Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 7:10 - ಕನ್ನಡ ಸಮಕಾಲಿಕ ಅನುವಾದ

10 ಆದರೆ ಯೇಸುವಿನ ಸಹೋದರರು ಹಬ್ಬಕ್ಕೆ ಹೋದರು. ಯೇಸು ಸಹ ಬಹಿರಂಗವಾಗಿ ಹೋಗದೆ ರಹಸ್ಯವಾಗಿ ಅಲ್ಲಿಗೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆದರೆ ಆತನ ಸಹೋದರರು ಹೋದ ಮೇಲೆ ಆತನು ಸಹ ಹಬ್ಬಕ್ಕೆ ಬಹಿರಂಗವಾಗಿ ಹೋಗದೆ, ರಹಸ್ಯವಾಗಿ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಯೇಸುಸ್ವಾಮಿಯ ಸೋದರರು ಹಬ್ಬಕ್ಕೆಹೋದರು. ಯೇಸುವೂ ಅಲ್ಲಿಗೆ ಹೋದರು. ಬಹಿರಂಗವಾಗಿ ಅಲ್ಲ, ಗುಟ್ಟಾಗಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆದರೆ ಆತನ ಸಹೋದರರು ಜಾತ್ರೆಗೆ ಹೋದ ಮೇಲೆ ಆತನು ಸಹ ಹೋದನು; ಜನರಿಗೆ ಕಾಣುವಂತೆ ಹೋಗದೆ ಮರೆಯಾಗಿ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆದ್ದರಿಂದ ಯೇಸುವಿನ ಸಹೋದರರು ಹಬ್ಬಕ್ಕಾಗಿ ಹೊರಟರು. ಅವರು ಹೋದನಂತರ ಆತನು ಸಹ ಗುಟ್ಟಾಗಿಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ಹೆಚ್ಯಾ ಮಾನಾ ತೆಚಿ ಭಾವಾ ಸನಾಕ್ ಗೆಲಿ, ಜೆಜುಬಿ ಗೆಲೊ ಖರೆ ತೊ ಕೊನಾಕ್ಬಿ ಕಳಿನಸ್ತಾನಾ ಗೆಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 7:10
13 ತಿಳಿವುಗಳ ಹೋಲಿಕೆ  

“ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದ್ದರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ.


ಆದ್ದರಿಂದ ಆ ಕಾಲದಲ್ಲಿ ಬುದ್ಧಿವಂತನು ಮೌನವಾಗಿರುವನು, ಏಕೆಂದರೆ ಅದು ಕೆಟ್ಟ ಕಾಲವಾಗಿದೆ.


ಆದರೆ ನಿಯಮಿತ ಕಾಲವು ಪರಿಪೂರ್ಣವಾದಾಗ, ದೇವರು ತಮ್ಮ ಮಗನನ್ನು ಸ್ತ್ರೀಯಿಂದ ಹುಟ್ಟಿದವನಾಗಿಯೂ ನಿಯಮಕ್ಕೆ ಒಳಗಾದವನನ್ನಾಗಿಯೂ ಕಳುಹಿಸಿಕೊಟ್ಟರು.


ಹೀಗಿರುವುದರಿಂದ ಯೇಸು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ತಿರುಗಾಡಲಿಲ್ಲ. ಆದರೆ ಅವರು ಅಲ್ಲಿಂದ ಅರಣ್ಯಕ್ಕೆ ಸಮೀಪದಲ್ಲಿದ್ದ ಎಫ್ರಾಯೀಮ್ ಎಂಬ ಊರಿಗೆ ಹೋಗಿ ಅಲ್ಲಿ ತಮ್ಮ ಶಿಷ್ಯರ ಸಂಗಡ ವಾಸಮಾಡಿದರು.


ಏಕೆಂದರೆ ಯೇಸುವಿನ ಸಹೋದರರು ಸಹ ಅವರನ್ನು ನಂಬಲಿಲ್ಲ.


ಆದ್ದರಿಂದ ಯೇಸುವಿನ ಸಹೋದರರು, “ನೀನು ಮಾಡುವ ಕ್ರಿಯೆಗಳನ್ನು ನಿನ್ನ ಶಿಷ್ಯರು ಸಹ ನೋಡುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು.


ಯೇಸು ಉತ್ತರವಾಗಿ, “ಸದ್ಯಕ್ಕೆ ಒಪ್ಪಿಕೋ, ಹೀಗೆ ನಾವು ಸಕಲ ನೀತಿಯನ್ನೂ ನೆರವೇರಿಸಬೇಕಾಗಿದೆ,” ಎಂದು ಹೇಳಿದಾಗ, ಯೋಹಾನನು ಒಪ್ಪಿಕೊಂಡನು.


ನನ್ನ ದೇವರೇ, ನಿಮ್ಮ ಚಿತ್ತವನ್ನು ಮಾಡಲು ಬಯಸುತ್ತೇನೆ; ನಿಮ್ಮ ನಿಯಮವು ನನ್ನ ಅಂತರಂಗದಲ್ಲಿ ಇದೆ.”


ಯೆಹೋವ ದೇವರೇ, ನೀವು ವಾಸಿಸುವ ಆಲಯವನ್ನೂ, ನಿಮ್ಮ ಮಹಿಮೆಯ ನಿವಾಸವನ್ನೂ ಪ್ರೀತಿಸುತ್ತೇನೆ.


ಯೇಸು ಇನ್ನೂ ಜನರ ಸಂಗಡ ಮಾತನಾಡುತ್ತಿದ್ದಾಗ, ಅವರ ತಾಯಿ ಮತ್ತು ಸಹೋದರರು ಅವರೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು.


ಯೇಸುವಿನ ಕುಟುಂಬದವರು ಇದನ್ನು ಕೇಳಿದಾಗ, “ಆತನಿಗೆ ಹುಚ್ಚುಹಿಡಿದಿದೆ,” ಎಂದು ಹೇಳಿ, ಯೇಸುವನ್ನು ಹಿಡಿದು ತರಲು ಹೊರಟರು.


ಯೇಸು ಈ ಮಾತುಗಳನ್ನು ಅವರಿಗೆ ಹೇಳಿದ ಮೇಲೆ ಗಲಿಲಾಯದಲ್ಲಿಯೇ ಉಳಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು