ಯೋಯೇಲ 3:18 - ಕನ್ನಡ ಸಮಕಾಲಿಕ ಅನುವಾದ18 ಆ ದಿವಸದಲ್ಲಿ ಬೆಟ್ಟಗಳು ಹೊಸ ದ್ರಾಕ್ಷಾರಸವನ್ನು ಸುರಿಯುವುವು. ಗುಡ್ಡಗಳು ಹಾಲಿನಿಂದ ಹರಿಯುವುವು. ಯೆಹೂದದ ಹಳ್ಳಗಳೆಲ್ಲಾ ನೀರಿನಿಂದ ಹರಿಯುವುವು. ಯೆಹೋವ ದೇವರ ಆಲಯದೊಳಗಿಂದ ಬುಗ್ಗೆ ಹೊರಟು, ಶಿಟ್ಟೀಮಿನ ಕಣಿವೆಗೆ ಜಲ ಕೊಡುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ಆ ದಿನದಲ್ಲಿ, ಬೆಟ್ಟಗಳಿಂದ ದ್ರಾಕ್ಷಾರಸವು ಸುರಿಯುವುದು, ಗುಡ್ಡಗಳಿಂದ ಹಾಲು ಹರಿಯುವುದು, ಯೆಹೂದದ ಹಳ್ಳಗಳಲ್ಲೆಲ್ಲಾ ನೀರು ತುಂಬಿರುವುದು, ಯೆಹೋವನ ಆಲಯದೊಳಗೆ ಬುಗ್ಗೆಯು ಉಕ್ಕಿ ಬಂದು, ಶಿಟ್ಟೀಮಿನ ಹಳ್ಳವನ್ನು ತಂಪುಮಾಡುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)18 ಆ ದಿನಗಳಲ್ಲಿ ಬೆಟ್ಟಗುಡ್ಡಗಳಿಂದ ದ್ರಾಕ್ಷಾರಸ ಮತ್ತು ಹಾಲುತುಪ್ಪ ಹರಿಯುವುದು. ಜುದೇಯ ನಾಡಿನ ಹಳ್ಳಕೊಳ್ಳಗಳು ನೀರಿನಿಂದ ತುಂಬಿರುವುವು. ದೇವಾಲಯದಿಂದ ನೀರು ಚಿಮ್ಮಿಬಂದು ಆಕಾಚಿಯದ ಹಳ್ಳವನ್ನು ತಂಪಾಗಿಸುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ಆ ಕಾಲದಲ್ಲಿ ಬೆಟ್ಟಗಳಿಂದ ದ್ರಾಕ್ಷಾರಸವು ಸುರಿಯುವದು, ಗುಡ್ಡಗಳಿಂದ ಹಾಲುಹರಿಯುವದು, ಯೆಹೂದದ ತೊರೆಗಳಲ್ಲೆಲ್ಲಾ ನೀರು ತುಂಬಿರುವದು; ಯೆಹೋವನ ಆಲಯದೊಳಗಿಂದ ಬುಗ್ಗೆಯು ಉಕ್ಕಿಬಂದು ಜಾಲಿಯ ಹಳ್ಳವನ್ನು ತಂಪುಮಾಡುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ಆ ದಿವಸ ಸಿಹಿ ದ್ರಾಕ್ಷಾರಸವು ಬೆಟ್ಟಗಳಿಂದ ಹರಿಯುವುದು. ಬೆಟ್ಟಗಳಲ್ಲಿ ಹಾಲು ಹರಿಯುವುದು. ಮತ್ತು ಯೆಹೂದದ ಬತ್ತಿದ ನದಿಗಳಲ್ಲಿ ನೀರು ತುಂಬಿ ಹರಿಯುವದು. ಯೆಹೋವನ ಆಲಯದಿಂದ ಬುಗ್ಗೆಯು ಹೊರಡುವದು. ಅಕಾಸಿಯ ಕಣಿವೆಗೆ ನೀರನ್ನು ಕೊಡುವದು. ಅಧ್ಯಾಯವನ್ನು ನೋಡಿ |