ಯೋಯೇಲ 3:10 - ಕನ್ನಡ ಸಮಕಾಲಿಕ ಅನುವಾದ10 ನಿಮ್ಮ ನೇಗಿಲುಗಳ ಗುಳಗಳನ್ನು ಖಡ್ಗಗಳನ್ನಾಗಿಯೂ ನಿಮ್ಮ ಕುಡುಗೋಲುಗಳನ್ನು ಈಟಿಗಳನ್ನಾಗಿಯೂ ಬಡಿಯಿರಿ ಬಲಹೀನನು ಸಹ ನಾನು ಶಕ್ತಿವಂತನು ಎಂದು ಹೇಳಲಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ನಿಮ್ಮ ನೇಗಿಲುಗಳನ್ನು ಕುಲುಮೆಗೆ ಹಾಕಿ, ಕತ್ತಿಗಳನ್ನಾಗಿ ಮಾಡಿರಿ. ಕುಡುಗೋಲುಗಳನ್ನು ಭರ್ಜಿಗಳನ್ನಾಗಿ ಮಾರ್ಪಡಿಸಿರಿ. ಬಲಹೀನನು, “ನಾನು ಶೂರನು” ಎಂದು ಹೇಳಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ನಿಮ್ಮ ನೇಗಿಲುಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿ ಮಾಡಿರಿ; ಕುಡುಗೋಲುಗಳನ್ನು ಭರ್ಜಿಗಳನ್ನಾಗಿ ಮಾರ್ಪಡಿಸಿರಿ; ಬಲಹೀನನು ಸಹ ಬಲಾಢ್ಯನಂತೆ ಯುದ್ಧಕ್ಕೆ ನಿಂತುಕೊಳ್ಳಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ನಿಮ್ಮ ಗುಳಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನಾಗಿಯೂ ಕುಡುಗೋಲುಗಳನ್ನು ಬರ್ಜಿಗಳನ್ನಾಗಿಯೂ ಮಾಡಿರಿ; ದುರ್ಬಲನೂ ಶೂರನೆಂದುಕೊಳ್ಳಲಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ನಿಮ್ಮ ನೇಗಿಲ ಗುಳಗಳನ್ನು ಕತ್ತಿಯನ್ನಾಗಿ ಮಾಡಿರಿ. ಕುಡುಗೋಲುಗಳಿಂದ ಬರ್ಜಿಯನ್ನು ಮಾಡಿರಿ. ನಿಮ್ಮ ಬಲಹೀನನಾದ ಸೈನಿಕನು, “ನಾನು ಬಲಶಾಲಿ” ಅನ್ನಲಿ. ಅಧ್ಯಾಯವನ್ನು ನೋಡಿ |