣದಂಡನೆ ವಿಧಿಸುವ ಅಧಿಕಾರ ನಮಗೆ ಇಲ್ಲ,” ಎಂದು ಹೇಳಿದರು.


ನೀವು ಬೆಳಕಿನ ಪುತ್ರರಾಗುವಂತೆ ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ,” ಎಂದರು. ಯೇಸು ಇವುಗಳನ್ನು ಹೇಳಿ, ಅವರಿಂದ ಹೊರಟುಹೋಗಿ ಅಡಗಿಕೊಂಡರು.


ಹೀಗಿರುವುದರಿಂದ ಯೇಸು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ತಿರುಗಾಡಲಿಲ್ಲ. ಆದರೆ ಅವರು ಅಲ್ಲಿಂದ ಅರಣ್ಯಕ್ಕೆ ಸಮೀಪದಲ್ಲಿದ್ದ ಎಫ್ರಾಯೀಮ್ ಎಂಬ ಊರಿಗೆ ಹೋಗಿ ಅಲ್ಲಿ ತಮ್ಮ ಶಿಷ್ಯರ ಸಂಗಡ ವಾಸಮಾಡಿದರು.


ಆದರೆ ಆ ವ್ಯಕ್ತಿ ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ. ಏಕೆಂದರೆ ಆ ಸ್ಥಳದಲ್ಲಿ ಜನಸಮೂಹವು ಇದ್ದುದರಿಂದ ಯೇಸು ಅಲ್ಲಿಂದ ಮರೆಯಾಗಿಬಿಟ್ಟಿದ್ದರು.


ಆಗ ಅವರ ಕಣ್ಣುಗಳು ತೆರೆದವು. ಅವರು ಯೇಸುವಿನ ಗುರುತು ಹಿಡಿದರು ಮತ್ತು ಯೇಸು ಅವರ ದೃಷ್ಟಿಗೆ ಅದೃಶ್ಯರಾದರು.


ಬಾಗಿಲಲ್ಲಿದ್ದವರನ್ನು ಕಿರಿಯರಿಂದ ಹಿರಿಯರವರೆಗೆ ಕುರುಡಾಗುವಂತೆ ಮಾಡಿದರು. ಆಗ ಆ ಊರಿನವರು ಬಾಗಿಲನ್ನು ಕಂಡುಕೊಳ್ಳದೆ ಬೇಸರಗೊಂಡರು.


ಜನರೆಲ್ಲರೂ ಪ್ರತಿಯೊಬ್ಬನು ತನ್ನ ಪುತ್ರಪುತ್ರಿಯರಿಗೋಸ್ಕರವಾಗಿಯೂ ಮನೋವ್ಯಥೆಪಟ್ಟು, ದಾವೀದನನ್ನು ಕಲ್ಲೆಸೆಯಬೇಕೆಂದು ಹೇಳಿಕೊಂಡದ್ದರಿಂದ, ಅವನು ಬಹಳ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದನು. ಆದರೂ ದಾವೀದನು ಯೆಹೋವ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು.


ಆದರೆ ಫರಿಸಾಯರು ಹೊರಗೆ ಹೋಗಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಅವರ ವಿರೋಧವಾಗಿ ಆಲೋಚನೆಮಾಡಿದರು.


ಯೇಸು ನಡೆದು ಹೋಗುತ್ತಿದ್ದಾಗ, ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು