Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 39:24 - ಕನ್ನಡ ಸಮಕಾಲಿಕ ಅನುವಾದ

24 ಕುದುರೆ ಕಹಳೆಯ ನಾದವನ್ನು ಕೇಳಿದರೂ ಭೀಕರ ಉತ್ಸಾಹದಲ್ಲಿ ನೆಲನುಂಗುವಂತೆ ನಿಲ್ಲದೆ ಓಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಅದು ತುತ್ತೂರಿಯ ಶಬ್ದವನ್ನು ಕೇಳಿದರೂ, ನಿಲ್ಲದೆ ಉಗ್ರತೆಯಿಂದ ಕಂಪಿಸುತ್ತಾ ನೆಲವನ್ನು ನುಂಗಿಬಿಡುವುದೋ ಎಂಬಂತೆ ಓಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಕಹಳೆಯ ನಾದಕೇಳಿ ನಿಲ್ಲದದು ಸುಮ್ಮನೆ ಉದ್ರೇಕಗೊಂಡು ದೌಡಾಯಿಸುತ್ತದೆ ವೇಗವನೇ ನುಂಗುವಂತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಅದು ತುತೂರಿಯ ಶಬ್ದವನ್ನು ಕೇಳಿದರೂ ನಿಲ್ಲದೆ ಉಗ್ರತೆಯಿಂದ ಕಂಪಿಸುತ್ತಾ ನೆಲವನ್ನು ನುಂಗಿಬಿಡುವದೋ ಎಂಬಂತೆ ಓಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಕುದುರೆಯು ಬಹು ಉತ್ಸುಕತೆಯಿಂದಿರುತ್ತದೆ! ಅದು ನೆಲದ ಮೇಲೆ ವೇಗವಾಗಿ ಓಡುವುದು; ಅದು ತೂತೂರಿಯ ಧ್ವನಿಯನ್ನು ಕೇಳಿದರೂ ನಿಲ್ಲದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 39:24
10 ತಿಳಿವುಗಳ ಹೋಲಿಕೆ  

ಆದರೆ ಅವರು ಸಂತೋಷದ ನಿಮಿತ್ತವಾಗಿ ಇನ್ನೂ ನಂಬದೆ ಆಶ್ಚರ್ಯಪಡುತ್ತಿರುವಾಗ ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದರು.


ಪಟ್ಟಣದಲ್ಲಿ ಕಹಳೆಯನ್ನು ಊದಿದರೆ, ಜನರು ಹೆದರುವುದಿಲ್ಲವೇ? ಯೆಹೋವ ದೇವರಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೇ?


ಓ, ನನ್ನ ಕರುಳು, ನನ್ನ ಕರುಳು! ನಾನು ನೋವಿನಿಂದ ನರಳುತ್ತೇನೆ. ನನ್ನ ಹೃದಯವು ನನ್ನಲ್ಲಿ ತಳಮಳಗೊಂಡಿದೆ. ನಾನು ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿ ಶಬ್ದವನ್ನೂ, ಯುದ್ಧದ ಆರ್ಭಟವನ್ನೂ ಕೇಳುತ್ತಿರುವೆ.


ನಾನು ಮಾತನಾಡಬೇಕೆಂದು ದೇವರಿಗೆ ಹೇಳಿಕಳುಹಿಸಬೇಕೆ? ಹಾಗೆ ಮನುಷ್ಯನು ಮಾತನಾಡಿದರೆ, ನಿಜವಾಗಿಯೂ ಬದುಕಿರಲು ಸಾಧ್ಯವೇ?


ನಾನು ಅವರನ್ನು ನೋಡಿ ಮುಗುಳ್ನಗಿದಾಗ, ಅವರು ಅದನ್ನು ನಂಬಲಿಲ್ಲ; ನನ್ನ ಮುಖದ ಕಾಂತಿ ಅವರಿಗೆ ಅಮೂಲ್ಯವಾಗಿತ್ತು.


ನಾನು ಕರೆಯಲು ದೇವರು ನನಗೆ ಉತ್ತರ ಕೊಟ್ಟರೂ, ನನ್ನ ವಿಜ್ಞಾಪನೆಗೆ ದೇವರು ಕಿವಿಗೊಡುವರೆಂದು ನಾನು ನಂಬುತ್ತಿರಲಿಲ್ಲ.


ಅದರ ಮೇಲೆ ಬತ್ತಳಿಕೆಯೂ, ಪ್ರಜ್ವಲಿಸುವ ಭಲ್ಲೆಯೂ, ಭರ್ಜಿಯೂ ಥಳಥಳಿಸುತ್ತವೆ.


ರಣಕಹಳೆ ಮೊಳಗಿದಾಗ ಕುದುರೆ ಕೆನೆಯುತ್ತದೆ. ಅದು ಅಧಿಪತಿಗಳ ಗರ್ಜನೆಯನ್ನೂ ಕಾಳಗದ ಆರ್ಭಟವನ್ನೂ ದೂರದಿಂದಲೇ ಮೂಸಿ ನೋಡಿ ತಿಳಿಯುತ್ತದೆ.


ನಾನು ಕಿವಿಗೊಟ್ಟು ಕೇಳಿದೆನು. ಆದರೆ ಅವರು ಯಥಾರ್ಥವಾಗಿ ಮಾತನಾಡಲಿಲ್ಲ. ಯಾವನಾದರೂ, “ನಾನು ಎಂಥಾ ಕೆಲಸ ಮಾಡಿದ್ದೇನೆ,” ಎಂದುಕೊಂಡು ತನ್ನ ಕೆಟ್ಟತನದ ನಿಮಿತ್ತ ಪಶ್ಚಾತ್ತಾಪ ಪಡಲಿಲ್ಲ. ಕುದುರೆ ಯುದ್ಧಕ್ಕೆ ರಭಸವಾಗಿ ಓಡುವ ಪ್ರಕಾರ, ಪ್ರತಿಯೊಬ್ಬನೂ ತನ್ನ ದಾರಿಗೆ ತಿರುಗಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು