Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 7:9 - ಕನ್ನಡ ಸಮಕಾಲಿಕ ಅನುವಾದ

9 ಮೋಡವು ಕರಗಿ ಹೋಗುವ ಹಾಗೆಯೇ, ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಮೋಡ ಹರಿದು ಮಾಯವಾಗುವಂತೆ, ಪಾತಾಳಕ್ಕೆ ಇಳಿದು ಹೋದವನು ತಿರುಗಿ ಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಮೋಡ ಕರಗಿ ಮಾಯವಾಗುವಂತೆ ಪಾತಾಳಕ್ಕಿಳಿದವನು ಬಾರನು ಮತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಮೋಡ ಹರಿದು ಮಾಯವಾಗುವಂತೆ ಪಾತಾಳಕ್ಕೆ ಇಳಿದು ಹೋದವನು ತಿರಿಗಿ ಬರುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಮೋಡವು ಕಣ್ಣಿಗೆ ಕಾಣದೆ ಇಲ್ಲವಾಗುವುದು. ಅದೇ ರೀತಿಯಲ್ಲಿ, ಸತ್ತು ಸಮಾಧಿಯಲ್ಲಿ ಹೂಳಲ್ಪಟ್ಟವನು ಹಿಂತಿರುಗಿ ಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 7:9
14 ತಿಳಿವುಗಳ ಹೋಲಿಕೆ  

ನಾವೆಲ್ಲರೂ ಸಾಯುವುದು ಅವಶ್ಯವೇ. ನಾವು ನೆಲದ ಮೇಲೆ ಚೆಲ್ಲಿ ತಿರುಗಿ ತುಂಬಿಕೊಳ್ಳಲಾಗದ ನೀರಿನ ಹಾಗೆ ಇದ್ದೇವೆ. ಆದರೆ ದೇವರು ಹಾಗೆ ಯಾರ ಪ್ರಾಣವನ್ನೂ ತೆಗೆಯ ಬಯಸುವವರಲ್ಲ. ಅದಕ್ಕೆ ಬದಲಾಗಿ ಬಹಿಷ್ಕಾರವಾದವವರನ್ನು ತಿರುಗಿ ತಮ್ಮ ಬಳಿಗೆ ಬರುವಂತೆ ದೇವರು ಸದುಪಾಯಗಳನ್ನು ಕಲ್ಪಿಸುವವರಾಗಿದ್ದಾರೆ.


ನಾನು ಹೊರಟುಹೋಗಿ ಇಲ್ಲವಾಗುವ ಮೊದಲು ನಾನು ಪುನಃ ಸಂತೋಷಿಸುವಂತೆ ನಿಮ್ಮ ಕೋಪದ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಿರಿ.”


ವಿಪತ್ತುಗಳು ನನ್ನ ಮೇಲೆ ತಿರುಗಿಬಿದ್ದು, ನನ್ನ ಮಾನಮರ್ಯಾದೆ ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿದೆ; ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಗುತ್ತಿದೆ.


“ನಾನು ಹಿಂದಿರುಗಿ ಬಾರದ ದಾರಿಯನ್ನು ಹಿಡಿಯಲು, ಇನ್ನೂ ಕೆಲವೇ ವರ್ಷಗಳು ಉಳಿದಿವೆ.


ನಾನು ಹಿಂದಿರುಗಲಾಗದ ಮಬ್ಬಾಗಿರುವ ಕತ್ತಲೆಯ ದೇಶಕ್ಕೆ ಸೇರಲಿರುವೆನು.


ಆದರೆ ಈಗ ಸತ್ತಿದೆಯಲ್ಲಾ. ನಾನು ಉಪವಾಸ ಮಾಡುವುದು ಏಕೆ? ನಾನು ಅದನ್ನು ತಿರುಗಿ ಬರಮಾಡಬಲ್ಲೆನೋ? ನಾನು ಅದರ ಬಳಿಗೆ ಹೋಗುವೆನು. ಆದರೆ ಅದು ನನ್ನ ಬಳಿಗೆ ತಿರುಗಿ ಬರುವುದಿಲ್ಲ,” ಎಂದನು.


ನಾನು ಹೀಗೆ ಯೋಚಿಸಿದೆ, “ಯೆಹೋವ ದೇವರನ್ನು ಜೀವಿತರ ದೇಶದಲ್ಲಿ ಯೆಹೋವ ದೇವರನ್ನು ಕಾಣೆನೆಂದುಕೊಂಡೆನು; ಭೂಲೋಕ ನಿವಾಸಿಗಳಲ್ಲಿ ಒಬ್ಬ ಮನುಷ್ಯನನ್ನೂ ಕಾಣೆನೆಂದುಕೊಂಡೆನು.


ಮೋಡವನ್ನು ತೇವಾಂಶದಿಂದ ಭಾರಮಾಡುತ್ತಾರೆ; ಮೇಘಮಂಡಲವು ದೇವರ ಮಿಂಚನ್ನು ಚದರಿಸುತ್ತದೆ.


ಅದು ಆಕಾಶಕ್ಕಿಂತಲೂ ಎತ್ತರವಾಗಿದೆ; ಆಗ ನೀನೇನು ಮಾಡುವಿ? ಅದು ಪಾತಾಳಕ್ಕಿಂತಲೂ ಆಳವಾಗಿದೆ; ಆಗ ನೀನೇನು ತಿಳುಕೊಳ್ಳುವಿ?


ಆಗ ಸತ್ತಿದ್ದರೆ ನಾನು ಶಾಂತವಾಗಿ ಮಲಗಿಕೊಳ್ಳುತ್ತಿದ್ದೆನು; ನಾನು ವಿಶ್ರಾಂತಿಯಲ್ಲಿರುತ್ತಿದ್ದೆನು.


ಸಮಾಧಿಯೇ ನನ್ನ ಮನೆಯೆಂದು ನಾನು ನಿರೀಕ್ಷಿಸಿದರೆ, ಕತ್ತಲೆಯಲ್ಲಿ ನನ್ನ ಹಾಸಿಗೆಯನ್ನು ಹಾಸಿಕೊಂಡರೆ,


ನಿರೀಕ್ಷೆಯು ನನ್ನ ಸಂಗಡ ಪಾತಾಳಕ್ಕೆ ಇಳಿದು ಬರುವುದೇ? ನಾವು ಜೊತೆಯಾಗಿ ಮಣ್ಣಿಗೆ ಸೇರಲಾದೀತೆ?”


ಈಗ ಅವರು ಸತ್ತಿದ್ದಾರೆ, ಅವರು ಬದುಕುವುದಿಲ್ಲ. ತೀರಿಹೋದ ಆ ಆತ್ಮಗಳು ಎದ್ದು ಬರುವುದಿಲ್ಲ. ನೀವು ಅವರನ್ನು ದಂಡಿಸಿ ಅಳಿಸಿಬಿಟ್ಟಿದ್ದೀರಿ. ಅವರ ನೆನಪೇ ಉಳಿಯದ ಹಾಗೆ ಮಾಡಿದ್ದೀರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು