Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 37:23 - ಕನ್ನಡ ಸಮಕಾಲಿಕ ಅನುವಾದ

23 ಇಂಥಾ ಸರ್ವಶಕ್ತರನ್ನು ನಾವು ಕಂಡುಹಿಡಿಯಲಾಗದು; ದೇವರು ಶಕ್ತಿಯಲ್ಲಿ ಉನ್ನತರಾಗಿದ್ದಾರೆ; ನ್ಯಾಯತೀರ್ಪಿನಲ್ಲಿಯೂ, ಮಹಾ ನೀತಿಯಲ್ಲಿಯೂ ದೇವರು ದಬ್ಬಾಳಿಕೆ ನಡೆಸುವವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಇಂಥ ಸರ್ವಶಕ್ತನಾದ ದೇವರನ್ನು ನಾವು ಕಂಡುಹಿಡಿಯಲಾರೆವು; ಆತನ ಪರಾಕ್ರಮವು ಬಹಳ; ಆತನು ನ್ಯಾಯವನ್ನಾಗಲಿ, ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಕಂಡುಹಿಡಿಯಲಾಗದು ಇಂಥ ಸರ್ವಶಕ್ತನನು ನಮ್ಮಿಂದ ಶಕ್ತಿಯಲೂ ಸತ್ಯದಲೂ ಪರಮ ಪರಾಕ್ರಮಿ ಆತ ನ್ಯಾಯಪೂರ್ಣನಾದ ಆತ ದಬ್ಬಾಳಿಕೆ ನಡೆಸುವವನಲ್ಲ ನ್ಯಾಯಕ್ಕಾಗಲೀ ಧರ್ಮಕ್ಕಾಗಲೀ ಆತ ಧಕ್ಕೆ ತರುವವನಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಇಂಥ ಸರ್ವಶಕ್ತನನ್ನು ನಾವು ಕಂಡುಹಿಡಿಯಲಾರೆವು; ಆತನ ಪರಾಕ್ರಮವು ಬಹಳ; ಆತನು ನ್ಯಾಯವನ್ನಾಗಲಿ ಪರಿಪೂರ್ಣಧರ್ಮವನ್ನಾಗಲಿ ಕುಂದಿಸುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 “ಸರ್ವಶಕ್ತನಾದ ದೇವರು ಮಹೋನ್ನತನೇ ಸರಿ! ನಾವು ಆತನನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಿಲ್ಲ. ದೇವರು ಮಹಾ ಬಲಿಷ್ಠನಾಗಿದ್ದರೂ ನಮಗೆ ಒಳ್ಳೆಯವನೂ ನ್ಯಾಯವಂತನೂ ಆಗಿದ್ದಾನೆ; ಆತನು ನಮ್ಮನ್ನು ಹಿಂಸಿಸಲು ಇಷ್ಟಪಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 37:23
38 ತಿಳಿವುಗಳ ಹೋಲಿಕೆ  

ದೇವರೊಬ್ಬರೇ ಅಮರತ್ವವುಳ್ಳವರೂ ಯಾರೂ ಸಮೀಪಿಸಲಾರದ ಬೆಳಕಿನಲ್ಲಿ ವಾಸಿಸುವವರೂ ಆಗಿದ್ದಾರೆ. ಯಾವ ಮನುಷ್ಯನೂ ದೇವರನ್ನು ಕಾಣಲಿಲ್ಲ. ಯಾರೂ ಕಾಣಲಾರರು. ದೇವರಿಗೆ ಮಾನವೂ ಬಲವೂ ಸದಾಕಾಲಕ್ಕೂ ಇರಲಿ. ಆಮೆನ್.


ಆಹಾ! ದೇವರ ಐಶ್ವರ್ಯ, ಜ್ಞಾನ ಮತ್ತು ವಿವೇಕಗಳು ಎಷ್ಟು ಆಳವಾದವುಗಳು! ದೇವರ ತೀರ್ಮಾನಗಳು ಪರೀಶೀಲಿಸಲು ಅಸಾಧ್ಯವಾದದ್ದು! ದೇವರ ಮಾರ್ಗಗಳನ್ನು ಕಂಡುಹಿಡಿಯುವುದು ಅಪರಿಮಿತವಾದದ್ದು!


ನ್ಯಾಯ ಪ್ರಿಯ ರಾಜರೇ, ನೀವು ನೀತಿಯನ್ನು ಸ್ಥಿರಪಡಿಸುತ್ತೀರಿ. ನ್ಯಾಯವನ್ನೂ ನೀತಿಯನ್ನೂ ಯಾಕೋಬ್ಯರಲ್ಲಿ ನೀವು ಮನದಟ್ಟಾಗಿಸಿರುವಿರಿ.


“ನೋಡು, ದೇವರು ಸರ್ವಶಕ್ತರು, ಆದರೂ ಯಾರನ್ನೂ ತಿರಸ್ಕಾರ ಮಾಡುವುದಿಲ್ಲ. ಶಕ್ತಿವಂತರಾದ ದೇವರು ತಮ್ಮ ಉದ್ದೇಶದಲ್ಲಿ ದೃಢವಾಗಿದ್ದಾರೆ.


ದೇವರ ಜ್ಞಾನವು ಆಳವಾದದ್ದು, ಶಕ್ತಿಯಲ್ಲಿ ದೇವರು ಪ್ರಬಲರೂ ಆಗಿದ್ದಾರೆ; ದೇವರ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?


ಏಕೆಂದರೆ ಯಾವುದೇ ವ್ಯಕ್ತಿಯ ಸಾವಿನಲ್ಲಿ ನನಗೆ ಸಂತೋಷವಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಆದಕಾರಣ ಮಾನಸಾಂತರಪಟ್ಟು ಬಾಳಿರಿ.


ದುಷ್ಟನು ಸಾಯುವುದರಲ್ಲಿ ನನಗೆ ಸ್ವಲ್ಪ ಸಂತೋಷವಿರುವುದೋ?” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾನೆ. “ಅವನು ತನ್ನ ದುರ್ಮಾರ್ಗಗಳನ್ನು ಬಿಟ್ಟು ಬದುಕಿದರೆ ನನಗೆ ಸಂತೋಷವಲ್ಲವೇ?


ಅವರಿಗೆ ಬಂದ ಎಲ್ಲಾ ಇಕ್ಕಟ್ಟಿನಲ್ಲಿ ಆತನಿಗೆ ಇಕ್ಕಟ್ಟಾಯಿತು. ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು. ತನ್ನ ಪ್ರೀತಿಯಲ್ಲಿಯೂ, ತನ್ನ ಕನಿಕರದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು. ಪೂರ್ವಕಾಲದ ದಿವಸಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.


ನೀವು ಏನು ಸಾರಬೇಕೋ ಅದನ್ನು ಈಗ ತನ್ನಿರಿ ಹೌದು, ಒಟ್ಟಿಗೆ ಅವರು ಆಲೋಚಿಸಲಿ ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಪ್ರಾರಂಭದಿಂದ ಇದನ್ನು ತಿಳಿಸಿದವರು ಯಾರು? ಯೆಹೋವನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲ. ನನ್ನ ಹೊರತಾಗಿ ನೀತಿಯುಳ್ಳ ದೇವರೂ, ರಕ್ಷಕನೂ ಇಲ್ಲವೇ ಇಲ್ಲ.


ಅವರ ಕೋಪವು ಕ್ಷಣಮಾತ್ರವೇ; ಆದರೆ ಅವರ ದಯೆಯು ಜೀವಮಾನವೆಲ್ಲಾ ಇರುತ್ತದೆ; ರಾತ್ರಿಯಲ್ಲಿ ದುಃಖ ಬಂದಿದ್ದರೂ; ಬೆಳಿಗ್ಗೆ ಆನಂದವು ಬರುವುದು.


“ನೀನು ದೇವರ ರಹಸ್ಯಗಳನ್ನು ಕಂಡುಕೊಳ್ಳುವಿಯಾ? ಸರ್ವಶಕ್ತರ ಮಿತಿಯನ್ನು ನಿನ್ನಿಂದ ಪರೀಕ್ಷಿಸಲಾದೀತೇ?


ನಮ್ಮ ತಂದೆಯಾದವರು ತಮಗೆ ಒಳ್ಳೆಯದೆಂದು ತಿಳಿದಾಗ, ಸ್ವಲ್ಪಕಾಲ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ತಮ್ಮ ಪವಿತ್ರತೆಯಲ್ಲಿ ನಾವು ಪಾಲುಗಾರರಾಗಬೇಕೆಂದು ನಮ್ಮ ಒಳ್ಳೆಯದಕ್ಕಾಗಿಯೇ ಶಿಕ್ಷಿಸುತ್ತಾರೆ.


“ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ಪ್ರಕಟಪಡಿಸಲು ಇಷ್ಟಪಡುತ್ತಾರೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು,” ಎಂದರು.


ನಮ್ಮನ್ನು ಶೋಧನೆಗೆ ಸೇರಿಸದೆ, ಕೇಡಿನಿಂದ ತಪ್ಪಿಸಿರಿ. ಏಕೆಂದರೆ ರಾಜ್ಯವೂ ಬಲವೂ ಮಹಿಮೆಯೂ ಸದಾಕಾಲ ನಿಮ್ಮದೇ. ಆಮೆನ್.’


ದೇವರು ಪ್ರತಿಯೊಂದನ್ನು ತಮ್ಮ ಸೂಕ್ತ ಸಮಯದಲ್ಲಿ ಸುಂದರವಾಗಿ ನಿರ್ಮಿಸಿದ್ದಾರೆ. ಜನರ ಹೃದಯದಲ್ಲಿ ನಿತ್ಯತೆಯನ್ನು ದೇವರೇ ಇಟ್ಟಿದ್ದಾರೆ. ಆದರೂ ಆದಿಯಿಂದ ಅಂತ್ಯದವರೆಗೂ ದೇವರು ಏನು ಮಾಡಿದ್ದಾರೆಂದು ಯಾರಿಗೂ ಗ್ರಹಿಸಲು ಸಾಧ್ಯವಿಲ್ಲ.


ಯೆಹೋವ ದೇವರು ಆಳಿಕೆ ಮಾಡುತ್ತಿದ್ದಾರೆ. ಘನತೆಯನ್ನು ಹೊದ್ದುಕೊಂಡಿದ್ದಾರೆ. ಬಲದಿಂದ ತಮ್ಮ ನಡುವನ್ನು ಕಟ್ಟಿಕೊಂಡಿದ್ದಾರೆ. ಆದುದರಿಂದ ಲೋಕವು ಸಹ ಸ್ಥಿರವಾಗಿದೆ, ಕದಲುವುದಿಲ್ಲ.


ನೀವು ದೇವರಿಗೆ, “ನಿಮ್ಮ ಕೃತ್ಯಗಳು ಅತಿಶಯವಾದವುಗಳಾಗಿವೆ. ನಿಮ್ಮ ಶತ್ರುಗಳು ನಿಮ್ಮೆದುರಿನಲ್ಲಿ ಮುದುರಿ ಬೀಳುವಷ್ಟು ನಿಮ್ಮ ಶಕ್ತಿ ದೊಡ್ಡದಾಗಿದೆ.


ಬೆಟ್ಟಗಳನ್ನು ನಿಮ್ಮ ಶಕ್ತಿಯಿಂದ ರೂಪಿಸಿದವರು ನೀವೇ. ಜಲದಿಂದ ನಡು ಕಟ್ಟಿಕೊಂಡಿರುವವರೂ ನೀವೇ.


ಒಂದು ಸಾರಿ ದೇವರು ಮಾತನಾಡಿದ್ದಾರೆ. ನಾನು ಎರಡು ಸಾರಿ ಇದನ್ನು ಹೀಗೆಂದು ಕೇಳಿದ್ದೇನೆ: “ದೇವರೇ, ಶಕ್ತಿಯು ನಿಮಗೇ ಸೇರಿದೆ.


“ನಾವು ದೇವರಿಗೆ ಏನು ಹೇಳಬೇಕೆಂದು ನಮಗೆ ತಿಳಿಸು; ನಮ್ಮ ಅಂಧಕಾರದಿಂದ ನಾವು ಏನೂ ವಾದಿಸಲು ಸಾಧ್ಯವಿಲ್ಲ.


ದೇವರು ಮಹೋನ್ನತರು; ದೇವರು ನಮ್ಮ ಅರಿವಿಗೆ ನಿಲುಕರು. ದೇವರ ವರ್ಷಗಳು ಅಸಂಖ್ಯಾತವಾಗಿವೆ.


ಇಗೋ, ಇವು ದೇವರ ಕಾರ್ಯಗಳಲ್ಲಿ ಕೆಲವು ಮಾತ್ರ; ದೇವರನ್ನು ಕುರಿತು ಪಿಸುಧ್ವನಿ ಮಾತ್ರ ಕೇಳಿದ್ದೇವೆ; ಹಾಗಾದರೆ, ದೇವರ ಪರಾಕ್ರಮದ ಗುಡುಗನ್ನು ಯಾರು ಗ್ರಹಿಸಿಕೊಳ್ಳುವರು?”


“ಜ್ಞಾನವೂ, ಶಕ್ತಿಯೂ ದೇವರಲ್ಲಿವೆ; ಸಮಾಲೋಚನೆಯೂ, ಗ್ರಹಿಕೆಯೂ ದೇವರವೇ.


ಶಕ್ತಿಯ ವಿಷಯದಲ್ಲಿ ಹೇಳಬೇಕಾದರೆ, ಇಗೋ ದೇವರು ಬಲಶಾಲಿ! ನ್ಯಾಯದ ವಿಷಯದಲ್ಲಿ ವಾದಿಸಬೇಕಾದರೆ, ದೇವರಿಗೆ ಸವಾಲು ಹಾಕುವವರು ಯಾರು?


ದೇವರು ತೀರ್ಪಿಗೆ ವಿರುದ್ಧವಾದದ್ದನ್ನು ಮಾಡುತ್ತಾರೋ? ಸರ್ವಶಕ್ತರು ನೀತಿಗೆ ವಿರುದ್ಧವಾದದ್ದನ್ನು ಮಾಡುವರೋ?


ಅದು ಆಕಾಶಕ್ಕಿಂತಲೂ ಎತ್ತರವಾಗಿದೆ; ಆಗ ನೀನೇನು ಮಾಡುವಿ? ಅದು ಪಾತಾಳಕ್ಕಿಂತಲೂ ಆಳವಾಗಿದೆ; ಆಗ ನೀನೇನು ತಿಳುಕೊಳ್ಳುವಿ?


“ಅಧಿಕಾರ ಮತ್ತು ವಿಸ್ಮಯ ದೇವರಿಗೆ ಸೇರಿದೆ; ಉನ್ನತಲೋಕದಲ್ಲಿ ಸಮಾಧಾನವನ್ನು ಸ್ಥಾಪಿಸಿದವರು ದೇವರೇ.


ನಾನು ನನ್ನ ತಿಳುವಳಿಕೆಯನ್ನು ದೂರದಿಂದ ಪಡೆದುಕೊಳ್ಳುತ್ತೇನೆ. ನನ್ನ ಸೃಷ್ಟಿಕರ್ತ ನ್ಯಾಯವಂತರು ಎಂದು ನಿರೂಪಿಸುವೆನು.


ಉತ್ತರದಿಂದ ಹೊನ್ನಿನ ಹೊಳಪು ಬರುತ್ತದೆ; ಅದರಂತೆಯೇ ದೇವರ ವಿಸ್ಮಯ ತೇಜಸ್ಸಿನಿಂದ ಬರುತ್ತಾರೆ.


ದೂರದಲ್ಲಿರುವುದನ್ನೂ, ಅಗಾಧದಲ್ಲಿರುವುದನ್ನೂ ಯಾರು ಕಂಡುಕೊಂಡಾರು?


ಅವರಿಗೆ ಹೇಳು, ‘ನನ್ನ ಜೀವದಾಣೆ, ನನಗೆ ದುಷ್ಟನ ಸಾವಿನಿಂದ ಸಂತೋಷವಾಗುವುದಿಲ್ಲ. ಆದರೆ ಆ ದುಷ್ಟನು ದುರ್ಮಾರ್ಗದಿಂದ ತಿರುಗಿಕೊಂಡು ಜೀವಿಸುವುದಾದರೆ ಅದರಲ್ಲಿಯೇ ನನಗೆ ಸಂತೋಷ ಸಿಗುವುದು; ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ನಿಮ್ಮ ದುಷ್ಟಮಾರ್ಗಗಳನ್ನು ಬಿಟ್ಟು ತಿರುಗಿಕೊಳ್ಳಿರಿ. ನೀವು ಸಾಯುವುದು ಏಕೆ? ಇದು ಸಾರ್ವಭೌಮ ಯೆಹೋವ ದೇವರ ವಾಕ್ಯ.’


ಯೆಹೋವ ದೇವರೇ, ನಿಮ್ಮಲ್ಲಿ ಒಡಂಬಡಿಕೆಯ ಪ್ರೀತಿ ಇದೆ. ನೀವು ಪ್ರತಿ ಮನುಷ್ಯನಿಗೂ ಅವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುತ್ತೀರಿ.”


ಯೆಹೋವ ದೇವರು ಮಹೋನ್ನತರೂ, ಬಹುಸ್ತುತಿಪಾತ್ರರೂ ಆಗಿದ್ದಾರೆ. ಅವರ ಮಹತ್ವವು ಅಗಮ್ಯವಾದದ್ದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು