Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 37:2 - ಕನ್ನಡ ಸಮಕಾಲಿಕ ಅನುವಾದ

2 ದೇವರ ಧ್ವನಿಯ ಘರ್ಜನೆಯನ್ನು ಕೇಳಿರಿ. ದೇವರ ಬಾಯಿಂದ ಹೊರಡುವ ಮಾತನ್ನು ಲಕ್ಷ್ಯಕೊಟ್ಟು ಆಲಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಗುಡುಗುಟ್ಟುವ ದೇವರ ಧ್ವನಿಗೆ ಕಿವಿಗೊಡಿರಿ, ಆತನ ಬಾಯಿಂದ ಹೊರಡುವ ಧ್ವನಿಯನ್ನು ಕೇಳಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ದೇವರ ಧ್ವನಿಯ ಗರ್ಜನೆಯನು ಕಿವಿಗೊಟ್ಟು ಕೇಳು ಆತನ ಬಾಯಿಂದ ಹೊರಡುವ ಮಾತನು ಆಲಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಗುಡುಗುಟ್ಟುವ ಆತನ ಧ್ವನಿಗೆ ಕಿವಿಗೊಡಿರಿ, ಆತನ ಬಾಯಿಂದ ಹೊರಡುವ ಮೊಳಗನ್ನು ಕೇಳಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಪ್ರತಿಯೊಬ್ಬರೂ ಕೇಳಿರಿ! ದೇವರ ಧ್ವನಿಯು ಗುಡುಗಿನ ಧ್ವನಿಯಂತಿದೆ. ಆತನ ಬಾಯಿಂದ ಬರುವ ಗುಡುಗುಟ್ಟುವ ಧ್ವನಿಯನ್ನು ಕೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 37:2
13 ತಿಳಿವುಗಳ ಹೋಲಿಕೆ  

ದೇವರು ತಮ್ಮ ಸ್ವರದಿಂದ ಅದ್ಭುತಕಾರ್ಯಗಳನ್ನು ಗುಡುಗುತ್ತಾರೆ; ನಾವು ಗ್ರಹಿಸಲಾಗದ ಮಹಾತ್ಕಾರ್ಯಗಳನ್ನು ದೇವರು ಮಾಡುತ್ತಾರೆ.


ಬಿರುಗಾಳಿಯು ಬರುತ್ತಿದೆ ಎಂದು ದೇವರ ಸಿಡಿಲು ತಿಳಿಸುತ್ತದೆ; ದನಕರುಗಳು ಸಹ ದೇವರ ಆಗಮನವನ್ನು ತಿಳಿಸುತ್ತವೆ.


ನಿಮ್ಮ ಗದರಿಕೆಯಿಂದ ಜಲರಾಶಿ ಓಡಿ ಹೋದವು; ನಿಮ್ಮ ಗುಡುಗಿನ ಶಬ್ದದಿಂದ ಅವು ಓಡಿ ಹೋದವು.


ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಹೀಗೆಂದು ಉತ್ತರಕೊಟ್ಟರು:


ಮೋಡಗಳ ವಿಸ್ತೀರ್ಣತೆಯನ್ನೂ, ದೇವರ ಗುಡಾರದಿಂದ ಗುಡುಗುವುದನ್ನೂ ಗ್ರಹಿಸಿಕೊಳ್ಳುವವರು ಯಾರು?


ಯೆಹೋವ ದೇವರು ಆಕಾಶಗಳಲ್ಲಿ ಗುಡುಗಿದರು. ಮಹೋನ್ನತ ದೇವರ ಧ್ವನಿಯು ಕಲ್ಮಳೆ ಹಾಗೂ ಮಿಂಚುಗಳಿಂದ ಪ್ರತಿಧ್ವನಿಸಿತು.


“ಇದನ್ನು ನೋಡಿದಾಗ ನನ್ನ ಹೃದಯವು ನಡುಗಿ, ಅದರ ಸ್ಥಳದಿಂದ ಜಿಗಿಯುವಂತಾಗುತ್ತದೆ.


ಮಿಂಚಿನ ತರುವಾಯ ಘರ್ಜನೆಯ ಶಬ್ದ ಕೇಳಿಬರುವುದು; ದೇವರು ಮಹತ್ತಿನ ಶಬ್ದದಿಂದ ಗುಡುಗುತ್ತಾರೆ; ದೇವರ ಸ್ವರ ಕೇಳುವಾಗ ಅದನ್ನು ತಡೆಯಲಾಗದು.


ಅವರ ಗರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ, ಅವರು ಭೂಮಿಯ ಕಟ್ಟಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. ಮಳೆಗೋಸ್ಕರ ಮಿಂಚನ್ನು ಉಂಟುಮಾಡುತ್ತಾರೆ; ತಮ್ಮ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾರೆ.


ಮಳೆಗೆ ಕಟ್ಟಳೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಏರ್ಪಡಿಸಿದಾಗಲೇ


ದೇವರಾದ ನನಗಿರುವ ಭುಜಬಲ ನಿನಗಿದೆಯೋ? ನನ್ನ ಧ್ವನಿಯ ಹಾಗೆ ನೀನು ಗುಡುಗಬಲ್ಲೆಯೋ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು