Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 14:10 - ಕನ್ನಡ ಸಮಕಾಲಿಕ ಅನುವಾದ

10 ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾರೆ ಎಂದು ನೀನು ನಂಬುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಮಾತನಾಡುವುದಿಲ್ಲ; ನನ್ನಲ್ಲಿರುವ ತಂದೆಯೇ ತಮ್ಮ ಕ್ರಿಯೆಗಳನ್ನು ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾನೆ ಎಂಬುದನ್ನು ನೀನು ನಂಬುವುದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವುದಿಲ್ಲ; ತಂದೆಯು ನನ್ನಲ್ಲಿ ಇದ್ದುಕೊಂಡು ತನ್ನ ಕಾರ್ಯಗಳನ್ನು ಮಾಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಾನು ತಂದೆಯಲ್ಲಿದ್ದೇನೆ, ತಂದೆಯು ನನ್ನಲ್ಲಿ ಇದ್ದಾನೆ ಎಂದು ನೀನು ನಂಬುವದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವದಿಲ್ಲ; ತಂದೆಯು ನನ್ನಲ್ಲಿ ಇದ್ದುಕೊಂಡು ತನ್ನ ಕ್ರಿಯೆಗಳನ್ನು ನಡಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂದು ನೀವು ನಿಜವಾಗಿಯೂ ನಂಬುವಿರಾ? ನಾನು ನಿಮಗೆ ಹೇಳುವ ಸಂಗತಿಗಳು ನನ್ನಿಂದಲೇ ಬಂದಂಥವುಗಳಲ್ಲ. ತಂದೆಯು ನನ್ನಲ್ಲಿ ವಾಸವಾಗಿದ್ದಾನೆ ಮತ್ತು ಆತನು ತನ್ನ ಕಾರ್ಯವನ್ನು ಮಾಡುತ್ತಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ಫಿಲಿಪಾ, ಮಿಯಾ ಬಾಬಾಚ್ಯಾ ಭುತ್ತುರ್ ಅನಿ ಬಾಬಾ ಮಾಜ್ಯಾ ಭುತ್ತುರ್ ಹಾಯ್ ಮನುನ್ ತುಕಾ ವಿಶ್ವಾಸ್ ನಾ ಕಾಯ್? ಮಟ್ಲ್ಯಾನ್. ಮಾನಾ ಜೆಜುನ್ ಶಿಸಾಕ್ನಿ, ಮಿಯಾ ತುಮ್ಚ್ಯಾಕ್ಡೆ ಬೊಲಲ್ಲ್ಯಾ ಗೊಸ್ಟಿಯಾ ಮಾಜ್ಯಾ ಭುತ್ತುರ್‍ನಾಚ್ ಯೆವ್ಕನಾತ್, ಮಾಜ್ಯಾ ಭುತ್ತುರ್ ಹೊತ್ತೊ ಮಾಜೊ ಬಾಬಾ ಸ್ವತಾ ಅಪ್ನಾಚೆ ಕಾಮ್ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 14:10
26 ತಿಳಿವುಗಳ ಹೋಲಿಕೆ  

ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವುದನ್ನು ಕಂಡು ಪುತ್ರನು ಮಾಡುತ್ತಾನೆ ಹೊರತು ಪುತ್ರನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು. ಏಕೆಂದರೆ ತಂದೆ ಯಾವುದನ್ನೆಲ್ಲಾ ಮಾಡುವರೋ ಹಾಗೆಯೇ ಪುತ್ರನೂ ಮಾಡುವನು.


ನಾನು ಮಾಡಿದ್ದರಿಂದ ನೀವು ನನ್ನನ್ನು ನಂಬದಿದ್ದರೂ ಈ ಕಾರ್ಯಗಳನ್ನಾದರೂ ನಂಬಿರಿ. ಆಗ ತಂದೆಯು ನನ್ನಲ್ಲಿಯೂ ನಾನು ತಂದೆಯಲ್ಲಿಯೂ ಇರುವುದು ನಿಮಗೆ ಗೊತ್ತಾಗುವುದು ಹಾಗೂ ಮನದಟ್ಟಾಗುವುದು,” ಎಂದರು.


ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮರಿಂದಲೂ ಶಕ್ತಿಯಿಂದಲೂ ಅಭಿಷೇಕಿಸಿದ್ದರು. ಮಾತ್ರವಲ್ಲದೆ, ದೇವರು ಯೇಸುವಿನೊಡನೆ ಇದ್ದುದರಿಂದ, ಅವರು ಬೇರೆ ಬೇರೆ ಕಡೆಗಳಿಗೆ ಹೋಗಿ ಒಳಿತನ್ನು ಮಾಡಿ, ಪಿಶಾಚನಿಂದ ಪೀಡಿತರಾದವರನ್ನು ಗುಣಪಡಿಸುತ್ತಾ ಸಂಚರಿಸಿದ್ದನ್ನು ನೀವು ಬಲ್ಲಿರಿ.


ಏಕೆಂದರೆ ನನ್ನಷ್ಟಕ್ಕೆ ನಾನೇ ಮಾತನಾಡಲಿಲ್ಲ. ಆದರೆ ನಾನು ಏನು ಹೇಳಬೇಕು ಮತ್ತು ನಾನು ಏನು ಮಾತನಾಡಬೇಕು ಎಂದು ನನ್ನನ್ನು ಕಳುಹಿಸಿದ ತಂದೆಯೇ ನನಗೆ ಆಜ್ಞೆ ಕೊಟ್ಟಿದ್ದಾರೆ.


ನಾನು ಮತ್ತು ನನ್ನ ತಂದೆ ಒಂದೇ ಆಗಿದ್ದೇವೆ,” ಎಂದು ಉತ್ತರಕೊಟ್ಟರು.


ಯೇಸು ಅವರಿಗೆ, “ಮನುಷ್ಯಪುತ್ರನಾದ ನನ್ನನ್ನು ನೀವು ಮೇಲಕ್ಕೇರಿಸಿದಾಗ ‘ನಾನೇ ಆತನು’ ಎಂದು ನಿಮಗೆ ತಿಳಿಯುವುದು. ನನ್ನಷ್ಟಕ್ಕೆ ನಾನೇ ಏನೂ ಮಾಡದೆ ನನ್ನ ತಂದೆಯು ನನಗೆ ಬೋಧಿಸಿದಂತೆ ನಾನು ಈ ಸಂಗತಿಗಳನ್ನು ಮಾತನಾಡುತ್ತೇನೆ ಎಂದೂ ನೀವು ತಿಳಿದುಕೊಳ್ಳುವಿರಿ.


ಏಕೆಂದರೆ ದೇವರ ಸರ್ವಸಂಪೂರ್ಣತೆಯು ಮಾನವ ದೇಹವಾಗಿ ಕ್ರಿಸ್ತ ಯೇಸುವಿನಲ್ಲಿಯೇ ವಾಸಮಾಡಿದೆ.


ಏಕೆಂದರೆ ನೀವು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ, ಇವರು ಅಂಗೀಕರಿಸಿದ್ದಾರೆ ಮತ್ತು ನಾನು ನಿಮ್ಮ ಬಳಿಯಿಂದ ಬಂದವನೆಂದು ಇವರು ನಿಶ್ಚಯವಾಗಿ ತಿಳಿದು, ನೀವೇ ನನ್ನನ್ನು ಕಳುಹಿಸಿದ್ದೀರಿ, ಎಂದು ನಂಬಿದ್ದಾರೆ.


ಯೇಸು ಅವರಿಗೆ, “ನನ್ನ ತಂದೆ ಯಾವಾಗಲೂ ಕೆಲಸ ಮಾಡುತ್ತಾರೆ. ನಾನೂ ಕೆಲಸ ಮಾಡುತ್ತೇನೆ,” ಎಂದರು.


ಇದಲ್ಲದೆ ಸಾಕ್ಷಿಕೊಡುವವರು ಮೂವರಿದ್ದಾರೆ.


ಹೇಗೆಂದರೆ, ದೇವರು ಮನುಷ್ಯರ ಪಾಪಗಳನ್ನು ಅವರಿಗೆ ವಿರೋಧವಾಗಿ ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಂದಿಗೆ ಸಮಾಧಾನಪಡಿಸುತ್ತಿದ್ದಾರೆ. ಈ ಸಮಾಧಾನದ ಸಂದೇಶವನ್ನೇ ದೇವರು ನಮಗೊಪ್ಪಿಸಿ ಕೊಟ್ಟಿದ್ದಾರೆ.


ನಾನು ತಂದೆಯ ಬಳಿಯಲ್ಲಿ ಕಂಡದ್ದನ್ನೇ ಮಾತನಾಡುತ್ತೇನೆ. ನೀವಾದರೋ ನಿಮ್ಮ ತಂದೆಯಿಂದ ಕೇಳಿದ್ದನ್ನು ಮಾಡುತ್ತೀರಿ,” ಎಂದರು.


ಏಕೆಂದರೆ ದೇವರು ಕ್ರಿಸ್ತ ಯೇಸುವಿನಲ್ಲಿ ಸರ್ವಸಂಪೂರ್ಣತೆಯು ವಾಸವಾಗಿರಲು ಬಯಸಿದರು.


ನಾನು ನನ್ನ ತಂದೆಯಲ್ಲಿಯೂ ನೀವು ನನ್ನಲ್ಲಿಯೂ ನಾನು ನಿಮ್ಮಲ್ಲಿಯೂ ಇರುವುದನ್ನು ನೀವು ಆ ದಿನದಲ್ಲಿ ತಿಳಿದುಕೊಳ್ಳುವಿರಿ.


ಅದಕ್ಕೆ ಯೇಸು ಅವರಿಗೆ, “ನನ್ನ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದ ತಂದೆಯದೇ ಆಗಿದೆ.


ಆದರೆ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದ ನನ್ನನ್ನು ಈಗ ಕೊಲ್ಲಲು ಪ್ರಯತ್ನಿಸುತ್ತೀರಿ. ಇಂತಹ ಕ್ರಿಯೆಗಳನ್ನು ಅಬ್ರಹಾಮನು ಮಾಡಲಿಲ್ಲ.


ಜೀವಿಸುವ ಪ್ರತಿಯೊಬ್ಬರೂ ನನ್ನಲ್ಲಿ ನಂಬಿಕೆಯಿಟ್ಟರೆ, ಅವರು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯಾ?” ಎಂದು ಕೇಳಿದ್ದಕ್ಕೆ,


ಇವನು ಒಂದು ರಾತ್ರಿ ಯೇಸುವಿನ ಬಳಿಗೆ ಬಂದು, “ಗುರುವೇ, ನೀವು ದೇವರ ಬಳಿಯಿಂದ ಬಂದ ಬೋಧಕರೆಂದು ನಾವು ಬಲ್ಲೆವು. ಏಕೆಂದರೆ ದೇವರು ಒಬ್ಬನ ಸಂಗಡ ಇಲ್ಲದಿದ್ದರೆ ನೀವು ಮಾಡುವ ಸೂಚಕಕಾರ್ಯಗಳನ್ನು ಯಾವ ಮನುಷ್ಯನೂ ಮಾಡಲಾರನು,” ಎಂದನು.


ನಾನು ತಂದೆಯಲ್ಲಿಯೂ ತಂದೆಯು ನನ್ನಲ್ಲಿಯೂ ಇದ್ದಾರೆಂದು ಹೇಳುವಾಗ ನೀವು ನನ್ನನ್ನು ನಂಬಿರಿ, ಇಲ್ಲದಿದ್ದರೆ ಆ ಕ್ರಿಯೆಗಳನ್ನಾದರೂ ನೀವು ನಂಬಿರಿ.


ನನ್ನನ್ನು ಪ್ರೀತಿಸದವನು ನನ್ನ ವಾಕ್ಯಗಳನ್ನು ಕೈಗೊಳ್ಳುವುದಿಲ್ಲ. ನೀವು ಕೇಳಿದ ವಾಕ್ಯವು ನನ್ನ ವಾಕ್ಯಗಳಲ್ಲ. ಅವು ನನ್ನನ್ನು ಕಳುಹಿಸಿದ ನನ್ನ ತಂದೆಯ ವಾಕ್ಯಗಳಾಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು