Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 32:18 - ಕನ್ನಡ ಸಮಕಾಲಿಕ ಅನುವಾದ

18 ಏಕೆಂದರೆ ಅನೇಕ ವಿಷಯಗಳಿಂದ ನಾನು ತುಂಬಿದ್ದೇನೆ; ನನ್ನೊಳಗಿನ ಆತ್ಮವು ನನ್ನನ್ನು ಒತ್ತಾಯಪಡಿಸುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ನನ್ನಲ್ಲಿ ಮಾತುಗಳು ತುಂಬಿವೆ, ನನ್ನ ಅಂತರಾತ್ಮವು ನನ್ನನ್ನು ಒತ್ತಾಯಪಡಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಹೇಳಬೇಕಾದವು ನನ್ನಲ್ಲಿ ತುಂಬಿವೆ ಹೇಳಲು ನನ್ನ ಅಂತರಾತ್ಮ ಒತ್ತಾಯಪಡಿಸುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನನ್ನಲ್ಲಿ ಮಾತುಗಳು ತುಂಬಿವೆ, ನನ್ನ ಅಂತರಾತ್ಮವು ನನ್ನನ್ನು ಒತ್ತಾಯಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಯಾಕೆಂದರೆ ನನ್ನಲ್ಲಿ ಹೇಳಲು ಬೇಕಾದಷ್ಟಿದೆ. ನನ್ನ ಅಂತರಾತ್ಮವು ಮಾತಾಡಲು ನನ್ನನ್ನು ಒತ್ತಾಯಿಸುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 32:18
9 ತಿಳಿವುಗಳ ಹೋಲಿಕೆ  

ಏಕೆಂದರೆ ಕಂಡಿದ್ದನ್ನೂ ಕೇಳಿದ್ದನ್ನೂ ಕುರಿತು ನಾವು ಮಾತನಾಡದೆ ಇರಲಾರೆವು,” ಎಂದು ಉತ್ತರಕೊಟ್ಟರು.


ನನ್ನ ಹೃದಯವು ಸಂತಾಪದಿಂದ ಕಾವೇರಿತು. ನಾನು ಧ್ಯಾನವು ಬೆಂಕಿಯಂತೆ ಉರಿಯಿತು. ಕೊನೆಗೆ ನಾನು ಬಾಯಿಬಿಟ್ಟು ಮಾತನಾಡಿದೆನು:


“ಆಗ ನಾನು ಆತನನ್ನು ಕುರಿತು ಏನೂ ಹೇಳುವುದಿಲ್ಲ. ಆತನ ಹೆಸರಿನಲ್ಲಿ ಇನ್ನು ಮಾತನಾಡುವುದೇ ಇಲ್ಲ,” ಎಂದು ಅಂದುಕೊಂಡೆನು. ಆದರೆ ಆತನ ವಾಕ್ಯವು ನನ್ನ ಎಲುಬುಗಳಲ್ಲಿ ಮುಚ್ಚಲಾಗಿರುವ ಸುಡುವ ಬೆಂಕಿಯ ಹಾಗೆ ನನ್ನ ಹೃದಯದಲ್ಲಿ ಇತ್ತು. ಬಿಗಿ ಹಿಡಿದು ದಣಿದೆನು. ನನ್ನಿಂದ ಆಗದೆ ಹೋಯಿತು.


“ಒಬ್ಬನು ನಿನ್ನ ಸಂಗಡ ಮಾತಾಡ ತೊಡಗಿದರೆ, ನಿನಗೆ ಬೇಸರಿಕೆ ಉಂಟಾಗುವುದೋ? ಮಾತಾಡದೆ ಸುಮ್ಮನೆ ಇರುವುದಕ್ಕೆ ಯಾರಿಂದಾದೀತು?


ನಾನು ನನ್ನ ಪಾಲಿನ ಉತ್ತರವನ್ನು ಹೇಳುವೆನು, ನಾನೇ ನನ್ನ ಅಭಿಪ್ರಾಯವನ್ನು ತಿಳಿಸುವೆನು.


ನನ್ನ ಅಂತರಾತ್ಮವು ತೆರೆಯದ ದ್ರಾಕ್ಷಾರಸದ ಹಾಗೆ ಇದೆ; ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಇದೆ.


ಆದ್ದರಿಂದ ಯೆಹೋವ ದೇವರ ಕೋಪದಿಂದ ನಾನು ತುಂಬಿದ್ದೇನೆ. ಅದನ್ನು ನನ್ನೊಳಗೆ ಹಿಡಿಯುವುದು ನನಗೆ ಸಾಕಾಯಿತು. “ಅದನ್ನು ದೂರ ಇರುವ ಮಕ್ಕಳ ಮೇಲೆ ಮತ್ತು ಯೌವನಸ್ಥರ ಕೂಟ ಸಹಿತವಾಗಿ ಅವರ ಮೇಲೆ ಸುರಿಸುವೆನು. ಏಕೆಂದರೆ, ನಿಶ್ಚಯವಾಗಿ ಗಂಡನ, ಹೆಂಡತಿಯ ಸಂಗಡ, ವೃದ್ಧನ, ದಿನತುಂಬಿದವನ ಸಂಗಡ ಹಿಡಿಯಲಾಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು