Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೋಬ 30:10 - ಕನ್ನಡ ಸಮಕಾಲಿಕ ಅನುವಾದ

10 ಈಗ ನನ್ನನ್ನು ಕಂಡು ಅಸಹ್ಯಪಟ್ಟು, ನನ್ನಿಂದ ದೂರಸರಿಯುತ್ತಿದ್ದಾರೆ. ನನ್ನ ಮುಖದ ಮೇಲೆ ಉಗುಳಲೂ ಹಿಂಜರಿಯುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನನಗೆ ಅಸಹ್ಯಪಟ್ಟು ದೂರ ನಿಂತು, ನನ್ನ ಮೇಲೆ ಉಗುಳುವುದಕ್ಕೂ ಹಿಂದೆಗೆಯರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ನನಗೆ ಅಸಹ್ಯಪಟ್ಟು ದೂರಸರಿಯುತ್ತಾರೆ ನನ್ನ ಮೇಲೆ ಉಗುಳುವುದಕ್ಕೂ ಹಿಂಜರಿಯದಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನನಗೆ ಅಸಹ್ಯಪಟ್ಟು ದೂರ ನಿಂತು ನನ್ನ ಮೇಲೆ ಉಗುಳುವದಕ್ಕೂ ಹಿಂದೆಗೆಯರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆ ಯೌವನಸ್ಥರು ನನ್ನನ್ನು ಕಂಡು ಅಸಹ್ಯಪಡುತ್ತಾರೆ; ನನ್ನಿಂದ ದೂರ ನಿಲ್ಲುತ್ತಾರೆ. ನನ್ನ ಮುಖದ ಮೇಲೆ ಉಗುಳುವುದಕ್ಕೂ ಅವರು ಹಿಂದೆಗೆಯರು!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೋಬ 30:10
15 ತಿಳಿವುಗಳ ಹೋಲಿಕೆ  

ಆಮೇಲೆ ಅವರು ಯೇಸುವಿನ ಮುಖದ ಮೇಲೆ ಉಗುಳಿ ಅವರನ್ನು ಗುದ್ದಿದರು. ಬೇರೆ ಕೆಲವರು ಅವರ ಕೆನ್ನೆಗೆ ಹೊಡೆದು,


ನಾನು ಹೊಡೆಯುವವರಿಗೆ ಬೆನ್ನನ್ನೂ, ಕೂದಲು ಕೀಳುವವರಿಗೆ ನನ್ನ ಗಡ್ಡವನ್ನೂ ಒಡ್ಡಿದೆನು. ನನ್ನ ಮುಖವನ್ನು ನಿಂದೆಗೂ, ಉಗುಳುವಿಕೆಗೂ ಮರೆಮಾಡಲಿಲ್ಲ.


ನನ್ನ ಪರಿಚಿತರನ್ನು ನನ್ನಿಂದ ದೂರಮಾಡಿದ್ದೀರಿ. ನಾನು ಅವರಿಗೆ ಬೇಡವಾಗಿದ್ದೇನೆ. ನಾನು ಬಂಧಿತನಾಗಿದ್ದೇನೆ, ಹೊರಗೆ ಬರಲಾರೆನು.


ಆಗ ಯೆಹೋವ ದೇವರು ಮೋಶೆಗೆ, “ಆಕೆಯ ತಂದೆ ಅವಳ ಮುಖದ ಮೇಲೆ ಉಗುಳಿದರೆ, ಆಕೆ ಏಳು ದಿನ ನಾಚಿಕೆಯಿಂದ ಮರೆಯಾಗಿರುವುದಿಲ್ಲವೇ? ಹಾಗಾದರೆ ಆಕೆಯು ಏಳು ದಿವಸ ಪಾಳೆಯದ ಹೊರಗೆ ಇರಲಿ, ತರುವಾಯ ಅವಳನ್ನು ನೀನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು,” ಎಂದರು.


ಅವನ ಅತ್ತಿಗೆ ಹಿರಿಯರ ಮುಂದೆ ಅವನ ಬಳಿಗೆ ಬಂದು, ಕೆರವನ್ನು ಅವನ ಪಾದದಿಂದ ಬಿಡಿಸಿ, ಅವನ ಮುಖದಲ್ಲಿ ಉಗುಳಿ ಉತ್ತರಕೊಟ್ಟು, “ತನ್ನ ಸಹೋದರನ ಮನೆಯನ್ನು ಕಟ್ಟದವನಿಗೆ ಹೀಗೆಯೇ ಮಾಡಬೇಕು,” ಎಂದು ಹೇಳಲಿ.


ಅವರು ಯೇಸುವಿನ ಮೇಲೆ ಉಗುಳಿ, ಆ ಬೆತ್ತವನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಮತ್ತೆ ಮತ್ತೆ ಹೊಡೆದರು.


ಆದರೆ ಪವಿತ್ರ ವೇದದ ಪ್ರವಾದನೆಗಳು ನೆರವೇರುವಂತೆ ಇದೆಲ್ಲಾ ಆಯಿತು,” ಎಂದು ಹೇಳಿದರು. ಆಗ ಶಿಷ್ಯರೆಲ್ಲರೂ ಯೇಸುವನ್ನು ಬಿಟ್ಟು ಓಡಿಹೋದರು.


ಇದಲ್ಲದೆ, ಒಂದೇ ತಿಂಗಳಲ್ಲಿ ಮೂರು ಕುರುಬರನ್ನು ತೆಗೆದುಹಾಕಿದೆನು. ಮಂದೆಯು ನನ್ನನ್ನು ಅಸಹ್ಯಪಡಿಸಿತು, ಮತ್ತು ಅವುಗಳಿಂದ ನನಗೆ ಬೇಸರವಾಯಿತು.


ಬಡವನ ಬಂಧುಗಳೆಲ್ಲರು ಅವನನ್ನು ಹಗೆ ಮಾಡುತ್ತಾರೆ; ತನ್ನ ಸ್ನೇಹಿತರು ತನ್ನಿಂದ ಎಷ್ಟೋ ಹೆಚ್ಚಾಗಿ ದೂರ ಹೋಗುತ್ತಾರಲ್ಲವೇ? ಮಾತುಗಳಿಂದ ಅವನು ಮೊರೆಯಿಟ್ಟು ಹಿಂಬಾಲಿಸಿದರೂ ಅವನಿಗೆ ಏನೂ ದೊರಕದು.


ಆದ್ದರಿಂದ ನಾನು ಹೇಳಿದ್ದನ್ನೆಲ್ಲಾ ಹಿಂತೆಗೆದುಕೊಂಡು, ಧೂಳಿನಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ,” ಎಂದನು.


ನನ್ನ ಆಪ್ತ ಸ್ನೇಹಿತರೆಲ್ಲಾ ನನ್ನನ್ನು ಕಂಡು ಅಸಹ್ಯಪಡುತ್ತಾರೆ; ನಾನು ಪ್ರೀತಿ ಮಾಡಿದವರೇ ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.


“ದೇವರು ನನ್ನನ್ನು ಜನರ ಕಟ್ಟುಗಾದೆಗೆ ಆಸ್ಪದ ಮಾಡಿದ್ದಾರೆ; ನನ್ನನ್ನು ಕಾಣುವವರು ನನ್ನ ಮುಖಕ್ಕೆ ಉಗುಳುವಂತೆ ಮಾಡಿದ್ದಾರೆ.


ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.


ಅವನು ತನ್ನನ್ನು ಹೊಡೆಯುವವನಿಗೆ ಕೆನ್ನೆ ಕೊಡಲಿ. ಅವನು ನಿಂದೆಯಿಂದಲೇ ತುಂಬಿರಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು