ಯೋಯೇಲ 2:16 - ಕನ್ನಡ ಸಮಕಾಲಿಕ ಅನುವಾದ16 ಜನರನ್ನು ಕೂಡಿಸಿರಿ; ಸಭೆಯನ್ನು ಪವಿತ್ರಗೊಳಿಸಿರಿ; ಹಿರಿಯರನ್ನು ಒಟ್ಟುಗೂಡಿಸಿರಿ, ಮಕ್ಕಳನ್ನೂ ಹಸುಗೂಸುಗಳನ್ನೂ ಕೂಡಿಸಿರಿ; ಮದುಮಗನು ತನ್ನ ಕೊಠಡಿಯೊಳಗಿಂದಲೂ ಮದುಮಗಳು ತನ್ನ ಕೊಠಡಿಯೊಳಗಿಂದಲೂ ಹೊರಡಲಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಜನರನ್ನು ಒಟ್ಟುಗೂಡಿಸಿರಿ, ಪವಿತ್ರ ಸಭೆಯನ್ನು ಏರ್ಪಡಿಸಿರಿ. ಹಿರಿಯರನ್ನು ಕೂಡಿಸಿರಿ, ಮಕ್ಕಳನ್ನು ಸೇರಿಸಿರಿ, ಮೊಲೆಕೂಸುಗಳನ್ನು ಸೇರಿಸಿರಿ. ಮದುಮಗನು ತನ್ನ ಕೊಠಡಿಯಿಂದ ಹೊರಟುಬರಲಿ, ವಧುವು ತನ್ನ ಕಲ್ಯಾಣಗೃಹದಿಂದ ಹೊರಟುಬರಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ಜನರನ್ನು ಒಟ್ಟಿಗೆ ಬರಮಾಡಿರಿ, ಕೂಟವನ್ನು ಏರ್ಪಡಿಸಿರಿ, ವೃದ್ಧರನ್ನು ಕೂಡಿಸಿರಿ, ಮಕ್ಕಳನ್ನೂ ಮೊಲೆಕೂಸುಗಳನ್ನೂ ಸೇರಿಸಿರಿ; ವಧೂವರರೂ ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ವಿಶೇಷ ಕೂಟಕ್ಕಾಗಿ ಜನರನ್ನು ಒಟ್ಟಾಗಿ ಕೂಡಿಸಿರಿ. ಪ್ರಾಯಸ್ಥರನ್ನು ಕೂಡಿಸಿರಿ. ಮಕ್ಕಳನ್ನೂ ಕೂಡಿಸಿರಿ. ಮೊಲೆಹಾಲು ಕುಡಿಯುವ ಶಿಶುಗಳನ್ನೂ ಒಟ್ಟಾಗಿ ಸೇರಿಸಿರಿ. ವಧುವರರು ತಮ್ಮ ಶೋಭನದ ಕೋಣೆಯಿಂದ ಹೊರಬರಲಿ. ಅಧ್ಯಾಯವನ್ನು ನೋಡಿ |