Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 8:17 - ಕನ್ನಡ ಸಮಕಾಲಿಕ ಅನುವಾದ

17 ‘ಇಬ್ಬರ ಸಾಕ್ಷಿಯು ಸತ್ಯವಾದದ್ದು’ ಎಂದು ನಿಮ್ಮ ನಿಯಮದಲ್ಲಿಯೇ ಬರೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಇಬ್ಬರ ಸಾಕ್ಷಿಯು ಸತ್ಯವಾದದ್ದು ಎಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಇಬ್ಬರ ಸಾಕ್ಷ್ಯ ಒಂದೇ ಆಗಿದ್ದರೆ ಅದು ಸತ್ಯವೆಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಇಬ್ಬರ ಸಾಕ್ಷಿ ನಿಜವಾಗುತ್ತದೆಂಬದಾಗಿ ನಿಮ್ಮ ಧರ್ಮಶಾಸ್ತ್ರದಲ್ಲೇ ಬರೆದದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಇಬ್ಬರ ಸಾಕ್ಷಿ ಒಂದೇ ಆಗಿದ್ದರೆ ಅವರ ಹೇಳಿಕೆಯನ್ನು ಸ್ವೀಕರಿಸಿಕೊಳ್ಳಬೇಕೆಂದು ನಿಮ್ಮ ಧರ್ಮಶಾಸ್ತ್ರವೇ ತಿಳಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

17 ತುಮ್ಚ್ಯಾ ಖಾಯ್ದ್ಯಾತ್ನಿ ದೊಗೆ ಜಾನಾ ಎಕುಚ್ ವಿಶಯಾತ್ ಸಾಕ್ಷಿ ದಿವ್ನ್ ಸಾಂಗಟ್ಲ್ಯಾರ್ ತೆ ಖರೆಚ್! ಮನುನ್ ಲಿವಲ್ಲೆ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 8:17
13 ತಿಳಿವುಗಳ ಹೋಲಿಕೆ  

ಯಾವ ಅಕ್ರಮದ ನಿಮಿತ್ತವೂ, ಅಥವಾ ಪಾಪದ ನಿಮಿತ್ತವೂ ಒಬ್ಬ ಮನುಷ್ಯನಿಗೆ ವಿರೋಧವಾಗಿ ಒಬ್ಬ ಸಾಕ್ಷಿ ನಿಂತುಕೊಳ್ಳಬಾರದು. ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ವಿಷಯವು ಸ್ಥಿರವಾಗುವುದು.


ಒಬ್ಬನ ಸಾಕ್ಷಿಯ ಮಾತಿನಿಂದ ಮಾತ್ರ ಯಾರಿಗೂ ಮರಣಶಿಕ್ಷೆಯಾಗಬಾರದು. ಮರಣಶಿಕ್ಷೆಯನ್ನು ವಿಧಿಸುವುದಕ್ಕೆ ಇಬ್ಬರು ಸಾಕ್ಷಿಗಳು ಇಲ್ಲವೆ ಮೂವರು ಸಾಕ್ಷಿಗಳು ಬೇಕು.


ಮೋಶೆಯ ನಿಯಮವನ್ನು ಅಸಡ್ಡೆ ಮಾಡಿದವನಿಗೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳಿಂದ ಕರುಣೆಯಿಲ್ಲದೆ ಮರಣದಂಡನೆಯಾಗುತ್ತಿತ್ತು.


ಆದರೆ ಅವರು ನಿನಗೆ ಕಿವಿಗೊಡದೆ ಹೋದರೆ, ನಿನ್ನೊಂದಿಗೆ ಇಬ್ಬರನ್ನು ಕರೆದುಕೊಂಡು ಹೋಗು. ಹೀಗೆ, ‘ಇಬ್ಬರ ಇಲ್ಲವೆ ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪಿತವಾಗಲಿ.’


ಹೀಗಿರಲಾಗಿ ನಿಯಮವು ನಮ್ಮ ಪೋಷಕನಂತಿತ್ತು. ನಾವು ನಂಬಿಕೆಯ ಮೂಲಕ ನೀತಿವಂತರಾಗುವುದಕ್ಕಾಗಿ ಕ್ರಿಸ್ತ ಯೇಸುವಿನ ಬಳಿಗೆ ತರುವ ತನಕ ನಮ್ಮನ್ನು ಪೋಷಿಸುತ್ತದೆ.


ನಾನು ನಿಮ್ಮ ಬಳಿಗೆ ಬರುವುದು ಇದು ಮೂರನೆಯ ಸಾರಿ. “ಇಬ್ಬರು ಮೂವರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತೂ ಸ್ಥಾಪಿತವಾಗಬೇಕು,” ಎಂದು ಬರೆಯಲಾಗಿದೆ.


ನನ್ನ ಇಬ್ಬರು ಸಾಕ್ಷಿಗಳಿಗೆ ಗೋಣಿತಟ್ಟುಗಳನ್ನು ಹೊದ್ದುಕೊಂಡು, ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವಂತೆ ಮಾಡುವೆನು,”


ಮೋಶೆಯ ನಿಯಮದ ಕೆಳಗಿರಲು ಬಯಸುವವರೇ, ನಿಯಮವು ಏನು ಹೇಳುತ್ತದೆಯೆಂದು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೀರಾ? ನನಗೆ ಹೇಳಿರಿ.


ನಾವು ಮನುಷ್ಯರ ಸಾಕ್ಷಿಯನ್ನು ತೆಗೆದುಕೊಳ್ಳುವುದಾದರೆ ದೇವರ ಸಾಕ್ಷಿಯು ಅದಕ್ಕಿಂತ ದೊಡ್ಡದಾಗಿದೆಯಲ್ಲಾ. ಏಕೆಂದರೆ ತಮ್ಮ ಪುತ್ರ ಆಗಿರುವ ಕ್ರಿಸ್ತ ಯೇಸುವಿನ ವಿಷಯದಲ್ಲಿ ದೇವರು ಕೊಟ್ಟ ಸಾಕ್ಷಿಯು ಇದೇ ಆಗಿದೆ.


‘ನೀನು ದೇವರನ್ನೂ, ಅರಸನನ್ನೂ ದೂಷಿಸಿದಿ,’ ಎಂದು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಲು ಅವನ ಮುಂದೆ ದುಷ್ಟರಾದ ಇಬ್ಬರು ಮನುಷ್ಯರನ್ನು ಕೂರಿಸಿರಿ. ತರುವಾಯ ಅವನನ್ನು ಹೊರಗೆ ತೆಗೆದುಕೊಂಡುಹೋಗಿ ಅವನು ಸಾಯುವ ಹಾಗೆ ಕಲ್ಲೆಸೆಯಿರಿ,” ಎಂದು ಬರೆದಿತ್ತು.


ಆದರೆ, ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಮಾಡಿದರು,’ ಎಂದು ಅವರ ನಿಯಮದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.


ಅದಕ್ಕೆ ಯೇಸು, “ ‘ನೀವು ದೇವರುಗಳು,’ ಎಂದು ದೇವರೇ ಹೇಳಿರುವುದಾಗಿ ನಿಮ್ಮ ನಿಯಮದಲ್ಲಿ ಬರೆದಿಲ್ಲವೋ?


“ ‘ಪ್ರಾಣಹತ್ಯೆ ಮಾಡಿದ ಕೊಲೆಪಾತಕನನ್ನು ಸಾಕ್ಷಿಗಳನ್ನು ವಿಚಾರಿಸಿಕೊಂಡೇ ಅವನಿಗೆ ಮರಣಶಿಕ್ಷೆಯನ್ನು ವಿಧಿಸಬೇಕು. ಒಬ್ಬನೇ ಸಾಕ್ಷಿಯು ಒಂದು ಪ್ರಾಣಕ್ಕೆ ವಿರೋಧವಾಗಿ ಸಾಯುವ ಹಾಗೆ ಸಾಕ್ಷಿ ಕೊಡಬಾರದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು