Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 6:6 - ಕನ್ನಡ ಸಮಕಾಲಿಕ ಅನುವಾದ

6 ರುಚಿ ಇಲ್ಲದ ಆಹಾರನ್ನು ಉಪ್ಪಿಲ್ಲದೆ ತಿನ್ನಬಹುದೋ? ಕೋಳಿ ಮೊಟ್ಟೆಯ ಲೋಳೆಯಲ್ಲಿ ರುಚಿಯುಂಟೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಸಪ್ಪೆಯನ್ನು ಉಪ್ಪಿಲ್ಲದೆ ತಿನ್ನಬಹುದೇ? ಮೊಟ್ಟೆಯಲ್ಲಿರುವ ಲೋಳೆಯು ರುಚಿಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಉಪ್ಪಿಲ್ಲದ ಸಪ್ಪೆಯನು ತಿನ್ನುತ್ತೇವೆಯೆ? ಮೊಟ್ಟೆಯೊಳಗಿನ ಲೋಳೆಯಲಿ ರುಚಿಯಿದೆಯೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಸಪ್ಪೆಯನ್ನು ಉಪ್ಪಿಲ್ಲದೆ ತಿನ್ನಬಹುದೇ, ಮೊಟ್ಟೆಯಲ್ಲಿರುವ ಲೋಳೆಯು ರುಚಿಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಊಟವನ್ನು ಉಪ್ಪಿಲ್ಲದೆ ತಿನ್ನುವರೇ? ಮೊಟ್ಟೆಯ ಲೋಳೆಗೆ ರುಚಿಯಿದೆಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 6:6
13 ತಿಳಿವುಗಳ ಹೋಲಿಕೆ  

ನಿಮ್ಮ ಸಂಭಾಷಣೆ ಯಾವಾಗಲೂ ಪೂರ್ಣ ಕೃಪೆಯುಳ್ಳದ್ದೂ, ಉಪ್ಪಿನಿಂದ ಹದವುಳ್ಳದ್ದೂ ಆಗಿರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಹೇಗೆ ಉತ್ತರಕೊಡಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.


ನಿನ್ನ ಪ್ರತಿಯೊಂದು ಧಾನ್ಯ ಸಮರ್ಪಣೆಯೂ ಉಪ್ಪಿನಲ್ಲಿ ಬೆರಕೆಯಾಗಿರಬೇಕು. ನಿನ್ನ ದೇವರ ಒಡಂಬಡಿಕೆಯ ಉಪ್ಪು ನಿನ್ನ ಸಮರ್ಪಣೆಯಲ್ಲಿ ಇಲ್ಲದೆ ಇರಬಾರದು. ನಿನ್ನ ಎಲ್ಲಾ ಸಮರ್ಪಣೆಗಳಲ್ಲಿ ನೀನು ಉಪ್ಪನ್ನು ಸಮರ್ಪಿಸಬೇಕು.


“ಉಪ್ಪು ಒಳ್ಳೆಯದು, ಆದರೆ ಉಪ್ಪೇ ಸಪ್ಪಗಾದರೆ, ಅದಕ್ಕೆ ಇನ್ನಾವುದರಿಂದ ರುಚಿ ಬಂದೀತು?


ನಿಮ್ಮ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿಯಾಗಿವೆ! ಅವು ನನ್ನ ಬಾಯಿಗೆ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ!


ಏಕೆಂದರೆ ಆಹಾರವನ್ನು ನಾಲಿಗೆ ರುಚಿ ನೋಡುವಂತೆ, ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ.


“ನಾನು ಇವುಗಳ ಹಾಗೆ ಅನೇಕ ಮಾತುಗಳನ್ನು ಕೇಳಿದ್ದೇನೆ; ನೀವೆಲ್ಲರೂ ಆದರಣೆ ಕೊಡುವವರಲ್ಲ, ಬಾಧಿಸುವವರೇ.


ಬಾಯಿಯು ಆಹಾರವನ್ನು ರುಚಿ ನೋಡುವಂತೆ ಕಿವಿಯು ನುಡಿಗಳನ್ನು ವಿವೇಚಿಸುವುದಿಲ್ಲವೇ?


ನನ್ನ ನಾಲಿಗೆಯಲ್ಲಿ ದುಷ್ಟತನ ಇದೆಯೋ? ವಿಪತ್ತುಗಳ ವಿವೇಚನೆಯು ನನಗಿಲ್ಲವೋ?


ಯಥಾರ್ಥ ಮಾತುಗಳು ಎಷ್ಟೋ ನೋವನ್ನು ತರುತ್ತವೆ! ಆದರೆ ನಿಮ್ಮ ತರ್ಕವು ರುಜುಪಡಿಸುವುದೇನು?


“ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ, ಅದಕ್ಕೆ ಉಪ್ಪಿನ ರುಚಿ ಹೇಗೆ ಬಂದೀತು? ಅದು ಹೊರಗೆ ಹಾಕಿ ತುಳಿಯುವುದಕ್ಕೆ ಯೋಗ್ಯವೇ ಹೊರತು ಬೇರೆ ಯಾವ ಕೆಲಸಕ್ಕೂ ಬರುವುದಿಲ್ಲ.


ಹುಲ್ಲು ಇರುವಾಗ ಕಾಡುಕತ್ತೆಯು ಅರಚುವುದೋ? ಮೇವು ಇದ್ದರೆ ಎತ್ತು ಕೂಗುವುದೋ?


ಮುಟ್ಟಲು ಕೂಡ ನನಗೆ ಇಷ್ಟವಾಗಲಿಲ್ಲ, ಅಂಥ ಆಹಾರವು ನನಗೆ ಬೇಸರ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು