Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 37:12 - ಕನ್ನಡ ಸಮಕಾಲಿಕ ಅನುವಾದ

12 ಭೂಲೋಕದಲ್ಲೆಲ್ಲಾ ಸಿಡಿಲುಗಳಿಗೆ ದೇವರು ಆಜ್ಞಾಪಿಸಲು, ಎಲ್ಲಾ ಕೆಲಸವನ್ನು ಮಾಡುವಂತೆ ಅವು ತಿರುಗುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಸಿಡಿಲುಗಳು ಭೂಮಂಡಲದಲ್ಲೆಲ್ಲಾ ತಾನು ವಿಧಿಸುವುದನ್ನೇ ಮಾಡಲಿ ಎಂದು, ಅವುಗಳನ್ನು ನಡಿಸಿ ಸುತ್ತಮುತ್ತಲು ತಿರುಗಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಜಗದೊಳೆಲ್ಲ ಆತ ವಿಧಿಸಿದಂತೆ ಜರುಗಬೇಕೆಂದು ಸುತ್ತಮುತ್ತಲು ಸಿಡಿಲುಗಳು ಸಂಚರಿಸುವಂತೆ ಮಾಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಸಿಡಿಲುಗಳು ಭೂಮಂಡಲದಲ್ಲೆಲ್ಲಾ ತಾನು ವಿಧಿಸುವದನ್ನೇ ಮಾಡಲಿ ಎಂದು ಅವುಗಳನ್ನು ನಡೆಯಿಸಿ ಸುತ್ತಮುತ್ತಲು ತಿರುಗಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಭೂಮಂಡಲದಲ್ಲೆಲ್ಲಾ ಚಲಿಸಲು ದೇವರು ಮೋಡಗಳಿಗೆ ಆಜ್ಞಾಪಿಸುವನು. ಮೋಡಗಳು ಆತನ ಆಜ್ಞೆಗನುಸಾರವಾಗಿ ಮಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 37:12
13 ತಿಳಿವುಗಳ ಹೋಲಿಕೆ  

ಮಿಂಚೇ, ಕಲ್ಮಳೆಯೇ, ಹಿಮವೇ, ಹಬೆಯೇ, ದೇವರ ಮಾತನ್ನು ಕೇಳುವ ಬಿರುಗಾಳಿಯೇ,


ತಾವು ಪ್ರವಾದಿಸುತ್ತಿರುವ ದಿನಗಳಲ್ಲಿ, ಮಳೆ ಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಇವರಿಗೆ ಇರುವುದು. ಇದಲ್ಲದೆ ಇವರಿಗೆ ಬಯಸಿದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವುದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಬಾಧಿಸುವುದಕ್ಕೂ ಅಧಿಕಾರ ಇರುತ್ತದೆ.


“ಸುಗ್ಗಿಯು ಇನ್ನು ಮೂರು ತಿಂಗಳು ಇರುವಾಗ, ಮಳೆಯನ್ನು ನಾನು ನಿಮ್ಮಿಂದ ಹಿಂದೆಗೆದಿದ್ದೇನೆ. ಒಂದು ಪಟ್ಟಣದ ಮೇಲೆ ಮಳೆ ಸುರಿಸಿ, ಇನ್ನೊಂದು ಪಟ್ಟಣದ ಮೇಲೆ ಮಳೆ ಸುರಿಸಲಿಲ್ಲ. ಒಂದು ಹೊಲದ ಮೇಲೆ ಮಳೆ ಸುರಿಸಿ, ಇನ್ನೊಂದು ಹೊಲದ ಮೇಲೆ ಮಳೆ ಸುರಿಸಲಿಲ್ಲ ಮತ್ತು ಅದು ಒಣಗಿ ಹೋಯಿತು.


ಚೀಯೋನಿನ ಜನರೇ, ನಿಮ್ಮ ದೇವರಾದ ಯೆಹೋವ ದೇವರಲ್ಲಿ ಉಲ್ಲಾಸಿಸಿರಿ, ಸಂತೋಷವಾಗಿರಿ. ಏಕೆಂದರೆ ನಿಮಗೆ ಮುಂಗಾರು ಮಳೆಯನ್ನು ಸಾಕಷ್ಟು ಕೊಡುವರು. ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನ ಹಾಗೆ ನಿಮಗೆ ಸುರಿಸುವರು.


ಜನಾಂಗಗಳ ವ್ಯರ್ಥ ವಿಗ್ರಹಗಳೊಳಗೆ ಮಳೆಯನ್ನು ಸುರಿಸಬಲ್ಲವುಗಳುಂಟೇ? ಆಕಾಶವು ತಾನಾಗಿ ಹದ ಮಳೆಗಳನ್ನು ಕೊಟ್ಟೀತೇ? ಅಲ್ಲ, ನೀವೇ, ನಮ್ಮ ದೇವರಾದ ಯೆಹೋವ ದೇವರು, ನೀವೇ ವೃಷ್ಟಿದಾತರು, ನಾವು ನಿಮ್ಮನ್ನೇ ನಿರೀಕ್ಷಿಸುವೆವು, ನೀವು ಇವುಗಳನ್ನೆಲ್ಲಾ ನಡಿಸುವವರಾಗಿದ್ದೀರಷ್ಟೆ.


ಯೆಹೋವ ದೇವರೇ, ನಿಮ್ಮ ಕೆಲಸಗಳು ಎಷ್ಟೋ ಇವೆ! ಅವುಗಳನ್ನೆಲ್ಲಾ ಜ್ಞಾನದಿಂದ ಉಂಟುಮಾಡಿದ್ದೀರಿ, ಭೂಮಿಯು ನಿಮ್ಮ ಸಂಪತ್ತಿನಿಂದ ತುಂಬಿದೆ.


ದೇವರು ತಮ್ಮ ಕೈಯಲ್ಲಿ ಮಿಂಚನ್ನು ಹಿಡಿದುಕೊಂಡು, ಅದನ್ನು ಗುರಿಮುಟ್ಟುವಂತೆ ಆಜ್ಞಾಪಿಸುತ್ತಾರೆ.


ತಮ್ಮ ಮಿಂಚನ್ನು ದೇವರು ಆಕಾಶಮಂಡಲದಲ್ಲಿ ಹರಡುತ್ತಾರೆ; ಅದನ್ನು ಭೂಮಿಯ ಅಂಚುಗಳವರೆಗೆ ಕಳುಹಿಸುತ್ತಾರೆ.


ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾರೆ; ದೇವರ ವಾಕ್ಯವು ಬಹು ತೀವ್ರವಾಗಿ ಓಡುತ್ತದೆ.


ಅವರು ಏಳದೆ ಇಲ್ಲವೆ ದೇಶವನ್ನು ವಶಪಡಿಸಿಕೊಳ್ಳದೆ ಇಲ್ಲವೆ ಲೋಕವನ್ನು ಪಟ್ಟಣಗಳಿಂದ ತುಂಬಿಸದಂತೆ, ಅವರ ತಂದೆಗಳ ಅಪರಾಧದ ನಿಮಿತ್ತ, ಅವನ ಮಕ್ಕಳ ಕೊಲೆಗೆ ಸಿದ್ಧಮಾಡಿರಿ.


ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವುದು. ಇಸ್ರಾಯೇಲು ಹೂ ಅರಳಿ ಚಿಗುರುವುದು. ಭೂಲೋಕವನ್ನೆಲ್ಲಾ ಫಲದಿಂದ ತುಂಬಿಸುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು