Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಹಾನ 12:48 - ಕನ್ನಡ ಸಮಕಾಲಿಕ ಅನುವಾದ

48 ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಸ್ವೀಕರಿಸದವರಿಗೆ ತೀರ್ಪು ಮಾಡುವಂಥದ್ದು ಒಂದು ಇದೆ. ಅದು ನಾನು ಮಾತನಾಡಿದ ವಾಕ್ಯವೇ, ಅದೇ ಕಡೇ ದಿನದಲ್ಲಿ ಅವರಿಗೆ ತೀರ್ಪು ಮಾಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

48 ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಸ್ವೀಕರಿಸದೆ ಇರುವವನಿಗೆ ತೀರ್ಪುಮಾಡುವಂಥದ್ದು ಒಂದು ಇದೆ. ಅದು ನಾನು ಆಡುವ ಮಾತೇ, ಕಡೆಯ ದಿನದಲ್ಲಿ ಅದೇ ಅವನಿಗೆ ತೀರ್ಪುಮಾಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

48 ನನ್ನನ್ನು ನಿರಾಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪುಕೊಡುವಂಥದ್ದು ಒಂದು ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

48 ನನ್ನನ್ನು ಲಕ್ಷ್ಯಮಾಡದೆ ನನ್ನ ಮಾತುಗಳನ್ನು ಅಂಗೀಕರಿಸದೆ ಇರುವವನಿಗೆ ತೀರ್ಪುಮಾಡುವಂಥದು ಒಂದು ಇದೆ, ಅದು ಯಾವದಂದರೆ, ನಾನು ಆಡಿದ ಮಾತು; ಅದೇ ಅವನಿಗೆ ಕಡೇ ದಿನದಲ್ಲಿ ತೀರ್ಪುಮಾಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

48 ನನ್ನಲ್ಲಿ ನಂಬಿಕೆ ಇಡದಿರುವವನಿಗೆ ಮತ್ತು ನಾನು ಹೇಳುವುದನ್ನು ತಿರಸ್ಕರಿಸುವವನಿಗೆ ತೀರ್ಪುಮಾಡುವಂಥದ್ದು ನಾನು ಆಡಿದ ಮಾತುಗಳೇ. ಅಂತಿಮ ದಿನದಂದು ಅವೇ ಅವನಿಗೆ ತೀರ್ಪುಮಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

48 ಜೊ ಕೊನ್ ಮಾಕಾ ಇನ್ಕಾರ್ ಕರುನ್, ಮಾಜ್ಯಾ ತೊಂಡಾತ್ನಾ ಯೆಲ್ಲಿ ಶಬ್ದಾ ಮಾನುನ್ ಘೆಯ್ನಾ ತ್ಯಾಚ್ ಮಾಜ್ಯಾ ಗೊಸ್ಟಿಯಾ ತೆಂಚಿ ನಿತ್ ಕರ್‍ತಲೊ ಎಕ್ಲೊ ಹಾಯ್, ಆಕ್ರಿಚ್ಯಾ ದಿಸಿ ಮಿಯಾ ಬೊಲಲ್ಲ್ಯಾ ಗೊಸ್ಟಿಯಾಚ್ ತೆಚಿ ನಿತ್ ಹೊಯ್ ಸಾರ್ಕಿ ಕರ್‍ತಾತ್!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಹಾನ 12:48
36 ತಿಳಿವುಗಳ ಹೋಲಿಕೆ  

“ನಿಮ್ಮ ಮಾತನ್ನು ಕೇಳುವವರು ನನ್ನ ಮಾತನ್ನು ಕೇಳುತ್ತಾರೆ; ನಿಮ್ಮನ್ನು ತಿರಸ್ಕರಿಸುವವರು ನನ್ನನ್ನು ತಿರಸ್ಕರಿಸುತ್ತಾರೆ; ಆದರೆ ನನ್ನನ್ನು ತಿರಸ್ಕರಿಸುವವರು ನನ್ನನ್ನು ಕಳುಹಿಸಿದಾತನನ್ನೇ ತಿರಸ್ಕರಿಸುತ್ತಾರೆ,” ಎಂದರು.


ನಾನು ಸಾರುವ ಸುವಾರ್ತೆಯ ಪ್ರಕಾರ ದೇವರು ಕ್ರಿಸ್ತ ಯೇಸುವಿನ ಮೂಲಕವಾಗಿ ಮನುಷ್ಯರ ಗುಟ್ಟುಗಳನ್ನು ವಿಚಾರಿಸುವ ದಿನದಲ್ಲಿ ಇವೆಲ್ಲಾ ಸಂಭವಿಸುವುದು.


ಅವರು ದೇವರನ್ನು ಅರಿಯದವರಿಗೂ ನಮಗೆ ಕರ್ತ ಆಗಿರುವ ಯೇಸುವಿನ ಸುವಾರ್ತೆಗೆ ಅವಿಧೇಯರಾದವರಿಗೂ ಪ್ರತೀಕಾರ ಮಾಡುವರು.


ಮಾರ್ಥಳು ಯೇಸುವಿಗೆ, “ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನು ಪುನಃ ಎದ್ದು ಬರುವನೆಂದು ನಾನು ಬಲ್ಲೆನು,” ಎಂದು ಹೇಳಿದಳು.


ಮಾತನಾಡುವ ದೇವರನ್ನು ನೀವು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಭೂಮಿಯ ಮೇಲೆ ಎಚ್ಚರಿಸಿದವರನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ, ಪರಲೋಕದಿಂದ ಎಚ್ಚರಿಸುವ ದೇವರಿಂದ ನಾವು ತೊಲಗಿ ಹೋದರೆ, ಹೇಗೆ ತಾನೆ ದಂಡನೆಯಿಂದ ನಾವು ತಪ್ಪಿಸಿಕೊಳ್ಳಬಲ್ಲೆವು?


ಆತನು ತಿರಸ್ಕೃತನೂ ಮಾನವಕುಲದಿಂದ ನಿರಾಕರಿಸಲಾದವನೂ, ದುಃಖಿತ ಮನುಷ್ಯನೂ, ನೋವನ್ನು ಅನುಭವಿಸಿದವನೂ ಆಗಿದ್ದನು. ನಾವು ನಮ್ಮ ಮುಖಗಳನ್ನು ಆತನಿಂದ ಮರೆಮಾಡಿಕೊಂಡೆವು. ಆತನು ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಾವು ಆತನನ್ನು ಅತ್ಯಲ್ಪವಾಗಿ ಎಣಿಸಿದೆವು.


ಇಂತಹ ಮಹಾ ರಕ್ಷಣೆಯನ್ನು ನಾವು ಅಲಕ್ಷ್ಯ ಮಾಡಿದರೆ ತಪ್ಪಿಸಿಕೊಳ್ಳುವುದು ಹೇಗೆ? ಈ ರಕ್ಷಣೆಯನ್ನು ನಮಗೆ ಕರ್ತ ಆಗಿರುವ ಯೇಸುವೇ ಮೊದಲು ತಿಳಿಸಿದ್ದಾರೆ. ಅವರಿಂದ ಕೇಳಿಸಿಕೊಂಡವರೂ ನಮಗೆ ಆ ರಕ್ಷಣೆಯನ್ನು ದೃಢಪಡಿಸಿದ್ದಾರೆ.


“ತಂದೆಯ ಮುಂದೆ ನಿಮ್ಮ ಮೇಲೆ ನಾನು ದೂರು ಹೇಳುತ್ತಿರುವೆನೆಂದು ನೀವು ನೆನಸಬೇಡಿರಿ. ನಿಮ್ಮ ಮೇಲೆ ದೂರು ಹೇಳುವವನು ಒಬ್ಬನಿದ್ದಾನೆ; ನೀವು ನಿರೀಕ್ಷೆಯಿಟ್ಟಿರುವ ಮೋಶೆಯೇ.


ಯೇಸು ಅವರಿಗೆ, “ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು. ಇದು ಕರ್ತನಿಂದಲೇ ಆಯಿತು. ಇದು ನಮ್ಮ ದೃಷ್ಟಿಯಲ್ಲಿ ಆಶ್ಚರ್ಯವಾಗಿ ತೋರುತ್ತದೆ,’ ಎಂಬುದನ್ನು ನೀವು ಪವಿತ್ರ ವೇದದಲ್ಲಿ ಎಂದೂ ಓದಲಿಲ್ಲವೇ?


ಆದರೆ ನಿಮ್ಮ ಎಲ್ಲಾ ಕೇಡುಗಳಿಂದಲೂ ಇಕ್ಕಟ್ಟುಗಳಿಂದಲೂ ನಿಮ್ಮನ್ನು ತಪ್ಪಿಸಿ ರಕ್ಷಿಸಿದ ನಿಮ್ಮ ದೇವರನ್ನು ನೀವು ಈ ದಿವಸದಲ್ಲಿ ತಿರಸ್ಕರಿಸಿ ಅವರಿಗೆ, ‘ನಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸು,’ ಎಂದು ಹೇಳಿದಿರಿ. ಆದ್ದರಿಂದ ಈಗ ಯೆಹೋವ ದೇವರ ಮುಂದೆ ನಿಮ್ಮ ಗೋತ್ರಗಳ ಪ್ರಕಾರವಾಗಿಯೂ, ನಿಮ್ಮ ಕುಲಗಳ ಪ್ರಕಾರವಾಗಿಯೂ ಬನ್ನಿರಿ,” ಎಂದನು.


ನಾವು ಪ್ರಚಾರ ಮಾಡುವ ಸುವಾರ್ತೆಯು ಮುಸುಕು ಹಾಕಿರುವುದಾದರೆ, ಅದು ನಾಶದ ಮಾರ್ಗದಲ್ಲಿರುವವರಿಗೆ ಮಾತ್ರ.


ಆಗ ಯೇಸು ಅವರನ್ನು ದಿಟ್ಟಿಸಿ ನೋಡಿ, “ಹಾಗಾದರೆ, “ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು,’ ಎಂದು ಪವಿತ್ರ ವೇದದಲ್ಲಿ ಬರೆದಿರುವುದರ ಅರ್ಥ ಏನು?


ಆದರೆ ನಾನು ಮೊದಲು ಅನೇಕ ಕಷ್ಟಗಳನ್ನು ಅನುಭವಿಸಿ ಈ ಸಂತತಿಯವರಿಂದ ತಿರಸ್ಕಾರ ಹೊಂದುವುದು ಅಗತ್ಯವಾಗಿದೆ.


ಯಾರಾದರೂ ನನ್ನ ಮತ್ತು ನನ್ನ ವಾಕ್ಯಗಳ ವಿಷಯದಲ್ಲಿ ನಾಚಿಕೊಳ್ಳುವುದಾದರೆ, ಮನುಷ್ಯಪುತ್ರನಾದ ನಾನು ಸಹ ನನ್ನ ತಂದೆಯ ಮಹಿಮೆಯೊಡನೆಯೂ ಪರಿಶುದ್ಧ ದೂತರೊಡನೆಯೂ ಬರುವಾಗ, ಅವರ ವಿಷಯದಲ್ಲಿ ನಾಚಿಕೊಳ್ಳುವೆನು.


ಅನಂತರ ಯೇಸು, “ಮನುಷ್ಯಪುತ್ರನಾದ ನಾನು ಅನೇಕ ಕಷ್ಟಗಳನ್ನು ಅನುಭವಿಸಿ ಜನನಾಯಕರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ, ಕೊಲೆಗೆ ಗುರಿಯಾಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಏಳುವುದು ಅಗತ್ಯವಾಗಿದೆ,” ಎಂದು ಎಚ್ಚರಿಸಿದರು.


ಆದರೆ ಫರಿಸಾಯರೂ ಮೋಶೆಯ ನಿಯಮ ಪಂಡಿತರೂ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳದೆ ಹೋದದ್ದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು.


ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.


ಈ ಪವಿತ್ರ ವಾಕ್ಯವನ್ನು ನೀವು ಓದಲಿಲ್ಲವೋ: “ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.


“ಮನುಷ್ಯಪುತ್ರನಾದ ನಾನು ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ, ನನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವೆನು.


ಆಗ ಯೆಹೋವ ದೇವರು ಸಮುಯೇಲನಿಗೆ, “ಜನರು ನಿನಗೆ ಹೇಳಿದ್ದೆಲ್ಲದರಲ್ಲಿ ಅವರ ಮಾತು ಕೇಳು. ಏಕೆಂದರೆ ಅವರು ನಿನ್ನನ್ನು ತಿರಸ್ಕಾರ ಮಾಡಿಲ್ಲ. ನಾನು ಅವರನ್ನು ಆಳದ ಹಾಗೆ ನನ್ನನ್ನೇ ತಿರಸ್ಕಾರಮಾಡಿದ್ದಾರೆ.


ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ತನ್ನ ಜನರೊಳಗಿಂದ ಸಂಪೂರ್ಣವಾಗಿ ತೆಗೆಯಲಾಗುವುದು.’


ಮನುಷ್ಯಪುತ್ರನಾದ ನಾನು ಅನೇಕ ಬಾಧೆಗಳನ್ನು ಅನುಭವಿಸಿ, ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ತಿರಸ್ಕೃತನಾಗಿ ಕೊಲೆಗೆ ಗುರಿಯಾಗಿ ಮೂರು ದಿವಸಗಳಾದ ಮೇಲೆ ಜೀವಂತವಾಗಿ ಎದ್ದು ಬರುವುದು ಅವಶ್ಯ ಎಂದು ಅವರಿಗೆ ಬೋಧಿಸಲಾರಂಭಿಸಿದರು.


ನ್ಯಾಯತೀರ್ಪಿನ ದಿನದಲ್ಲಿ ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಗತಿಯು ಆ ಪಟ್ಟಣಕ್ಕಿಂತ ಹೆಚ್ಚು ತಾಳುವಂಥದ್ದಾಗಿರುವುದು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.


ನನ್ನನ್ನು ಕಳುಹಿಸಿಕೊಟ್ಟ ತಂದೆಯ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ನಾನು ಯಾರನ್ನೂ ಕಳೆದುಕೊಳ್ಳದೆ ಕಡೆಯ ದಿನದಲ್ಲಿ ಅವರನ್ನು ಎಬ್ಬಿಸುವುದೇ.


ದೇವರಿಗೆ ಸೇರಿದವನು ದೇವರ ವಾಕ್ಯಕ್ಕೆ ಕಿವಿಗೊಡುತ್ತಾನೆ. ನೀವು ದೇವರಿಗೆ ಸೇರಿದವರಲ್ಲ. ಆದ್ದರಿಂದ ನೀವು ಕಿವಿಗೊಡುವುದಿಲ್ಲ,” ಎಂದು ಹೇಳಿದರು.


ಏಕೆಂದರೆ ದೇವರು ನೇಮಿಸಿದ ಒಬ್ಬರ ಮುಖಾಂತರ ಇಡೀ ಜಗತ್ತಿಗೆ ನೀತಿಗನುಸಾರವಾಗಿ ನ್ಯಾಯತೀರ್ಪು ಮಾಡುವ ಒಂದು ದಿನವನ್ನು ನೇಮಕ ಮಾಡಿದ್ದಾರೆ. ಇದನ್ನು ಎಲ್ಲರಿಗೂ ಖಚಿತ ಪಡಿಸಲೆಂದೇ ಆ ಒಬ್ಬರನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾರೆ.”


ಯಾಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಕ್ರಿಯಾತ್ಮಕವಾದದ್ದು, ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು, ಪ್ರಾಣ ಮತ್ತು ಆತ್ಮಗಳ ಕೀಲು ಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ಛೇದಿಸುವಂಥದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸಿ ತೀರ್ಪು ನೀಡುವಂಥದ್ದು ಆಗಿದೆ.


ಸಭೆಯಾಗಿ ಸೇರುವುದನ್ನು ಕೆಲವರಿಗೆ ರೂಢಿಯಾಗಿ ಬಿಟ್ಟಂತೆ, ನಾವು ಹಾಗೆ ಮಾಡದಿರೋಣ. ಕರ್ತ ಯೇಸುವಿನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ತಿಳಿದಿರುವುದರಿಂದ ಒಬ್ಬರನ್ನೊಬ್ಬರು ಪ್ರೋತ್ಸಾಹಗೊಳಿಸುವುದನ್ನು ಇನ್ನೂ ಹೆಚ್ಚಾಗಿ ಮಾಡಿರಿ.


ಅಂತ್ಯಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ದೇವರು ನಿಮ್ಮ ನಂಬಿಕೆಯ ಮುಖಾಂತರ ನಿಮ್ಮನ್ನು ತಮ್ಮ ಶಕ್ತಿಯಿಂದ ಕಾಯುತ್ತಾರೆ.


ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು,


ಆದರೆ ಈಗಿನ ಆಕಾಶವೂ ಭೂಮಿಯೂ ಅದೇ ವಾಕ್ಯದಿಂದ ಬೆಂಕಿಗಾಗಿ ಕಾದಿರಿಸಲಾಗಿವೆ. ಅವು ನ್ಯಾಯತೀರ್ಪಿಗಾಗಿ ಮತ್ತು ಭಕ್ತಿಹೀನರ ನಾಶನಕ್ಕಾಗಿ ಇಡಲಾಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು