Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 32:3 - ಕನ್ನಡ ಸಮಕಾಲಿಕ ಅನುವಾದ

3 ಯೋಬನ ಮೂವರು ಸ್ನೇಹಿತರ ಮೇಲೆಯೂ ಎಲೀಹು ಕೋಪಗೊಂಡನು. ಅವರು ಉತ್ತರ ಕಂಡುಕೊಳ್ಳದೆ, ಯೋಬನನ್ನು ಖಂಡಿಸಿದ್ದರಿಂದ ಎಲೀಹುವಿನ ಕೋಪ ಉರಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಇದಲ್ಲದೆ ಅವನ ಮೂವರು ಸ್ನೇಹಿತರು ಯೋಬನನ್ನು ಖಂಡಿಸತಕ್ಕ ಉತ್ತರವನ್ನು ಹೇಳಲಾರದೆ ಹೋದುದರಿಂದ ಅವನು ಅವರ ಮೇಲೂ ಕೋಪಿಸಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಯೋಬನ ಆ ಮೂವರು ಮಿತ್ರರ ಮೇಲೂ ಅವನು ಕೋಪಗೊಂಡನು. ಏಕೆಂದರೆ ಯೋಬನಿಗೆ ತಕ್ಕ ಉತ್ತರ ಕೊಡಲಾಗದೆ ದೇವರನ್ನೇ ತಪ್ಪಿತಸ್ಥರನ್ನಾಗಿಸಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಇದಲ್ಲದೆ ಅವನ ಮೂವರು ಸ್ನೇಹಿತರು ಯೋಬನನ್ನು ಖಂಡಿಸತಕ್ಕ ಉತ್ತರವನ್ನು ಹೇಳಲಾರದೆ ಹೋದದರಿಂದ ಅವನು ಅವರ ಮೇಲೆಯೂ ಕೋಪಿಸಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಎಲೀಹುವಿಗೆ ಯೋಬನ ಮೂವರ ಸ್ನೇಹಿತರ ಮೇಲೆಯೂ ಬಹು ಕೋಪಬಂದಿತು. ಯಾಕೆಂದರೆ ಯೋಬನ ಪ್ರಶ್ನೆಗಳಿಗೆ ಪರಿಣಾಮಕಾರಿಯಾದ ಉತ್ತರವನ್ನು ಕೊಟ್ಟು ಯೋಬನೇ ತಪ್ಪಿತಸ್ಥನೆಂದು ನಿರೂಪಿಸಲು ಯೋಬನ ಮೂವರು ಗೆಳೆಯರಿಗೆ ಗೊತ್ತಿರಲಿಲ್ಲ. ಆದಕಾರಣ, ದೇವರೇ ತಪ್ಪಿತಸ್ಥನೆಂದು ತೋರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 32:3
12 ತಿಳಿವುಗಳ ಹೋಲಿಕೆ  

ನೀನು ಶುದ್ಧನೂ, ಯಥಾರ್ಥನೂ ಆಗಿದ್ದರೆ, ನಿಶ್ಚಯವಾಗಿ ಈಗಲೇ ದೇವರು ನಿನಗೋಸ್ಕರ ಎಚ್ಚೆತ್ತು, ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವರು.


ಈಗ ಅವರು ನನ್ನ ಮೇಲೆ ಹೊರಿಸುತ್ತಿರುವ ಆಪಾದನೆಗಳನ್ನು ನಿಮ್ಮ ಮುಂದೆ ಅವರು ರುಜುಮಾಡಿ ತೋರಿಸಲಾರರು.


“ಜಗತ್ತಿನಲ್ಲಿ ಇರುವ ಯೆಹೂದ್ಯರ ಮಧ್ಯದಲ್ಲಿ ದಂಗೆಯೆಬ್ಬಿಸಿ ಪೌಲನೆಂಬ ಈ ಮನುಷ್ಯನು ತೊಂದರೆ ಕೊಡುವವನಾಗಿದ್ದಾನೆಂತಲೂ ನಜರೇತಿನವರ ಪಂಗಡಕ್ಕೆ ಇವನು ನಾಯಕನೆಂದೂ ನಾವು ಕಂಡೆವು.


ಯೋಬನು ತಾನು ನೀತಿವಂತನೆಂದು ಸಾಧಿಸಿದ್ದನು. ಆದ್ದರಿಂದ ಆ ಮೂರು ಸ್ನೇಹಿತರು ಯೋಬನಿಗೆ ಉತ್ತರ ಕೊಡುವುದನ್ನು ನಿಲ್ಲಸಿಬಿಟ್ಟರು.


“ಈ ಮಾತು ನಿಜ ಇಲ್ಲದಿದ್ದರೆ, ಯಾರು ನನ್ನನ್ನು ಸುಳ್ಳುಗಾರನನ್ನಾಗಿ ಸ್ಥಾಪಿಸಬಲ್ಲರು? ಯಾರು ನನ್ನ ಮಾತನ್ನು ವ್ಯರ್ಥಮಾಡಬಲ್ಲರು?”


ದೇವರಿಲ್ಲದವರ ಸಹವಾಸ ಬಂಜರು, ಬೆಂಕಿಯು ಲಂಚಕೋರರ ಮನೆಗಳನ್ನು ಸುಟ್ಟುಹಾಕುವುದು.


ಆಗ ರಾಮ ಗೋತ್ರದ ಬೂಜ್ಯನಾದ ಬರಕೇಲನ ಮಗ ಎಲೀಹು, ಯೋಬನ ಮೇಲೆ ಬಹು ಕೋಪಗೊಂಡನು. ಯೋಬನು ದೇವರಿಗಿಂತ ತನ್ನನ್ನು ನ್ಯಾಯವಂತನೆಂದು ಸ್ಥಾಪಿಸಿದ್ದರಿಂದ, ಎಲೀಹು ಅವನ ಮೇಲೆ ಕೋಪಗೊಂಡನು.


ಎಲೀಹು, ಯೋಬನ ಮಾತುಗಳು ಮುಗಿಯುವವರೆಗೂ ಕಾದಿದ್ದನು. ಏಕೆಂದರೆ ಅವನಿಗಿಂತ ಅವರೆಲ್ಲರೂ ಹಿರಿಯರಾಗಿದ್ದರು.


ಯೆಹೋವ ದೇವರು ಯೋಬನ ಸಂಗಡ ಮಾತಾಡಿದ ತರುವಾಯ, ತೇಮಾನ್ಯನಾದ ಎಲೀಫಜನಿಗೆ, “ನಿನ್ನ ಮೇಲೆಯೂ ನಿನ್ನ ಸ್ನೇಹಿತರಿಬ್ಬರ ಮೇಲೆಯೂ ನನಗೆ ಕೋಪವಿದೆ. ಏಕೆಂದರೆ ನೀವು ನನ್ನ ದಾಸನಾದ ಯೋಬನಂತೆ ನೀವು ನನ್ನ ವಿಷಯವಾಗಿ ಸತ್ಯವನ್ನು ಆಡಲಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು