Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 16:2 - ಕನ್ನಡ ಸಮಕಾಲಿಕ ಅನುವಾದ

2 ಜನರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು. ಆದರೆ ನಿಮ್ಮನ್ನು ಕೊಲ್ಲುವವರು ದೇವರಿಗೆ ಸೇವೆ ಸಲ್ಲಿಸುತ್ತಾರೆಂದು ಭಾವಿಸುವ ಸಮಯ ಬರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅವರು ನಿಮ್ಮನ್ನು ಸಭಾಮಂದಿರದಿಂದ ಹೊರಗೆ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವು ಬರಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಜನರು, ನಿಮ್ಮನ್ನು ಪ್ರಾರ್ಥನಾಮಂದಿರದಿಂದ ಬಹಿಷ್ಕರಿಸುವರು, ಅಷ್ಟೇ ಅಲ್ಲ, ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟೆನೆಂದು ಭಾವಿಸುವ ಕಾಲವೂ ಬರಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನಿಮಗೆ ಬಹಿಷ್ಕಾರ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಯಜ್ಞವನ್ನು ಮಾಡಿದ್ದೇನೆಂದು ನೆನಸುವ ಕಾಲ ಬರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಜನರು ನಿಮ್ಮನ್ನು ತಮ್ಮ ಸಭಾಮಂದಿರಗಳಿಂದ ಬಹಿಷ್ಕರಿಸುವರು. ಹೌದು, ನಿಮ್ಮನ್ನು ಕೊಂದರೆ ದೇವರ ಸೇವೆ ಮಾಡಿದಂತಾಗುವುದು ಎಂದು ಜನರು ಯೋಚಿಸುವ ಕಾಲ ಬರಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

2 ತುಮ್ಕಾ ಜುದೆವಾಚ್ಯಾ ಸಿನಾಗೊಗಾನಿತ್ನಾ ಭಾಯ್ರ್ ಘಾಲುನ್ ಹೊತಾ. ಅನಿ ತುಮ್ಕಾ ಜಿವಾನಿ ಮಾರ್‍ತಲ್ಯಾನಿ, ಅಪ್ನಿ ಜಿವಾನಿ ಮಾರುನ್ ಅಮಿ ದೆವಾಚಿ ಸೆವಾ ಕರುಲಾಂವ್ ಮನುನ್ ಚಿಂತ್ತಲೊ ಎಳ್‍ಬಿ ಯೆತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 16:2
27 ತಿಳಿವುಗಳ ಹೋಲಿಕೆ  

ಅವನ ತಂದೆತಾಯಿಗಳು ಯೆಹೂದ್ಯ ನಾಯಕರಿಗೆ ಭಯಪಟ್ಟಿದ್ದರಿಂದ ಹೀಗೆ ಹೇಳಿದರು. ಏಕೆಂದರೆ ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ, ಅವರನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯ ನಾಯಕರು ಈ ಮೊದಲೇ ಗೊತ್ತುಮಾಡಿದ್ದರು.


ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾಗದವರಿಗೆ ಹೆದರಬೇಡಿರಿ. ಆದರೆ ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿರಿ.


ಕುರಿಮರಿ ಆಗಿರುವವರು ಐದನೆಯ ಮುದ್ರೆಯನ್ನು ಒಡೆದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ ತಮಗಿದ್ದ ಸಾಕ್ಷಿಯ ನಿಮಿತ್ತವಾಗಿಯೂ ಹತರಾದವರ ಆತ್ಮಗಳು ಬಲಿಪೀಠದ ಕೆಳಗಿರುವುದನ್ನು ಕಂಡೆನು.


ಆದರೂ ಅಧಿಕಾರಿಗಳಲ್ಲಿ ಅನೇಕರು ಆ ಸಮಯದಲ್ಲಿ ಯೇಸುವನ್ನು ನಂಬಿದರು. ಆದರೆ ಫರಿಸಾಯರ ನಿಮಿತ್ತ ತಾವು ಸಭಾಮಂದಿರದಿಂದ ಬಹಿಷ್ಕಾರ ಆಗಬಾರದೆಂದು ಅವರು ತಮ್ಮ ನಂಬಿಕೆಯನ್ನು ಬಹಿರಂಗವಾಗಿ ಅರಿಕೆ ಮಾಡಲಿಲ್ಲ.


ಮನುಷ್ಯಪುತ್ರನಾದ ನನ್ನ ನಿಮಿತ್ತ ಜನರು ನಿಮ್ಮನ್ನು ದ್ವೇಷಮಾಡಿ, ನಿಮ್ಮನ್ನು ಬಹಿಷ್ಕರಿಸಿ, ನಿಂದಿಸಿ, ನಿಮ್ಮ ಹೆಸರನ್ನು ಕೆಟ್ಟದೆಂದು ತಿರಸ್ಕರಿಸಿದರೆ ನೀವು ಧನ್ಯರು.


ಯೆಹೋವ ದೇವರ ಮಾತಿಗೆ ಭಯಪಡುವವರೇ, ಆತನ ಮಾತನ್ನು ಕೇಳಿರಿ! “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಂಬಂಧಿಗಳು, ‘ಯೆಹೋವ ದೇವರು ಮಹಿಮೆಪಡಲಿ, ನಿಮಗಾಗುವ ಉತ್ಸಾಹವನ್ನು ನೋಡೋಣ’ ಎಂದು ಹೇಳಿದ್ದಾರಲ್ಲಾ. ಅವರಿಗಂತೂ ಅವಮಾನವಾಗುವುದು.


