Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 5:24 - ಕನ್ನಡ ಸಮಕಾಲಿಕ ಅನುವಾದ

24 ನಿನ್ನ ಗುಡಾರವು ಕ್ಷೇಮವಾಗಿದೆ ಎಂದು ನೀನು ತಿಳಿದುಕೊಳ್ಳುವೆ, ನಿನ್ನ ಆಸ್ತಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ನಿನ್ನ ಗುಡಾರಕ್ಕೆ ಅಪಾಯವಿಲ್ಲವೆಂದು ನಿನಗೆ ಗೊತ್ತೇ ಇರುವುದು; ನಿನ್ನ ಹಟ್ಟಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ನಿನ್ನ ಗುಡಾರಕ್ಕೆ ಗಂಡಾಂತರವಿಲ್ಲವೆಂಬ ನೆಮ್ಮದಿ ನಿನಗಿರುವುದು ನಿನ್ನ ಮಂದೆಯನು ನೀನು ನೋಡಬಂದಾಗ ಕೊರತೆ ಕಾಣಬರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ನಿನ್ನ ಗುಡಾರಕ್ಕೆ ಅಪಾಯವಿಲ್ಲವೆಂದು ನಿನಗೆ ಗೊತ್ತೇ ಇರುವದು; ನಿನ್ನ ಹಟ್ಟಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವದಿಲ್ಲ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ನಿನ್ನ ಗುಡಾರವು ಸುರಕ್ಷಿತವಾಗಿರುವುದರಿಂದ ನೀನು ಸಮಾಧಾನದಿಂದ ಜೀವಿಸುವೆ. ನೀನು ನಿನ್ನ ಆಸ್ತಿಯನ್ನು ಲೆಕ್ಕಿಸುವಾಗ ಯಾವುದೂ ಕಳೆದುಹೋಗಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 5:24
15 ತಿಳಿವುಗಳ ಹೋಲಿಕೆ  

ಯಾವ ಕೇಡೂ ನಿಮ್ಮನ್ನು ಮುಟ್ಟದು, ಯಾವ ವಿಪತ್ತು ನಿಮ್ಮನ್ನು ಸಮೀಪಿಸುವುದಿಲ್ಲ.


ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವುದು; ಅವನ ಮೇಲಣ ತೂಗು ದೀಪವು ಆರಿಹೋಗುವುದು.


ನೀನು ಶುದ್ಧನೂ, ಯಥಾರ್ಥನೂ ಆಗಿದ್ದರೆ, ನಿಶ್ಚಯವಾಗಿ ಈಗಲೇ ದೇವರು ನಿನಗೋಸ್ಕರ ಎಚ್ಚೆತ್ತು, ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವರು.


ಮರುಭೂಮಿಯಲ್ಲಿಯೂ, ಹಾದಿ ಇಲ್ಲದ ಕಾಡಿನಲ್ಲಿಯೂ ಅಲೆದು, ವಾಸಿಸುವುದಕ್ಕೆ ಪಟ್ಟಣವನ್ನು ಕಂಡುಕೊಳ್ಳದೆ ಹೋದರು.


ನಿಶ್ಚಯವಾಗಿ ದುಷ್ಟರ ನೆಲೆಯು ಹೀಗೆಯೇ ಇರುವುದು; ದೇವರನ್ನು ಅರಿಯದವನ ಸ್ಥಿತಿ ಇದೇ.”


ನೀವು ಕೆಲಸಕ್ಕೆ ಹೊರಡುವಾಗಲೂ ನಿಮಗೆ ಆಶೀರ್ವಾದ, ಬರುವಾಗಲೂ ನಿಮಗೆ ಆಶೀರ್ವಾದ.


ದೇವರು ಅಧಿಪತಿಗಳಿಗೆ ಶಿಸ್ತನ್ನು ನೀಡಿ, ಅವರನ್ನು ದಾರಿಯಿಲ್ಲದ ಕಾಡಿನಲ್ಲಿ ಅಲೆಯುವಂತೆ ಮಾಡಿದರು.


ಅಂಥವರು ಜೀವಮಾನವೆಲ್ಲಾ ಸಫಲರಾಗಿರುವರು. ಅಂಥವರ ಸಂತಾನವು ದೇಶವನ್ನು ಸ್ವಾಧೀನ ಮಾಡಿಕೊಳ್ಳುವುದು.


ಬೆಂಕಿಯು ಅವನ ಮನೆಯನ್ನು ಸುಡುವುದು; ಅವನ ಮನೆಯ ಮೇಲೆ ಗಂಧಕವನ್ನು ಎರಚಲಾಗುವುದು.


ದಾವೀದನೂ, ಅವನ ಜನರೂ ಆ ಪಟ್ಟಣಕ್ಕೆ ಬಂದಾಗ, ಅದು ಬೆಂಕಿಯಿಂದ ಸುಟ್ಟುಹೋಗಿರುವುದನ್ನೂ ಮತ್ತು ಆ ಜನರ ಹೆಂಡತಿಯರೂ ಅವರ ಪುತ್ರ ಪುತ್ರಿಯರೂ ಸೆರೆಯಾಗಿ ಹೋಗಿರುವುದನ್ನೂ ಕಂಡರು.


“ನೀನು ಹೋಗಿ ಇಸ್ರಾಯೇಲ್ ಹಿರಿಯರನ್ನು ಕೂಡಿಸಿ ಅವರಿಗೆ, ‘ನಿಮ್ಮ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಯೆಹೋವ ದೇವರು ನನಗೆ ಕಾಣಿಸಿಕೊಂಡು ಹೀಗೆಂದಿದ್ದಾರೆ: ನಾನು ನಿಮ್ಮನ್ನೂ ಈಜಿಪ್ಟಿನಲ್ಲಿ ನಿಮಗೆ ಸಂಭವಿಸಿದ್ದನ್ನೆಲ್ಲವನ್ನೂ ನಿಶ್ಚಯವಾಗಿ ನೋಡಿದ್ದೇನೆ.


ಧನವೂ, ಐಶ್ವರ್ಯವೂ ಅವರ ಮನೆಯಲ್ಲಿ ಇರುವುದು; ಅವರ ನೀತಿಯು ಶಾಶ್ವತವಾಗಿ ಉಳಿಯುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು