Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 5:27 - ಕನ್ನಡ ಸಮಕಾಲಿಕ ಅನುವಾದ

27 “ಇದನ್ನು ನಾವು ಪರಿಶೋಧಿಸಿದ್ದೇವೆ; ಇದು ಸತ್ಯವಾದದ್ದು, ಇದನ್ನು ನೀನು ಕೇಳಿ ತಿಳಿದುಕೋ, ಇದನ್ನು ನೀನು ಅನ್ವಯಿಸು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಇಗೋ, ಇದನ್ನು ವಿಚಾರಿಸಿದ್ದೇವೆ, ಯಥಾರ್ಥವಾಗಿಯೇ ಇದೆ; ಇದನ್ನು ಕೇಳು, ನಿನ್ನಷ್ಟಕ್ಕೆ ನೀನೇ ತಿಳಿದುಕೋ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಇದನು ನಾವು ಪರಿಶೋಧಿಸಿದ್ದೇವೆ, ಇದು ಯಥಾರ್ಥ ಇದನು ಕೇಳಿ ತಿಳಿದುಕೊ - ಇದು ನಿನಗೆ ಹಿತಕರ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಇಗೋ, ಇದನ್ನು ವಿಚಾರಿಸಿದ್ದೇವೆ, ಯಥಾರ್ಥವಾಗಿಯೇ ಇದೆ; ಇದನ್ನು ಕೇಳು, ನಿನ್ನಷ್ಟಕ್ಕೆ ನೀನೇ ತಿಳಿದುಕೋ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 “ಯೋಬನೇ, ನಾವು ಈ ಸಂಗತಿಗಳನ್ನು ವಿಚಾರಿಸಿದ್ದೇವೆ; ಅವು ಸತ್ಯವೆಂದು ನಮಗೆ ತಿಳಿದಿದೆ. ಆದ್ದರಿಂದ ನೀನು ಸಹ ಕಿವಿಗೊಟ್ಟು ಅವುಗಳನ್ನು ತಿಳಿದುಕೊ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 5:27
13 ತಿಳಿವುಗಳ ಹೋಲಿಕೆ  

ಯೆಹೋವ ದೇವರ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷ ಪಡುವವರೆಲ್ಲರು ಅವುಗಳನ್ನೇ ಧ್ಯಾನಿಸುತ್ತಾರೆ.


ನೀನು ಜ್ಞಾನಿಯಾದರೆ, ನಿನ್ನ ಜ್ಞಾನವು ನಿನಗೆ ಪ್ರತಿಫಲ ಕೊಡುವುದು; ನೀನು ನಿಂದಿಸುವವನಾದರೆ, ನೀನೇ ಅದರ ಫಲವನ್ನು ಅನುಭವಿಸುವಿ.


ನಾನು ಈ ಹೊತ್ತು ನಿಮ್ಮ ಮೇಲಿಗಾಗಿ ನಿಮಗೆ ಆಜ್ಞಾಪಿಸುವ ಯೆಹೋವ ದೇವರ ಆಜ್ಞೆಗಳನ್ನೂ ಅವರ ನಿಮಯಗಳನ್ನೂ ಕಾಪಾಡುವುದೇ ಹೊರತು, ಮತ್ತೇನೂ ನಮ್ಮ ದೇವರಾಗಿರುವ ಯೆಹೋವ ದೇವರು ನಿಮ್ಮಿಂದ ಕೇಳುತ್ತಾರೆ?


“ಮನುಷ್ಯನಿಂದ ದೇವರಿಗೆ ಪ್ರಯೋಜನವೇನು? ಒಬ್ಬನು ಜ್ಞಾನಿಯಾಗಿದ್ದರೂ ದೇವರಿಗೆ ಪ್ರಯೋಜನವಾಗಿರುವನೇ?


“ಕೇಳು, ನಾನು ನಿನಗೆ ವಿವರಿಸುತ್ತೇನೆ, ನಾನು ನೋಡಿದ್ದನ್ನು ನಿನಗೆ ಹೇಳುತ್ತೇನೆ,


“ನಿಸ್ಸಂದೇಹವಾಗಿ ನೀವೇ ಆ ಜನರು; ನಿಮ್ಮ ಸಂಗಡಲೇ ಜ್ಞಾನವು ಸಾಯುವುದು.


ಸಿವುಡು ತನ್ನ ಕಾಲದಲ್ಲಿ ಮನೆಗೆ ಸೇರುವಂತೆ ನೀನು ಪೂರ್ಣ ಪ್ರಾಯದವನಾಗಿ ಸಮಾಧಿ ಸೇರುವೆ.


ಅದಕ್ಕೆ ಯೋಬನು ಉತ್ತರವಾಗಿ ಹೀಗೆಂದನು:


“ಇಗೋ, ನನ್ನ ಕಣ್ಣು ಎಲ್ಲವನ್ನು ನೋಡಿದೆ; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು