ಯೋಹಾನ 11:38 - ಕನ್ನಡ ಸಮಕಾಲಿಕ ಅನುವಾದ38 ಯೇಸು ತಿರುಗಿ ತಮ್ಮಲ್ಲಿ ನೊಂದುಕೊಳ್ಳುತ್ತಾ ಸಮಾಧಿಗೆ ಬಂದರು. ಅದು ಗವಿಯಾಗಿತ್ತು; ಒಂದು ಕಲ್ಲು ಅದರ ಬಾಗಿಲಿಗೆ ಮುಚ್ಚಲಾಗಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201938 ಯೇಸು ತಿರುಗಿ ತನ್ನ ಮನದಲ್ಲಿ ನೊಂದುಕೊಳ್ಳುತ್ತಾ ಸಮಾಧಿಯ ಬಳಿಗೆ ಬಂದನು. ಅದು ಒಂದು ಗವಿಯಾಗಿತ್ತು, ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಿಡಲಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)38 ಯೇಸು ಸ್ವಾಮಿ ಮತ್ತೊಮ್ಮೆ ಮನಮರುಗಿ, ಸಮಾಧಿಯ ಬಳಿಗೆ ಬಂದರು. ಅದು ಒಂದು ಗವಿಯಾಗಿತ್ತು; ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)38 ಯೇಸು ತನ್ನಲ್ಲಿ ತಿರಿಗಿ ನೊಂದುಕೊಳ್ಳುತ್ತಾ ಸಮಾಧಿಯ ಬಳಿಗೆ ಬಂದನು. ಅದು ಗವಿಯಾಗಿತ್ತು, ಅದರ ಬಾಯಿಗೆ ಒಂದು ಕಲ್ಲು ಆನಿಸಿತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್38 ಯೇಸು ತನ್ನ ಹೃದಯದಲ್ಲಿ ಮತ್ತೆ ಬಹಳವಾಗಿ ದುಃಖಗೊಂಡು, ಲಾಜರನಿದ್ದ ಸಮಾಧಿಯ ಬಳಿಗೆ ಬಂದನು. ಆ ಸಮಾಧಿಯು ಒಂದು ಗವಿಯಾಗಿತ್ತು. ಅದರ ಬಾಯಿಗೆ ದೊಡ್ಡಕಲ್ಲನ್ನು ಮುಚ್ಚಿದ್ದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್38 ಜೆಜು ಅನಿ ಎಗ್ದಾ ಲೈ ವಾಯ್ಟ್ ಕಳ್ವಳ್ಳೊ. ಅನಿ ಲಾಜರಾಕ್ ಥವಲ್ಲ್ಯಾ ಸಮಾದಿಕ್ಡೆ ಗೆಲೊ, ತ್ಯೆಚ್ಯಾ ವಾಟೆರ್ ಗುಂಡೊ ಲಾವ್ನ್ ಧಾಪಲ್ಲೆ ಹೊತ್ತೆ. ಅಧ್ಯಾಯವನ್ನು ನೋಡಿ |