ಅಪಕೀರ್ತಿ ಹೊಂದಿ ಸಮಾಧಾನವಾಗುತ್ತೇವೆ. ನಾವು ಈಗಿನ ವರೆಗೂ ಭೂಮಿಯ ಕಸವೋ ವಿಶ್ವದ ಹೊಲಸೋ ಎಂಬಂತೆ ಆಗಿದ್ದೇವೆ.


“ನೋಡಿರಿ, ಪರಲೋಕ ತೆರೆದಿರುವುದನ್ನೂ ಮನುಷ್ಯಪುತ್ರ ಆಗಿರುವ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ಕಾಣುತ್ತಿದ್ದೇನೆ,” ಎಂದನು.


“ಆಗ ಜನರು ನಿಮ್ಮನ್ನು ಹಿಂಸೆಪಡಿಸುವುದಕ್ಕಾಗಿ ಒಪ್ಪಿಸಿ ನಿಮ್ಮನ್ನು ಕೊಲ್ಲುವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗದವರು ನಿಮ್ಮನ್ನು ದ್ವೇಷಮಾಡುವರು.


ಅದಕ್ಕೆ ಅವರು, “ನೀನು ಪಾಪದಲ್ಲಿಯೇ ಪೂರ್ಣವಾಗಿ ಹುಟ್ಟಿದವನು. ನೀನು ನಮಗೆ ಬೋಧಿಸುತ್ತೀಯಾ?” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.


‘ನಿನ್ನಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ. ಏಕೆಂದರೆ ನಿನಗಿಂತ ಪರಿಶುದ್ಧನಾಗಿದ್ದೇನೆ,’ ಎಂದು ಹೇಳುವರು. ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ, ದಿನವೆಲ್ಲಾ ಉರಿಯುವ ಬೆಂಕಿಯಾಗಿಯೂ ಇದ್ದಾರೆ.


ಅವರು ಇದನ್ನು ಕೇಳಿದಾಗ ಬಹುಕೋಪಗೊಂಡು ಅವರನ್ನು ಕೊಲ್ಲಬೇಕೆಂದಿದ್ದರು.


ಯೇಸು ಆಕೆಗೆ, “ಅಮ್ಮಾ, ನನ್ನನ್ನು ನಂಬು, ಈ ಬೆಟ್ಟದಲ್ಲಿಯಾಗಲಿ ಯೆರೂಸಲೇಮಿನಲ್ಲಾಗಲಿ ನೀವು ತಂದೆಯನ್ನು ಆರಾಧಿಸದೆ ಇರುವ ಕಾಲ ಬರುತ್ತದೆ.


ಆಸಕ್ತಿಯನ್ನು ನೋಡಿದರೆ, ನಾನು ಸಭೆಯ ಹಿಂಸಕನು; ಮೋಶೆಯ ನಿಯಮದಲ್ಲಿರುವ ನೀತಿಯ ಅನುಸಾರವಾಗಿ ನಾನು ನಿರ್ದೋಷಿ.


ಜನರಲ್ಲಿ ಬುದ್ಧಿವಂತರಾದವರು ಅನೇಕರಿಗೆ ಬೋಧಿಸುವರು, ಆದರೂ ಖಡ್ಗದಿಂದಲೂ ಬೆಂಕಿಯಿಂದಲೂ ಸೆರೆಯಿಂದಲೂ ಕೊಳ್ಳೆಯಿಂದಲೂ ಕೆಲಕಾಲ ಸಿಕ್ಕಿ ಬೀಳುವರು.


ಆದರೆ ನಿಜವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ. ಏಕೆಂದರೆ ತಂದೆಯು ನಿಜವಾಗಿಯೂ ಈ ರೀತಿ ಆರಾಧಿಸುವವರನ್ನೇ ಹುಡುಕುತ್ತಾರೆ.


“ಇವುಗಳನ್ನು ನಾನು ಸೂಚಕವಾಗಿ ನಿಮ್ಮೊಡನೆ ಮಾತನಾಡಿದ್ದೇನೆ. ನಾನು ಇನ್ನು ಸಾಮ್ಯಗಳಿಂದ ಮಾತನಾಡದೆ ತಂದೆಯ ವಿಷಯವಾಗಿ ನಿಮಗೆ ಸ್ಪಷ್ಟವಾಗಿ ಪ್ರಕಟಿಸುವ ಗಳಿಗೆಯು ಬರುತ್ತದೆ.


ಇಗೋ, ನಿಮ್ಮಲ್ಲಿ ಪ್ರತಿಯೊಬ್ಬನು ನಿಮ್ಮ ನಿಮ್ಮ ಮನೆಗೆ ಚದುರಿಹೋಗಿ ನನ್ನನ್ನು ಒಬ್ಬಂಟಿಗನನ್ನಾಗಿ ಬಿಡುವ ಗಳಿಗೆ ಬರುತ್ತದೆ. ಹೌದು, ಈಗಲೇ ಬಂದಿದೆ. ಆದರೂ ನಾನು ಒಬ್ಬಂಟಿಗನಲ್ಲ. ಏಕೆಂದರೆ ತಂದೆ ನನ್ನ ಸಂಗಡ ಇದ್ದಾರೆ.


ಆ ಊರಿನವರು ಯೋವಾಷನಿಗೆ, “ನಿನ್ನ ಮಗನನ್ನು ಹೊರಗೆ ತೆಗೆದುಕೊಂಡು ಬಾ, ಅವನು ಸಾಯಬೇಕು. ಏಕೆಂದರೆ ಬಾಳನ ಬಲಿಪೀಠವನ್ನು ಕೆಡವಿ, ಅದರ ಬಳಿಯಲ್ಲಿದ್ದ ಅಶೇರ ಸ್ತಂಭವನ್ನು ಕಡಿದುಹಾಕಿದನು,” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು