ಯೋಹಾನ 12:40 - ಕನ್ನಡ ಸಮಕಾಲಿಕ ಅನುವಾದ40 “ಅವರು ಕಣ್ಣಿನಿಂದ ಕಾಣದೆ, ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ದೇವರು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿಣ ಮಾಡಿದರು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201940 “ಅವರು ಕಣ್ಣಿನಿಂದ ಕಾಣದೆ, ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಹೇಗೂ ಸ್ವಸ್ಥತೆಯನ್ನು ಹೊಂದದೆ ಇರುವಂತೆ, ಆತನು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿಣಮಾಡಿದನು” ಎಂಬುದೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)40 “ತಮ್ಮ ಕಣ್ಣುಗಳಿಂದ ಅವರು ಕಾಣದಂತೆಯೂ ತಮ್ಮ ಮನದಿಂದ ಗ್ರಹಿಸದಂತೆಯೂ ಹಾಗೂ ಮನತಿರುಗಿ ನನ್ನಿಂದ ಗುಣಹೊಂದದಂತೆಯೂ ಅವರ ಕಣ್ಣುಗಳನ್ನು ಕುರುಡಾಗಿಸಿರುವರು; ಅವರ ಮನಸ್ಸನ್ನು ಕಲ್ಲಾಗಿಸಿರುವರು ದೇವರು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)40 ಅವರು ಕಣ್ಣಿನಿಂದ ಕಾಣದೆ ಹೃದಯದಿಂದ ಗ್ರಹಿಸದೆ ತಿರುಗಿಕೊಳ್ಳದೆ ತನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ ಆತನು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿನಮಾಡಿದನು ಎಂಬದೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್40 “ತಮ್ಮ ಕಣ್ಣುಗಳಿಂದ ಕಾಣದಂತೆ ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆ ಪರಿವರ್ತನೆಗೊಂಡು ಗುಣಹೊಂದದಂತೆ ಆತನು ಅವರನ್ನು ಕುರುಡರನ್ನಾಗಿ ಮಾಡಿದ್ದಾನೆ, ಅವರ ಮನಸ್ಸುಗಳನ್ನು ಕಲ್ಲಾಗಿಸಿದ್ದಾನೆ.” ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್40 “ದೆವಾನ್ ತುಮ್ಚೆ ಡೊಳೆ ಕುಡ್ಡೆ ಕರ್‍ಲ್ಯಾನಾಯ್ ಅನಿ ತೆಂಚಿ ಮನಾಂಚಿ ದಾರಾ ಧಾಪ್ಲ್ಯಾನಾಯ್” “ತಸೆಮನುನ್ ತೆಂಚ್ಯಾ ಡೊಳ್ಯಾಕ್ನಿ ದಿಸಿನಾ ಅನಿ ತೆಂಚ್ಯಾ ಮನಾಕ್ನಿ ಕಾಯ್ ಬಿ ಅರ್ತ್ ಹೊಯ್ನಾ ಅನಿ ಮಿಯಾ ತೆಂಕಾ ಗುನ್ ಕರುಕ್ ಮನುನ್ ತೆನಿ ಮಾಜಾಕ್ಡೆ ಪರ್ತುನ್ ಯೆಯ್ನಾತ್ ಮನುನ್ ದೆವ್ ಮನ್ತಾ.” ಮನುನ್ ಬಿ ಸಾಂಗಲ್ಲೆ ಹಾಯ್. ಅಧ್ಯಾಯವನ್ನು ನೋಡಿ |